Home ರಾಷ್ಟ್ರೀಯ ಸುದ್ದಿ ಅಖಿಲೇಶ್‌ಗೆ ಬೆಂಬಲಿಸಿ: ರಕ್ತದಿಂದ ಪತ್ರ ಬರೆದ ಮಕ್ಕಳು  

ಅಖಿಲೇಶ್‌ಗೆ ಬೆಂಬಲಿಸಿ: ರಕ್ತದಿಂದ ಪತ್ರ ಬರೆದ ಮಕ್ಕಳು  

0
SHARE
ಲಖನೌ: ಸಮಾಜವಾದಿ ಪಕ್ಷದಲ್ಲಿ ಉಂಟಾಗಿರುವ ಬಿಕ್ಕಟ್ಟು, ಸೈಕಲ್ ಚಿಹ್ನೆ ಅಖಿಲೇಶ್‌ಗೆ ನೀಡುವಂತೆ  ಬಾಲಕಿ, ಬಾಲಕ ತನ್ನ ರಕ್ತದಲ್ಲಿ ಚುನಾವಣಾ ಆಯೋಗಕ್ಕೆ ಪತ್ರವೊಂದನ್ನು ಬರೆದಿದ್ದಾರೆ.
ಘಾಜಿಯಾಬಾದ್ ಮೂಲದ ಸಹೋದರ ಹಾಗೂ ಸಹೋದರಿಬ್ಬರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.
ಸನಾ (೧೫) ೧೦ನೆಯ ತರಗತಿ ಓದುತ್ತಿರುವ ಬಾಲಕಿ ಹಾಗೂ ೨ನೆಯ ತರಗತಿ ಓದುತ್ತಿರುವ ಈಕೆಯ ಸಹೋದರ ಅಜೀಮ್ ಚುನಾವಣಾ ಆಯೋಗಕ್ಕೆ ಪತ್ರವನ್ನು ಬರೆದಿದ್ದಾರೆ.  ಸೈಕಲ್ ಚಿಹ್ನೆ ಅಖಿಲೇಶ್‌ಗೆ ನೀಡಲಿಲ್ಲ ಎಂದರೆ ನಾವು ಸತ್ತುಹೋಗುತ್ತೇವೆಂದು ಮಕ್ಕಳು ಬೆದರಿಕೆ ಹಾಕಿದ್ದಾರೆಂದು ತಿಳಿದುಬಂದಿದೆ. ುುಲಾಯಂ ಅವರ ಕುರಿತಂತೆಯೂ ಮಕ್ಕಳು ಹೇಳಿಕೊಂಡಿದ್ದು, ಪಕ್ಷದ ಜವಾಬ್ದಾರಿಯನ್ನು ಇಬ್ಬರು ಮಕ್ಕಳಿಗೆ ವಹಿಸುವಂತೆ ಮನವಿ ಮಾಡಿದ್ದಾರೆಂದು ಹೇಳಲಾಗುತ್ತಿದೆ.
ಈ ಪತ್ರವನ್ನು ಚುನಾವಣಾ ಆಯೋಗಕ್ಕೆ ನೀಡಲು ಹೋದಾಗ ಮಕ್ಕಳನ್ನು ತಡೆದಿರುವ ಅವರ ತಂದೆ ಬುದ್ಧಿವಾದ ಹೇಳಿದ್ದಾರೆ.
ಪತ್ರದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಮಕ್ಕಳ ತಂದೆ, ಸಾರ್ವಜನಿಕ ಕಾರ್ಯಕ್ರಮಗಳು ಬಂದಾಗ ಮಕ್ಕಳಿಬ್ಬರು ಮುಖ್ಯಮಂತ್ರಿ ಅಖಿಲೇಶ್ ಹಾಗೂ ಸಮಾಜವಾದಿ ಪಕ್ಷದ ಕುರಿತು ಪದ್ಯಗಳನ್ನು ಬರೆಯುತ್ತಿದ್ದರು ಎಂದಿದ್ದಾರೆ.
Facebook Comments

LEAVE A REPLY

− two = two