Home top stories ಪ್ರಧಾನಿ ಮೋದಿ ಇಂದು ಯೋಗಾಭ್ಯಾಸ ತಪ್ಪಿಸಿದ್ದೇಕೆ?

ಪ್ರಧಾನಿ ಮೋದಿ ಇಂದು ಯೋಗಾಭ್ಯಾಸ ತಪ್ಪಿಸಿದ್ದೇಕೆ?

0
SHARE
ಗಾಂಧಿನಗರ: ವಿಶ್ವವೇ ಯೋಗಕ್ಕೆ ತಲೆಬಾಗಿ ಅಂತರ‌್ರಾಷ್ಟ್ರೀಯ ಯೋಗ ದಿನ ಆಚರಿಸುವಂತೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಎಂದಿಗೂ ಯೋಗ ತಪ್ಪಿಸಿದವರಲ್ಲ. ಆದರೆ, ಇಂದು ಮಾತ್ರ ಯೋಗ ಮಾಡುವುದನ್ನು ತಪ್ಪಿಸಿದ್ದಾರೆ. ಅದಕ್ಕೆ ಕಾರಣ? ತಮ್ಮ ತಾಯಿಯನ್ನು ನೋಡುವ ಸಲುವಾಗಿ.
೮ನೆಯ ವೈಬ್ರಂಟ್ ಗುಜರಾತ್ ಗ್ಲೋಬಲ್ ಶೃಂಗವನ್ನು ಉದ್ಘಾಟಿಸಲು ಪ್ರಧಾನಿ ಇಂದು ಗುಜರಾತ್ ಪ್ರವಾಸದಲ್ಲಿದ್ದಾರೆ. ತಮ್ಮ ಸ್ವಂತ ರಾಜ್ಯಕ್ಕೆ ಭೇಟಿ ನೀಡಿರುವ ಹಿನ್ನೆಲೆಯಲ್ಲಿ ತಮ್ಮ ತಾಯಿಯನ್ನು ಭೇಟಿ ಮಾಡುವ ಅಭಿಲಾಶೆಯಿಂದ ತೆರಳಿದ್ದರು.
ಈ ಕುರಿತಂತೆ ಟ್ವೀಟ್ ಮಾಡಿರುವ ಮೋದಿಕ, ತಮ್ಮ ತಾಯಿಯನ್ನು ಭೇಟಿ ಮಾಡಿರುವುದಾಗಿ ಚಿತ್ರ ಸಹಿತ ತಿಳಿಸಿದ್ದಾರೆ. ಅಲ್ಲದೇ, ತಮ್ಮ ತಾಯಿಯವರನ್ನು ನೋಡುವ ಸಲುವಾಗಿ ಇಂದು ಯೋಗಾಭ್ಯಾಸವನ್ನು ಮಾಡಲಾಗಲಿಲ್ಲ. ಉಪಹಾರದ ಸಮಯಕ್ಕಿಂತಲೂ ಮುನ್ನವೇ ತಾಯಿಯನ್ನು ಭೇಟಿಯಾದೆ. ತಾಯಿಯೊಂದಿಗೆ ಕಳೆದ ಕ್ಷಣಗಳು ಅದ್ಭುತವಾದವು ಎಂದಿದ್ದಾರೆ.
ಪ್ರಧಾನಿ ಮೋದಿಯವರ ತಾಯಿ ಹೀರಾಬಾಯಿ(೯೭) ಅವರು, ಪ್ರಧಾನಿಯವರ ಕಿರಿಯ ಸಹೋದರ ಪಂಕಜ್ ಮೋದಿ ಅವರೊಂದಿಗೆ ಗುಜರಾತ್‌ನ ರೈಸಾನಾ ಗ್ರಾಮದಲ್ಲಿ ವಾಸವಾಗಿದ್ದಾರೆ.
Facebook Comments

LEAVE A REPLY

seventy two − sixty two =