Home ಪಾಲಿಟಿಕ್ಸ ಮತದಾರರ ಓಲೈಕೆಗೆ ರಾಜ್ಯದ ಕಾಂಗ್ರೆಸ್ ಸರ್ಕಾರದ ತಂತ್ರ !

ಮತದಾರರ ಓಲೈಕೆಗೆ ರಾಜ್ಯದ ಕಾಂಗ್ರೆಸ್ ಸರ್ಕಾರದ ತಂತ್ರ !

0
SHARE
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆಡಳಿತಾರೂಢ ಕಾಂಗ್ರೆಸ್‌ಗೆ ನಂಜನಗೂಡು ಉಪಚುನಾವಣೆ ಪ್ರತಿಷ್ಠೆ ಹಾಗೂ ಸವಾಲಿನದ್ದಾಗಿದೆ. ಹೀಗಾಗಿ ಚುನಾವಣೆ ಘೋಷಣೆ ಮುನ್ನವೇ ಆಡಿತಾರೂಢ ರಾಜ್ಯದ ಕಾಂಗ್ರೆಸ್ ಸರ್ಕಾರ, ಮತದಾರರ ಸೆಳೆಯಲು ವಾಮಮಾರ್ಗ ಹಿಡಿದಿದೆಯೇ ಎಂಬ ಪ್ರಶ್ನೆ ಮೂಡಿದೆ.
ನಂಜನಗೂಡು ಕ್ಷೇತ್ರ ವ್ಯಾಪ್ತಿಯಲ್ಲಿ  ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಕಿರು ಸಾಲ ಯೋಜನೆಯಡಿ ೧೫ ಸಾವಿರ ಸಾಲ ನೀಡುತ್ತಿದೆ.  ಅದರಲ್ಲಿ ೫ ಸಾವಿರ  ಸಬ್ಸಿಡಿ ಇದೆ ಎನ್ನಲಾಗಿದೆ.
ಅರ್ಜಿ ಸ್ವೀಕರಿಸುತ್ತಿರುವ ಕೇಂದ್ರದಲ್ಲಿ ನಾಮಫಲಕವಾಗಲಿ. ಯಾವ ಯೋಜನೆಯಡಿ, ಯಾವ ಇಲಾಖೆ ಕಾರ್ಯಕ್ರಮ ಎನ್ನುವ ಸುಳಿವೂ ಇಲ್ಲ.  ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರನ್ನು ಬಳಸಿಕೊಂಡು ಸರ್ಕಾರದ ವಿವಿಧ ಅಭಿವೃದ್ಧಿ ನಿಯಮಗಳಿಗೆ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಸಾಲ ವಿತರಣೆಗೆ ತಯಾರಿಸಿದ್ದ ಪಟ್ಟಿಯೊಂದನ್ನು ಆಧರಿಸಿ, ಅಂಥವರ ಮನೆಗೆ ನೇರವಾಗಿ ಅರ್ಜಿಗಳನ್ನು ಅಂಚೆ ಮೂಲಕ ಕಳುಹಿಸಲಾಗಿತ್ತು. ಅರ್ಜಿ ಪಡೆದ ನಂಜನಗೂಡು ಕ್ಷೇತ್ರದ ಫಲಾನುಭವಿಗಳೀಗ ೫೦ ರೂ.ಛಾಪಾ ಕಾಗದದ ಅಫಿಡವಿಟ್  ಜೊತೆಗೆ ಮೈಸೂರಿಗೆ ಬಂದು ಅರ್ಜಿ ಸಲ್ಲಿಸಲು ಮುಗಿಬಿದ್ದಿದ್ದಾರೆ ಎಂದು ವಾಹಿನಿಯೊಂದು ವರದಿ ಮಾಡಿದೆ.
ಕಾಂಗ್ರೆಸ್ ತೊರೆದು, ಬಿಜೆಪಿ ಸೇರಿರುವ ಶ್ರೀನಿವಾಸ್  ಪ್ರಸಾದ್‌ಮಣಿಸಲು ಶತಾಯಗತಾಯ ಪ್ಯತ್ನ ನಡೆಯುತ್ತಿದೆ. ಹೀಗಾಗಿ ಸಿದ್ದರಾಮಯ್ಯ ಇಂತಹ ಮಾರ್ಗ ಹಿಡಿದಿದ್ದಾರೆ ಎನ್ನಲಾಗಿದೆ.
Facebook Comments

LEAVE A REPLY

− two = 2