Home ಅಂತಾರಾಷ್ಟ್ರೀಯ ಸುದ್ದಿ ಕಾಬೂಲ್: ಅವಳಿ ಬಾಂಬ್ ದಾಳಿ: 50 ಸಾವು 

ಕಾಬೂಲ್: ಅವಳಿ ಬಾಂಬ್ ದಾಳಿ: 50 ಸಾವು 

0
SHARE
ಕಾಬೂಲ್: ಸಂಸತ್  ಭವನದ ಕಚೇರಿಯನ್ನು ಗುರಿಯಾಗಿಟ್ಟುಕೊಂಡು ಅವಳಿ ಬಾಂಬ್ ಸ್ಫೋಟಿಸಲಾಗಿದ್ದು, ಘಟನೆಯಲ್ಲಿ 50 ಮಂದಿ ಸಾವನ್ನಪ್ಪಿ ಹಲವರಿಗೆ ಗಾಯಗಳಾಗಿರುವ ಘಟನೆ ಆಫ್ಘಾನಿಸ್ತಾನ ರಾಜಧಾನಿ ಕಾಬೂಲ್‌ನಲ್ಲಿ ನಡೆದಿದೆ.
ಯುಎಇ ರಾಯಭಾರಿ ದಕ್ಷಿಣ ಕಂದಹಾರ್  ನಲ್ಲಿರುವ ಆಫ್ಘಾನಿಸ್ತಾನ ರಾಜ್ಯಪಾಲರ ಕಚೇರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿಯೇ ಸ್ಫೋಟ ನಡೆದಿದೆ. ಯುಎಇ ರಾಯಭಾರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಘಟನೆಯಲ್ಲಿ ಯುಎಇ ರಾಯಭಾರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪರಾರಿಯಾಗಿದ್ದಾರೆ.
ಕಾಂಪೌಂಡ್ ಒಳಗಿದ್ದ ಸೋಫಾದಲ್ಲಿ ಬಾಂಬ್  ಇಟ್ಟು ಸ್ಫೋಟ ನಡೆಸಲಾಗಿದೆ. ಇದಾದ ಕೆಲವೇ ಗಂಟೆಗಳಲ್ಲಿ ಸಂಸತ್ತಿನ ಬಳಿ ಕೂಡ ಬಾಂಬ್ ಸ್ಫೋಟ ನಡೆಸಲಾಗಿದೆ. ಈ ವೇಳೆ ೩೦ ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿ, ೮೦ಕ್ಕೂ ಹೆಚ್ಚಿ ಮಂದಿ ಗಾಯಗೊಂಡಿದ್ದಾರೆ.
ಇದಲ್ಲದೆ, ಜನನಿಬಿಡ ಪ್ರದೇಶಗಳಲ್ಲಿಯೂ ತಾಲಿಬಾನ್ ಉಗ್ರರು ಆತ್ಮಹತ್ಯಾ ದಾಳಿ ನಡೆಸಿದ್ದಾರೆ. ಇದರಲ್ಲಿ ಸಂಭವಿಸಿದ ಸಾವು ನೋವಿನ ಲೆಕ್ಕ ಇನ್ನೂ ದೊರೆತಿಲ್ಲ ಎಂದು ವರದಿಯಾಗಿದೆ.
Facebook Comments

LEAVE A REPLY

twenty − = ten