Home ಸುದ್ದಿ ಜಗತ್ತು ಗೌರಿಶಂಕರ ಸ್ವಾಮೀಜಿ ನಿಧನ 

ಗೌರಿಶಂಕರ ಸ್ವಾಮೀಜಿ ನಿಧನ 

0
SHARE
ಬೆಂಗಳೂರು: ತುಮಕೂರು ಸಿದ್ಧಗಂಗಾ ಮಠದ ಉತ್ತರಾಧಿಕಾರಿ ಸ್ಥಾನಕ್ಕಾಗಿ ಕಾನೂನು ಹೋರಾಟ ನಡೆಸುತ್ತಿದ್ದ ಗೌರಿಶಂಕರ ಸ್ವಾಮೀಜಿ  ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
೭೧ ವರ್ಷದ ಸ್ವಾಮೀಜಿ ಪಾರ್ಶ್ವವಾಯು ಹಾಗೂ ಬಹು ಅಂಗಾಂಗ ವೈಫಲ್ಯ ಎದುರಿಸುತ್ತಿದ್ದರು.  ನಿನ್ನೆ ಊಟದ ಬಳಿಕ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ತತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ವರದಿಯಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದರು.
ತುಮಕೂರಿನ ಗುಬ್ಬಿ ತಾಲೂಕಿನ ಗೊಲ್ಲಹಳ್ಳಿಯಲ್ಲಿ ಸಿದ್ಧಗಂಗಾ ಮಠ ಸ್ಥಾಪಿಸಿ ಅಲ್ಲಿಯೇ  ವಾಸಿಸುತ್ತಿದ್ದರು. ತುಮಕೂರು ಸಿದ್ಧಗಂಗಾ ಮಠದ ಉತ್ತರಾಧಿಕಾರಿ ಪಟ್ಟದ ಕಾನೂನು ಹೋರಾಟ ಬಗೆಹರಿಸಿರಲಿಲ್ಲ.  ತುಮಕೂರು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.
ಸಿದ್ದಗಂಗಾ ಮಠದಲ್ಲಿ ಸಲಿಂಕಾಮ ನಡೆಸಿದ ಆರೋಪ ಹೊತ್ತಿದ್ದರಿಂದ, ೧೯೮೭ರಲ್ಲಿ ಮಠದಿಂದ ದೂರವುಳಿಯಬೇಕಾಯಿತು. ಸ್ವಾಮೀಜಿ, ತಮ್ಮ ಗುರು ಶತಾಯುಷಿ ತುಮಕೂರಿನ ಶಿವಕುಮಾರ ಸ್ವಾಮೀಜಿದರ್ಶನಕ್ಕೆ ಹಲವಾರು ಬಾರಿ ಯತ್ನಿಸಿದ್ದರು. ಆದರೆ, ಅದು ಸಾಧ್ಯವಾಗಿರಲಿಲ್ಲ. ಇವರ ಭೇಟಿಗಾಗಿ ಹಲವರು ಸಂಧಾನ ನಡೆಸಲು ಮುಂದಾಗಿದ್ದರೂ, ಅದು ಯಶಸ್ವಿಯಾಗಿರಲಿಲ್ಲ.
ಶಿವಕುಮಾರ ಸ್ವಾಮೀಜಿ ಒಂದು  ಮಾತು ಹೇಳಿದರೆ ಹೋರಾಟ, ಪ್ರಕರಣ ಎಲ್ಲವನ್ನೂ ತ್ಯಜಿಸಿ ಬಿಡುತ್ತೇನೆ. ಅವರ ಆಶೀರ್ವಾದ ಒಂದು ಇದ್ದರೆ ಸಾಕು ಎಂದು ಅವರು ಹೇಳುತ್ತಿದ್ದರು ಎನ್ನಲಾಗಿದ್ದು,
ಕೊನೆಯ ಗಳಿಗೆಯಲ್ಲಿ ಸಹಾ ಶ್ರೀಗಳು ಆಗಮಿಸಬಹುದು ಎಂಬ ನಿರೀಕ್ಷೆ ಹುಸಿಯಾಯಿತು. ಗುರುವನ್ನು ಕಾಣಬೇಕೆಂಬ ಅವರ ಹಂಬಲ ಕಡೆಗೂ ಈಡೇರಲಿಲ್ಲ.
Facebook Comments

LEAVE A REPLY

− eight = two