Home top stories ತ್ರಿವರ್ಣ ದ್ವಜದ ಫುಟ್ ಮ್ಯಾಟ್ ಮಾರಾಟ: ಕ್ಷಮೆ ಕೇಳಿ, ಇಲ್ಲವೇ ವೀಸಾ ರದ್ದು: ಅಮೆಜಾನ್ ಕೆನಡಾಗೆ...

ತ್ರಿವರ್ಣ ದ್ವಜದ ಫುಟ್ ಮ್ಯಾಟ್ ಮಾರಾಟ: ಕ್ಷಮೆ ಕೇಳಿ, ಇಲ್ಲವೇ ವೀಸಾ ರದ್ದು: ಅಮೆಜಾನ್ ಕೆನಡಾಗೆ ಸುಷ್ಮಾ ಸ್ವರಾಜ್ ಎಚ್ಚರಿಕೆ

0
SHARE
ನವದೆಹಲಿ: ಪ್ರತಿಷ್ಠಿತ ಅಂತರ್ಜಾಲ ಮಾರಾಟ ತಾಣ ಅಮೆಜಾನ್ ನ ಕೆನಡಾದಲ್ಲಿ ಭಾರತದ ತ್ರಿವರ್ಣ ಧ್ವಜದಲ್ಲಿ ಮಾದರಿಯ ಫುಟ್ ಮ್ಯಾಟ್ ಮಾರಾಟ ಮಾಡುತ್ತಿರುವ ಹಿನ್ನೆಲೆಯಲ್ಲಿ, ಕೆರಳಿರುವು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಕ್ಷಮೆ ಕೇಳಿ ಇಲ್ಲವೆ, ಅಮೆಜಾನ್ ಕಂಪೆನಿ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿಗಳ ವೀಸಾ ರದ್ದು ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
111
ಅಮೆಜಾನ್ ಕೆನಡಾ ವೆಬ್ ಸೈಟ್ ನಲ್ಲಿ ಭಾರತದ ತ್ರಿವರ್ಣ ದ್ವಜದ ಮಾದರಿಯಲ್ಲಿ ಕಾಲು ಒರೆಸುವ ಫುಟ್ ಮ್ಯಾಟನ್ನು ಮಾರಾಟ ಮಾಡಲಾಗುತ್ತಿದೆ. ಇದು ಭಾರತಕ್ಕೆ ಮಾಡಿರುವ ಅವಮಾನವಾಗಿದೆ. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಅಮೆಜಾನ್ ಕೆನಡಾ ವಿರುದ್ದ ಕಿಡಿ ಕಾರಿದೆ.
ಈ ಘಟನೆಯಿಂದ ಕೆರಳಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದು, ಅಮೆಜಾನ್‍ ಅಧಿಕಾರಿಗಳು ಯಾವುದೇ ಶರತ್ತು ವಿಧಿಸದೇ ಬೇಷರತ್‍ ಕ್ಷಮೆ ಕೇಳಬೇಕು. ಅಲ್ಲದೇ, ಈ ಉತ್ಪನ್ನದ ಮಾರಾಟವನ್ನು ತಕ್ಷಣವೇ ನಿಲ್ಲಿಸಬೇಕು. ಇಲ್ಲದೇ ಹೋದಲ್ಲಿ, ಅಮೆಜಾನ್ ನಲ್ಲಿ ಕಾರ್ಯ ನಿರ್ವಹಿಸುವ ಯಾವುದೇ ಅಧಿಕಾರಿಗಳಿಗೆ ಭಾರತದ ವೀಸಾ ನೀಡಲಾಗುವುದಿಲ್ಲ ಹಾಗೂ ಈಗಾಗಲೇ ನೀಡಲಾಗಿರುವ ವೀಸಾವನ್ನೂ ಸಹ ರದ್ದು ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಆದರೆ, ಅಮೆಜಾನ್ ಕೆನಡಾ ನೀಡಿರುವ ಸಮಜಾಯಿಷಿ ಪ್ರಕಾರ, ಅಮೆಜಾನ್ ಈ ಉತ್ಪನ್ನವನ್ನು ನೇರವಾಗಿ ಮಾರಾಟ ಮಾಡುತ್ತಿಲ್ಲ. ಬದಲಾಗಿ, ಮೂರನೇ ವ್ಯಕ್ತಿ ಮಾರಾಟಗಾರರಾಗಿ ಇಲ್ಲಿ ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ, ನಮ್ಮನ್ನು ತಪ್ಪಿತಸ್ಥರನ್ನಾಗಿ ಮಾಡುವುದು ಸರಿಯಲ್ಲ ಎಂದಿದೆ. ಅದರೆ, ಈ ವಿಚಾರದಲ್ಲಿ ಕ್ಷಮೆ ಕೇಳಲೇ ಬೇಕು ಎಂದು ಸುಷ್ಮಾ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಮಾತ್ರವಲ್ಲ ಕೆನಡಾದಲ್ಲಿರುವ ಭಾರತೀಯ ಹೈಕಮಿಷನರ್ ಗೂ ಸೂಚನೆ ನೀಡಿರುವ ವಿದೇಶಾಂಗ ಸಚಿವಾಲಯ, ಅಮೆಜಾನ್ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಕ್ರಮಕೈಗೊಳ್ಳಲು ಹೇಳಿದೆ. ಈ ಹಿನ್ನೆಲೆಯಲ್ಲಿ ಅಮೆಜಾನ್ ಅಧಿಕಾರಿಗಳನ್ನು ಈಗಾಗಲೇ ಸಂಪರ್ಕಿಸಲಾಗಿದೆ ಎಂದು ಹೇಳಲಾಗಿದೆ.
222
Facebook Comments

LEAVE A REPLY

5 + four =