ನಮಸ್ಕಾರ ಕನ್ನಡಿಗರೇ, ಸರ್ಕಾರ ಹೊಸ ಆದೇಶವನ್ನು ಪ್ರಕಟಿಸಿದೆ 2024-2025 ನೇ ಸಾಲಿನ ಯಶಸ್ವಿನಿ ಅರೋಗ್ಯ ರಕ್ಷಣಾ ಯೋಜನೆಯ ಸಹಕಾರಿಗಳಿಗೆ ಮತ್ತು ಹೊಸ ಸದಸ್ಯರಿಗೆ ನೋಂದಣಿ ಮಾಡಿಕೊಳ್ಳಲು ಆದೇಶ ಸೂಚಿಸಿದೆ. ರಾಜ್ಯ ಸರ್ಕಾರದ ಈ ಹೊಸ ಆದೇಶದಲ್ಲಿ ಏನಿಲ್ಲ ಮಾಹಿತಿಗಳು ಲಭ್ಯವಿವೆ ಎಂಬುದರ ಬಗ್ಗೆ ಇವತ್ತಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿದುಕೊಂಡು ರಾಜ್ಯ ಸರ್ಕಾರದ ಯಶಸ್ವಿನಿ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.
ಯಶಸ್ವಿನಿ ಯೋಜನೆ :
ಸಹಕಾರ ಸಂಘಗಳ ಸದಸ್ಯರ ಅನುಕೂಲಕ್ಕಾಗಿ ರಾಜ್ಯ ಸರ್ಕಾರವು ಜಾರಿಗೊಳಿಸಿರುವಂತಹ ಒಂದು ಪ್ರತಿಷ್ಠಿತ ವಿಶಿಷ್ಟ ಯೋಜನೆ ಎಂದರೆ ಅದು ಯಶಸ್ವಿನಿ ಯೋಜನೆಯಾಗಿದೆ. ಈ ವರ್ಷಕ್ಕೆ ಈ ಯೋಜನೆ ಯನ್ನು ಅನುಷ್ಠಾನ ಮಾಡಲು ರಾಜ್ಯ ಸರ್ಕಾರ ಮರಗಸೂಚಿಯನ್ನು ಹೊರಡಿಸಿದೆ.
- ಯಶಸ್ವಿನಿ ಯೋಜನೆಯ ಪ್ರಯೋಜನವನ್ನು ಯಾರೆಲ್ಲಾ ಪಡೆದುಕೊಳ್ಳಬಹುದು
- ಹೇಗೆ ಯಶಸ್ವಿನಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕು
- ಯಶಸ್ವಿನಿ ಯೋಜನೆಗೆ ಎಲ್ಲಿ ಅರ್ಜಿ ಸಲ್ಲಿಸಬೇಕು
- ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲಾತಿ ಗಳೇನು
ಎಂಬುದರ ಸಂಪೂರ್ಣ ಹೊಸ ಆದೇಶದ ಮಾಹಿತಿಯನ್ನು ರಾಜ್ಯ ಸರ್ಕಾರ ಹೊರಡಿಸಿದೆ.
ರಾಜ್ಯ ಸರ್ಕಾರದ ಯಶಸ್ವಿನಿ ಯೋಜನೆಯ ಹೊಸ ಮಾರ್ಗಸೂಚಿ :
ರಾಜ್ಯ ಸರ್ಕಾರ ಯಶಸ್ವಿನಿ ಯೋಜನೆಯನ್ನು ನೂತನ ಮಾರ್ಗಸೂಚಿ ಅನ್ವಯ ಜಾರಿಗೊಳಿಸಿದ್ದು ಅದರ ಮಾಹಿತಿಯನ್ನು ಈ ಕೆಳಗಿನಂತೆ ನೋಡುವುದಾದರೆ.
- ಯಾವುದೇ ಸಹಕಾರ ಸಂಘಗಳ ಕಾಯ್ದೆಯಡಿ :
- 1959 ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ
- 1997 ಕರ್ನಾಟಕ ಸೌಹಾರ್ದ ಸಹಕಾರಿಗಳ ಕಾಯ್ದೆ
- 2002 ಬಹರಾಜ್ಯ ಸಹಕಾರಿ ಸಂಘಗಳ ಕಾಯ್ದೆ ನೊಂದಾಯಿಸಬಹುದು
- ಕರ್ನಾಟಕ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂತಹ ಯಾವುದೇ ಸಹಕಾರ ಸಂಘಗಳ ಅಥವಾ ಬ್ಯಾಂಕುಗಳ ಅಂದರೆ ಗ್ರಾಮೀಣ ಮತ್ತು ನಗರ ಸಹಕಾರ ಸಂಘಗಳು ಒಳಗೊಂಡಂತೆ ಸದಸ್ಯರು ಅಥವಾ ಸಹಕಾರಿ ಸ್ವ ಸಹಾಯ ಗುಂಪುಗಳ ಸದಸ್ಯರು
- ಒಂದು ತಿಂಗಳು ಸದಸ್ಯರಾಗಿ ಪೂರ್ಣಗೊಂಡಿದ್ದಾರೆ ಅಂತಹ ಸದಸ್ಯರು
- ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ೧೯೫೯ರ ಅಡಿ ನೊಂದಣಿಯಾದಂತಹ ಕಾರ್ಯನಿರತ ಸಹಕಾರ ಸಂಘಗಳಲ್ಲಿ ಸದಸ್ಯರು ಕನಿಷ್ಠ ಮೂರು ವರ್ಷ ಸೇವೆ ಪೂರ್ಣಗೊಳಿಸಿ ಪ್ರತಿ ತಿಂಗಳು 30000 ಮತ್ತು ಅದಕ್ಕಿಂತ ಕಡಿಮೆ ಒಟ್ಟು ವೇತನವನ್ನು ಪಡೆಯುತ್ತಿರುವವರು
- ನಿಗದಿತ ವಾರ್ಷಿಕ ವಂತಿಗೆಯನ್ನು ಅರ್ಹ ಕುಟುಂಬ ಸದಸ್ಯರು ಪಾವತಿಸಿ ಯಶಸ್ವಿ ಯೋಜನೆಯ ಅಡಿಯಲ್ಲಿ ಸದಸ್ಯರಾಗಲು ಅರ್ಹತೆಯನ್ನು ಪಡೆದಿರುತ್ತಾರೆ
- ನೌಕರರಾಗಿದ್ದರೆ ಕನಿಷ್ಠ ಮೂರು ವರ್ಷ ಸೇವೆ ಮತ್ತು 30,000 ಹಾಗೂ ಅದಕ್ಕಿಂತ ಕಡಿಮೆ ವೇತನವನ್ನು ಪಡೆಯುತ್ತಿರುವ ಬಗ್ಗೆ ದೃಢೀಕರಣ ಪತ್ರವನ್ನು ಸಂಬಂಧಿಸಿದ ಸಹಕಾರ ಸಂಘದ ಆಡಳಿತ ಮಂಡಳಿಯಿಂದ ಲಗತಿಸಬೇಕು.
- ಯಶಸ್ವಿನಿ ಯೋಜನೆಯಲ್ಲಿನ ವ್ಯಾಖ್ಯಾನದಂತೆ ಕುಟುಂಬ ಎಂದರೆ ಪ್ರಧಾನ ಅಜ್ಜಿ ದಾರಾ ಅದರಲ್ಲಿ ತಂದೆ ತಾಯಿ, ಗಂಡ ಹೆಂಡತಿ ಮದುವೆಯಾದ ಹೆಣ್ಣು ಮಕ್ಕಳು ಗಂಡು ಮಕ್ಕಳು ಮತ್ತು ಸೊಸೆಯಂದಿರು ಎಂದು ಅರ್ಥೈಸಲಾಗುತ್ತದೆ. ಸೊಸೆ ಒಂದು ಮನೆಯಲ್ಲಿ ಹೆಚ್ಚು ಮಾಡುವಾಗ ಅವರ ಗಂಡನ ತಂದೆ ತಾಯಿಯ ಅಥವಾ ಅರ್ಜಿದಾರರ ಅತ್ತೆ ಮಾವ ಯೋಜನೆಗೆ ಅರ್ಹ ಸದಸ್ಯರಾಗಿರುತ್ತಾರೆ.
- ಒಂದು ಅವಿಭಕ್ತ ಕುಟುಂಬದ ಸದಸ್ಯರು ಒಬ್ಬ ಯಶಸ್ವಿನಿ ಸದಸ್ಯರಾಗಿದ್ದರೆ ಅವಿಭಕ್ತ ಕುಟುಂಬದ ಎಲ್ಲಾ ಸದಸ್ಯರಿಗೆ ಒಂದೇ ರೇಷನ್ ಕಾರ್ಡ್ ಏನಾದರೂ ಹೊಂದಿದ್ದರೆ ಅದನ್ನು ಹಾಜರುಪಡಿಸಿದರೆ ರೇಷನ್ ಕಾರ್ಡ್ ನಲ್ಲಿ ಹೆಸರು ನಮೂದಿಸಿರುವಂತಹ ಅವಿಭಕ್ತ ಕುಟುಂಬದ ಎಲ್ಲಾ ಸದಸ್ಯರು ವಾರ್ಷಿಕ ವಂತಿಕೆಯನ್ನು ಪಾವತಿ ಮಾಡಿದ್ದಾರೆ ಅಂತಹ ಕುಟುಂಬದ ಎಲ್ಲಾ ಸದಸ್ಯರಿಗೆ ಸರ್ಕಾರವು ಯಶಸ್ವಿನಿ ಯೋಜನೆಯ ಸೌಲಭ್ಯವನ್ನು ಪಡೆಯಲು ಅವಕಾಶ ಕಲ್ಪಿಸುತ್ತದೆ. ಒಂದು ವೇಳೆ ಒಂದೇ ರೇಷನ್ ಕಾರ್ಡ್ ಇಲ್ಲದಿದ್ದರೆ ಅವಿಭಕ್ತ ಕುಟುಂಬದ ಸದಸ್ಯರಿಗೆ ಈ ಯೋಜನೆಯ ಅಡಿಯಲ್ಲಿ ನೋಂದಾಯಿಸಲು ಅವಕಾಶ ಇರುವುದಿಲ್ಲ.
- ಮದುವೆಯಾದಂತಹ ಹೆಣ್ಣು ಮಗಳು ಅಥವಾ ಅವರ ಮಕ್ಕಳು ತವರು ಮನೆಯಲ್ಲಿ ಇದ್ದರೆ ಯಾವುದೇ ಕಾರಣಗಳಿಗಾಗಿ ವಾಸವಾಗಿದ್ದರು ಕೂಡ ಮತ್ತು ಅವರ ವಂತಿಕೆಯನ್ನು ಪ್ರಧಾನಿ ಅರ್ಜಿದಾರರು ಪಾವತಿಸಿದ್ದಾರೆ ಯಶಸ್ವಿನಿ ಯೋಜನೆಯ ಪ್ರಯೋಜನವನ್ನು ಪಡೆಯಲು ಅರ್ಹರಾಗಿರುತ್ತಾರೆ.
- ಯಶಸ್ವಿನಿ ಕಾರ್ಡ್ ಆಧಾರದ ಮೇಲೆ ನವಜಾತ ಶಿಶು ತಾಯಿ ಹೆಸರು ಇದ್ದರೆ ಮುಂದಿನ ವರ್ಷ ಯಶಸ್ವಿನಿ ಯೋಜನೆಯ ಅಡಿಯಲ್ಲಿ ಸೌಲಭ್ಯವನ್ನು ಪಡೆಯಲು ನೋಂದಣಿ ಮಾಡಿಕೊಳ್ಳಬಹುದು. ತದನಂತರ ಮಗುವಿನ ಹೆಸರಿನಲ್ಲಿ ನೋಂದಾಯಿಸಿ ಯೋಜನೆ ಪ್ರಯೋಜನವನ್ನು ಪಡೆಯಬಹುದು.
- ಮೇಲೆ ಲೇಖನದಲ್ಲಿ ಸೂಚಿರುವ ಅರ್ಹ ಸದಸ್ಯರನ್ನು ಒರತು ಪಡಿಸಿ ಬೇರೆ ಯಾವುದೇ ಸದಸ್ಯರನ್ನು ಸೇರಿಸದಂತೆ ರಾಜ್ಯ ಸರ್ಕಾರ ಸೂಚಿಸಿದೆ ತಪ್ಪದೆ ಅರ್ಜಿ ಸಲ್ಲಿಸುವವರು ತಿಳಿದುಕೊಳ
- ಒಂದುವೇಳೆ ಅರ್ಹ ಇಲ್ಲದ ಸದಸ್ಯರು ಈ ಯೋಜನೆಗೆ ನೋಂದಣಿ ಮಾಡಿದರೆ ಅರ್ಜಿ ಸಲ್ಲಿಸಿದರು ಅದರ ಲಾಭವನ್ನು ಪಡೆಯಲು ಅನರ್ಹರು ಎಂದು ರಾಜ್ಯ ಸರ್ಕಾರವು ತಿಳಿಸಿದೆ, ಒಂದು ವೇಳೆ ಅರ್ಜಿ ಸಲ್ಲಿಕೆ ಆದರೆ ತೀವ್ರ ಗತಿಯಲ್ಲಿ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದೆ.
- ವಂತಿಗೆಯ ಹಣವನ್ನು ಮುಟ್ಟು ಕೋಲು ಹಾಕಿಕೊಳ್ಳಲಾಗುತ್ತದೆ ಹಾಗೂ ಯಶಸ್ವಿನಿ ಸದಸ್ಯತ್ವವನ್ನು ರದ್ದುಗೊಳಿಸಲಾಗುತ್ತದೆ.
ಇದಕ್ಕೆ ಪ್ರತ್ಯೇಕ ರದ್ಧತಿ ಆದೇಶ ಅವಶ್ಯಕತೆ ಇರುವುದಿಲ್ಲ.
ಯಶಸ್ವಿನಿ ಯೋಜನೆಗೆ ನೋಂದಣಿ ಮಾಡಿಕೊಳ್ಳಲು ಪ್ರಮುಖ ದಿನಾಂಕಗಳು :
ರಾಜ್ಯ ಸರ್ಕಾರದ ಯಶಸ್ವಿನಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಪ್ರಮುಖ ದಿನಾಂಕಗಳು
- ನೋಂದಣಿ ಮಾಡಿಕೊಳ್ಳುವ ಪ್ರಾರಂಭದ ದಿನಾಂಕ : 01 ಡಿಸೆಂಬರ್ 2024
- ನೋಂದಣಿ ಮಾಡಿಕೊಳ್ಳಲು ಇರುವ ಕೊನೆಯ ದಿನಾಂಕ : 31 ಡಿಸೆಂಬರ್ 2024
ಅರ್ಜಿ ಸಲ್ಲಿಸಲು ನೊಂದಣಿ ಶುಲ್ಕ :
ಯಶಸ್ವಿನಿ ಯೋಜನೆಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಅಭ್ಯರ್ಥಿಗಳಿಗೆ ನೊಂದಣಿ ಶುಲ್ಕವನ್ನು ನಿಗದಿಪಡಿಸಲಾಗಿದೆ.
- ವಾರ್ಷಿಕ 500 ರೂಪಾಯಿಗಳ ವಂತಿಗೆ ಕುಟುಂಬ ಒಂದಕ್ಕೆ ಮತ್ತು ಅದರಲ್ಲಿ ನಾಲ್ಕಕ್ಕಿಂತ ಹೆಚ್ಚಿನ ಸದಸ್ಯರುಗಳು ಕುಟುಂಬದ ಪ್ರತಿಯೊಬ್ಬ ಹೆಚ್ಚುವರಿ ಸದಸ್ಯರಿಗೆ ರೂ.100ಗಳನ್ನು ನೊಂದಣಿ ಶುಲ್ಕವಾಗಿ ನಿಗದಿಪಡಿಸಲಾಗಿದೆ.
- ಗರಿಷ್ಠ ನಾಲ್ಕು ಸದಸ್ಯರ ಕುಟುಂಬ ನಗರ ಸಹಕಾರ ಸಂಘಗಳಲ್ಲಿ ವಾರ್ಷಿಕ ಸಾವಿರ ರೂಪಾಯಿಗಳ ವಂತಿಕೆ ಮತ್ತು ಅದರಲ್ಲಿ ಹೆಚ್ಚಿನ ಸದಸ್ಯರು ಇದ್ದರೆ ಪ್ರತಿಯೊಬ್ಬ ಹೆಚ್ಚುವರಿ ಸದಸ್ಯರಿಗೆ 200 ರೂಪಾಯಿಗಳ ಶುಲ್ಕ
- ಸರ್ಕಾರವೇ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಸದಸ್ಯರಿಗೆ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಗಿಜನೆಯ ಅಡಿಯಲ್ಲಿ ಸಹಾಯಧನ ನೀಡುವ ಮೂಲಕ ವಂತಿಕೆಯನ್ನು ಪರಿಸುತ್ತದೆ.
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ:
ನೋಂದಣಿ ಮಾಡಿಕೊಳ್ಳುವ ವಿಧಾನ :
ಸರ್ಕಾರದ ಯಶಸ್ವಿನಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಅರ್ಹ ಅಭ್ಯರ್ಥಿಗಳು ತಮ್ಮ ಹತ್ತಿರದ ಸಹಕಾರಿ ಸಂಘದ ಕಚೇರಿ ಎನ್ನುವುದಕ್ಕೆ ದಾಖಲಾತಿಗಳು ಸಮೇತ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದು.
ಯಶಸ್ವಿನಿ ಯೋಜನೆಯ ಸೌಲಭ್ಯಗಳು :
- ಯಶಸ್ವಿನಿ ಯೋಜನೆ ಅಡಿಯಲ್ಲಿ ಪ್ರಸ್ತುತ ಪ್ಲಸ್ ಗುರುತಿಸಿದಂತಹ 1650 ವಿವಿಧ ಚಿಕಿತ್ಸೆಗಳು ಮತ್ತು 478ICU ಚಿಕಿತ್ಸೆಗಳು ಸೇರಿದಂತೆ ಒಟ್ಟು 2128 ಚಿಕಿತ್ಸೆಗಳನ್ನು ನೀಡಲಾಗುತ್ತದೆ.
- ಶಬರಿ ಚಿಕಿತ್ಸಾ ಸೌಲಭ್ಯಗಳನ್ನು ರಾಜ್ಯದಲ್ಲಿ ನೋಂದಾಯಿಸಿದಂತಹ ಯಶಸ್ವಿನಿ ನೆಟ್ವರ್ಕ್ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಒದಗಿಸಲಾಗುತ್ತದೆ.
- ನೆಟ್ವರ್ಕ್ ಆಸ್ಪತ್ರೆಗಳನ್ನು ಹೊರತುಪಡಿಸಿ ಇತರ ಆಸ್ಪತ್ರೆಗಳಲ್ಲಿ ಯಶಸ್ವಿನಿ ಯೋಜನೆಯ ಸೇವೆ ಲಭ್ಯ ಇರುವುದಿಲ್ಲ.
- ಆಸ್ಪತ್ರೆಯ ಯಶಸ್ವಿನಿ ಯೋಜನೆಗೆ ಒಳಪಟ್ಟಿರುವ ಬಗ್ಗೆ ಖಾತೆ ಪಡಿಸಿಕೊಂಡ ನಂತರವೇ ಯಶಸ್ವಿನಿ ಯೋಜನೆಯ ಫಲಾನುಭವಿಗಳು ಚಿಕಿತ್ಸೆ ಪಡೆಯಬೇಕು.
- ಯಶಸ್ವಿನಿ ಯೋಜನೆಯಲ್ಲಿ ಒಳಪಡಿಸಿದಂತಹ ಚಿಕಿತ್ಸೆಗಳ ಮತ್ತು ಟ್ರಸ್ಟ್ ಅಂಗೀಕರಿಸದ ಆಸ್ಪತ್ರೆಗಳಲ್ಲಿ ಪಡೆದಂತಹ ಚಿಕಿತ್ಸೆ ಗಳಿಗೆ ಯಾವುದೇ ರೀತಿ ಜವಾಬ್ದಾರಿ ಯಶಸ್ವಿನಿ ಟ್ರಸ್ಟ್ ಆಗಿರುವುದಿಲ್ಲ. ಹಾಗಾಗಿ ಫಲಾದಭವಿಗಳು ಟ್ರಸ್ಟ್ ತಿಳಿಸಿದಂತಹ ಆಸ್ಪತ್ರೆಗಳಲ್ಲಿ ಪಡೆಯಬೇಕು.
- ಎರಡು ಜೀವಂತ ಮಕ್ಕಳಿಗೆ ಅಥವಾ ಎರಡು ಹೆರಿಗೆಗೆ ಮಾತ್ರ ಸೌಲಭ್ಯವು ಯಶಸ್ವಿನಿಯೋಜನೆಯಲ್ಲಿ ದೊರೆಯುತ್ತದೆ.
- ಫಲಾನುಭವಿಗಳು ಯಶಸ್ವಿನಿ ಯೋಜನೆಯ ಪ್ರೋಟೋಕಾಲ್ ಪ್ರಕಾರ ಜನರಲ್ ವಾರ್ಡಿನಲ್ಲಿ ಮಾತ್ರ ಚಿಕಿತ್ಸೆಯನ್ನು ಪಡೆಯಲು ಅರ್ಹತೆಯನ್ನು ಪಡೆದಿರುತ್ತಾರೆ. ಒಂದು ವೇಳೆ ಜನರಲ್ ವಾರ್ಡ್ ಬದಲಾಗಿ ಉನ್ನತ ವಾರ್ಡ್ನಲ್ಲಿ ಚಿಕಿತ್ಸೆ ಪಡೆಯಲು ಇಚ್ಚಿಸಿದರೆ ಸದರಿ ಫಲಾನುಭವಿಗಳಿಗೆ ಜನರಲ್ ವಾರ್ಡ್ ಗೆ ಅನ್ವಯಿಸುವ ಚಿಕಿತ್ಸೆ ಹುಚ್ಚವನ್ನು ಮಾತ್ರ ಯೋಜನೆಯಡಿಯಲ್ಲಿ ಬರಿಸಲಾಗುತ್ತದೆ ಸ್ಪೆಷಲ್ ವಾರ್ಡಿಗೆ ಆಗುವಂತಹ ಹೆಚ್ಚುವರಿ ವೆಚ್ಚವನ್ನು ಫಲಾನುಭವಿಗಳೆ ಭರಿಸಬೇಕು.
ಹೀಗೆ ಅನೇಕ ರೀತಿಯ ಪ್ರಯೋಜನಗಳನ್ನು ಯಶಸ್ವಿ ಯೋಜನೆಯ ಮೂಲಕ ಅದರಲ್ಲಿಯೂ ಹೊಸದಾಗಿ ನವೀಕರಿಸಿದಂತಹ ಮಾರ್ಗಸೂಚಿ ಅನ್ವಯ ಫಲಾನುಭವಿಗಳು ಪಡೆಯಬಹುದಾಗಿದೆ.
ಇತರೆ ಪ್ರಮುಖ ವಿಷಯಗಳು :
- ರಾಜ್ಯ ಸರ್ಕಾರದಿಂದ ಯಶಸ್ವಿನಿ ಯೋಜನೆಯಡಿ 5 ಲಕ್ಷದ ವರೆಗೆ ಉಚಿತ ಚಿಕಿತ್ಸೆ: ಅರ್ಜಿ ಸಲ್ಲಿಸಲು ಸಂಪೂರ್ಣ ಮಾಹಿತಿ ಇಲ್ಲಿದೆ
- ಪ್ರಧಾನ ಮಂತ್ರಿ ಉಜ್ವಲ್ ಯೋಜನೆಗೆ ಅರ್ಜಿ ಪ್ರಾರಂಭ: ಉಚಿತ ಸಿಲಿಂಡರ್ ಪಡೆಯಲು ಮಹಿಳೆಯರಿಗೆ ಸುವರ್ಣ ಅವಕಾಶ