ನಮಸ್ಕಾರ ಕನ್ನಡಿಗರೇ, ನಮ್ಮ ರಾಜ್ಯದಲ್ಲಿ ಬಹುತೇಕ ಜಿಲ್ಲೆಗಳಲ್ಲಿ ಪ್ರಮುಖ ಬೆಳೆಯಾಗಿ ಅದರಲ್ಲಿಯೂ ಬಹು ಮುಖ್ಯ ಬೆಳೆಯಾಗಿ ಗುರುತಿಸಿಕೊಂಡಿರುವಂತಹ ಅಡಿಕೆ ಕುರಿತು ವಿಶ್ವ ಆರೋಗ್ಯ ಸಂಸ್ಥೆಯ ಅಂಗಸಂಸ್ಥೆಯಾದಂತಹ ಕ್ಯಾನ್ಸರ್ ಸಂಶೋಧನಾ ಸಂಸ್ಥೆಯು ಅಡಿಕೆಯು ಕ್ಯಾನ್ಸರ್ ಕಾರಕ ಎಂದು ಮತ್ತೆ ವರದಿ ಮಾಡಿದ್ದು ಈ ಅಡಿಕೆ ಬೆಳೆಯನ್ನು ನಿಯಂತ್ರಣ ಮಾಡಲು ಇದೀಗ ಶಿಫಾರಸ್ಸು ಮಾಡಿದೆ. ಅಡಿಕೆ ಬೆಳೆಯುವ ರೈತರಲ್ಲಿ WHO ಇಂದ ಬಂದ ಈ ವರದಿ ರೈತರಿಗೆ ಚಿಂತೆ ಮಾಡುವಂತೆ ಮಾಡಿದೆ.
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಡಿಕೆಯನ್ನು ಹಾಕಿ ಹೆಚ್ಚು ಲಾಭ ನೋಡುತಿದ್ದ ರೈತರಿಗೆ ಆತಂಕ ಮೂಡಿಸಿದೆ, ಅಡಿಕೆ ಬೆಲೆಯೂ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತಿದ್ದೆ ಈ ಸಮಯದಲ್ಲಿ ಬಂದ ಈ ವರದಿ ರೈತರಲ್ಲಿ ಅಸಮಾಧಾನವನ್ನು ಮೂಡಿಸಿದೆ, ಅಡಿಕೆ ಬೆಳೆಯು ರಾಜ್ಯದ ರೈತರ ಕೇವಲ ಬೆಳೆಯಾಗಿರದೆ ಅದೊಂದು ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವಂತಹ ಬೆಳೆಯಾಗಿದೆ ಎಂದು ಹೇಳಿದ್ದಾರೆ ತಪ್ಪಾಗಲಾರದು. ಅಡಿಕೆ ಬೆಳೆಯನ್ನು ಬೆಳೆಯುವುದರ ಮೂಲಕ ಸಾಕಷ್ಟು ವರಮಾನವನ್ನು ಗಳಿಸುವುದರ ಮೂಲಕ ಜನರು ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಲು ಹೆಚ್ಚು ಸಹಾಯಮಾಡುತ್ತದೆ.
ಇಂತಹ ಅಡಿಕೆ ಬೆಳೆಯಲ್ಲಿ ಇದೀಗ ವಿಶ್ವ ಆರೋಗ್ಯ ಸಂಸ್ಥೆಯು ನೀಡಿರುವ ವರದಿಯ ಪ್ರಕಾರ ಅಡಿಕೆ ಹಾನಿಕಾರಕ ಎಂದು ತಿಳಿಸಲಾಗುತ್ತಿದೆ. ಇದರಿಂದ ಅಡಿಕೆ ಬೆಳೆಗಾರರಲ್ಲಿ ಆತಂಕ ಹೆಚ್ಚಾಗಿದ್ದು ಇನ್ನು ಮುಂದೆ ಅಡಿಕೆ ಬೆಳೆಯ ಬೇಕೆ ಇಲ್ಲವೇ ಎಂಬುದರ ಪ್ರಶ್ನೆಗೂ ಕೂಡ ಕಾಡುತ್ತಿದೆ. ಆದರೆ ಇದರ ಬಗ್ಗೆ ಸರ್ಕಾರ ಸರಿಯಾದ ಕ್ರಮವನ್ನು ತೆಗೆದುಕೊಳ್ಳುತ್ತಿದ್ದು ಯಾವ ರೀತಿಯ ಕ್ರಮವನ್ನು ಸರ್ಕಾರ ಕೈಗೊಳ್ಳಲಿದೆ ಎಂಬುದರ ಕುರಿತು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು. ಅಡಿಕೆ ಬೆಳೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು ಇದರ ಲಾಭವೂ ಕೂಡ ವಿಸ್ತರಿಸುತ್ತಿದೆ ಎಂದು ಹೇಳಬಹುದು.
ಅಡಿಕೆ ಬೆಳೆಗೆ ಇರುವಂತಹ ಬೆಲೆಯು ಚಿನ್ನದ ಬೆಲೆಯಾಗಿದ್ದು ಇಂತಹ ಅಡಿಕೆ ಬೆಳೆಯ ಕುರಿತು ವಿಶ್ವ ಆರೋಗ್ಯ ಸಂಸ್ಥೆಯು ನೀಡುವ ವರದಿಯು ಹೆಚ್ಚು ಆತಂಕ ಉಂಟು ಮಾಡುತ್ತಿದೆ. ಇದೀಗ ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಅಡಿಕೆ ಬೆಳೆಯು ಕ್ಯಾನ್ಸರ್ ಕಾರಕ ಎಂದು ವರದಿಯಾಗಿದ್ದು ಇದಕ್ಕೆ ಸಂಬಂಧಿಸಿದಂತಹ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ಅಂದರೆ ಅಡಿಕೆ ಕುರಿತು ಯಾವ ರೀತಿಯ ವರದಿಯನ್ನು ವಿಶ್ವ ಆರೋಗ್ಯ ಸಂಸ್ಥೆಯ ಅಂಗ ಸಂಸ್ಥೆಯು ನೀಡಿದೆ ನಮ್ಮ ರಾಜ್ಯದ ಸಂಸ್ಥೆಗಳು ಅಡಿಕೆ ಬೆಳೆಯ ಸಂಬಂಧ ಪಟ್ಟಂತೆ ಈ ಕುರಿತು ಯಾವ ಕ್ರಮವನ್ನು ಕೈಗೊಂಡಿರುತ್ತವೆ ಎಂಬುದರ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದ್ದು ಇದರ ಬಗ್ಗೆ ಪೂರ್ಣವಾಗಿ ತಿಳಿದುಕೊಳ್ಳಬಹುದು.
ಅಡಿಕೆ ಬೆಳೆಗೆ ಸಂಬಂಧಿಸಿದಂತೆ ವಿಶ್ವ ಆರೋಗ್ಯ ಸಂಸ್ಥೆಯ ಅಂಗ ಸಂಸ್ಥೆ ವರದಿ ವಿವರ :
ಅಡಿಕೆ ಕುಡಿದು ಆತಂಕದ ವರದಿಯನ್ನು ವಿಶ್ವ ಆರೋಗ್ಯ ಸಂಸ್ಥೆಯ ನ್ಯಾಷನಲಿ ಏಜೆನ್ಸಿ ಫಾರ್ ರಿಸರ್ಚ್ ಅಂಡ್ ಕ್ಯಾನ್ಸರ್ ಸಂಶೋಧನಾ ಸಂಸ್ಥೆಯು ಪ್ರಕಟಣೆ ಮಾಡಿದ್ದು ಇದೀಗ ಅಡಿಕೆ ಬೆಳೆಗಾರರ ನಿದ್ದೆಗೆಡಿಸುವಂತೆ ಈ ವರದಿ ಮಾಡಿದೆ. ಅಡಿಕೆ ಭವಿಷ್ಯವನ್ನು ಈ ವರದಿಯು ಪ್ರಶ್ನಿಸುವಂತೆ ಮಾಡಿದ್ದು ಅಡಿಕೆಯು ಕ್ಯಾನ್ಸರ್ ಕಾರಕ ಎಂದು ವರದಿಯಲ್ಲಿ ತಿಳಿಸಿದ್ದು ಈ ಅಡಿಕೆ ಬೆಳೆಯನ್ನು ನಿಯಂತ್ರಣ ಮಾಡಬೇಕೆಂದು ವಿಶ್ವ ಆರೋಗ್ಯ ಸಂಸ್ಥೆಯ ಅಂಗ ಸಂಸ್ಥೆಯು ಶಿಫಾರಸು ಮಾಡಿದೆ.
ಸುಪ್ರೀಂ ಕೋರ್ಟ್ ನಲ್ಲಿ ಅಡಿಕೆ ಆರೋಗ್ಯಕರ ಎಂದು ಪ್ರಕರಣ ನಡೆಯುತ್ತಿದೆ :
ಡಬ್ಲ್ಯೂ ಎಚ್ ಓ ದ ಈ ವರದಿಯ ಅನ್ವಯ ಅಡಿಕೆ ಬೆಳೆಗಾರರು ಮತ್ತು ಇದಕ್ಕೆ ಸಂಬಂಧಪಟ್ಟಂತಹ ಸಂಸ್ಥೆಗಳು ಯಾವುದೇ ರೀತಿಯ ಕ್ಯಾನ್ಸರ್ ಅಡಿಕೆ ಬಳಕೆಯಿಂದ ಬರುವುದಿಲ್ಲ ಅಡಿಕೆಯನ್ನು ಸೇವನೆ ಮಾಡುವುದರಿಂದ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಬರುವುದಿಲ್ಲವೆಂದು ಈಗಾಗಲೇ ನಮ್ಮ ದೇಶದ ಸುಪ್ರೀಂ ಕೋರ್ಟ್ ನಲ್ಲಿ ಈ ಅಡಿಕೆ ಬೆಳೆ ಕುರಿತಂತೆ ಪ್ರಕರಣ ನಡೆಯುತ್ತಿದೆ. ಆದರೆ ಡಬ್ಲ್ಯೂ ಹೆಚ್ ಓ ಅಡಿಕೆ ಕ್ಯಾನ್ಸರ್ ಕಾರಕ ಎಂದು ವರದಿ ಮಾಡಿದ್ದು ಇದರ ಬಗ್ಗೆ ಸಾಕಷ್ಟು ಆತಂಕ ಅಡಿಕೆ ಬೆಳೆಗಾರರಲ್ಲಿ ಉಂಟಾಗುತ್ತಿದೆ ಎಂದು ಹೇಳಬಹುದು.
ಅಡಿಕೆ ಬೆಳೆಗೆ ಕಡಿವಾಣ ಹಾಕುವಂತೆ ವಿಶ್ವ ಸಂಸ್ಥೆಯ ಅಂಗ ಸಂಸ್ಥೆ ಶಿಫಾರಸ್ಸು :
ತಂಬಾಕು ಮಿಶ್ರಿತ ಅಡಿಕೆ ಮಾತ್ರವಲ್ಲದೆ ನೇರವಾಗಿ ಅಡಿಕೆ ಬೆಳೆಯ ನಿಯಂತ್ರಿಸುವಂತೆ ವಿಶ್ವಸಂಸ್ಥೆ ಅಂಗ ಸಂಸ್ಥೆ ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಅಂಡ್ ಕ್ಯಾನ್ಸರ್ ವರದಿಯಲ್ಲಿ ಸೂಚಿಸಲಾಗಿದ್ದು ವಿಶ್ವದ ಮೂರನೇ ಒಂದರಷ್ಟು ಬಾಯಿ ಕ್ಯಾನ್ಸರ್ ಅನ್ನು ಹೊಗೆ ರಹಿತ ತಂಬಾಕು ಮತ್ತು ಅಡಿಕೆ ಬಳಕೆಗೆ ಕಡಿವಾಣ ಹಾಕುವ ಮೂಲಕ ತಡೆಗಟ್ಟಬಹುದೆಂದು ವಿಶ್ವ ಸಂಸ್ಥೆಯ ಅಂಗ ಸಂಸ್ಥೆ ನೀಡಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಬಾಯಿ ಕ್ಯಾನ್ಸರ್ ಪ್ರಕರಣಗಳ ಅಂಕಿ ಅಂಶ :
ಏಷ್ಯಾ ಖಂಡದ ದೇಶಗಳಲ್ಲಿ ಅದರಲ್ಲಿ ಭಾರತದಲ್ಲಿ ಅತ್ಯಧಿಕ ಬಾಯಿ ಕ್ಯಾನ್ಸರ್ ಪ್ರಕರಣಗಳು ತಂಬಾಕು ಗುಟುಕ ಹಾಗೂ ಅಡಿಕೆ ಉತ್ಪನ್ನಗಳ ರೀತಿಯ ಹೊಗೆರಹಿತ ತಂಬಾಕು ಉತ್ಪನ್ನಗಳು ಅಧಿಕವಾಗಿ ಬಳಕೆ ಮಾಡಿರುವುದರಿಂದ ದಾಖಲಾಗಿವೆ ಎಂದು ಕ್ಯಾನ್ಸರ್ ವಿಭಾಗದ ವಿಜ್ಞಾನಿ ಅದ ಡಾಕ್ಟರ್ ಹ್ಯಾರಿಯಟ್ ರೂಮ್ಗೆ ಅವರು ಡಬ್ಲ್ಯೂ ಎಚ್ ಓದ ಈ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಅಡಕೆ ಬಳಕೆ ಮತ್ತು ಹೊಗೆರಹಿತ ತಂಬಾಕು ಬಳಕೆಯಿಂದ ಉಲ್ಬಣವಾಗುವ ಎಲ್ಲಾ ಬಾಯಿ ಕ್ಯಾನ್ಸರ್ ಪ್ರಕರಣಗಳಲ್ಲಿ
- ಭಾರತದಲ್ಲಿ 83,400
- ಬಾಂಗ್ಲಾದೇಶ97೦೦
- ಪಾಕಿಸ್ತಾನ 8900
- ಚೀನಾ 3200
- ಶ್ರೀಲಂಕಾ 1300
- ಮಯನ್ಮಾರ್ 1600
- ಇಂಡೋನೇಷ್ಯಾ 990
- ಥೈಲ್ಯಾಂಡ್ 785
ಹೀಗೆ ಹೋಗಿರಹಿತ ತಂಬಾಕು ಮತ್ತು ಅಡಕೆ ಬಳಕೆಯಿಂದ ಬಾಯಿ ಕ್ಯಾನ್ಸರ್ ಪ್ರಕರಣಗಳು ವಿವಿಧ ದೇಶಗಳಲ್ಲಿ ಬೆಳಕಿಗೆ ಬಂದಿವೆ.
ಒಟ್ಟಾರೆ ಡಬ್ಲ್ಯೂ ಎಚ್ ಓ ದ ಅಂಗ ಸಂಸ್ಥೆಯ ದ ಕ್ಯಾನ್ಸರ್ ಸಂಶೋಧನಾ ಸಂಸ್ಥೆಯು ನೀಡಿರುವ ವರದಿಯ ಪ್ರಕಾರ ಅಡಿಕೆಯು ಕ್ಯಾನ್ಸರ್ ಕಾರಕ ಎಂದು ವರದಿ ಮಾಡಿದೆ ಆದರೆ ಭಾರತದ ಸುಪ್ರೀಂ ಕೋರ್ಟ್ ನಲ್ಲಿ ಅಡಿಕೆಯು ಆರೋಗ್ಯಕರ ಎಂದು ಹೇಳಲಾಗುತ್ತಿದೆ. ಏನೇ ಆದರೂ ನಮ್ಮ ಆರೋಗ್ಯದ ದೃಷ್ಟಿಯಿಂದ ಯಾವ ಉತ್ಪನ್ನವನ್ನು ಎಷ್ಟು ಪ್ರಮಾಣದಲ್ಲಿ ಉಪಯೋಗಿಸಬೇಕೆಂಬುದರ ಬಗ್ಗೆ ತಿಳಿದುಕೊಂಡಿರುವುದು ಹೆಚ್ಚು ಮುಖ್ಯವಾಗಿರುತ್ತದೆ. ಆದರೆ ಅಡಿಕೆ ಬೆಳೆಗಾರರಲ್ಲಿ ಡಬ್ಲ್ಯೂ ಹೆಚ್ಓ ದ ಅಂಗ ಸಂಸ್ಥೆ ನೀಡಿರುವ ವರದಿಯು ಹೆಚ್ಚು ಆತಂಕವನ್ನುಂಟು ಮಾಡಿದೆ ಎಂದು ಹೇಳಬಹುದು.
ನಮ್ಮ ದೇಶದಲ್ಲಿ ಬಹುತೇಕ ರಾಜ್ಯಗಳಲ್ಲಿ ಬಹು ಮುಖ್ಯ ಬೆಳೆ ಎಂದರೆ ಅದು ಅಡಿಕೆ ಬೆಳೆಯಾಗಿದ್ದು ವಿಶ್ವ ಆರೋಗ್ಯ ಸಂಸ್ಥೆಯ ಅಂಗಸಂಸ್ಥೆಯಾದ ಕ್ಯಾನ್ಸರ್ ಸಂಶೋಧನಾ ಸಂಸ್ಥೆಯು ನೀಡಿರುವ ವರದಿಯ ಪ್ರಕಾರ ಅಡಿಕೆ ಬೆಳೆಗಾರರಲ್ಲಿ ಈ ಒಂದು ವರದಿಯು ಹೆಚ್ಚು ಆತಂಕವನ್ನುಂಟು ಮಾಡಿದೆ ಎಂದು ಹೇಳಬಹುದು. ಕಡಿಮೆ ವೆಚ್ಚದಲ್ಲಿ ಉತ್ತಮ ಆದಾಯ ನೀಡುವಂತಹ ಈ ಅಡಿಕೆ ಬೆಳೆಯು, ವರ್ಷದಿಂದ ವರ್ಷಕ್ಕೆ ಬೆಳೆಯ ಪ್ರದೇಶವು ಕೂಡ ವಿಸ್ತರಣೆ ಆಗುತ್ತಿದ್ದು ವಿಶ್ವ ಸಂಸ್ಥೆಯಾಗಿ ವರದಿಯು ಯಾವ ರೀತಿಯ ಪರಿಣಾಮವನ್ನು ಉಂಟುಮಾಡುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಅದೇನೆಯಾದರೂ ವಿಶ್ವಸಂಸ್ಥೆ ನೀಡಿರುವಂತಹ ಈ ವರದಿಯ ಪ್ರಕಾರ ಯಾವ ರೀತಿಯ ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕು. ಜನರು ಅಡಿಕೆಯನ್ನು ಮಾತ್ರವೇ ಉಪಯೋಗಿಸಬೇಕು ಹೊಗೆರಹಿತ ತಂಬಾಕು ಬಳಕೆ ಮಾಡುವುದನ್ನು ಕಡಿಮೆ ಮಾಡಬೇಕು ಇದರಿಂದ ಬಾಯಿ ಕ್ಯಾನ್ಸರ್ ಪ್ರಕರಣಗಳು ಕಡಿಮೆಯಾಗುತ್ತವೆ ಎಂದು ಹೇಳಬಹುದು. ನಮ್ಮ ಭಾರತ ದೇಶದಲ್ಲಿಯೇ ಹೆಚ್ಚು ಅಡಿಕೆ ಉಪಯೋಗಿಸುವ ಜನರು ಇರುವುದರಿಂದ ಈ ಬಾಯಿ ಕ್ಯಾನ್ಸರ್ ಉಂಟಾಗುತ್ತಿದೆ ಎಂದು ಹೇಳಬಹುದು ಹಾಗಾಗಿ ಅಗತ್ಯಕ್ಕಿಂತ ಹೆಚ್ಚಾಗಿ ಉಪಯೋಗಿಸದೆ ಮಿತವಾಗಿ ಅಡಿಕೆ ಬೆಳೆಸುವುದು ಮುಖ್ಯವಾಗಿರುತ್ತದೆ.
ಪ್ರಸ್ತುತ ಅಡಿಕೆಯನ್ನು ನಿಯಂತ್ರಣ ಮಾಡುವುದರ ಮೂಲಕ ಬಹುತೇಕ ಬಾಯಿ ಕ್ಯಾನ್ಸರ್ ಪ್ರಮಾಣವನ್ನು ಕಡಿಮೆ ಮಾಡಬಹುದೆಂದು ವಿಶ್ವಸಂಸ್ಥೆಯ ವರದಿಯಲ್ಲಿ ತಿಳಿಸಲಾಗಿದೆ. ಹಾಗಾಗಿ ಆದಷ್ಟು ನಿಯಂತ್ರಣದಲ್ಲಿರುವುದು ಮುಖ್ಯವಾಗಿರುತ್ತದೆ. ಅಡಿಕೆ ಬಳಕೆ ಮಾಡುವುದರಿಂದ ಏನೆಲ್ಲಾ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ ಎಂಬುದರ ಬಗ್ಗೆ ಪ್ರತಿಯೊಬ್ಬರಿಗೂ ತಿಳಿಸಿ.