ಸರ್ಕಾರದಿಂದ ಕುರಿ ಕೋಳಿ ಸಾಕಣೆಗೆ ಸಬ್ಸಿಡಿ ಬಿಡುಗಡೆ : ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ ತಕ್ಷಣ ನೋಡಿ


ನಮಸ್ಕಾರ ಕನ್ನಡಿಗರೇ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಗ್ರಾಮೀಣ ಯುವಕರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿವೆ. ಸದ್ಯ ಇದೀಗ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಈ ಒಂದು ಯೋಜನೆಯ ಮೂಲಕ ಸರ್ಕಾರದಿಂದ ಶೇಕಡ 50ರಷ್ಟು ಸಹಾಯಧನವನ್ನು ಪಡೆದು ಯುವಕರು ಸ್ವಂತ ಉದ್ಯೋಗವನ್ನು ಪ್ರಾರಂಭಿಸಬಹುದಾಗಿದೆ. ಗ್ರಾಮೀಣ ಯುವಕರನ್ನು ಪ್ರೋತ್ಸಾಹಿಸಲು ಕೇಂದ್ರ ಸರ್ಕಾರ ಕೋಳಿ ಸಾಕಾಣಿಕೆ ಕುರಿ ಮೇಕೆ ತಳಿ ಸಂವರ್ಧನೆ ಪಶು ಆಹಾರ ಮೇವು ಅಭಿವೃದ್ಧಿ ಕ್ಷೇತ್ರದಲ್ಲಿ ಈ ಒಂದು ಯೋಜನೆಯನ್ನು ಜಾರಿಗೊಳಿಸಿದ್ದು.

Release of subsidy for sheep and chicken farming by the government
Release of subsidy for sheep and chicken farming by the government

ಶೇಕಡ 50ರಷ್ಟು ಸಹಾಯಧನವನ್ನು ಮೂಲ ಬಂಡವಾಳದಲ್ಲಿ ಫಲಾನುಭವಿಗಳು ಪಡೆದುಕೊಳ್ಳಬಹುದು. ಹಾಗಾದರೆ ಕೇಂದ್ರ ಸರ್ಕಾರದ ಈ ಯೋಜನೆ ಯಾವುದು? ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಲು ಏನೆಲ್ಲಾ ಮಾನದಂಡಗಳನ್ನು ಹೊಂದಿರಬೇಕು. ಯಾರೆಲ್ಲ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ. ಹಾಗೂ ಸಾಲ ಮಂಜೂರಾತಿ ಸೇರಿದಂತೆ ಹಲವಾರು ವಿವರಗಳನ್ನು ಈ ಲೇಖನದ ಕೆಳಗೆ ತಿಳಿದುಕೊಳ್ಳಬಹುದು.

ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆ :

ಕೇಂದ್ರ ಸರ್ಕಾರವು ಗ್ರಾಮೀಣ ಯುವಕರನ್ನು ಸ್ವಯಂ ಸಕ್ರಿಯಗೊಳಿಸುವುದು ಹಾಗೂ ಈ ಈ ಕ್ಷೇತ್ರದಲ್ಲಿ ಉದ್ಯಮಶೀಲರನ್ನು ಪ್ರೋತ್ಸಾಹಿಸುವ ಹಿನ್ನೆಲೆಯಲ್ಲಿ ಕುರಿ ಮೇಕೆ ಕೋಳಿ ಪಶು ಆಹಾರ ಮತ್ತು ಮೇವು ಅಭಿವೃದ್ಧಿಯಲ್ಲಿ ಕೇಂದ್ರ ಸರ್ಕಾರವು ರಾಷ್ಟ್ರೀಯ ಜಾನುವಾರು ಮಿಷನ್ ಎಂಬ ಯೋಜನೆಯನ್ನು ಜಾರಿಗೊಳಿಸಿದೆ.

  1. ಸದರಿ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯ 2021 ಮತ್ತು 22ನೇ ಸಾಲಿನಂದ 2025 ಮತ್ತು 26ನೇ ಸಾಲಿನವರೆಗೆ ಚಾಲ್ತಿಯಲ್ಲಿ ಇರುತ್ತದೆ. ಮೂಲ ಬಂಡವಾಳದಲ್ಲಿ ಶೇಕಡ 50ರಷ್ಟು ಸಹಾಯಧನವನ್ನು ಈ ಯೋಜನೆ ಅನುಷ್ಠಾನಾ ಜಾರಿಗೆ ಎರಡು ಕಂತುಗಳ ರೂಪದಲ್ಲಿ ಫಲಾನುಭವಿಗಳಿಗೆ ಸ್ವಂತ ಉದ್ಯೋಗವನ್ನು ಪ್ರಾರಂಭಿಸಲು ಒದಗಿಸಲಾಗುತ್ತದೆ.

ಯೋಜನಾ ಘಟಕಗಳ ವಿವರಗಳು :

ಕೇಂದ್ರ ಸರ್ಕಾರ ಜಾರಿಗೆ ತಂದಿರುವಂತಹ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಗೆ ಸಂಬಂಧಿಸಿ ದಂತೆ ನಿರುದ್ಯೋಗ ಯುವಕ ಯುವತಿಯರು ಸ್ವಂತ ಉದ್ಯೋಗವನ್ನು ಪ್ರಾರಂಭಿಸಲು ಕೇಂದ್ರ ಸರ್ಕಾರದಿಂದ ಶೇಕಡ 50ರಷ್ಟು ಸಹಾಯಧನವನ್ನು ಪಡೆದು ಸ್ವಂತ ಉದ್ಯೋಗವನ್ನು ನಡೆಸಬಹುದಾಗಿದೆ. ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯ ಅಡಿಯಲ್ಲಿ ಏನೆಲ್ಲ ಪ್ರಯೋಜನ ಲಭ್ಯವಿದೆ ಎಂಬುದರ ಮಾಹಿತಿಯನ್ನು ನೋಡುವುದಾದರೆ,

  1. ಗ್ರಾಮೀಣ ಕೋಳಿ ಸಾಕಾಣಿಕೆ ಕುರಿ ಮೇಕೆ ಹಂದಿ ಸಾಕಾಣಿಕೆ ಮತ್ತು ರಸಮೇವು ಉತ್ಪಾದನೆ ಘಟಕಗಳನ್ನು ಪ್ರಾರಂಭಿಸಲು ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯ ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮದ ಅಡಿಯಲ್ಲಿ ಆರ್ಥಿಕ ನೆರವನ್ನು ಯುವಕರು ಅಥವಾ ಫಲಾನುಭವಿಗಳು ಪಡೆಯಬಹುದು.
  2. ಆಸಕ್ತಿ ಹೊಂದಿರುವಂತಹ ಜನರು ಈ ಯೋಜನೆಯ ಆರ್ಥಿಕ ಸೌಲಭ್ಯವನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಡೆಯಬಹುದಾಗಿದೆ.
  3. ಈ ಕೆಳಕಂಡಂತಹ ಪಶುಸಂಗೋಪನ ಚಟುವಟಿಕೆಗಳನ್ನು ಉದ್ಯಮಶೀಲ ಕಾರ್ಯಕ್ರಮಗಳನ್ನಾಗಿ ಕೈಗೊಳ್ಳಲು ಈ ಒಂದು ಯೋಜನೆಯ ಅಡಿಯಲ್ಲಿ ಯೋಜನಾ ವೆಚ್ಚದ ಶೇಕಡ 50ರಷ್ಟು ಸಾಲ ಸೌಲಭ್ಯ ಹಾಗೂ ತಾಂತ್ರಿಕ ಸಹಾಯವನ್ನು ಫಲಾನುಭವಿಗಳಿಗೆ ನೀಡಲಾಗುತ್ತದೆ.

ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯ ಮಾರ್ಗಸೂಚಿ :

ಕೆಲವೊಂದು ಘಟಕಗಳಿಗೆ ನಿಗದಿಪಡಿಸಿ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯ ಅಡಿಯಲ್ಲಿ ಸಹಾಯಧನವನ್ನು ನಿಗದಿಪಡಿಸಲಾಗಿದೆ. ಆ ಸಹಾಯಧನದ ವಿವರವನ್ನು ಅಥವಾ ಯೋಜನೆಯ ಮಾರ್ಗಸೂಚಿ ವಿವರ ಈ ಕೆಳಗಿನಂತೆ ನೋಡುವುದಾದರೆ,

  1. ಗ್ರಾಮೀಣ ಕೋಳಿ ಉದ್ದಿಮೆ ಅಭಿವೃದ್ಧಿ (1000 ದೇಶಿ ಮಾತೃ ಕೋಳಿ ಘಟಕ +ಹ್ಯಾಚರಿ ಘಟಕ +ಮರಿಗಳ ಸಾಕಾಣಿಕೆ ಘಟಕ)
  • ಘಟಕದ ವೆಚ್ಚ 34,75, 540
  • ಸಹಾಯಧನ ಒಂದು ಘಟಕಕ್ಕೆ ಗರಿಷ್ಟ 25 ಲಕ್ಷ ಶೇಕಡ 50ರಷ್ಟು
  1. ಕುರಿ ಮೇಕೆ ತಳಿ ಸಂವರ್ಧನ ಘಟಕ (500+25)
  • ಘಟಕದ ವೆಚ್ಚ : 873000
  • ಸಹಾಯಧನ : ಶೇಕಡ 50ರಷ್ಟು ಗರಿಷ್ಠ 50 ಲಕ್ಷ ರೂಪಾಯಿ ಒಂದು ಘಟಕಕ್ಕೆ
  1. ಹಂದಿ ತಳಿ ಸoವರ್ಧನ ಘಟಕ (100+10)
  • ಘಟಕ ವೆಚ್ಚ : ಶೇಕಡಾ 50 ರಷ್ಟು ಗರಿಷ್ಠ 30 ಲಕ್ಷ ರೂಪಾಯಿ ಒಂದು ಘಟಕಕ್ಕೆ
  • ಸಹಾಯಧನ : 50 29,400
  1. ರಸಮೇವು ಉತ್ಪಾದನಾ ಘಟಕ :
  • ಸಹಾಯಧನ : 50 ಲಕ್ಷ
  • ಘಟಕ ವೆಚ್ಚ : ಶೇಕಡ 50ರಷ್ಟು ಗರಿಷ್ಠ 50 ಲಕ್ಷ ರೂಪಾಯಿ ಒಂದು ಘಟಕಕ್ಕೆ
    ಹೀಗೆ ವಿವಿಧ ಘಟಕಗಳಿಗೆ ಅನುಸಾರವಾಗಿ ಶೇಕಡ 50ರಷ್ಟು ಸಹಾಯಧನವನ್ನು ನಿಗದಿಪಡಿಸಲಾಗಿದೆ ಹಾಗೂ ಒಂದು ಘಟಕಕ್ಕೆ ಗರಿಷ್ಠ ಸಹಾಯಧನವನ್ನು ಘಟಕಗಳಿಗೆ ಅನುಸಾರವಾಗಿ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯ ಅಡಿಯಲ್ಲಿ ಫಲಾನುಭವಿಗಳಿಗೆ ನೀಡಲಾಗುತ್ತದೆ.

ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಗೆ ಅಗತ್ಯ ದಾಖಲಾತಿಗಳು :

ಕೇಂದ್ರ ಸರ್ಕಾರ ಜಾರಿಗೆ ತಂದಿರುವಂತಹ ಈ ಒಂದು ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಲು ಕೆಲವೊಂದು ಪ್ರಮುಖ ದಾಖಲೆಗಳನ್ನು ಅಭ್ಯರ್ಥಿಗಳು ಹೊಂದಿರಬೇಕು ಆಗ ಮಾತ್ರ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಹಾಗಾದರೆ ಆ ಪ್ರಮುಖ ದಾಖಲಾತಿಗಳು ಯಾವುವು ಎಂದು ನೋಡುವುದಾದರೆ,

  1. ಯೋಜನೆಯ ವರದಿ
  2. ಘಟಕ ಸ್ಥಾಪಿಸಲು ಉದ್ದೇಶಿಸಿರುವಂತಹ ಸ್ಥಳದ ಜಿಪಿಎಸ್ ಫೋಟೋ
  3. ಪಾಸ್ಪೋರ್ಟ್ ಸೈಜ್ ಫೋಟೋ
  4. ಭೂ ದಾಖಲೆಗಳು
  5. ಆಧಾರ್ ಕಾರ್ಡ್
  6. ಚುನಾವಣಾ ಗುರುತಿನ ಚೀಟಿ
  7. ಪಾನ್ ಕಾರ್ಡ್
  8. ಮೂರು ವರ್ಷಗಳ ಆದಾಯ ತೆರಿಗೆ ಪಾವತಿ ಮಾಡಿರುವ ವರದಿ
  9. ಆರು ತಿಂಗಳ ಬ್ಯಾಂಕ್ ವಾಹಿವಾಟು ವಿವರ
  10. ರದ್ದುಪಡಿಸಿದಂತಹ ಬ್ಯಾಂಕ್ ಚೆಕ್ ಹಾಳೆ
  11. ವಿದ್ಯಾರ್ಹತೆಯ ಪ್ರಮಾಣ ಪತ್ರ
  12. ತರಬೇತಿ ಪ್ರಮಾಣ ಪತ್ರ
  13. ಅನುಭವ ಬಂದಿರುವ ಕುರಿತು ಪ್ರಮಾಣ ಪತ್ರ
    ಹೀಗೆ ಈ ಮೇಲಿನ ದಾಖಲೆಗಳನ್ನು ಹೊಂದುವುದರ ಮೂಲಕ ಅಭ್ಯರ್ಥಿಗಳು ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ಸ್ವಂತ ಉದ್ಯೋಗವನ್ನು ಪ್ರಾರಂಭಿಸಲು ಸರ್ಕಾರದಿಂದ 50 ಲಕ್ಷ ರೂಪಾಯಿಗಳ ವರೆಗೆ ಸಹಾಯಧನವನ್ನು ಪಡೆದುಕೊಳ್ಳಬಹುದು.

ಅಧಿಕೃತ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ:

ಅರ್ಜಿ ಸಲ್ಲಿಸುವ ಪ್ರಕ್ರಿಯೆ :

ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಪಶು ಪಾಲನೆ ಹಾಗೂ ಪಶು ವೈದ್ಯಕೀಯ ಸೇವಾ ಇಲಾಖೆ ತಾಲೂಕು ಜಿಲ್ಲಾ ಕಚೇರಿ ಅಧಿಕಾರಿಗಳನ್ನು ಭೇಟಿ ಮಾಡಬೇಕು ಹಾಗೂ ಹೆಚ್ಚಿನ ಮಾಹಿತಿಗಾಗಿಯು ಕೂಡ ಇವರನ್ನು ಭೇಟಿ ಮಾಡಿ ಸರಿಯಾದ ರೀತಿಯಲ್ಲಿ ಅರ್ಜಿಯನ್ನು ಸಲ್ಲಿಸಬೇಕು. ಆಗ ಮಾತ್ರ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಸ್ವಂತ ಉದ್ಯೋಗವನ್ನು ಪ್ರಾರಂಭಿಸಲು ಬಯಸುವ ಯುವಕ ಯುವತಿಯರಿಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯ ಬಗ್ಗೆ ತಿಳಿಸಿ.

ಇದರಿಂದ ಅವರು ಸ್ವಂತ ಉದ್ಯೋಗವನ್ನು ಪ್ರಾರಂಭಿಸಿ ತಮ್ಮ ಆರ್ಥಿಕ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಲು ಸಹಾಯವಾಗುತ್ತದೆ. ಒಟ್ಟಾರೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ರಾಜ್ಯದ ಜನತೆಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಹೊಸ ಹೊಸ ಯೋಜನೆಗಳನ್ನು ಹಾಗೂ ಸ್ವಂತ ಉದ್ಯೋಗವನ್ನು ಪ್ರಾರಂಭಿಸಲು ಬಯಸುವ ಜನರಿಗೆ ಸಹಾಯಧನವನ್ನು ಒದಗಿಸುವ ಮೂಲಕ ರಾಜ್ಯದ ಜನರಲ್ಲಿ ಮಾಡುವುದು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಮುಖ್ಯ ಉದ್ದೇಶವಾಗಿದೆ ಎಂದು ಹೇಳಬಹುದು.

ಅಜಯ್ ದೀಗ ಕೇಂದ್ರ ಸರ್ಕಾರದ ಈ ಒಂದು ಯೋಜನೆಯ ಬಗ್ಗೆ ಪ್ರತಿಯೊಬ್ಬರಿಗೂ ತಿಳಿಸುವುದರ ಮೂಲಕ ಅವರೇನಾದರೂ ಉದ್ಯೋಗವಿಲ್ಲದೆ ಖಾಲಿ ಕೂತಿದ್ದರೆ ಸರ್ಕಾರದಿಂದ 50 ಲಕ್ಷ ರೂಪಾಯಿಗಳವರೆಗೆ ಸಹಾಯಧನವನ್ನು ಪಡೆದು ಸ್ವಂತ ಉದ್ಯೋಗವನ್ನು ಪ್ರಾರಂಭಿಸಿ ತಮ್ಮ ಆರ್ಥಿಕ ಮಟ್ಟವನ್ನು ಹೆಚ್ಚಿಸಿಕೊಳ್ಳುವಂತೆ ತಿಳಿಸಿ. ಇದರಿಂದ ಜನರ ಜೀವನ ಮಟ್ಟ ಸುಧಾರಿಸುವುದಲ್ಲದೆ ದೇಶದ ಆರ್ಥಿಕ ಅಭಿವೃದ್ಧಿಯು ಕೂಡ ಹೆಚ್ಚಾಗಲಿದೆ ಎಂದು ಹೇಳಬಹುದು.

ಇತರೆ ಪ್ರಮುಖ ವಿಷಯಗಳು:

http://ರೈತರಿಗೆ ಆತಂಕ ಹೆಚ್ಚಿಸಿದ ಡಬ್ಲ್ಯೂ ಎಚ್ ಓ : ಆಡಿಕೆ ಕ್ಯಾನ್ಸರ್ ಕಾರಕನಾ, ಇಲ್ಲವಾ, ಇಲ್ಲಿದೆ ಸಂಪೂರ್ಣ ಮಾಹಿತಿ ರಾಜ್ಯ ಸರ್ಕಾರದಿಂದ ಯಶಸ್ವಿನಿ ಯೋಜನೆಯಡಿ 5 ಲಕ್ಷದ ವರೆಗೆ ಉಚಿತ ಚಿಕಿತ್ಸೆ: ಅರ್ಜಿ ಸಲ್ಲಿಸಲು ಸಂಪೂರ್ಣ ಮಾಹಿತಿ ಇಲ್ಲಿದೆ


Leave a Comment