ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ 19ನೇ ಕಂತಿನ ಹಣ ಬಿಡುಗಡೆ : ನಿಮಗೂ ಬಂದಿದ್ಯ ಚೆಕ್ ಮಾಡಿ ಇಲ್ಲಿದೆ ಸಂಪೂರ್ಣ ಮಾಹಿತಿ


ನಮಸ್ಕಾರ ಕನ್ನಡಿಗರೇ, ರಾಜ್ಯದ ರೈತರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿವೆ. ಸದ್ಯ ಇದೀಗ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯು ಹೆಚ್ಚು ಸದ್ದು ಮಾಡುತ್ತಿದ್ದು ರೈತರ ಬ್ಯಾಂಕ್ ಖಾತೆಗೆ ಯಾವಾಗ 19ನೇ ಕಂತಿನ ಹಣ ಜಮಾ ಆಗುತ್ತದೆ ಎನ್ನುವ ಮಾಹಿತಿಯನ್ನು ಸರ್ಕಾರ ತಿಳಿಸಿದೆ.

release-of-19th-installment-of-pradhan-mantri-kisan-yojana
release-of-19th-installment-of-pradhan-mantri-kisan-yojana

ಈಗಾಗಲೇ ಕೇಂದ್ರ ಸರ್ಕಾರದಿಂದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 19ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಾಗಿದ್ದು ಇನ್ನೇನು ರೈತರ ಬ್ಯಾಂಕ್ ಖಾತೆಗೆ ಹಣ ಜಮಾ ಆಗುವುದೊಂದೇ ಬಾಕಿ ಉಳಿದಿದೆ ಅಷ್ಟೇ. ರೈತರ ಬ್ಯಾಂಕ್ ಖಾತೆಗೆ ಈ ಹಣ ಯಾವಾಗ ಜಮಾ ಆಗಲಿದೆ ಎಂಬುದರ ಮಾಹಿತಿಯನ್ನು ಇವತ್ತಿನ ಲೇಖನದಲ್ಲಿ ತಿಳಿಸಲಾಗುತ್ತಿದೆ.

ಪ್ರಧಾನಮಂತ್ರಿ ಕಿಸಾನ್ ನಿಧಿ ಯೋಜನೆ :

ಮೊದಲು ರೈತರ ಪಿಎಂ ಕಿಸಾನ್ ಯೋಜನೆಯನ್ನು ಕಿಸಾನ್ ಬಂದು ಯೋಜನೆ ಎಂದು ತನ್ನ ರಾಜ್ಯದ ರೈತರಿಗೆ ತೆಲಂಗಾಣ ಸರ್ಕಾರವು ಸಹಕರಿಸುವ ಉದ್ದೇಶದಿಂದ ಜಾರಿಗೆ ತಂದಿತು. ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮುಂದೆ ಇದೆ ಯೋಜನೆಯನ್ನು 2019ನೇ ವರ್ಷದಲ್ಲಿ ಕೇಂದ್ರ ಸರ್ಕಾರ ಇಡೀ ದೇಶದ ತುಂಬೆಲ್ಲ ರೈತರಿಗೆ ಆರ್ಥಿಕ ಸಹಾಯವನ್ನು ಒದಗಿಸಬೇಕೆ ಎನ್ನುವ ಉದ್ದೇಶದಿಂದ ಜಾರಿಗೊಳಿಸಿದರು.

ದೇಶದಲ್ಲಿನ ಯೋಜನೆಗೆ ಅರ್ಹರಾಗಿರುವಂತಹ ರೈತರಿಗೆ ಪ್ರಧಾನ ಮಂತ್ರಿ ಕಿಸಾನ್ ನಿಧಿ ಯೋಜನೆಯ ಮೂಲಕ ನಾಲ್ಕು ತಿಂಗಳಿಗೆ ಒಮ್ಮೆ ನೇರವಾಗಿ 2000ಗಳ ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ರೈತರಿಗೆ ಅವರ ಜೀವನೋಪಾಯವನ್ನು ನಡೆಸಿಕೊಂಡು ಹೋಗಲು ಈ ಒಂದು ಯೋಜನೆಯು ತುಂಬಾ ಸಹಕಾರಿಯಾಗಿದೆ ಎಂದು ಹೇಳಿದರೆ ತಪ್ಪಾಗಲಾರದು. ಸದ್ಯ ಇದೀಗ ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಅಡಿಯಲ್ಲಿ 18 ಕಂತುಗಳ ವರೆಗೆ ರೈತರು ಹಣವನ್ನು ಪಡೆದುಕೊಂಡಿದ್ದು ಇದೀಗ 19ನೇ ಕಂತಿನ ಹಣವನ್ನು ಪಡೆಯುವುದು ಬಾಕಿ ಇದೆ.

ಪ್ರಧಾನಮಂತ್ರಿ ಕಿಸಾನ್ ನಿಧಿ ಯೋಜನೆ 19ನೇ ಕಂತಿನ ಹಣ ಜಮಾ :

ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಕಿಸಾನ್ ನಿಧಿ ಯೋಜನೆಯ 19ನೇ ಕಂತಿನ ಹಣವನ್ನು ಈಗಾಗಲೇ ಬಿಡುಗಡೆಯಾಗಿದೆ. ಕೇವಲ ಇದೀಗ ರೈತರ ಬ್ಯಾಂಕ್ ಖಾತೆಗೆ ಹಣ ಜಮಾ ಆಗಬೇಕಿದೆ. ದೇಶದಲ್ಲಿರುವ ಯಾವೆಲ್ಲ ರೈತರು ಪ್ರಧಾನಮಂತ್ರಿ ಕಿಸಾನ್ ಸನ್ಮಾನ್ಯಧಿ ಯೋಜನೆಯ 19ನೇ ಕಂತಿನ ಹಣವನ್ನು ಪಡೆಯಲು ಅರ್ಹತೆಯನ್ನು ಹೊಂದಿದ್ದಾರೆ ಹಾಗೂ ಯಾವ ರೈತರು ಈ ಹಣವನ್ನು ಪಡೆಯಲು ಅನಹರಾಗಿದ್ದಾರೆ ಎಂದು ಪಟ್ಟಿಯನ್ನು ತಯಾರಿಸಿ ಇಲಾಖೆಯು ಬಿಡುಗಡೆ ಮಾಡಿದೆ.

ಇದೀಗ ಪ್ರಧಾನಮಂತ್ರಿ ಕಿಸಾನ್ ನಿಧಿ ಯೋಜನೆಯ ಅರ್ಹ ಮತ್ತು ಅನರ್ಹರ ಪಟ್ಟಿಯನ್ನು ಬಿಡುಗಡೆ ಮಾಡುವುದರ ಮೂಲಕ ಅದರಲ್ಲಿ ನಿಮ್ಮ ಹೆಸರು ಇದೆಯೇ ಇಲ್ಲವೇ ಎಂಬುದನ್ನು ಚೆಕ್ ಮಾಡಿಕೊಂಡು ನಂತರ ನಿಮ್ಮ ಹೆಸರು ಒಂದು ವೇಳೆ ಅನರ್ಹರ ಪಟ್ಟಿಯಲ್ಲಿ ಇದ್ದರೆ ಕೆಲವೊಂದು ಕೆಲಸಗಳನ್ನು ಮಾಡುವುದರ ಮೂಲಕ ಪ್ರಧಾನ ಮಂತ್ರಿ ಕಿಸಾನ್ ನಿಧಿ ಯೋಜನೆಯ 19ನೇ ಕಂತಿನ ಹಣವನ್ನು ಪಡೆದುಕೊಳ್ಳಬಹುದು.

ಯಾವಾಗ ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಹಣ ಜಮಾ ಆಗುತ್ತದೆ :

ಈಗಾಗಲೇ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮೂಲಕ ರೈತರು ಸುಮಾರು 18 ಕಂತುಗಳ ಹಣವನ್ನು ಪಡೆದುಕೊಂಡಿದ್ದಾರೆ ಇದೀಗ ಕೇಂದ್ರ ಸರ್ಕಾರ 19ನೇ ಕಂತಿನ ಹಣವನ್ನು ಬಿಡುಗಡೆ ಮಾಡಿದೆ. 19ನೇ ಕಂತಿನ ಹಣ ಡಿಸೆಂಬರ್ ತಿಂಗಳು ಮುಗಿಯುವುದರ ಒಳಗಾಗಿ ದೇಶದ ಎಲ್ಲಾ ಅರ್ಹ ರೈತರಿಗೆ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ ಎನ್ನುವ ಮಾಹಿತಿಗಳು ಲಭ್ಯವಿದೆ.

ಕಿಸಾನ್ ಯೋಜನೆಯ ಅರ್ಹ ರೈತರ ಪಟ್ಟಿ ಚೆಕ್ ಮಾಡುವ ವಿಧಾನ :

ಪ್ರಧಾನ ಮಂತ್ರಿ ಕಿಸಾನ್ ಯೋಜನೆಗೆ ಕೇಂದ್ರ ಸರ್ಕಾರವು ಅರ್ಹ ಆಗಿರುವ ರೈತರ ಪಟ್ಟಿ ಬಿಡುಗಡೆ ಮಾಡಿದ್ದು ಅದರಲ್ಲಿ ರೈತರು ತಮ್ಮ ಹೆಸರನ್ನು ಚೆಕ್ ಮಾಡಿಕೊಳ್ಳಲು ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು.

  1. ತದನಂತರ ಬೇನಿಫೈಸೈರಿ ಎನ್ನುವುದರ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
  2. ತಮ್ಮ ರಾಜ್ಯ ಜಿಲ್ಲೆ ಹಾಗೂ ಊರಿನ ಹೆಸರನ್ನು ಹಾಕಿ ಸಬ್ಮಿಟ್ ಎಂಬುದರ ಮೇಲೆ ಕ್ಲಿಕ್ ಮಾಡಬೇಕು
  3. ತದನಂತರ ಅರ್ಹರ ಇತರ ಪಟ್ಟಿ ಸಿಗಲಿದೆ. ಅದರಲ್ಲಿ ತಮ್ಮ ಹೆಸರು ಇದೆಯೇ ಇಲ್ಲವೇ ಎಂಬುದನ್ನು ಚೆಕ್ ಮಾಡಿಕೊಂಡು ಒಂದು ವೇಳೆ.
    ಅರ್ಹ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ಅಂತಹ ರೈತರಿಗೆ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ 19ನೇ ಕoತಿನ ಹಣ ಸಿಗಲಿದೆ.

ಅನರ್ಹ ರೈತರ ಪಟ್ಟಿ ಚೆಕ್ ಮಾಡುವ ವಿಧಾನ :

ಕೇಂದ್ರ ಸರ್ಕಾರದ ರೈತರ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಅನರ್ಹರ ರೈತರ ಪಟ್ಟಿಯನ್ನು ಚೆಕ್ ಮಾಡಿಕೊಳ್ಳಲು ಸರ್ಕಾರದ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು.

  1. ನಂತರ ಅದರಲ್ಲಿ ತಮ್ಮ ರಾಜ್ಯಾ ಜಿಲ್ಲೆ ಮತ್ತು ಊರನ್ನು ಆಯ್ಕೆಮಾಡಿಕೊಂಡು ಸಬ್ಮಿಟ್ ಎಂಬುದರ ಮೇಲೆ ಕ್ಲಿಕ್ ಮಾಡಬೇಕು ಅದಾದ ನಂತರ ನಿಮಗೆ ಅನರ್ಹರಾಗಿರುವ ರೈತರ ಪಟ್ಟಿ ಸಿಗಲಿದೆ.
  2. ಒಂದು ವೇಳೆ ಅನರ್ಹರ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಪ್ರಧಾನಮಂತ್ರಿ ಕಿಸಾನ್ ಯೋಜನೆ ಯ ಹಣ ಬರುವುದಿಲ್ಲ.
  3. ಅನರ್ಹರ ಪಟ್ಟಿಯಲ್ಲಿರುವಂತಹ ರೈತರು ತಮಗೆ ಸಂಬಂಧಪಟ್ಟಂತಹ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಇದರ ಬಗ್ಗೆ ವಿಚಾರಿಸಿ ಸರಿಪಡಿಸಿಕೊಳ್ಳಬಹುದಾಗಿದೆ.

ಹೀಗೆ ನೀವೇನಾದರೂ ಒಂದು ವೇಳೆ ಅನರ್ಹರ ಪಟ್ಟಿಯಲ್ಲಿ ಇದ್ದರೆ ತಕ್ಷಣವೇ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಇದರ ಬಗ್ಗೆ ವಿಚಾರಿಸಿ ಕೆಲವೊಂದು ಪ್ರಮುಖ ಕೆಲಸಗಳನ್ನು ಮಾಡುವುದರ ಮೂಲಕ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ 19ನೇ ಕಂತಿನ ಹಣ ನಿಮ್ಮ ಬ್ಯಾಂಕ್ ಖಾತೆಗೆ ಬರುವಂತೆ ಮಾಡಿಕೊಳ್ಳಿ.

ಪ್ರಧಾನ ಮಂತ್ರಿ ಕಿಸಾನ್ ಯೋಜನೆಗೆ ಅರ್ಜಿ ಸಲ್ಲಿಸಲು ಪ್ರಮುಖ ದಾಖಲೆಗಳು :

ಕೇಂದ್ರ ಸರ್ಕಾರ ಜಾರಿಗೆ ತಂದಿರುವಂತಹ ಪ್ರಧಾನ ಮಂತ್ರಿ ಕಿಸಾನ್ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಕೆಲವೊಂದು ಪ್ರಮುಖ ದಾಖಲೆಗಳನ್ನು ರೈತರು ಹೊಂದಿರಬೇಕು ಆಗ ಮಾತ್ರ ಯೋಜನೆಯ ಹಣವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

  1. ರೈತರ ಆಧಾರ್ ಕಾರ್ಡ್
  2. ರೈತರ ಪಾನ್ ಕಾರ್ಡ್
  3. ಜಮೀನಿನ ಪಹಣಿ ಪತ್ರ
  4. ಬ್ಯಾಂಕ್ ಪಾಸ್ ಬುಕ್
  5. ಪಾಸ್ಪೋರ್ಟ್ ಸೈಜ್ ಫೋಟೋ
  6. ಆದಾಯ ಪ್ರಮಾಣ ಪತ್ರ
  7. ಜಾತಿ ಪ್ರಮಾಣ ಪತ್ರ

ಹೀಗೆ ಕೆಲವೊಂದು ಪ್ರಮುಖ ದಾಖಲೆಗಳನ್ನು ಹೊಂದುವುದರ ಮೂಲಕ ಪ್ರಧಾನ ಮಂತ್ರಿ ಕಿಸಾನ್ ಯೋಜನೆಗೆ ಅರ್ಜಿ ಸಲ್ಲಿಸಿ, ಕೇಂದ್ರ ಸರ್ಕಾರದಿಂದ ಕೃಷಿ ಚಟುವಟಿಕೆಗಳಿಗೆ ಸಹಾಯಧನವನ್ನು ಪಡೆದುಕೊಳ್ಳಬಹುದಾಗಿದೆ.

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ:

ಹೀಗೆ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಯೋಜನೆಯನ್ನು ಜಾರಿಗೆ ತಂದಿದ್ದು ರೈತರಿಗೆ ಆರ್ಥಿಕ ನೆರವನ್ನು ಒದಗಿಸುವುದರ ಮೂಲಕ ರೈತರ ಕೃಷಿ ಚಟುವಟಿಕೆಗಳಿಗೆ ಹೆಚ್ಚು ಉಪಯುಕ್ತವಾಗಿದೆ. ರೈತರು ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಮೂಲಕ ಪ್ರತಿ ವರ್ಷವೂ ಕೂಡ 6,000ಗಳ ಹಣವನ್ನು ಪ್ರತಿ ನಾಲ್ಕು ತಿಂಗಳಿಗೊಮ್ಮೆ ಪಡೆದುಕೊಳ್ಳುತ್ತಾರೆ.

ಇದರಿಂದ ಕೆಲವೊಂದು ಸಣ್ಣಪುಟ್ಟ ಖರ್ಚುಗಳನ್ನು ನಿಭಾಯಿಸಿಕೊಳ್ಳಲು ಇದು ಹೆಚ್ಚು ಸಹಾಯವಾಗಲಿದೆ. ಸದ್ಯ ಇದೀಗ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ 19ನೇ ಕಂತಿನ ಹಣದ ಬಗ್ಗೆ ಹೊರಡಿಸಿರುವ ರಹಮತ್ತು ಅನರ್ಹರ ರೈತರ ಪಟ್ಟಿಯನ್ನು ಹೇಗೆ ಚೆಕ್ ಮಾಡಬೇಕು ಎಂಬುದರ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಂಡಿದ್ದು ರೈತರಿಗೆ ನೀವು ಒಂದು ಮಾಹಿತಿಯನ್ನು ತಿಳಿಸಿ. ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಪ್ರದಾನ ಮಂತ್ರಿ ಕಿಸಾನ್ ನಿಧಿ ಯೋಜನೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬಹುದು, ಧನ್ಯವಾದ.

ಇತರೆ ಪ್ರಮುಖ ವಿಷಯಗಳು:

http://ಶಾಲಾ ಕಾಲೇಜುಗಳಿಗೆ ಮುಂದಿನ ಐದು ದಿನಗಳವರೆಗೆ ರಜೆ ಸಾಧ್ಯತೆ: ಹವಾಮನಾ ಇಲಾಖೆ ಇಂದ ಭಾರಿ ಮಳೆಯಾಗುವ ಮುನ್ಸೂಚನೆ ಸರ್ಕಾರದಿಂದ ಕುರಿ ಕೋಳಿ ಸಾಕಣೆಗೆ ಸಬ್ಸಿಡಿ ಬಿಡುಗಡೆ : ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ ತಕ್ಷಣ ನೋಡಿ


Leave a Comment