PM Vishvakarma Yojana: ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಡಿ 1751 ಕೋಟಿ ರೂ ಅನುದಾನ : ಹೊಲಿಗೆ ಯಂತ್ರ ಸಬ್ಸಿಡಿ ಕೊಡಲೇ ಅರ್ಜಿ ಸಲ್ಲಿಸಿ ಇಲ್ಲಿದೆ ಸಂಪೂರ್ಣ ಮಾಹಿತಿ


ನಮಸ್ಕಾರ ಕನ್ನಡಿಗರೇ, ಇವತ್ತಿನ ಲೇಖನದಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಂತಹ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಗೆ ಸಂಬಂಧಿಸಿದಂತೆ ಕೆಲವೊಂದು ಮಾಹಿತಿಗಳನ್ನು ತಿಳಿಸಲಾಗುತ್ತಿದೆ. ಅರ್ಹ ಫಲಾನುಭವಿಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಅಡಿ ಸಬ್ಸಿಡಿಯಲ್ಲಿ ಸಾಲ ವಿತರಣೆ ಹಾಗೂ ಸ್ವಉದ್ಯೋಗ ಮಾಡಿಕೊಳ್ಳಲು ಉಪಕರಣಗಳನ್ನು ಒದಗಿಸಲು ಕೇಂದ್ರ ಸರ್ಕಾರವು ರಾಜ್ಯಸಭೆಗೆ 1751 ಕೋಟಿ ರೂಪಾಯಿ ಅನುದಾನ ಭರಿಸಲಾಗಿದೆ ಎಂದು ತಿಳಿಸಿದೆ. ಹಾಗಾದರೆ ಅರ್ಹ ಫಲಾನುಭವಿಗಳು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಏನಿಲ್ಲ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಹಾಗೂ ಹೇಗೆ ಪಡೆದುಕೊಳ್ಳಬೇಕು ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ಪೂರ್ಣವಾಗಿ ತಿಳಿದುಕೊಳ್ಳಬಹುದು.

1751 crore grant under Pradhan Mantri Vishwakarma Yojana for the poor
1751 crore grant under Pradhan Mantri Vishwakarma Yojana for the poor

ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ :

ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯನ್ನು ಜಾರಿಗೆ ತಂದಿದೆ ಈ ಒಂದು ಯೋಜನೆಯ ಮೂಲಕ ಸ್ವಂತ ಉದ್ಯೋಗವನ್ನು ಕೈಗೊಳ್ಳುವ ಜನರು ಸಾಲವನ್ನು ಸರ್ಕಾರದಿಂದ ಪಡೆದುಕೊಳ್ಳಬಹುದು. ರಾಜ್ಯಸಭೆಯಲ್ಲಿ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಕುರಿತು ಕೇಂದ್ರ ಹಣಕಾಸು ಖಾತೆಯ ರಾಜ್ಯ ಸಚಿವರಾದ ಪಂಕಜ ಚೌದರಿ ಅವರು ಉತ್ತರ ನೀಡಿದ್ದು ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಪ್ರಾರಂಭಿಸಲು ಮಹಿಳೆಯರಿಗೆ ಆರ್ಥಿಕವಾಗಿ ನೆರವನ್ನು ನೀಡಲು ಸೆಪ್ಟೆಂಬರ್ 2024 ರಿಂದ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಹೇಳಿದರು.

13 ಸಾವಿರ ಕೋಟಿ ಮೀಸಲು :

ಗ್ರಾಮೀಣ ಮತ್ತು ನಗರ ವ್ಯಾಪ್ತಿಯಲ್ಲಿ 18 ಬಗೆಯ ಕುಶಲಕರ್ಣಿಗಳಿಗೆ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಸ್ವಉದ್ಯೋಗವನ್ನು ಕೈಗೊಳ್ಳಲು ಕೇಂದ್ರ ಸರ್ಕಾರ ಸಬ್ಸಿಡಿಯಲ್ಲಿ ಸಾಲ ಮತ್ತು ಮಿನಿ ಉಪಕರಣಗಳ ಕೆಟ್ಟು ವಿತರಣೆ ಮಾಡಲು 2023 ಮತ್ತು 24 ರಿಂದ 2027 ಮತ್ತು 27ರವರೆಗೆ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಅಡಿ ಕೇಂದ್ರದಿಂದ ಒಟ್ಟು 13000 ಕೋಟಿ ಅನುದಾನವನ್ನು ಮೀಸಲಿಡಲಾಗಿದೆ ಎಂದು ಕೇಂದ್ರ ಹಣಕಾಸು ಖಾತೆಯ ರಾಜ್ಯ ಸಚಿವರಾದ ಪಂಕಜ್ ಚೌದರಿಯವರು ತಿಳಿಸಿದ್ದಾರೆ.

18 ಬಗೆಯ ಕುಶಲಕರ್ಮಿಗಳು :

2023 ರಿಂದ ಈ ಒಂದು ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು 18 ವರ್ಗದ ಕುಶಲಕರ್ಣಿಗಳು ಈ ಒಂದು ಯೋಜನೆಯ ಪ್ರಯೋಜನವನ್ನು ಪಡೆಯಲು ಅವಕಾಶವಿದ್ದು ಅದರ ವಿವರವನ್ನು ನೋಡುವುದಾದರೆ, ಅಂದರೆ 18 ವರ್ಗದ ಕುಶಲಕರ್ಮಿಗಳ ವಿವರವನ್ನು ನೋಡುವುದಾದರೆ,

  1. ಶಸ್ತ್ರ ತಯಾರಕರು.
  2. ಬಡಿಗ ವೃತ್ತಿ ಮಾಡುವವರು.
  3. ದೋಣಿ ತಯಾರಿಸುವವರು.
  4. ಕಮ್ಮಾರ ವೃತ್ತಿ ಮಾಡುವವರು.
  5. ಕಲ್ಲುಕುಟಕ ವೃತ್ತಿ ಮಾಡುವವರು.
  6. ಬಟ್ಟೆ ಚಾಪೆ ಕಸಾಪುರಕ್ಕೆ ತಯಾರಕರು.
  7. ಗೊಂಬೆ ಮತ್ತು ಆಟಿಕೆ ತಯಾರಕರು.
  8. ಕ್ಷೌರಿಕ ವೃತ್ತಿ ಮಾಡುವವರು.
  9. ಸುತ್ತಿಗೆ ಮತ್ತು ಉಪಕರಣಗಳನ್ನು ತಯಾರಿಸುವವರು.
  10. ಮೀನು ಬಲೆ ಹೆಣೆಯುವವರು.
  11. ಹೂ ಮಾಲೆ ತಯಾರಕರು.
  12. ಕಂಬಾರ ವೃತ್ತಿ ಮಾಡುವವರು.
  13. ಶಿಲ್ಪಿ.
  14. ಚಮ್ಮರಪಾದ ರಕ್ಷೆ ತಯಾರುಕರು.
  15. ಬೀಗ ತಯಾರಕರು.
    ಹೀಗೆ 18 ಬಗೆಯ ಕುಶಲಕರ್ಮಿಗಳು ಈ ಒಂದು ಯೋಜನೆಯ ಪ್ರಯೋಜನವನ್ನು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಪಡೆದುಕೊಳ್ಳಬಹುದು.

ಅಧಿಕೃತ ಜಾಲತಾಣ :

ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಸಬ್ಸಿಡಿ :

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದ ಹಣಕಾಸಿನ ನೆರವನ್ನು ಸ್ವಂತ ಉದ್ಯೋಗ ಮಾಡುವಂತವರಿಗೆ ಮೂರು ಲಕ್ಷದವರೆಗೆ ಈ ಒಂದು ಯೋಜನೆ ಅಡಿ ಜಾಮೀನು ರಹಿತ ಸಾಲ ಪಡೆಯಬಹುದಾಗಿದೆ. ಶೇಕಡ 2 ರ ಬಡ್ಡಿ ದರದಲ್ಲಿ ಬ್ಯಾಂಕ್ ನಿಂದ ಎರಡು ಹಂತಗಳಲ್ಲಿ ಸಾಲ ದೊರೆಯಲಿದ್ದು ಮೊದಲ ಹಂತದಲ್ಲಿ ಗರಿಷ್ಠ ಒಂದು ಲಕ್ಷ ರೂಪಾಯಿಗಳು 18 ತಿಂಗಳ ಮರುಪಾವತಿ ಆಗಿರುತ್ತದೆ. ಎರಡನೇ ಹಂತದಲ್ಲಿ 30 ತಿಂಗಳ ಮರುಪಾವತಿಗೆ ಗರಿಷ್ಠ 2 ಲಕ್ಷ ರೂಪಾಯಿಗಳ ಹಣವನ್ನು ನೀಡಲಾಗುತ್ತದೆ.

ಇನ್ನು ಈ ಒಂದು ಯೋಜನೆಯ ಅಡಿಯಲ್ಲಿ ತರಬೇತಿಯನ್ನು ಪಡೆದ ನಂತರ 15,000 ಮೊತ್ತದ ಉಪಕರಣಗಳ ಖರೀದಿಗೆ ಅರ್ಹ ಫಲಾನುಭವಿಗಳಿಗೆ ಸಬ್ಸಿಡಿಯನ್ನು ನೀಡಲಾಗುತ್ತದೆ. ಆನ್ಲೈನ್ ಮೂಲಕ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಿ, ತರಬೇತಿಯನ್ನು ಪಡೆದು ಆಯ್ಕೆಯಾದಂತಹ ಅಭ್ಯರ್ಥಿಗಳಿಗೆ ಪ್ರತಿದಿನ 500 ರೂಪಾಯಿ ಟೈಫಡ್ ಹಾಗೂ ಗುಣಮಟ್ಟದ ತರಬೇತಿ ಪ್ರಮಾಣ ಪತ್ರವನ್ನು ಬ್ರಾಂಡಿಂಗ್ ಮತ್ತು ತಯಾರಕರ ಉತ್ಪನ್ನಗಳ ಮರಾಠಕ್ಕೆ ಜಾಹೀರಾತು ಸೇರಿ ಮಾರ್ಕೆಟಿಂಗ್ ನೆರವನ್ನು ಕೂಡ ಪಡೆಯಬಹುದಾಗಿದೆ.

ಅರ್ಜಿ ಸಲ್ಲಿಸುವ ವಿಧಾನ :

ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಅಭ್ಯರ್ಥಿಗಳು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು. ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ಕೇಂದ್ರಗಳು,

  1. ಗ್ರಾಮ ಒನ್
  2. ಕರ್ನಾಟಕ ಒನ್
  3. ಬೆಂಗಳೂರು ಒನ್
  4. ಕಂಪ್ಯೂಟರ್ ಸೆಂಟರ್

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ :

ಪ್ರಮುಖ ದಾಖಲೆಗಳು :

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕೆಲವೊಂದು ಪ್ರಮುಖ ದಾಖಲೆಗಳನ್ನು ಹೊಂದಿರಬೇಕು ಅವುಗಳೆಂದರೆ,

  1. ಆಧಾರ್ ಕಾರ್ಡ್
  2. ಬ್ಯಾಂಕ್ ಪಾಸ್ ಬುಕ್
  3. ಪಾಸ್ಪೋರ್ಟ್ ಸೈಜ್ ಫೋಟೋ
  4. ರೇಷನ್ ಕಾರ್ಡ್
  5. ಪಂಚಾಯಿತಿಯಿಂದ ಉದ್ಯೋಗ ದೃಢೀಕರಣ ಪ್ರಮಾಣ ಪತ್ರ

ಅರ್ಜಿ ಸಲ್ಲಿಸಲು ಅರ್ಹತೆಗಳು :

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಕೆಲವೊಂದು ಅರ್ಹತೆಗಳನ್ನು ಸರ್ಕಾರ ನಿಗದಿಪಡಿಸಿದೆ ಆ ಅರ್ಹತೆಗಳೆಂದರೆ,

  1. 18 ವರ್ಷ ತುಂಬಿದ ಅಭ್ಯರ್ಥಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು
  2. ಮೇಲೆ ತಿಳಿಸಲಾದಂತಹ ವೃತ್ತಿಯಲ್ಲಿ ಅರ್ಜಿದಾರರು ತೊಡಗಿಕೊಂಡಿರಬೇಕು
  3. ಕೇಂದ್ರ ಸರ್ಕಾರದ ಇತರೆ ಸಹಾಯಧನ ಆಧಾರಿತ ಯೋಜನೆ ಅಡಿ ಸೌಲಭ್ಯವನ್ನು ಕಳೆದ ಐದು ವರ್ಷದಲ್ಲಿ ಪಡೆದಿರಬಾರದು

ಹೀಗೆ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಮೂಲಕ ಅರ್ಹ ಅಭ್ಯರ್ಥಿಗಳಿಗೆ ಆರ್ಥಿಕ ನೆರವನ್ನು ಕೇಂದ್ರ ಸರ್ಕಾರ ನೀಡುತ್ತಿದ್ದು ಇದರ ಪ್ರಯೋಜನವನ್ನು 18 ವರ್ಗದ ಕುಶಲಕರ್ಮಿಗಳು ಗ್ರಾಮೀಣ ಮತ್ತು ನಗರ ವ್ಯಾಪ್ತಿಯಲ್ಲಿ ಪಡೆದುಕೊಳ್ಳಬಹುದಾಗಿದೆ.

ಇತರೆ ಪ್ರಮುಖ ವಿಷಯಗಳು :

Ration Card : ಎಲ್ಲರಿಗೂ ಡಿಜಿಟಲ್ ರೇಷನ್ ಕಾರ್ಡ್ ಸಿಗಲಿದೆ : ಈ ಕೊಡಲೇ ಡೌಲೋಡ್ ಮಾಡಿಕೊಳ್ಳಿ ಇಲ್ಲಿದೆ ಡೈರೆಕ್ಟ್ ಲಿಂಕ್

Yashashvini Scheme : ಯಶಸ್ವಿನಿ ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಪ್ರಕಟ : ಅರ್ಜಿ ಸಲ್ಲಿಸಲು ಇಲ್ಲಿದೆ ಸಂಪೂರ್ಣ ಮಾಹಿತಿ


Leave a Comment