ನಮಸ್ಕಾರ ಕನ್ನಡಿಗರೇ, ರಾಜ್ಯ ಸರ್ಕಾರದಿಂದ ಆಸ್ತಿ ನೋಂದಣಿಯನ್ನು ಸುಗಮಗೊಳಿಸಲು ಮತ್ತು ನಕಲಿ ದಾಖಲೆಗಳ ಅಕ್ರಮಕ್ಕೆ ಕಡಿವಾಣ ಹಾಕಲು, ಕರ್ನಾಟಕ ರಾಜ್ಯ ಸರ್ಕಾರವು ಗ್ರಾಮೀಣ ಮತ್ತು ನಗರ ಭಾಗದಲ್ಲಿ ಡಿಜಿಟಲ್ ಪ್ರಕ್ರಿಯೆ ಇ-ಖಾತಾ ಅನ್ವಯವನ್ನು ಪರಿಚಯಿಸಿದೆ. ಗ್ರಾಮ ಪಂಚಾಯತಿ ಮತ್ತು ನಗರಸಭೆ/ಮಹಾನಗರ ಪಾಲಿಕೆ ವ್ಯಾಪ್ತಿಯ ಸಾರ್ವಜನಿಕರು ತಮ್ಮ ಆಸ್ತಿಯನ್ನು ಆನ್ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಲು ಅನುಕೂಲ ನೀಡಲಾಗಿದೆ. ಈ ಪ್ರಕ್ರಿಯೆಯಲ್ಲಿನ ಪ್ರಮುಖ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ತಿಳಿದುಕೊಳ್ಳಿ.
ಆನ್ಲೈನ್ ಇ-ಖಾತಾ ಪ್ರಕ್ರಿಯೆ ಏಕೆ?
ಇತ್ತೀಚಿನ ದಿನಗಳಲ್ಲಿ ಆಗುತ್ತಿರುವ ಹಣದ ವಂಚನೆ, ನಕಲಿ ದಾಖಲೆಗಳ ಬಳಕೆ, ಮತ್ತು ಅಕ್ರಮ ಆಸ್ತಿ ವ್ಯವಹಾರಗಳನ್ನು ತಡೆಗಟ್ಟುವ ಉದ್ದೇಶದಿಂದ ರಾಜ್ಯ ಸರ್ಕಾರವು ಇ-ಖಾತಾ ಪ್ರಕ್ರಿಯೆಗೆ ಡಿಜಿಟಲ್ ತಂತ್ರಜ್ಞಾನವನ್ನು ಅಳವಡಿಸಿದೆ. ಈ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಸಾರ್ವಜನಿಕರು ತಮ್ಮ ಆಸ್ತಿಯನ್ನು ಗ್ರಾಮ ಪಂಚಾಯತಿ ಮೂಲಕವೇ ನೋಂದಣಿ ಮಾಡಿಸಬಹುದು. ನಗರ ಪ್ರದೇಶದಲ್ಲಿ, ಇದನ್ನು ಸ್ಥಳೀಯ ನಗರಸಭೆ ಅಥವಾ ಬೆಂಗಳೂರು ಮಹಾನಗರ ಪಾಲಿಕೆ (BBMP) ಮೂಲಕ ಮಾಡಿಕೊಳ್ಳಬಹುದಾಗಿದೆ.
ಇ-ಖಾತಾ ಮಾಡಿಸಲು ಬೇಕಾದ ದಾಖಲೆಗಳು
ಇ-ಖಾತಾ ಅಥವಾ NA ಲ್ಯಾಂಡ್ ನೋಂದಣಿಗಾಗಿ ಅರ್ಜಿದಾರರು ನಿಮ್ಮ ಎಲ್ಲ ದಾಖಲೆಗಳನ್ನು ಸಲ್ಲಿಸಬೇಕಾಗಿದೆ:
- ಆಧಾರ್ ಕಾರ್ಡ್: ಅರ್ಜಿದಾರರ ಪ್ರಾಮಾಣಿಕತೆಯನ್ನು ದೃಢೀಕರಿಸಲು.
- ವಂಶವೃಕ್ಷ: ಆಸ್ತಿಯ ಹಕ್ಕು ಹೊಂದಿರುವ ಕುಟುಂಬದ ವಿವರಗಳನ್ನು ನೋಂದಾಯಿಸಲು.
- ಮನೆ ವಿದ್ಯುತ್ ಬಿಲ್: ಆಸ್ತಿಯ ಸ್ಥಳ ಮತ್ತು ಬಳಕೆಗಾಗಿ.
- ಕಂದಾಯ ರಶೀದಿ: ನಕಲಿ ಪಾವತಿ ದಾಖಲೆಗಳನ್ನು ತಡೆಯಲು.
- ಅರ್ಜಿದಾರರ ಪೋಟೋ: ಮನೆ ಮುಂಭಾಗ ಮತ್ತು ಹಿಂಭಾಗದಲ್ಲಿ ನಿಂತ ಸ್ಥಿತಿಯಲ್ಲಿನ ಪೋಟೋ.
- ಲಿಖಿತ ಅರ್ಜಿ: ಇ-ಖಾತಾ ಮಾಡಿಸಿಕೊಳ್ಳಲು ಅಗತ್ಯವಾದ ಅರ್ಜಿಯನ್ನು ಸರಿಯಾಗಿ ಭರ್ತಿ ಮಾಡಬೇಕು.
ಇ-ಖಾತಾ/ಇ-ಸ್ವತ್ತು: ಇದು ಏಕೆ ಮುಖ್ಯ?
ಭೂಮಿ ಅಥವಾ ಜಾಗದ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಪ್ರತಿ ಆಸ್ತಿ ಮಾಲೀಕರಿಗೂ ಆಸ್ತಿಯ ಹಕ್ಕು ಚೀಟಿ ಅಥವಾ ಇ-ಖಾತಾ ಹೊಂದಿರುವುದು ಬಹುಮುಖ್ಯ. ಇದರಿಂದ ಆಸ್ತಿಯ ಹಕ್ಕು ವಿವಾದಗಳು, ಕಾನೂನು ತಕರಾರುಗಳು ಮತ್ತು ಆಸ್ತಿಯ ಅಪಹರಣವನ್ನು ತಡೆಯಬಹುದು.
ಇ-ಖಾತಾ ಮಾಡಿಸುವ ಪ್ರಮುಖ ಪ್ರಯೋಜನಗಳು:
- ಬ್ಯಾಂಕ್ ಸಾಲಕ್ಕಾಗಿ ಅಗತ್ಯ: ಮನೆಯ ಮೇಲೆ ಲೋನ್ ಪಡೆಯಲು ಇ-ಖಾತಾ ದಾಖಲೆ ಕಡ್ಡಾಯವಾಗಿದೆ.
- ಮಾಲೀಕರ ಗುರುತು: ನಿಖರವಾಗಿ ಆಸ್ತಿಯ ಮಾಲೀಕರನ್ನು ಗುರುತಿಸಲು ಸಹಕಾರಿಯಾಗಿದೆ.
- ಮಾಲೀಕತ್ವ ಸಾಬೀತು: ಕಾನೂನು ಪ್ರಕ್ರಿಯೆಯಲ್ಲಿ ಆಸ್ತಿಯ ಮಾಲೀಕತ್ವವನ್ನು ದೃಢೀಕರಿಸಲು.
- ಮಾರಾಟ ಮಾಡಲು ಸುಗಮತೆ: ಆಸ್ತಿ ಮಾರಾಟಕ್ಕೆ ಇ-ಖಾತಾ ಅತ್ಯಗತ್ಯ.
ಗ್ರಾಮ ಪಂಚಾಯತಿ ಅಥವಾ BBMP ಮೂಲಕ ಇ-ಖಾತಾ ನೋಂದಣಿ
ಆಸ್ತಿ ಮೂಲ ಖಾತೆ ಕುಟುಂಬದವರ ಹೆಸರಲ್ಲಿ ಇದ್ದಲ್ಲಿ, ಅಗತ್ಯ ದಾಖಲೆಗಳನ್ನು ಪೂರ್ತಿ ಮಾಡಿ, ಸಂಬಂಧಿತ ಗ್ರಾಮ ಪಂಚಾಯತಿ ಅಥವಾ ನಗರ ಭಾಗದಲ್ಲಿ BBMP ಕಚೇರಿಯನ್ನು ಭೇಟಿ ಮಾಡಿ ಇ-ಖಾತಾವನ್ನು ಮಾಡಿಸಿಕೊಳ್ಳಬಹುದು.
ಪ್ರಕ್ರಿಯೆ:
- ಅರ್ಜಿ ಸಲ್ಲಿಸಿದ ನಂತರ, ಸಂಬಂಧಿತ ಇಲಾಖೆಯ ಸಿಬ್ಬಂದಿಗಳು ಆಸ್ತಿ ಕುರಿತು ಸಮಗ್ರ ಪರಿಶೀಲನೆ ನಡೆಸುತ್ತಾರೆ.
- ಆಸ್ತಿ ಆಳತೆಯ ವಿವರ: ಆನ್ಲೈನ್ ನಲ್ಲಿ ನಿಮ್ಮ ಆಸ್ತಿಯ ಗಡಿಯ ವಿವರ ಮತ್ತು ಸಮೀಪದ ಆಸ್ತಿಯ ಮಾಲೀಕರ ಮಾಹಿತಿ ದಾಖಲಿಸಲಾಗುತ್ತದೆ.
- ಜಿಪಿಎಸ್ ಪೋಟೋ: ಸ್ಥಳಕ್ಕೆ ಬೇಟೆ ನೀಡಿ ಆಸ್ತಿ ಸ್ಥಳದ GPS ಆಧಾರಿತ ಪೋಟೋಗಳನ್ನು ಪಡೆದು ಅಪ್ಲೋಡ್ ಮಾಡಲಾಗುತ್ತದೆ.
- ಅರ್ಜಿ ಶುಲ್ಕ ಪಾವತಿ: ಎಲ್ಲಾ ಪರಿಶೀಲನೆಗಳ ನಂತರ ನಿಗದಿತ ಶುಲ್ಕವನ್ನು ಪಾವತಿಸಬೇಕು.
- ಡಿಜಿಟಲ್ ಪ್ರಮಾಣಪತ್ರ: ಇ-ಖಾತಾ ಸಹಿತ ಡಿಜಿಟಲ್ ಸಂಖ್ಯೆಯನ್ನು ಸಾರ್ವಜನಿಕರಿಗೆ ವಿತರಿಸಲಾಗುತ್ತದೆ.
ಆನ್ಲೈನ್ ಪ್ರಕ್ರಿಯೆಯ ಯಶಸ್ಸು ಮತ್ತು ಅಗತ್ಯತೆ
ಹಿಂದಿನ ಕಾಲದಲ್ಲಿ ಕಾಗದ ಆಧಾರಿತ ದಾಖಲೆಗಳಲ್ಲಿ ಆಸ್ತಿ ನೋಂದಣಿ ಪ್ರಕ್ರಿಯೆ ನಡೆಯುತ್ತಿತ್ತು. ಇದರಿಂದಾಗಿ ನಕಲಿ ದಾಖಲೆಗಳಿಂದ ತೆರಿಗೆ ವಂಚನೆ, ಅಕ್ರಮ ಭೂಮಿ ಹಕ್ಕು ಹಂಚಿಕೆಗಳು ಮತ್ತು ಅಕ್ರಮ ಆಸ್ತಿ ವ್ಯಾಪಾರಗಳು ಹೆಚ್ಚಾಗುವ ಸಾಧ್ಯತೆ ಇತ್ತು. ಆನ್ಲೈನ್ ಇ-ಖಾತಾ ಪ್ರಕ್ರಿಯೆಯಿಂದ ಈ ಸಮಸ್ಯೆಗಳನ್ನು ನಿವಾರಿಸಲು ಸಾಧ್ಯವಾಗಿದೆ.
ಆನ್ಲೈನ್ ಇ-ಖಾತಾ ಪ್ರಕ್ರಿಯೆಯ ಹಂತಗಳು:
- ಅರ್ಜಿದಾರರ ವೈಯಕ್ತಿಕ ವಿವರಗಳು ಮತ್ತು ಆಸ್ತಿ ವಿವರಗಳನ್ನು ಆನ್ಲೈನ್ ಪೋರ್ಟಲ್ ನಲ್ಲಿ ದಾಖಲಿಸಲಾಗುತ್ತದೆ.
- ಸಿಬ್ಬಂದಿಗಳು ಆಸ್ತಿ ಸ್ಥಳಕ್ಕೆ ಭೇಟಿ ನೀಡಿ ಚಕ್ಕಬಂದಿ ಮಾಹಿತಿಯನ್ನು ಪರಿಶೀಲಿಸುತ್ತಾರೆ.
- ನಿಗದಿತ ಶುಲ್ಕ ಪಾವತಿಸಿದ ನಂತರ, ಇ-ಖಾತಾ ಪ್ರಮಾಣಪತ್ರವನ್ನು ಡಿಜಿಟಲ್ ರೀತಿಯಲ್ಲಿ ವಿತರಿಸಲಾಗುತ್ತದೆ.
ಇ-ಖಾತಾ ಪ್ರಕ್ರಿಯೆಯಿಂದ ಪ್ರಭಾವಿತ ಸೇವೆಗಳು
ಈ ಡಿಜಿಟಲ್ ಪಾವತಿಯ ಜನಸಾಮಾನ್ಯರ ಸೇವೆಗಳನ್ನು ಸುಗಮಗೊಳಿಸುವುದು ಮತ್ತು ಭ್ರಷ್ಟಾಚಾರ ತಡೆಗಟ್ಟುವಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತಿದೆ.
ಪ್ರಾಮುಖ್ಯತೆ:
- ಆಸ್ತಿ ಹಕ್ಕು ವಿವಾದಗಳ ಪರಿಹಾರ.
- ಆಸ್ತಿ ಮೇಲಿನ ಕಾನೂನು ಹಕ್ಕುಗಳನ್ನು ಪ್ರಸ್ತಾಪಿಸಲು ಪ್ರಾಮಾಣಿಕ ದಾಖಲೆ.
- ಭೂಮಿಯ ನಿಖರ ತೀರ್ಮಾನ ಮತ್ತು ಮಾಲೀಕತ್ವ ಸ್ಥಾಪನೆ.
ಇದನ್ನೂ ಓದಿ : Drip Irrigation : ಹನಿ ನೀರಾವರಿಗೆ ರಾಜ್ಯ ಸರ್ಕಾರದಿಂದ ₹255 ಕೋಟಿ ಅನುದಾನ : ನೀವು ಪಡೆದುಕೊಳ್ಳಿ ಇಲ್ಲಿದೆ ಸಂಪೂರ್ಣ ಮಾಹಿತಿ
ಇ-ಖಾತಾ ಸೇವೆಯ ಸರಳೀಕರಣ
ಸಾಮಾನ್ಯ ಪ್ರಜೆಗಳು ತಮ್ಮ ಆಸ್ತಿಯ ಮಾಹಿತಿ ಮತ್ತು ವಿವರಗಳನ್ನು ಸರಳ ಮತ್ತು ಸುಲಭ ರೀತಿಯಲ್ಲಿ ನೋಂದಾಯಿಸಲು ಈ ಆನ್ಲೈನ್ ವ್ಯವಸ್ಥೆ ಅತ್ಯಂತ ಅನುಕೂಲಕರವಾಗಿದೆ. ಇ-ಖಾತಾ ಮಾಹಿತಿ ಇ-ಸ್ವತ್ತು ತಂತ್ರಾಂಶದ ಮೂಲಕ ಸಹ ಲಭ್ಯವಿದೆ.
ಇ-ಸ್ವತ್ತು ಮತ್ತು ಇ-ಖಾತಾ: ಸಮಗ್ರ ದೃಷ್ಟಿ
ಇ-ಖಾತಾ ಮತ್ತು ಇ-ಸ್ವತ್ತು ತಂತ್ರಜ್ಞಾನದ ಬಳಕೆದಿಂದ ಎಲ್ಲಾ ಪ್ರಕ್ರಿಯೆಗಳು ಪಾರದರ್ಶಕವಾಗಿವೆ. ಜನರು ತಮ್ಮ ಆಸ್ತಿ ವಿವರಗಳನ್ನು ಆನ್ಲೈನ್ ನಲ್ಲಿ ಸುಲಭವಾಗಿ ಪರಿಶೀಲಿಸಬಹುದು, ಇದರಿಂದ ಅನಾವಶ್ಯಕ ತೊಂದರೆಗಳನ್ನು ತಪ್ಪಿಸಬಹುದು.
ಇ-ಖಾತಾ ಪ್ರಕ್ರಿಯೆ ಸಾರ್ವಜನಿಕರಿಗೆ ಸುಲಭತೆಯೊಂದಿಗೆ ಪಾರದರ್ಶಕತೆ, ಸುರಕ್ಷತೆ, ಮತ್ತು ಕಾನೂನು ಬದ್ಧತೆ ನೀಡುವ ದಿಟ್ಟ ಹೆಜ್ಜೆಯಾಗಿದೆ. ಇ-ಖಾತಾ ಮಾಡಿಸಿಕೊಳ್ಳುವುದರಿಂದ ನಿಮ್ಮ ಆಸ್ತಿಯ ಹಕ್ಕುಮಾಲಿಕತ್ವವನ್ನು ಸಾಬೀತುಪಡಿಸುವುದು, ಬ್ಯಾಂಕ್ ಸಾಲ ಮತ್ತು ಆಸ್ತಿ ಮಾರಾಟಕ್ಕೆ ಅನುಕೂಲವಾಗುವುದು, ಮತ್ತು ಆಸ್ತಿ ಕುರಿತ ಸಮಸ್ಯೆಗಳಿಂದ ಮುಕ್ತವಾಗಲು ಸಹಾಯವಾಗುತ್ತದೆ.ಇದು ಕೇವಲ ಆಸ್ತಿಯ ದಾಖಲಾತಿ ಪ್ರಕ್ರಿಯೆಯ ಹೊಸ ದಾರಿಯಲ್ಲ, ನಿಮ್ಮ ಆಸ್ತಿ ಮೇಲಿನ ಮಾಲೀಕತ್ವದ ಭದ್ರತೆಗೆ ಸಹ ಸುವರ್ಣ ಅವಕಾಶ. ತಪ್ಪದೆ ಎಲ್ಲರು ಇದರ ಸದುಪಯೋಗ ಪಡಿಸಿಕೊಳ್ಳಿ.
ಇತರೆ ಪ್ರಮುಖ ವಿಷಯಗಳು :
- Honey Bee Keeping Training : ಸರ್ಕಾರದಿಂದ ನಿರುದ್ಯೋಗಿಗಳಿಗೆ ಹೊಸ ಯೋಜನೆ ಪ್ರಾರಂಭ : ಉಚಿತ ಜೇನು ಸಾಕಾಣಿಕೆ ತರಬೇತಿಗೆ ಅವಕಾಶ! ತಕ್ಷಣ ಅರ್ಜಿ ಸಲ್ಲಿಸಿ ಇಲ್ಲಿದೆ ಡೈರೆಕ್ಟ್ ಲಿಂಕ್
- Sukanya Samruddi Yojana : ಸುಕನ್ಯಾ ಸಮೃದ್ಧಿ ಯೋಜನೆ ಅಕೌಂಟ್ ತೆರೆಯುವ ಸರಳ ಕ್ರಮ ಮತ್ತು ಅಗತ್ಯವಿರುವ ದಾಖಲೆಗಳ ಸಂಪೂರ್ಣ ವಿವರ ಇಲ್ಲಿದೆ
- Home Loan : ಹೋಮ್ ಲೋನ್ ಬಡ್ಡಿಯ ಬಗ್ಗೆ ತಿಳಿಯಬೇಕಾದ ಎಲ್ಲ ಅಗತ್ಯ ಮಾಹಿತಿಗಳ ಸಂಪೂರ್ಣ ಮಾಹಿತಿ ಇಲ್ಲಿದೆ ಈ ಕೊಡಲೇ ತಿಳಿದುಕೊಳ್ಳಿ
As per Notification issued by City Corp.Belagavi during Sept.2023, I have already subtd.all documents to North revenue Office on 12-09-2023. So far no action has been taken by the CCBelagavi