ನಮಸ್ಕಾರ ಕನ್ನಡಿಗರೇ, ಇವತ್ತಿನ ಲೇಖನದಲ್ಲಿ ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್ಗೆ ಸಂಬಂಧಿಸಿದಂತೆ ಕೆಲವೊಂದು ಮಾಹಿತಿಗಳನ್ನು ತಿಳಿಸಲಾಗುತ್ತಿದೆ. ಸದ್ಯ ಈಗ ಎಪಿಎಲ್ ಹಾಗೂ ಬಿಪಿಎಲ್ ಪಡಿತರ ಚೀಟಿದಾರರ ಪರಿಷ್ಕರಣೆ ಕುರಿತಂತೆ ಕರ್ನಾಟಕದಲ್ಲಿ ಕೆಲವೊಂದು ಗೊಂದಲಗಳು ರಾಜ್ಯ ರಾಜಕೀಯ ಹಾಗೂ ಸಾಮಾಜಿಕ ಚರ್ಚೆಗೆ ಕೇಂದ್ರಬಿಂದುವಾಗಿದೆ ಎಂದು ಹೇಳಬಹುದು.
ಈ ವಿಷಯವು ಸೋಮವಾರ ಪ್ರತಿಧನಿಸಿದಂತೆ ವಿಧಾನಪರಿಷತ್ ನಲ್ಲಿ ಸಚಿವ ಕೆಎಚ್ ಮುನಿಯಪ್ಪ ರವರು ಪ್ರತಿಪಕ್ಷಗಳ ಆರೋಪಗಳಿಗೆ ಸರಿಯಾದ ಉತ್ತರವನ್ನು ನೀಡಿದರು. ಸರ್ಕಾರದ ನಿಜ ಅಭಿಪ್ರಾಯ ಈ ವಿವಾದವು ಅನರ್ಹ ಪಡಿತರ ಚೀಟಿದಾರರ ಮೇಲೆ ಕಠಿಣ ಕ್ರಮ ಹಾಗೂ ಬಡ ಜನಾಂಗದ ಹಿತ ಸಾಕ್ಷರ ದೃಷ್ಟಿಯಿಂದ ಮಹಾತರವಾದದೆಂದು ವಿರೋಧ ಪಕ್ಷದ ನಾಯಕರಿಗೆ ತಿಳಿಸಿದ್ದಾರೆ. ಹಾಗಾದರೆ ಏನೆಲ್ಲ ಚರ್ಚೆಗಳು ವಿಧಾನಪರಿಷತ್ ನಲ್ಲಿ ನಡೆದಿದೆ ಎಂಬುದರ ಮಾಹಿತಿಯನ್ನು ಈ ಕೆಳಗಿನಂತೆ ತಿಳಿದುಕೊಳ್ಳಬಹುದು.
ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ಗಳ ಪರಿಷ್ಕರಣೆ :
ಸುಮಾರು 6.50 ಕೋಟಿ ಜನಸಂಖ್ಯೆಯಲ್ಲಿ 5.29 ಕೋಟಿ ಪಡಿತರ ಫಲಾನುಭವಿಗಳು ಕರ್ನಾಟಕ ರಾಜ್ಯದಲ್ಲಿ ಇದ್ದಾರೆ ಆದರೆ ಶೇಕಡ 20ರಷ್ಟು ಫಲಾನುಭವಿಗಳು ಈ ಸಂಖ್ಯೆಯಲ್ಲಿ ಅನಹರ್ ಆಗಿರುವ ಸಂಖ್ಯೆಯು ಸರ್ಕಾರದ ಗಮನ ಸೆಳೆದಿದೆ. 3.35 ಲಕ್ಷ ಅನರ್ಹ ಫಲಾನುಭವಿಗಳನ್ನು 2021 ರಿಂದ 23ರ ಅವಧಿಯಲ್ಲಿ ಎಪಿಎಲ್ ಗೆ ಪರಿವರ್ತನೆ ಮಾಡಲಾಗಿದ್ದು ಇದರಿಂದ 13.51 ಕೋಟಿ ರೂಪಾಯಿಗಳ ದಂಡವನ್ನು ಅವರಿಂದ ವಸೂಲಿ ಮಾಡಲಾಗಿದೆ. ಇದರ ಬಗ್ಗೆ ಸಚಿವ ಮುನಿಯಪ್ಪ ರವರು ತಿಳಿಸಿದ್ದು ಮೂರು ತಿಂಗಳಲ್ಲಿ ಪಡಿತರ ಚೀಟಿದಾರರ ಪ್ರಮಾಣವನ್ನು ಕಡಿಮೆ ಮಾಡಲು ಗೊಂದಲ ನಿವಾರಣೆ ಮಾಡಲಾಗುತ್ತದೆ. ಬಿಪಿಎಲ್ ರೇಷನ್ ಕಾರ್ಡಿಗೆ ಸಂಬಂಧಿಸಿದಂತೆ ಪರಿಷ್ಕರಣೆಯ ಮಾನದಂಡಗಳನ್ನು ನಿಖರ ಗೊಳಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಆದರೆ ಅನೇಕ ಸಮಸ್ಯೆಗಳನ್ನು ಈ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸರ್ಕಾರ ಎದುರಿಸುತ್ತಿದೆ.
ಅನರ್ಹರು ಮತ್ತು ಸಾಮಾಜಿಕ ಅಸಮಾಧಾನ :
ಬಿಪಿಎಲ್ ರೇಷನ್ ಕಾರ್ಡ್ ದಾರರ ಪೈಕಿ ಅನರ್ಹರು ಎಪಿಎಲ್ ರೇಷನ್ ಕಾರ್ಡ್ ಗೆ ಪರಿವರ್ತನೆ ಆಗುತ್ತಿದ್ದಂತೆ ಈ ಪ್ರಕ್ರಿಯೆಯ ಲೋಪಗಳು ಸರ್ಕಾರದ ಮುಂದೆ ಬಯಲಾದವು. ಬಡವರ ಪರಿಕ್ಷಣೆಗೆ ಅನರ್ಹ ಪಡಿತರ ಚೀಟಿದಾರರು ಸಮಸ್ಯೆ ತರುತ್ತಿದ್ದಾರೆ ಎಂಬ ಆಕ್ಷೇಪಗಳು ಉಂಟಾದವು. ಈ ರೀತಿಯ ಗೊಂದಲವನ್ನು ಹತ್ತಾರು ವರ್ಷಗಳಿಂದ ಬಗೆಹರಿಸಲು ರಾಜ್ಯ ಸರ್ಕಾರ ಎಷ್ಟು ಗಂಭೀರ ಎಂದು ಪ್ರಶ್ನೆ ದರಿಯೆತ್ತಿದ್ದು ಅನರ್ಹ ಚೀಟಿದಾರರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವುದು ಅತ್ಯಂತ ಪ್ರಮುಖವಾಗಿದೆ ಎಂದು ತಿಳಿಸಲಾಗಿದೆ.
ಜೆಡಿಎಸ್ ಮತ್ತು ಬಿಜೆಪಿ ಸದಸ್ಯರು ಈ ಪ್ರಕ್ರಿಯೆ ಕುರಿತಂತೆ ಸರ್ಕಾರದ ನಿರ್ಧಾರಗಳ ಮೇಲೆ ತೀವ್ರ ಸಮಾಧಾನ ವ್ಯಕ್ತಪಡಿಸಿದ್ದು ಬಡತನದ ಪರಿಧಿ ನಿರ್ಣಯಿಸಲು ಸರ್ಕಾರ ಸ್ಪಷ್ಟವಾದಂತಹ ಮಾನದಂಡಗಳು ಅಂದರೆ ಆದಾಯ ತೆರಿಗೆ ಮತ್ತು ವಿದ್ಯುತ್ ಬಳಕೆ ಪ್ರಮಾಣ ದಂತಹ ಮಾನದಂಡಗಳು ಸ್ಪಷ್ಟವಾಗಿ ಇರಬೇಕೆಂದು ಜೆಡಿಎಸ್ ಮತ್ತು ಬಿಜೆಪಿ ಸದಸ್ಯರು ಒತ್ತಾಯಿಸಿದರು.
ಶೇಕಡ 80ರಷ್ಟು ಫಲಾನುಭವಿಗಳು ರಾಜ್ಯದಲ್ಲಿ ಪಡಿತರ ಯೋಜನೆಗೆ ಒಳಪಡುತ್ತಿದ್ದು ಬಡತನದ ಪ್ರಮಾಣವು ಗಂಭೀರ ಚರ್ಚೆಗೆ ತುತ್ತಾಗಿದೆ ಎಂದು ಹೇಳಬಹುದು. ಕರ್ನಾಟಕ ಸಮೃದ್ಧ ಕರ್ನಾಟಕ ಎಂದು ಕರೆಯುವ ಪರಿಸ್ಥಿತಿಯು ಕೇವಲ ಆರ್ಥಿಕ ಬೆಳವಣಿಗೆಯೆ ಆಗಿರದೆ ಬಡತನ ನಿವಾರಣೆಯು ಕೂಡ ಗಮನವನ್ನು ಒತ್ತಿ ಹೇಳುತ್ತಿದೆ. ಎಪಿಎಲ್ ಫಲಾನುಭವಿಗಳಿಗೆ ಕೇಂದ್ರದ ಸೂಚನೆಯಂತೆ ರಾಜ್ಯ ಸರ್ಕಾರ ಅಕ್ಕಿ ವಿತರಣೆಯನ್ನು ಸ್ಥಗಿತಗೊಳಿಸಿದ್ದು ರಾಜ್ಯದ ಪಡಿತರ ವ್ಯವಸ್ಥೆಯ ಅಪಾಯವನ್ನು ತಡೆಗಟ್ಟಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಆದರೆ ಅನರ್ಹ ಫಲಾನುಭವಿಗಳನ್ನು ಸಕ್ರಿಯವಾಗಿ ವಿಲೇವಾರಿ ಮಾಡದಿರುವುದರಿಂದ ಪಡಿತರ ವ್ಯವಸ್ಥೆಯ ಉದ್ದೇಶವನ್ನು ಪ್ರಭಾವಿತಗೊಳಿಸಿದೆ ಎಂದು ಹೇಳಲಾಗುತ್ತದೆ.
ಅಕ್ರಮದ ವಿರುದ್ಧ ಸರ್ಕಾರದ ಪ್ರಮುಖ ಕ್ರಮಗಳು :
ಅಕ್ರಮವಾಗಿ ಬಿಪಿಎಲ್ ರೇಷನ್ ಕಾರ್ಡ್ ಅನ್ನು ಪಡೆದುಕೊಂಡಂತಹ ಫಲಾನುಭವಿಗಳಿಗೆ ಸರ್ಕಾರ ಕೆಲವೊಂದು ಕಠಿಣ ಕ್ರಮಗಳನ್ನು ವಿಧಿಸಿದೆ. ಅಕ್ರಮ ದಾಸ್ತಾನು ಮತ್ತು ಕಳ್ಳ ಸಾಗಾಣಿಕೆಯನ್ನು ತಡೆಗಟ್ಟಲು ಸರ್ಕಾರ ಮಿಂಚಿನ ದಾಳಿ fir ದಾಖಲಾತಿ ಮತ್ತು ದಂಡವನ್ನು ವಿಧಿಸುತ್ತಿದೆ ಎಂದು ಹೇಳಬಹುದು. 213 fir ಗಳನ್ನು 2024 ಮತ್ತು 25ರಲ್ಲಿ ದಾಖಲಿಸುವ ಮೂಲಕ ರಾಜ್ಯ ಸರ್ಕಾರ 2.62 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದೆ.
ರೇಷನ್ ಕಾರ್ಡ್ ಸ್ಥಿತಿಯನ್ನು ಚೆಕ್ ಮಾಡುವ ವಿಧಾನ :
ಬಿಪಿಎಲ್ ರೇಷನ್ ಕಾರ್ಡ್ ಏನಾದರೂ ಎಪಿಎಲ್ ರೇಷನ್ ಕಾರ್ಡ್ ಆಗಿದ್ದರೆ ಆ ರೇಷನ್ ಕಾರ್ಡ್ ಸ್ಥಿತಿಯನ್ನು ಯಾವ ರೀತಿ ಚೆಕ್ ಮಾಡಬಹುದು ಎಂಬುದರ ಮಾಹಿತಿಯನ್ನು ಈ ಕೆಳಗಿನಂತೆ ತಿಳಿಸಲಾಗಿದೆ. ಅದರಂತೆ ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳುವುದರ ಮೂಲಕ ಸುಲಭವಾಗಿ ತಮ್ಮ ರೇಷನ್ ಕಾರ್ಡ್ ಸ್ಥಿತಿಯನ್ನು ತಿಳಿದುಕೊಳ್ಳಬಹುದು.
- ಮೊದಲನೆಯದಾಗಿ ಅಭ್ಯರ್ಥಿಗಳು ಸರ್ಕಾರದ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು.
- https://mahitikanaja.karnataka.gov.in/FCS/MyRationCard?ServiceId=1036&Type=TABLE&DepartmentId=1010
- ವೆಬ್ ಸೈಟ್ ಗೆ ಭೇಟಿ ನೀಡಿದ ನಂತರ ಅದರಲ್ಲಿ ಮೈ ರೇಷನ್ ಕಾರ್ಡ್ ಡೀಟೇಲ್ಸ್ ಎಂಬ ವಿವರಗಳ ವಿವರಗಳ ಪುಟ ದೊರೆಯುತ್ತದೆ.
- ಅದರಲ್ಲಿ ತಮ್ಮ ಜಿಲ್ಲೆ ಮತ್ತು ರೇಷನ್ ಕಾರ್ಡ್ ನಲ್ಲಿರುವಂತಹ 12 ಅಂಕಿಯ ನಂಬರ್ಗಳನ್ನು ನಮೂದಿಸಬೇಕು.
- ನಮೂದಿಸಿದ ನಂತರ ಅಭ್ಯರ್ಥಿಗಳು ಸಬ್ಮಿಟ್ ಎಂಬುದರ ಮೇಲೆ ಕ್ಲಿಕ್ ಮಾಡಬೇಕು.
- ಅದಾದ ನಂತರ ಅಭ್ಯರ್ಥಿಗಳಿಗೆ ಮೈ ರೇಷನ್ ಶಾಪ್ ಡಿಟೈಲ್ಸ್ ಎಂಬುದರ ಪುಟ ತೆರೆಯುತ್ತದೆ
- ಅದರಲ್ಲಿ ಕಾರ್ಡ್ ಸ್ಟೇಟಸ್ ನಿಮಗೆ ಆಕ್ಟಿವ್ ಎಂದು ತೋರಿಸುತ್ತಿದ್ದರೆ ನಿಮ್ಮ ರೇಷನ್ ಕಾರ್ಡ್ ಚಾಲ್ತಿಯಲ್ಲಿದೆ ಎಂದು ಹೇಳಬಹುದು.
- ಇಲ್ಲದಿದ್ದರೆ ನಿಮ್ಮ ರೇಷನ್ ಕಾರ್ಡ್ ಆಗಿದೆ ಎಂದರ್ಥ.
ಒಟ್ಟಾರೆ ಬಿಪಿಎಲ್ ಹಾಗೂ ಎಪಿಎಲ್ ರೇಷನ್ ಕಾರ್ಡ್ ಪರಿಷ್ಕರಣೆ ಕಾರ್ಯಾಚರಣೆಯು ಕರ್ನಾಟಕದಲ್ಲಿ ಸದ್ಯ ಗೊಂದಲದಿಂದ ಕೂಡಿದೆ ಎಂದು ಹೇಳಬಹುದು. ಆದರೆ ರಾಜ್ಯ ಸರ್ಕಾರ ಜನಾಂಗದ ಹಿತಾಸಕ್ತಿಗೆ ಪೂರಕವಾಗುವಂತಹ ಕ್ರಮಗಳನ್ನು ದಿಟ್ಟವಾದಂತಹ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ. ಬಡತನದ ನಿರ್ಧಾರ ಮಾನಗಳ ಕುರಿತಂತೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ಪಷ್ಟತೆಯು ಅಗತ್ಯವಿದ್ದು ಇದರಿಂದ ಬಡತನ ನಿವಾರಣೆಯ ಪ್ರತಿಜ್ಞೆಯೂ ಕೂಡ ಯಶಸ್ವಿಯಾಗುತ್ತದೆ ಎಂದು ಹೇಳಬಹುದು. ಸದ್ಯ ಈಗ ಪ್ರತಿಯೊಬ್ಬರಿಗೂ ಕೂಡ ರೇಷನ್ ಕಾರ್ಡ್ ಗೆ ಸಂಬಂಧಿಸಿದಂತೆ ಅವರ ರೇಷನ್ ಕಾರ್ಡ್ ನ ಸ್ಥಿತಿ ಹೇಗಿದೆ ಎಂಬುದನ್ನು ಚೆಕ್ ಮಾಡಿಕೊಳ್ಳಲು ತಿಳಿಸಿ.