ನಮಸ್ಕಾರ ಕನ್ನಡಿಗರೇ, ರೇಷನ್ ಕಾರ್ಡ್ ಹೊಂದಿರುವವರು ತಮ್ಮ ರೇಷನ್ ಕಾರ್ಡ್ ನ ಡಿಜಿಟಲ್ ಪ್ರತಿಯನ್ನು ಹೇಗೆ ಡೌನ್ಲೋಡ್ ಮಾಡಿಕೊಳ್ಳಬೇಕೆಂದು ಕಾಯುತ್ತಿದ್ದರು ಸದ್ಯ ಈಗ ತಮ್ಮ ಮೊಬೈಲ್ ಮೂಲಕವೇ ಕೇಂದ್ರ ಸರ್ಕಾರವು ಡೌನ್ಲೋಡ್ ಮಾಡಿಕೊಳ್ಳಲು ಅವಕಾಶವನ್ನು ಕಲ್ಪಿಸಿದ್ದು ಹೇಗೆ ಡಿಜಿಟಲ್ ರೇಷನ್ ಕಾರ್ಡ್ ಅನ್ನು ಡೌನ್ಲೋಡ್ ಮಾಡಿಕೊಳ್ಳ ಬಹುದು ಎಂಬುದರ ಪೂರ್ಣ ಮಾಹಿತಿಯನ್ನು ಇದರಲ್ಲಿ ತಿಳಿದುಕೊಳ್ಳಬಹುದು. ಈ ಲೇಖನದಲ್ಲಿ ಇರುವ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ ನೀವು ಡಿಜಿಟಲ್ ರೇಷನ್ ಕಾರ್ಡ್ ಪಡೆದುಕೊಳ್ಳಿ.
ಡಿಜಿಟಲ್ ರೇಷನ್ ಕಾರ್ಡ್ :
ಕೇಂದ್ರ ಸರ್ಕಾರ ಮೇರಾ ರೇಷನ್ 2.0 ಎನ್ನುವ ಹೆಸರಿನ ಅಪ್ಲಿಕೇಶನನ್ನು ಡಿಜಿಟಲ್ ರೇಷನ್ ಕಾರ್ಡ್ ನ ಪ್ರತಿಯನ್ನು ಡೌನ್ ಲೋಡ್ ಮಾಡಿಕೊಳ್ಳಲು ಮೊಬೈಲ್ ನಲ್ಲಿಯೇ ಪರಿಚಯಿಸಿದೆ. ಡಿಜಿಟಲ್ ರೇಷನ್ ಕಾರ್ಡ್ ಹೊಂದುವುದರಿಂದ ಏನೆಲ್ಲಾ ಪ್ರಯೋಜನವನ್ನು ಪಡೆದುಕೊಳ್ಳಬಹುದೆಂದು ನೋಡುವುದಾದರೆ, ಕೇಂದ್ರ ಸರ್ಕಾರವು ಡಿಜಿಟಲ್ ಇಂಡಿಯಾ ಯೋಜನೆ ಅಡಿಯಲ್ಲಿ ಅನೇಕ ರೀತಿಯ ಹೊಸ ಹೊಸ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುತ್ತಿದೆ. ಸಾರ್ವಜನಿಕರಿಗೆ ಸರಳ ವ್ಯವಸ್ಥೆಯನ್ನು ಸರ್ಕಾರದ ಪ್ರಯೋಜನವನ್ನು ಪಡೆದುಕೊಳ್ಳಲು ರೂಪಿಸಿಕೊಡಲು ಪರಿಣಾಮಕಾರಿಯಾಗಿ ಡಿಜಿಟಲ್ ವ್ಯವಸ್ಥೆಯನ್ನು ಬಳಕೆ ಮಾಡಿಕೊಳ್ಳುವ ದಿಸೆಯಲ್ಲಿ ಎಲ್ಲ ರೀತಿಯ ಡೇಟಾವನ್ನು ರೇಷನ್ ಕಾರ್ಡಿಗೆ ಸಂಬಂಧಿಸಿದಂತೆ ಆನ್ಲೈನ್ ನಲ್ಲಿ ಲಭ್ಯವಾಗುವಂತೆ ಮಾಡಲು ಕೇಂದ್ರ ಸರ್ಕಾರ ಮೊಬೈಲ್ ಅಪ್ಲಿಕೇಶನ್ ನನ್ನು ಅಭಿವೃದ್ಧಿಪಡಿಸಿದೆ.
ಮೇರಾರೇಶನ್ ಕನ್ನಡ ಅಪ್ಲಿಕೇಶನ್ :
ಡಿಜಿಟಲ್ ಪಡಿತರ ಚೀಟಿ ಎನ್ನುವುದು ಎಲೆಕ್ಟ್ರಾನಿಕ್ ಕಾರ್ಡ್ ಆಗಿದ್ದು ಇದು ಪಡಿತರ ಚೀಟಿಯ ಡಿಜಿಟಲ್ ಆವೃತ್ತಿಯಾಗಿದೆ ಎಂದು ಹೇಳಬಹುದು. ಸಾರ್ವಜನಿಕ ವಿತರಣಾ ವ್ಯವಸ್ಥೆಯ ಅಡಿಯಲ್ಲಿ ಈ ಒಂದು ಡಿಜಿಟಲ್ ಕಾರ್ಡನ್ನು ಡೌನ್ಲೋಡ್ ಮಾಡಿಕೊಳ್ಳುವುದರಿಂದ ಆಹಾರ ಧಾನ್ಯಗಳನ್ನು ಹಾಗೂ ಇತರ ಅಗತ್ಯ ವಸ್ತುಗಳನ್ನು ಪಡೆಯಲು ನೆರವಾಗುತ್ತದೆ.
ಮೊಬೈಲ್ ನಲ್ಲಿ ಈ ಒಂದು ಅಪ್ಲಿಕೇಶನ್ ಅನ್ನು ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳ ಬಹುದು. ಸಾರ್ವಜನಿಕ ವಿತರಣಾ ವ್ಯವಸ್ಥೆ ಯೋಜನೆಯ ಅಡಿಯಲ್ಲಿ ಡಿಜಿಟಲ್ ರೇಷನ್ ಕಾರ್ಡ್ ಅನ್ನು ಸಹಾಯಧನದಲ್ಲಿ ಆಹಾರ ಧಾನ್ಯಗಳನ್ನು ಫಲಾನುಭವಿಗಳಿಗೆ ಗ್ರಾಹಕರು ಸ್ವೀಕರಿಸಲು ನೆರವಾಗಲು ರೂಪಿಸಿರುವ ಒಂದು ಎಲೆಕ್ಟ್ರಾನಿಕ್ ದಾಖಲೆಯಾಗಿದ್ದು, ಹುಷಾರ್ ಮನೆ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
ಡಿಜಿಟಲ್ ರೇಷನ್ ಕಾರ್ಡ್ ಡೌನ್ಲೋಡ್ ಮಾಡುವ ವಿಧಾನ :
ಪಡಿತರ ಚೀಟಿಯನ್ನು ಹೊಂದಿರುವ ಗ್ರಾಹಕರು ಕೆಳಗೆ ತಿಳಿಸಲಾದಂತಹ ಹಂತಗಳನ್ನು ಅನುಸರಿಸುವುದರ ಮೂಲಕ ಡಿಜಿಟಲ್ ರೇಷನ್ ಕಾರ್ಡ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
- ಮೊದಲನೆಯದಾಗಿ ಗೂಗಲ್ ಪ್ಲೇ ಸ್ಟೋರ್ ಗೆ ಭೇಟಿ ನೀಡಿ ಮೊಬೈಲ್ನಲ್ಲಿ ರೇಷನ್ ಕಾರ್ಡ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಅಂದರೆ ಡೌನ್ಲೋಡ್ ಡಿಜಿಟಲ್ ರೇಷನ್ ಕಾರ್ಡ್ ಎಂಬುದರ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
- ಗೂಗಲ್ ಪ್ಲೇ ಸ್ಟೋರ್ ನಲ್ಲಿ ಅಧಿಕೃತ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡ ನಂತರ ಅಭ್ಯರ್ಥಿಗಳು ತಮ್ಮ ಅಂಕಿಯ ಆಧಾರ್ ಕಾರ್ಡ್ ನಂಬರ್ ಅನ್ನು ನಮೂದಿಸಿ ಅದರಲ್ಲಿ ಕ್ಯಾಪ್ಚ ಕೊಡನ್ನು ಎಂಟರ್ ಮಾಡಿ ಓಟಿಪಿಯನ್ನು ಹಾಕಿ ಪರಿಶೀಲಿಸಿ ಎಂಬುವುದರ ಬಟನ್ ಮೇಲೆ ಕ್ಲಿಕ್ ಮಾಡಬೇಕು.
- ಹೀಗೆ ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಿದ ನಂತರ ಅಗತ್ಯ ವಿವರಗಳನ್ನು ಸಲ್ಲಿಸಿ, ತಮ್ಮ ಮೊಬೈಲ್ ಅಪ್ಲಿಕೇಶನ್ ಗೆ ಲಾಗಿನ್ ಆಗಬೇಕಾಗುತ್ತದೆ ಇದರಿಂದ ನಿಮ್ಮ ಡಿಜಿಟಲ್ ರೇಷನ್ ಕಾರ್ಡ್ ಪ್ರತಿಯನ್ನು ಪಡೆದುಕೊಳ್ಳಬಹುದು.
ಹೀಗೆ ಕೆಲವೊಂದು ಹಂತಗಳನ್ನು ಅನುಸರಿಸುವುದರ ಮೂಲಕ ಡಿಜಿಟಲ್ ರೇಷನ್ ಕಾರ್ಡ್ ಅನ್ನು ಪಡೆದುಕೊಳ್ಳಬಹುದಾಗಿದೆ.
ಡಿಜಿಟಲ್ ರೇಷನ್ ಕಾರ್ಡ್ ನ ಪ್ರಯೋಜನಗಳು :
ಒಂದು ಬಾರಿ ಅಪ್ಲಿಕೇಶನ್ ಅನ್ನು ನಾವು ಡೌನ್ಲೋಡ್ ಮಾಡಿಕೊಂಡ ನಂತರ ನಿಮ್ಮ ಮೊಬೈಲ್ ನಲ್ಲಿ ಪಡೆದಂತಹ ಎಲ್ಲಾ ವಿವರಗಳನ್ನು ಯಾವುದೇ ಸಮಯದಲ್ಲಿಯೂ ಹಾಗೂ ಎಲ್ಲಿಯಾದರೂ ಕೂಡ ಬಳಕೆ ಮಾಡಬಹುದಾಗಿದೆ.
- ಈ ಡಿಜಿಟಲ್ ರೇಷನ್ ಕಾರ್ಡ್ ಅನ್ನು ಭೌತಿಕ ರೇಷನ್ ಕಾರ್ಡ್ ರೀತಿ ಬಳಕೆ ಮಾಡುವುದರಿಂದ ಇದನ್ನು ಕಳೆದುಕೊಳ್ಳುವ ಭಯವಿರುವುದಿಲ್ಲ.
- ಎಲ್ಲ ದಾಖಲೆಗಳು ಡಿಜಿಟಲ್ ಆಗಿರುವುದರಿಂದ ವಂಚನೆಯಾಗುವ ಸಾಧ್ಯತೆಯೂ ಕೂಡ ಕಡಿಮೆ ಇರುತ್ತದೆ.
- ಒಂದು ವೇಳೆ ರೇಷನ್ ಕಾರ್ಡ್ ಅನ್ನು ಮರೆತು ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಒಂದು ರೇಷನ್ ಕಾರ್ಡ್ ನೆರವಾಗುತ್ತದೆ.
ಹೀಗೆ ಅನೇಕ ಪ್ರಯೋಜನಗಳನ್ನು ಡಿಜಿಟಲ್ ರೇಷನ್ ಕಾರ್ಡ್ ನಿಂದ ಪಡೆದುಕೊಳ್ಳಬಹುದಾಗಿದೆ. ಹಾಗಾಗಿ ಪ್ರತಿಯೊಬ್ಬರೂ ಕೊಡ ಮೇರ ಅಪ್ಲಿಕೇಶನ್ ಮೂಲಕ ಡಿಜಿಟಲ್ ರೇಷನ್ ಕಾರ್ಡ್ ಅನ್ನು ಪಡೆದುಕೊಳ್ಳಬಹುದು. ಈ ಅಪ್ಲಿಕೇಶನ್ ನಿಮ್ಮ ಮೊಬೈಲ್ ನಲ್ಲೆ ಸಲ್ಲಿಸಬಹುದಾಗಿದೆ ಆದ್ದರಿಂದ ಎಲ್ಲರು ತಮ್ಮ ತಮ್ಮ ಮೊಬೈಲ್ ನಲ್ಲಿಯೇ ಈ ಅಪ್ಲಿಕೇಶನ್ ಹಾಕಿ, ಒಂದು ವೇಳೆ ನಿಮಗೆ ಬರದೇ ಹೋದರೆ ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗೆ ಭೇಟಿ ನೀಡಿ ಇದರ ಪ್ರಯೋಜನವನ್ನು ಪಡೆದುಕೊಳ್ಳಿ, ಹಾಗೆ ಇದರ ಬಗ್ಗೆ ಗೊತ್ತಿರದ ನಿಮ್ಮ ಕುಟುಂಬ ಹಾಗು ಸ್ನೇಹಿತರಿಗೂ ತಿಳಿಸಿ ನೀವು ಇದರ ಪ್ರಯೋಜನವನ್ನು ಪಡೆದುಕೊಳ್ಳಿ, ದನ್ಯವಾದ.