ಸ್ವಂತ ಉದ್ಯೋಗ ಮಾಡುವವರಿಗೆ ಸರ್ಕಾರದಿಂದ ಸಹಾಯಧನ: ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ ತಕ್ಷಣ ನೋಡಿ


ನಮಸ್ಕಾರ ಕನ್ನಡಿಗರೇ, ಇವತ್ತಿನ ಲೇಖನದಲ್ಲಿ ನಿರುದ್ಯೋಗ ಯುವಕ ಯುವತಿಯರು ಹಾಗೂ ಸ್ವಂತ ಉದ್ಯೋಗ ಮಾಡುವವರಿಗೆ ಉತ್ತಮವಾದಂತಹ ಮಾಹಿತಿ ತಿಳಿಸಲಾಗುತ್ತಿದೆ. ಗ್ಯಾರೆಂಟಿ ಯೋಜನೆಗಳನ್ನು ಮಾತ್ರವಲ್ಲದೆ ಸರ್ಕಾರದಿಂದ ಗ್ಯಾರಂಟಿ ಏತರವಾಗಿಯೂ ಕೂಡ ಹಲವಾರು ಕಲ್ಯಾಣ ಯೋಜನೆಗಳು ಘೋಷಣೆಯಾಗಿವೆ ಎಂದು ಹೇಳಬಹುದು.

Subsidy from Govt for Self Employed
Subsidy from Govt for Self Employed

ಕಾಂಗ್ರೆಸ್ ಸರ್ಕಾರ ಅಧಿಕಾರ ವಹಿಸಿಕೊಂಡ ನಂತರ ಒಂದು ವರ್ಷದ ಒಳಗಾಗಿ ಹತ್ತಾರು ಯೋಜನೆಗಳನ್ನು ಘೋಷಣೆ ಮಾಡಿರುವ ಬಗ್ಗೆ ರಾಜ್ಯದ ನಿರುದ್ಯೋಗ ನಿರ್ವಹಣೆಗಾಗಿ ಸ್ವಯಂ ಉದ್ಯೋಗ ಮಾಡುವವರಿಗೆ ಮುಖ್ಯಮಂತ್ರಿಯ ಸಿದ್ದರಾಮಯ್ಯನವರು ಯುವ ಜನತೆಗೆ ಪ್ರೇರೇಪಿಸುವ ಉದ್ದೇಶದಿಂದ ನೇರ ಸಾಲ ಯೋಜನೆ ಸ್ವಂತ ಉದ್ಯೋಗಕ್ಕೆ ಸೇರಿದಂತೆ ಇನ್ನೂ ಅನೇಕ ಯೋಜನೆಗಳನ್ನು ಪರಿಚಯಿಸಿದ್ದಾರೆ.

ಸದ್ಯ ಇದೀಗ ಆರ್ಥಿಕವಾಗಿ ಹಿಂದುಳಿದಂತಹ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗಗಳಿಗೆ ಹೆಚ್ಚಿನ ನೆರವನ್ನು ಒದಗಿಸುವ ಉದ್ದೇಶದಿಂದ ಸಹಾಯಧನವನ್ನು ಕೂಡ ಸರ್ಕಾರ ನೀಡುತ್ತಿದೆ. ಇಂತಹ 10 ಹಲವಾರು ಯೋಜನೆಗಳಲ್ಲಿ ಒಂದಾದಂತಹ ಒಂದು ವಿಶೇಷ ಯೋಜನೆಯ ಬಗ್ಗೆ ಇವತ್ತಿನ ಲೇಖನದಲ್ಲಿ ತಿಳಿಸಲಾಗುತ್ತಿದ್ದು ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಇದೇ ತಿಂಗಳು ಕೊನೆಯ ದಿನಾಂಕವಾಗಿದೆ. ಹಾಗಾದರೆ ಆ ಒಂದು ಯೋಜನೆ ಯಾವುದೆಂದು ಈ ಕೆಳಗಿನಂತೆ ನೋಡುವುದಾದರೆ.

ಸ್ವಯಂ ಉದ್ಯೋಗ ಸಾಲ :

ಕರ್ನಾಟಕ ಸರ್ಕಾರವು ಗ್ಯಾರಂಟಿ ಯೋಜನೆಗಳ ಜೊತೆಗೆ ಗ್ಯಾರಂಟಿಗೆ ತರ ಅಂದರೆ ಸಹಾಯಧನದ ರೂಪದಲ್ಲಿ ಹಲವಾರು ಕಲ್ಯಾಣ ಯೋಜನೆಗಳನ್ನು ರಾಜ್ಯದ ಯುವಜನತೆಗೆ ಜಾರಿಗೆ ತಂದಿದೆ. ಅದರಂತೆ ಸ್ವಂತ ಉದ್ಯೋಗವನ್ನು ಮಾಡುವ ಯುವಕ ಯುವತಿಯರಿಗೆ ಸರ್ಕಾರದಿಂದ ಒಂದು ಲಕ್ಷದವರೆಗೆ ಸಹಾಯಧನವನ್ನು ನೀಡಲು ಸರ್ಕಾರ ಮುಂದಾಗಿದೆ. ಆ ಸಹಾಯಧನ ಸ್ವಯಂ ಉದ್ಯೋಗ ಸಾಲ ಯೋಜನೆಯ ಮೂಲಕ ನೀಡಲಾಗುತ್ತಿದ್ದು ಈ ಯೋಜನೆಯ ಉದ್ದೇಶಗಳು ಯಾವುವೆಂದು ನೋಡುವುದಾದರೆ.

ಸ್ವಯಂ ಉದ್ಯೋಗ ಸಾಲ ಯೋಜನೆ ಯ ಉದ್ದೇಶ :

ಸರ್ಕಾರ ಯೋಜನೆಗಳನ್ನು ಹಾಗೆಯೇ ಬಿಡುಗಡೆ ಮಾಡುವುದಿಲ್ಲ ಕೆಲವೊಂದು ಉದ್ದೇಶಗಳನ್ನು ಇಟ್ಟುಕೊಂಡು ಬಿಡುಗಡೆ ಮಾಡುತ್ತವೆ. ಅದರಂತೆ ರಾಜ್ಯ ಸರ್ಕಾರ ಸ್ವಯಂ ಉದ್ಯೋಗ ಸಾಲವನ್ನು ಏತಕ್ಕಾಗಿ ಜಾರಿಗೊಳಿಸಲಾಗಿದೆ ಎಂಬುದರ ಬಗ್ಗೆ ಈ ಲೇಖನದಲ್ಲಿ ನೋಡುವುದಾದರೆ.

  1. ಸ್ವಉದ್ಯೋಗಗಳಲ್ಲಿ ತೊಡಗಿಸಿಕೊಳ್ಳಲು ರಾಜ್ಯದ ಅಲ್ಪಸಂಖ್ಯಾತ ಸಮುದಾಯ ಗಳಿಗೆ ಪ್ರೋತ್ಸಾಹ ನೀಡಬಹು ಉದ್ದೇಶದಿಂದ ಕಡಿಮೆ ಬಡ್ಡಿ ದರದಲ್ಲಿ ಈ ಸಾಲ ಸೌಲಭ್ಯ ಒದಗಿಸುವ ಯೋಜನೆಯನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದೆ.
  2. ಅಲ್ಪಸಂಖ್ಯಾತರಿಗೆ ಈ ಒಂದು ಯೋಜನೆಯ ಅಡಿಯಲ್ಲಿ ಹೈನುಗಾರಿಕೆ ವ್ಯಾಪಾರ ಗುಡಿ ಕೈಗಾರಿಕೆ ಕುರಿ ಕೋಳಿ ಸಾಕಾಣಿಕೆ ಪಶುಸಂಗೋಪನೆ ಅಥವಾ ಇನ್ನಿತರ ಯಾವುದೇ ವಿವಿಧ ರೀತಿಯ ಉದ್ಯಮಗಳನ್ನು ಪ್ರಾರಂಭಿಸಲು ಅಗತ್ಯವಿರುವಂತಹ ಹಣಕಾಸಿನ ನೆರವನ್ನು ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
  3. ಸ್ವಯಂ ಉದ್ಯೋಗ ಶಾಲೆ ಯೋಜನೆಯ ಮೂಲಕ ಅಲ್ಪಸಂಖ್ಯಾತ ಸಮುದಾಯ ಗಳಿಗೆ ನೆರವನ್ನು ಒದಗಿಸಿ ತಮ್ಮ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಲು ರಾಜ್ಯ ಸರ್ಕಾರ ನೆರವಾಗುತ್ತಿದೆ. ಅದಷ್ಟೇ ಅಲ್ಲದೆ ಅಲ್ಪಸಂಖ್ಯಾತರ ಜನರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಪ್ರಯತ್ನಿಸುವ ಉದ್ದೇಶವನ್ನು ರಾಜ್ಯ ಸರ್ಕಾರ ಹೊಂದಿದೆ.

ಸ್ವಯಂ ಉದ್ಯೋಗ ಸಾಲ ಯೋಜನೆಯಿಂದ ಸಿಗುವ ನೆರವು :

ರಾಜ್ಯ ಸರ್ಕಾರ ಜಾರಿಗೆ ತಂದಿರುವಂತಹ ಸ್ವಯಂ ಉದ್ಯೋಗ ಸಾಲ ಯೋಜನೆಯ ಮೂಲಕ ಸಿಗುವಂತಹ ನೆರವು
ಯೋಜನೆ ಘಟಕದ 33% ವೆಚ್ಚಾ ಅಥವಾ ಗರಿಷ್ಠ ಒಂದು ಲಕ್ಷದವರೆಗೆ ಸಹಾಯಧನವನ್ನು ಈ ಒಂದು ಯೋಜನೆಯ ಮೂಲಕ ನೀಡಲಾಗುತ್ತದೆ.

ಸ್ವಯಂ ಉದ್ಯೋಗ ಸಾಲ ಯೋಜನೆ ಗೆ ಅರ್ಜಿ ಸಲ್ಲಿಸಲು ಅರ್ಹತೆಗಳು :

ರಾಜ್ಯ ಸರ್ಕಾರವು ಸ್ವಯಂ ಉದ್ಯೋಗವನ್ನು ಪ್ರಾರಂಭಿಸಲು ಜಾರಿಗೆ ತಂದಿರುವಂತಹ ಸ್ವಯಂ ಉದ್ಯೋಗ ಸಾಲ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಕೆಲವೊಂದು ಅರ್ಹತೆಗಳನ್ನು ಅಭ್ಯರ್ಥಿಗಳಿಗೆ ನಿಗದಿಪಡಿಸಲಾಗಿದೆ. ಅವುಗಳೆಂದರೆ.

  1. ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಯು ಕರ್ನಾಟಕದ ನಿವಾಸಿ ಆಗಿರಬೇಕು
  2. ಸರ್ಕಾರವು ಗುರುತಿಸಲ್ಪಟ್ಟಂತಹ ಅಲ್ಪಸಂಖ್ಯಾತ ಸಮುದಾಯಗಳಾದ ಬೌದ್ಧ ಕ್ರೈಸ್ತ ಮುಸ್ಲಿಂ ಸಿಖ್ ಮತ್ತು ಪಾರ್ಸಿ ಸಮುದಾಯದ ಯುವ ಜನತೆ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬಹುದು.
  3. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಕನಿಷ್ಠ 18ರಿಂದ ಗರಿಷ್ಠ 55 ವರ್ಷ ಮೀರಿರಬಾರದು.
  4. ಅರ್ಜಿ ಸಲ್ಲಿಸಲು ಗ್ರಾಮೀಣ ಪ್ರದೇಶದ ಅಭ್ಯರ್ಥಿಯ ವಾರ್ಷಿಕ ಆದಾಯ, 81,000 ಮೀರಬಾರದು
    5.ಅರ್ಜಿ ಸಲ್ಲಿಸಲು ನಗರ ಪ್ರದೇಶದಲ್ಲಿ ಅಭ್ಯರ್ಥಿಯ ವಾರ್ಷಿಕ ಆದಾಯ 1,30,000 ಮೀರಿರಬಾರದು.
  5. ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳ ಕುಟುಂಬದಲ್ಲಿ ಯಾವುದೇ ಸದಸ್ಯರು ಕೇಂದ್ರ ಅಥವಾ ರಾಜ್ಯ ಸರ್ಕಾರಿ ಉದ್ಯೋಗ ಹೊಂದಿರಬಾರದು
  6. ಕುಟುಂಬದಲ್ಲಿ ಯಾರೂ ಕೂಡ ಆದಾಯ ತೆರಿಗೆ ಪಾವತಿ ಮಾಡುವವರು ಇರಬಾರದು
  7. ಸಜಯ್ ದೀಗ ಈ ಒಂದು ಯೋಜನೆಯು ಚಿಕ್ಕಮಗಳೂರು ಜಿಲ್ಲೆಯಲ್ಲಿ ಇರುವಂತಹ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದವರಿಂದ ಅರ್ಜಿಯನ್ನು ಆಹಾರ ಮಾಡಲಾಗಿದ್ದು ಶೀಘ್ರದಲ್ಲಿಯೇ ಎಲ್ಲ ಜಿಲ್ಲೆಗಳಲ್ಲಿಯೂ ಕೂಡ ಈ ಒಂದು ಯೋಜನೆಯು ಕಾರ್ಯರೂಪಕ್ಕೆ ಬರಲಿದೆ.

ಸ್ವಯಂ ಉದ್ಯೋಗ ಸಾಲ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ :

ಚಿಕ್ಕಮಗಳೂರು ಜಿಲ್ಲೆಯಲ್ಲಿ ಜಾರಿಗೆ ತಂದಿರುವಂತಹ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದಂತಹ ಸ್ವಯಂ ಉದ್ಯೋಗ ಶಾಲೆ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.
ಈ ವೆಬ್ಸೈಟ್ಗೆ ಭೇಟಿ ನೀಡಿ ಅಭ್ಯರ್ಥಿಗಳು ಬೆಂಗಳೂರು ಒನ್ ಗ್ರಾಮ ಒನ್ ಕರ್ನಾಟಕ ಒನ್ ಹಾಗೂ ಸೇವಾ ಸಿಂಧು ಕೇಂದ್ರಗಳಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ :

ಕರ್ನಾಟಕ ಸರ್ಕಾರ ಜಾರಿಗೆ ತಂದಿರುವಂತಹ ಸ್ವಯಂ ಉದ್ಯೋಗ ಸಾಲ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಯೋಜನಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲು ಚಿಕ್ಕಮಗಳೂರು ಜಿಲ್ಲೆಯ ಅಲ್ಪಸಂಖ್ಯಾತ ಸಮುದಾಯ ಅಭಿವೃದ್ಧಿ ನಿಗಮ ವ್ಯವಸ್ಥಾಪಕರ ಕಚೇರಿಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಂಡು ಆನಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಸಹಾಯವಾಣಿ ಸಂಖ್ಯೆ : 08262-295843

ಹೀಗೆ ರಾಜ್ಯ ಸರ್ಕಾರವು ಸ್ವಂತ ಉದ್ಯೋಗವನ್ನು ಪ್ರಾರಂಭಿಸಲು ಬಯಸುವ ಜನರಿಗೆ ಸ್ವಉದ್ಯೋಗ ಸಾಲ ಯೋಜನೆಯನ್ನು ಜಾರಿಗೆ ತಂದಿದ್ದು ಈ ಒಂದು ಯೋಜನೆಯ ಮೂಲಕ ಸ್ವಂತ ಉದ್ಯೋಗವನ್ನು ಪ್ರಾರಂಭಿಸಿ ತಮ್ಮ ಆರ್ಥಿಕ ಜೀವನವನ್ನು ಸುಧಾರಿಸಿಕೊಳ್ಳಬಹುದಾಗಿದೆ. ನಿರುದ್ಯೋಗ ಯುವಕ ಯುವತಿಯರು ಈ ಒಂದು ಯೋಜನೆಯ ಮೂಲಕ ಹೆಚ್ಚಿನ ಪ್ರಯೋಜನವನ್ನು ಪಡೆದುಕೊಂಡು ಸ್ವಂತ ಉದ್ಯೋಗ ಮಾಡುವುದರ ಮೂಲಕ ಹೆಚ್ಚಿನ ಆದಾಯವನ್ನು ಗಳಿಸಬಹುದಾಗಿದೆ.

ಅಧಿಕೃತ ಜಾಲತಾಣ:

ಒಟ್ಟಾರೆ ರಾಜ್ಯ ಸರ್ಕಾರವು ಸದ್ಯ ಇದೀಗ ಸ್ವ ಉದ್ಯೋಗ ಸಾಲ ಯೋಜನೆಯನ್ನು ಕೇವಲ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರಾರಂಭಿಸಲಾಗಿದ್ದು ಮುಂದಿನ ದಿನಗಳಲ್ಲಿ ಎಲ್ಲ ಜಿಲ್ಲೆಗಳಲ್ಲಿಯೂ ಕೂಡ ವಿಸ್ತರಿಸುವುದಾಗಿ ತಿಳಿಸಿದೆ. ಹಾಗಾಗಿ ಪ್ರತಿಯೊಬ್ಬರಿಗೂ ಅದರಲ್ಲಿ ಮುಖ್ಯವಾಗಿ ನಿರುದ್ಯೋಗ ಯುವಕ ಯುವತಿಯರಿಗೆ ರಾಜ್ಯ ಸರ್ಕಾರ ಜಾರಿಗೆ ತಂದಿರುವಂತಹ ಸ್ವಉದ್ಯೋಗ ಸಾಲ ಯೋಜನೆಯ ಬಗ್ಗೆ ತಿಳಿಸುವುದರ ಮೂಲಕ ಅವರೇನಾದರೂ ಸ್ವಂತ ಉದ್ಯೋಗ ಪ್ರಾರಂಭಿಸಲು ಯೋಚಿಸುತ್ತಿದ್ದರೆ.

ಕರ್ನಾಟಕ ಸರ್ಕಾರದಿಂದ ಒಂದು ಲಕ್ಷ ರೂಪಾಯಿಗಳ ಸಹಾಯ ಧನವನ್ನು ಪಡೆದು ಸ್ವಂತ ಉದ್ಯೋಗವನ್ನು ಪ್ರಾರಂಭಿಸಲು ತಿಳಿಸಿ. ಮುಖ್ಯವಾಗಿ ಚಿಕ್ಕಮಗಳೂರು ಜಿಲ್ಲೆಯ ಯುವಜನತೆಗೆ ಈ ಒಂದು ಯೋಜನೆಯು ಹೆಚ್ಚು ಸಹಕಾರಿಯಾಗಲಿದೆ ಎಂದು ಹೇಳಬಹುದು. ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ಈ ಒಂದು ಯೋಜನೆಯನ್ನು ಎಲ್ಲಾ ಜಿಲ್ಲೆಗಳಲ್ಲಿಯೂ ವಿಸ್ತರಿಸುವುದರ ಮೂಲಕ ರಾಜ್ಯದಲ್ಲಿರುವ ಎಲ್ಲ ಯುವಜನತೆಯು ಸ್ವಉದ್ಯೋಗವನ್ನು ಪ್ರಾರಂಭಿಸಬಹುದಾಗಿದೆ.

ಇತರೆ ಪ್ರಮುಖ ವಿಷಯಗಳು:

ಗೃಹಲಕ್ಷ್ಮಿ ಯೋಜನೆಯ 15ನೇ ಕಂತಿನ ಹಣ ಬಿಡುಗಡೆ : ನಿಮಗೂ ಬಂದಿದ್ಯ…!ಇಲ್ಲಿದೆ ಸಂಪೂರ್ಣ ಮಾಹಿತಿ ತಕ್ಷಣ ತಿಳಿದುಕೊಳ್ಳಿಪ್ರಧಾನ ಮಂತ್ರಿ ಕಿಸಾನ್ ಯೋಜನೆಯ 19ನೇ ಕಂತಿನ ಹಣ ಬಿಡುಗಡೆ : ನಿಮಗೂ ಬಂದಿದ್ಯ ಚೆಕ್ ಮಾಡಿ ಇಲ್ಲಿದೆ ಸಂಪೂರ್ಣ ಮಾಹಿತಿ


Leave a Comment