ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಲು ಮತ್ತೊಮ್ಮೆ ಅವಕಾಶ : ಅರ್ಜಿ ಸಲ್ಲಿಸಿ ಇಲ್ಲಿದೆ ಸಂಪೂರ್ಣ ಮಾಹಿತಿ


ನಮಸ್ಕಾರ ಕನ್ನಡಿಗರೇ, ಇವತ್ತಿನ ಲೇಖನದಲ್ಲಿ ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ನೀಡಿರುವಂತಹ ಒಂದು ಮಾಹಿತಿಯ ಬಗ್ಗೆ ತಿಳಿಸುತ್ತೇವೆ. ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಕರ್ನಾಟಕ ಸರ್ಕಾರ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಜನಸಾಮಾನ್ಯರಿಗೆ ಅವಕಾಶವನ್ನು ಕಲ್ಪಿಸಿದೆ. ಜನರು ಈ ಸೇವೆಯ ಮೂಲಕ ತಮ್ಮ ಕುಟುಂಬದ ಮಾಹಿತಿ ದೋಷಗಳನ್ನು ಸರಿಪಡಿಸಿಕೊಂಡು ಸರ್ಕಾರದ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳಬಹುದು.

Another opportunity to amend the ration card
Another opportunity to amend the ration card

ಸರ್ಕಾರ ತಂದಿರುವಂತಹ ರೇಷನ್ ಕಾರ್ಡ್ ತಿದ್ದುಪಡಿಯ ಮೂಲಕ ಜನರು ಅಪ್ಡೇಟೆಡ್ ರೇಷನ್ ಕಾರ್ಡನ್ನು ಪಡೆಯಲು ಸಾಧ್ಯವಾಗುತ್ತದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ನೀಡಿರುವಂತಹ ಈ ಅವಕಾಶವನ್ನು ಅಂದರೆ ರೇಷನ್ ಕಾರ್ಡ್ ತಿದ್ದುಪಡಿಯನ್ನು ಎಲ್ಲಿ ಮಾಡಿಸಬೇಕು ? ಏತಕ್ಕಾಗಿ ರೇಷನ್ ಕಾರ್ಡ್ ತಿದ್ದುಪಡಿ ಮುಖ್ಯವಾಗಿದೆ? ಯಾವ ರೀತಿಯಾದಂತಹ ತಿದ್ದುಪಡಿಯನ್ನು ಮಾಡಿಸಬಹುದು? ಹೇಗೆ ತಿದ್ದುಪಡಿ ಮಾಡಿಸಬೇಕು ಎಂಬುದರ ಪೂರ್ಣ ಮಾಹಿತಿ. ಈ ಲೇಖನದಲ್ಲಿ ಪಡೆದುಕೊಳ್ಳಬಹುದು.

ಏಕೆ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಬೇಕು :

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ರೇಷನ್ ಕಾರ್ಡ್ ಗೆ ಸಂಬಂಧಿಸಿದಂತೆ ತಿದ್ದುಪಡಿ ಮಾಡಲು ಇದೀಗ ಮತ್ತೊಮ್ಮೆ ಜನಸಾಮಾನ್ಯರಿಗೆ ಅವಕಾಶ ಕಲ್ಪಿಸಿದೆ. ಆಹಾರ ಮತ್ತು ಅಗತ್ಯ ವಸ್ತುಗಳನ್ನು ಪಡೆಯಲು ರೇಷನ್ ಕಾರ್ಡ್ ಅಗತ್ಯವಾಗಿದ್ದು ಆದರೆ ಕೆಲವೊಂದು ರೇಷನ್ ಕಾರ್ಡ್ ಗಳಲ್ಲಿ ತಪ್ಪುಗಳನ್ನು ಕಾಣಬಹುದಾಗಿದೆ. ಈ ರೀತಿಯ ತಪ್ಪುಗಳನ್ನು ಸರಿಪಡಿಸಿಕೊಂಡರೆ ಮಾತ್ರ ರೇಷನ್ ಕಾರ್ಡ್ ನ ಪ್ರಯೋಜನಗಳನ್ನು ಸರ್ಕಾರದಿಂದ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಯಾವ ರೀತಿಯ ತಪ್ಪುಗಳು ರೇಷನ್ ಕಾರ್ಡ್ ನಲ್ಲಿ ಉಂಟಾಗಿರಬಹುದು ಎಂದು ನೋಡುವುದಾದರೆ.

  1. ತಪ್ಪಾಗಿ ಸದಸ್ಯರ ಹೆಸರು ದಾಖಲಾಗಿರುತ್ತದೆ
  2. ರೇಷನ್ ಕಾರ್ಡ್ ಗೆ ಕುಟುಂಬದ ಹೊಸ ಸದಸ್ಯರನ್ನು ಸೇರ್ಪಡೆ ಮಾಡುವುದು
  3. ಮರಣ ಹೊಂದಿದಂತಹ ಸದಸ್ಯರನ್ನು ತೆಗೆದುಹಾಕಲು ಅಥವಾ ಮೇಲಿನ ಸದಸ್ಯರನ್ನು ತೆಗೆದುಹಾಕಲು ಅವಕಾಶ
  4. ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥರನ್ನು ಬದಲಾಯಿಸಲು ಅವಕಾಶ
  5. ಫೋಟೋ ಮತ್ತು ವಿಳಾಸದ ತಿದ್ದುಪಡಿ ಅಗತ್ಯವಾಗಿ ಬೇಕಾಗಿರುತ್ತದೆ.

ಹೀಗೆ ಈ ಮೇಲಿನ ತಪ್ಪುಗಳು ಏನಾದರೂ ರೇಷನ್ ಕಾರ್ಡ್ ನಲ್ಲಿ ಇದ್ದರೆ ಸರ್ಕಾರ ತಿಳಿಸಿರುವಂತಹ ಮಾಹಿತಿಯ ಪ್ರಕಾರ ರೇಷನ್ ಕಾರ್ಡ್ ತಿದ್ದುಪಡಿಯನ್ನು ಮಾಡಿಸಬಹುದಾಗಿದೆ.

ಏನೆಲ್ಲ ತಿದ್ದುಪಡಿ ಮಾಡಿಸಬಹುದು :

ಸದ್ಯ ಇದೀಗ ಕರ್ನಾಟಕ ಸರ್ಕಾರವು ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಅವಕಾಶ ಕಲ್ಪಿಸಿದೆ. ಅದರಂತೆ ಈ ಕೆಳಗಿನ ತಿದ್ದುಪಡಿಗಳಿಗೆ ಕರ್ನಾಟಕ ಸರ್ಕಾರ ಅವಕಾಶ ನೀಡುತ್ತದೆ ಎಂದು ಹೇಳಬಹುದು.

  1. ಕುಟುಂಬದ ಸದಸ್ಯರ ಸೇರ್ಪಡೆ : ಕುಟುಂಬದಲ್ಲಿ ಹೊಸ ಸೇರ್ಪಡೆ ಅಂದರೆ ಹೊಸ ಹುಟ್ಟಿದ ಮಗುವಿನ ಅಥವಾ ನಿಕಟ ಸಂಬಂಧಿಕರ ಸೇರ್ಪಡೆಯನ್ನು ಮಾಡಲು ಅವಕಾಶ ಕಲ್ಪಿಸಲಾಗಿದೆ.
  2. ಹೆಸರನ್ನು ತಿದ್ದುಪಡಿ ಮಾಡುವುದು : ರೇಷನ್ ಕಾರ್ಡ್ ನಲ್ಲಿ ಒಂದು ವೇಳೆ ತಪ್ಪಾದ ಹೆಸರು ದಾಖಲಾಗಿದ್ದರೆ ಸರಿಯಾದ ಹೆಸರನ್ನು ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ.
  3. ಸದಸ್ಯರ ಹೆಸರನ್ನು ಅಳಿಸಲು : ರೇಷನ್ ಕಾರ್ಡ್ ನಲ್ಲಿ ಕುಟುಂಬದ ಸದಸ್ಯರ ಹೆಸರನ್ನು ಅಂದರೆ ಮೃದರಾದ ಅಥವಾ ಬೇರೆ ಮನೆಗೆ ಸ್ಥಳಾಂತರ ಆದಂತಹ ಸದಸ್ಯರ ಹೆಸರನ್ನು ತೆಗೆದುಹಾಕಲು ಅವಕಾಶ ಕಲ್ಪಿಸಲಾಗಿದೆ.
  4. ಕುಟುಂಬದ ಮುಖ್ಯಸ್ಥರ ಬದಲಾವಣೆ : ಪಡಿತರ ಚೀಟಿಯಲ್ಲಿ ಕುಟುಂಬದ ಮುಖ್ಯಸ್ಥರು ಯಜಮಾನನಾಗಿದ್ದರೆ ಅದರಲ್ಲಿ ಯಜಮಾನ್ಯ ಹೆಸರನ್ನು ಸೇರಿಸುವುದು.
  5. ಫೋಟೋ ತಿದ್ದುಪಡಿ : ರೇಷನ್ ಕಾರ್ಡ್ ನಲ್ಲಿ ತಪ್ಪಾದ ಫೋಟೋ ಇದ್ದರೆ ಅದಕ್ಕೆ ಅಪ್ಡೇಟ್ ಫೋಟೋವನ್ನು ಸೇರಿಸಲು ಅವಕಾಶ.
  6. ವಿಳಾಸದ ತಿದ್ದುಪಡಿ : ಹೊಸ ವಿಳಾಸವನ್ನು ದಾಖಲಿಸಲು ಅವಕಾಶ
  7. ಇತರ ವಿವರಗಳ ತಿದ್ದುಪಡಿ : ರೇಷನ್ ಕಾರ್ಡ್ ನಲ್ಲಿ ಕೆಲವೊಂದು ವಿವರಗಳ ತಿದ್ದುಪಡಿ ಮಾಡಿಸಬೇಕಾದರೆ ಸರ್ಕಾರದ ಅನುಮತಿಯ ಮೇರೆಗೆ ತಿದ್ದುಪಡಿ ಮಾಡಬಹುದಾಗಿದೆ.

ರೇಷನ್ ಕಾರ್ಡ್ ತಿದ್ದುಪಡಿ ಮಾಡುವ ಪ್ರಕ್ರಿಯೆ :

ಸರ್ಕಾರ ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಆನ್ಲೈನ್ ಮತ್ತು ಆಫ್ಲೈನ್ ಮೂಲಕ ಅಂದರೆ ಎರಡು ಮಾರ್ಗಗಳಲ್ಲಿಯೂ ಅವಕಾಶ ಕಲ್ಪಿಸಿದೆ.

ಆನ್ಲೈನ್ ಮೂಲಕ ತಿದ್ದುಪಡಿ :

ಸರ್ಕಾರ ಆನ್ಲೈನ್ ಮೂಲಕವೂ ಕೂಡ ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಅವಕಾಶ ಕಲ್ಪಿಸಲಾಗಿದ್ದು ಈ ಕೆಳಗಿನ ವಿಧಾನಗಳನ್ನು ಅನುಸರಿಸುವುದರ ಮೂಲಕ ತಿದ್ದುಪಡಿ ಮಾಡಿಸಬಹುದು.

  1. ಅಭ್ಯರ್ಥಿಗಳು ಫಾರ್ಮ್ 2 ಪತ್ರವನ್ನು ಡೌನ್ಲೋಡ್ ಮಾಡಬೇಕು.
  2. ಫಾರಂ 2 ಪತ್ರವನ್ನು ಡೌನ್ಲೋಡ್ ಮಾಡಲು ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು.
  3. https://ahara.karnataka.gov.in/
  4. ವೆಬ್ಸೈಟ್ ಗೆ ಭೇಟಿ ನೀಡಿದ ನಂತರ ಲಾಗಿನ್ ಆಗಿ ತಮ್ಮ ಆರ್‌ಸಿಐಡಿ ಅನ್ನು ನಮೂದಿಸಬೇಕು.
  5. ಆಯ್ಕೆ ಮಾಡಿದ ತಿದ್ದುಪಡಿಯ ಪ್ರಕಾರವನ್ನು ನಮೂದಿಸಿ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು.
  6. ಅಪ್ಲೋಡ್ ಮಡಿದ ನಂತರ ಸುಭ್ಮಿಟ್ ಮೇಲೆ ಕ್ಲಿಕ್ ಮಾಡಿ.

ಆಫ್ಲೈನ್ ತಿದ್ದುಪಡಿ :

ರೇಷನ್ ಕಾರ್ಡ್ ಅನ್ನು ಆಫ್ಲೈನ್ ಮೂಲಕ ತಿದ್ದುಪಡಿ ಮಾಡಲ್ವಾ ಬಯಸುತ್ತಿದ್ದರೆ ಅಭ್ಯರ್ಥಿಗಳು ತಮ್ಮ ಹತ್ತಿರದ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಅಗತ್ಯ ದಾಖಲಾತಿಗಳನ್ನು ನೀಡಿ ತಿದ್ದುಪಡಿ ಮಾಡಿಸಿ ಅಧಿಕೃತ ರಶೀದಿಯನ್ನು ಪಡೆದುಕೊಳ್ಳಬಹುದು.

ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಅಗತ್ಯ ದಾಖಲಾತಿಗಳು :

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಕೆಲವೊಂದು ಅಗತ್ಯ ದಾಖಲಾತಿಗಳನ್ನು ನೀಡಬೇಕೆಂದು ತಿಳಿಸಿದೆ ಆ ಅಗತ್ಯ ದಾಖಲಾತಿಗಳು ಯಾವುವೆಂದರೆ

  1. ಆಧಾರ್ ಕಾರ್ಡ್
  2. ಕುಟುಂಬದ ಸದಸ್ಯರ ಜನನ ಪ್ರಮಾಣ ಪತ್ರ
  3. ವಿಳಾಸ ಪುರಾವೆ
  4. ಪಾಸ್ಪೋರ್ಟ್ ಸೈಜ್ ಫೋಟೋ
  5. ಆರ್‌ಸಿ ಐಡಿ.
  6. ಮೃತರ ಮರಣ ಪ್ರಮಾಣ ಪತ್ರ

ಅಪ್ಲೈ ಮಾಡಲು ಇಲ್ಲಿ ಕ್ಲಿಕ್ ಮಾಡಿ:

ಸಮಯದ ಅವಕಾಶ :

ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಲು ಅವಕಾಶ ಕಲ್ಪಿಸಲಾಗಿದ್ದು ತಿದ್ದುಪಡಿ ಮಾಡಿಸಲು ಜನರು ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲ 5:00 ಗಂಟೆಯವರೆಗೆ ಅವಕಾಶವನ್ನು ಕಲ್ಪಿಸಲಾಗಿದೆ. ತಮ್ಮ ಸೇವೆಗಳಿಗೆ ಈ ಅವಧಿಯಲ್ಲಿ ಸಲ್ಲಿಸಬಹುದು.

ಈ ಜಿಲ್ಲೆಗಳಲ್ಲಿ ರೇಷನ್ ಕಾರ್ಡ್ ತಿದ್ದುಪಡಿ ಅವಕಾಶ :

ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಲು ಕರ್ನಾಟಕ ಸರ್ಕಾರವು ಕೆಲವೊಂದು ಜಿಲ್ಲೆಗಳಿಗೆ ಮಾತ್ರ ಅವಕಾಶ ಕಲ್ಪಿಸಿದ್ದು ಮುಂದಿನ ದಿನಗಳಲ್ಲಿ ಎಲ್ಲ ಜಿಲ್ಲೆಗಳಿಗೂ ಕೂಡ ವಿಸ್ತರಿಸಿದೆ. ಈ ಕೆಳಗಿನ ಜಿಲ್ಲೆಗಳಲ್ಲಿ ಮಾತ್ರ ರೇಷನ್ ಕಾರ್ಡ್ ತಿದ್ದುಪಡಿ ಅವಕಾಶ ಕಲ್ಪಿಸಿದೆ.

  1. ಮೈಸೂರು
  2. ಬೆಂಗಳೂರಿ ನಗರ ಮತ್ತು ಗ್ರಾಮಾಂತರ
  3. ಶಿವಮೊಗ್ಗ
  4. ಬೆಳಗಾವಿ
  5. ಗುಲ್ಬರ್ಗ
  6. ಧಾರವಾಡ
  7. ಮಂಗಳೂರು
  8. ಹುಬ್ಬಳ್ಳಿ

ಹೆಚ್ಚಿನ ಮಾಹಿತಿಗಾಗಿ :

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಮತ್ತೊಮ್ಮೆ ಸಾರ್ವಜನಿಕರಿಗೆ ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಅವಕಾಶ ಕಲ್ಪಿಸಲಾಗಿದೆ ಅದರಂತೆ ಇದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬೇಕಾದರೆ ಈ ಕಸ್ಟಮರ್ ಕೇರ್ ಅಥವಾ ಆಹಾರ ಇಲಾಖೆಯ ವೆಬ್ಸೈಟ್ಗೆ ಭೇಟಿ ನೀಡಬಹುದು.

  1. ಸಹಾಯವಾಣಿ ಸಂಖ್ಯೆ : 1800-425-1550
  2. ಸೇವಾ ಕೇಂದ್ರ ವಿಳಾಸ : ತಮ್ಮ ಸ್ಥಳಿಯ ಆಹಾರ ಇಲಾಖೆ ಕಛೇರಿ
  3. ಆಹಾರ ಇಲಾಖೆ ಅಧಿಕೃತ ವೆಬ್ಸೈಟ್ :https://ahara.karnataka.gov.in/

ಹೀಗೆ ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ರಾಜ್ಯ ಸರ್ಕಾರ ಅವಕಾಶ ಕಲ್ಪಿಸಲಾಗಿದ್ದು ಇದರ ಬಗ್ಗೆ ಪ್ರತಿಯೊಬ್ಬರಿಗೂ ಕೂಡ ತಿಳಿಸುವುದರ ಮೂಲಕ ಕೆಲವೊಂದು ಜಿಲ್ಲೆಗಳಲ್ಲಿ ಮಾತ್ರ ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ತಿಳಿಸಿದೆ ಎಂಬುದರ ಬಗ್ಗೆ ಗೊತ್ತು ಪಡಿಸಿ. ಆಗ ಮಾತ್ರ ಯಾವ ಜಿಲ್ಲೆಯ ಜನರು ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಬಹುದು ಎಂದು ತಿಳಿದುಕೊಂಡಿದ್ದಾಗುತ್ತದೆ ಇದರಿಂದ ಸರ್ಕಾರದ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳಲು ಕೂಡ ಸಹಾಯವಾಗಲಿದೆ.

ಇತರೆ ಪ್ರಮುಖ ವಿಷಯಗಳು:

ಹವಾಮಾನ ಇಲಾಖೆಯಿಂದ ಮಳೆಯ ಬಗ್ಗೆ ಮುನ್ಸೂಚನೆ : ಮುಂದಿನ ಮೂರು ದಿನ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಹೊಸ ಮಾದರಿಯ PVC ಆಧಾರ್ ಕಾರ್ಡ್ ಸಿಗಲಿದೆ : ಈ ಕೂಡಲೇ ಅಪ್ಲೈ ಮಾಡಿ ಪ್ರತೀಯೊಬ್ಬರಿಗೂ ಕಡ್ಡಾಯವಾಗಿ ಬೇಕು


Leave a Comment