ನಮಸ್ಕಾರ ಕನ್ನಡಿಗರೇ, ಇವತ್ತಿನ ಲೇಖನದಲ್ಲಿ ನಿರುದ್ಯೋಗ ಯುವಕ ಯುವತಿಯರಿಗೆ ಉದ್ಯೋಗದ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. ಮೆರಿಕಲ್ ಟ್ರೇಡರ್ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ.
ಈ ಹುದ್ದೆಗಳಿಗೆ ಸಂಬಂಧಿಸಿದಂತೆ ಅರ್ಜಿಯನ್ನು ಸಲ್ಲಿಸಲು ಏನೆಲ್ಲಾ ಅರ್ಹತೆಗಳನ್ನು ಅಭ್ಯರ್ಥಿಗಳು ಹೊಂದಿರಬೇಕು ಹೇಗೆ ಅರ್ಜಿ ಸಲ್ಲಿಸಬೇಕು ಹುದ್ದೆಗಳ ಸಂಖ್ಯೆ ಎಷ್ಟು? ವಯಸ್ಸಿನ ಮಿತಿ ಪ್ರಮುಖ ದಿನಾಂಕಗಳು ಅರ್ಜಿ ಶುಲ್ಕದ ವಿವರ ಅರ್ಜಿ ಸಲ್ಲಿಸುವ ವಿಧಾನ ಆಯ್ಕೆ ವಿಧಾನ ಸೇರಿದಂತೆ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನೇಮಕಾತಿ :
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವಂತಹ 50 ಕ್ಲರ್ಕ್ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ನೇಮಕಾತಿಯನ್ನು ಹೊರಡಿಸಲಾಗಿದೆ. ಈ ಹುದ್ದೆಗಳಿಗೆ ಸಂಬಂಧಿಸಿದಂತೆ ಹುದ್ದೆಗಳ ವಿವರವನ್ನು ನೋಡುವುದಾದರೆ,
- ನೇಮಕಾತಿ ಸಂಸ್ಥೆ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
- ಖಾಲಿ ಇರುವ ಒಟ್ಟು ಹುದ್ದೆಗಳ ಸಂಖ್ಯೆ : 50
- ಅಧಿಕೃತ ವೆಬ್ಸೈಟ್ :https://sbi.co.in/
- ಉದ್ಯೋಗದ ಸ್ಥಳ : ಭಾರತದಾದ್ಯಂತ
ಖಾಲಿ ಇರುವ ಹುದ್ದೆಗಳ ಹೆಸರು ಮತ್ತು ಸಂಖ್ಯೆ :
- ಕ್ಲೆರಿಕಲ್ ಕೇಡರ್ ಜೂನಿಯರ್ ಅಸೋಸಿಯೇಟ್ : 50 ಹುದ್ದೆಗಳು
ಶೈಕ್ಷಣಿಕ ಅರ್ಹತೆ :
ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ನೇಮಕಾತಿ ಅಧಿಸೂಚನೆ ಪ್ರಕಾರ ಖಾಲಿ ಇರುವಂತಹ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅಧಿಸೂಚನೆಯ ಪ್ರಕಾರ ಶೈಕ್ಷಣಿಕ ಅರ್ಹತೆಯನ್ನು ಹೊಂದಿರಬೇಕು
- ಯಾವುದೇ ಪದವಿ ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು
ವಯಸ್ಸಿನ ಮಿತಿ :
ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳಿಗೆ ಕನಿಷ್ಠ ಮತ್ತು ಗರಿಷ್ಠ ವಯಸ್ಸಿನ ಮಿತಿಯನ್ನು ನಿಗದಿಪಡಿಸಲಾಗಿದೆ.
- ಕನಿಷ್ಠ 20 ವರ್ಷ
- ಗರಿಷ್ಟ 28 ವರ್ಷ
ವರ್ಗಗಳಿಗೆ ಅನುಸಾರವಾಗಿ ವಯಸ್ಸಿನ ಮಿತಿಯಲ್ಲಿ ಸಡಿಲಿಕೆ :
- ಓಬಿಸಿ ವರ್ಗಗಳಿಗೆ : ಮೂರು ವರ್ಷ
- ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ : ಐದು ವರ್ಷ
ಅರ್ಜಿ ಶುಲ್ಕದ ವಿವರ :
ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವನ್ನು ವರ್ಗಗಳಿಗೆ ಅನುಸಾರವಾಗಿ ನಿಗದಿಪಡಿಸಲಾಗಿದೆ.
- 750 ರೂಪಾಯಿ : ಜನರಲ್/ಓಬಿಸಿ/ಆರ್ಥಿಕವಾಗಿ ಹಿಂದುಳಿದ ವರ್ಗಗಳು
- ಶುಲ್ಕ ವಿನಾಯಿತಿ : ಎಸ್ ಸಿ /ಎಸ್ ಟಿ/ಪಿಡಬ್ಲ್ಯೂಡಿ/ಎಎಸ್ಎಂ/ಡಿ ಇ ಎಸ್ ಎಮ್
ಶುಲ್ಕ ಪಾವತಿ ವಿಧಾನ :
- ಕ್ರೆಡಿಟ್ ಕಾರ್ಡ್
- ಡೆಬಿಟ್ ಕಾರ್ಡ್
- ಇಂಟರ್ನೆಟ್ ಬ್ಯಾಂಕಿಂಗ್
ಈ ಮೇಲಿನ ವಿಧಾನಗಳ ಮೂಲಕ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿ ಮಾಡಬಹುದು.
ಅರ್ಜಿ ಸಲ್ಲಿಸುವ ಪ್ರಕ್ರಿಯೆ :
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವಂತಹ 50 ಕ್ಲರ್ಕ್ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳು ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು.
- ಮೊದಲು ಅರ್ಜಿಯನ್ನು ಸಲ್ಲಿಸಲು ಐಬಿಪಿಎಸ್ ಪೋರ್ಟಲ್ ಗೆ ಭೇಟಿ ನೀಡಿ ಅದರಲ್ಲಿ ಅಭ್ಯರ್ಥಿಗಳು ತಮ್ಮ ಹೆಸರನ್ನು ರಿಜಿಸ್ಟ್ರೇಷನ್ ಪಡೆದುಕೊಂಡ ನಂತರವೇ ಅರ್ಜಿ ಸಲ್ಲಿಸಬೇಕಾಗುತ್ತದೆ.
- ಎಸ್ ಬಿ ಐ ನ ಅಧಿಕೃತ ವೆಬ್ಸೈಟ್ : https://sbi.co.in/
- ಡಿಸೆಂಬರ್ 7ರಂದು ಕರಿಯರ್ ಸೆಕ್ಷನ್ ನಲ್ಲಿ ಬಿಡುಗಡೆ ಮಾಡಲಾಗುತ್ತದೆ ಪ್ರಿಲಿಮಿನರಿ ಪರೀಕ್ಷೆ ವಿವರ :
ಎಸ್ ಬಿ ಐ ಬ್ಯಾಂಕ್ ನಲ್ಲಿ ಅರ್ಜಿಯನ್ನು ಸಲ್ಲಿಸಿದ ನಂತರ ಅಭ್ಯರ್ಥಿಗಳಿಗೆ ಮೊದಲು ಆನ್ಲೈನ್ ಮೂಲಕ ಪ್ರಿಲಿಮಿನರಿ ಪರೀಕ್ಷೆಯನ್ನು ಮಾಡಲಾಗುತ್ತದೆ. ಪ್ರಿಮಿಲಿನರಿ ಪರೀಕ್ಷೆ ಆಬ್ಜೆಕ್ಟಿಕ್ ಮಾದರಿಯ 100 ಅಂಕಗಳದ್ದಾಗಿದ್ದು ಮೂರು ವಿಭಾಗದಲ್ಲಿ ಪ್ರಮುಖವಾಗಿ ಈ ಪರೀಕ್ಷೆ ಪ್ರಶ್ನೆಗಳನ್ನು ಹೊಂದಿರುತ್ತದೆ. ಒಂದು ಗಂಟೆಯ ಪರೀಕ್ಷೆ ಅವಧಿ ಇರುತ್ತದೆ.
ಪರೀಕ್ಷೆಯ ವಿಷಯಗಳು :
- ಇಂಗ್ಲಿಷ್ ಭಾಷೆ
- ನ್ಯೂಮರಿಕಲ್ ಎಬಿಲಿಟಿ
- ರಿಜನಿಂಗ್ ಎಬಿಲಿಟಿ
ಮೆರಿಟ್ ಪಟ್ಟಿಯ ಸಿದ್ಧತೆ :
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ರಾಜ್ಯವರು ವರ್ಗವಾರುಪಟ್ಟಿಯನ್ನು ಸಿದ್ಧಪಡಿಸುತ್ತದೆ. ಕನಿಷ್ಠ ರಹತಾ ಅಂಕಗಳನ್ನು ಸೆಕ್ಷನ್ ವಾರು ನಿಗದಿಪಡಿಸಲಾಗುವುದಿಲ್ಲ. ಕನಿಷ್ಠ ಅರ್ಹತಾ ಅಂಕಗಳನ್ನು ಅಭ್ಯರ್ಥಿಗಳಿಗೆ ಪ್ರಿಲಿಮ್ಸ್ ಪರೀಕ್ಷೆ ಹಾಗೂ ಮುಖ್ಯ ಪರೀಕ್ಷೆ ಎರಡರಲ್ಲಿಯೂ ಸಹ ಸೆಕ್ಷನ್ ವಾರು ನಿಗದಿಪಡಿಸಿರುವುದಿಲ್ಲ. 10 ಮತ್ತು 12ನೇ ತರಗತಿಯಲ್ಲಿ ಸ್ಥಳೀಯ ಭಾಷಾ ಪರೀಕ್ಷೆ ಆಯ ರಾಜ್ಯದ ಸ್ಥಳೀಯ ಭಾಷೆಯನ್ನು ಓದಿ ಪಾಸ್ ಮಾಡಿರುವ ಬಗ್ಗೆ ಪ್ರಮಾಣ ಪತ್ರವನ್ನು ಸಲ್ಲಿಸಿರುವ ಅಭ್ಯರ್ಥಿಗಳಿಗೆ ಈ ಪರೀಕ್ಷೆಯನ್ನು ಇರುವುದಿಲ್ಲ.
ಸ್ಥಳೀಯ ಭಾಷೆಗಳಲ್ಲಿ ಓದಿದ ಅಭ್ಯರ್ಥಿಗಳಿಗೆ ಈ ತರಗತಿಗಳನ್ನು ನಡೆಸಲಾಗುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತಯಾರಿಸಿದಂತಹ ತಾತ್ಕಾಲಿಕ ಪಟ್ಟಿಯಲ್ಲಿ ಹೆಸರನ್ನು ಪಡೆದಂತಹ ಅಭ್ಯರ್ಥಿಗಳಿಗೆ ಈ ಪರೀಕ್ಷೆ ಇರುತ್ತದೆ. ಈ ಪರೀಕ್ಷೆಯಲ್ಲಿ ಅರ್ಹತೆ ಪಡೆಯದವರು ನೇಮಕಾತಿಗೆ ಅರ್ಹರಾಗಿರುವುದಿಲ್ಲ.
ಪರೀಕ್ಷೆಯಲ್ಲಿ ನೆಗೆಟಿವ್ ಅಂಕಗಳು ಇರುತ್ತದೆ :
ಪರೀಕ್ಷೆಯಲ್ಲಿ ಅಭ್ಯರ್ಥಿಗಳು ನೀಡಿದಂತಹ ಉತ್ತರಗಳಿಗೆ ನೆಗೆಟಿವ್ ಅಂಕಗಳು ಕೂಡ ಇರುತ್ತದೆ. ಅಂದರೆ
1.ಪ್ರತಿ ತಪ್ಪದ ಉತ್ತರಕ್ಕೆ ಅಭ್ಯಥಿಯಗಳಿಗೆ 1/4 ಅಂಕಗಳನ್ನು ಕಳೆಯಲಾಗುತ್ತದೆ.
- ಕನಿಷ್ಠ ಅರ್ಹತೆಯ ಅಂಕಗಳನ್ನು ಕೂಡ ನಿಗದಿಪಡಿಸಿರುವುದಿಲ್ಲ.
- ಮುಖ್ಯ ಪರೀಕ್ಷೆಗೆ ಮೆರಿಟ್ ಆಧಾರದಲ್ಲಿ ಒಟ್ಟು ಅಭ್ಯರ್ಥಿಗಳ ಪೈಕಿ 1:10 ಫಸ್ಟು ಅಭ್ಯರ್ಥಿಗಳನ್ನು ಪ್ರಿಲಿಮ್ಸ್ ಪರೀಕ್ಷೆ ಅಂಕಗಳ ಆಧಾರದ ಮೇಲೆ ಶಾರ್ಟ್ ಲಿಸ್ಟ್ ಮಾಡಿ ಕರೆಯಲಾಗುತ್ತದೆ.
ಮುಖ್ಯ ಪರೀಕ್ಷೆ :
ಆನ್ಲೈನ್ ಮೂಲಕ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕ್ಲರ್ಕ್ ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳಿಗೆ ಮುಖ್ಯ ಪರೀಕ್ಷೆಯನ್ನು ಈ ಕೆಳಗಿನ ರೀತಿಯಲ್ಲಿ ಇರುತ್ತದೆ. ಒಟ್ಟು 200 ಅಂಕಗಳಿದ್ದು ಪರೀಕ್ಷೆಯನ್ನು ಎರಡು ಗಂಟೆ 40 ನಿಮಿಷಗಳವರೆಗೆ ನಡೆಸಲಾಗುತ್ತದೆ. ಪರೀಕ್ಷೆಯ ವಿಷಯಗಳು ನೋಡುವುದಾದರೆ.
- ಜನರ ಅಥವ ಫೈನಾನ್ಸ್ ಅವರ್ನೆಸ್
- ಜನರಲ್ ಇಂಗ್ಲಿಷ್
- ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್
- ರೀಸನ್ ಗೆಬಿಲಿಟಿ ಮತ್ತು ಕಂಪ್ಯೂಟರ್ ಆಪ್ಟಿಟ್ಯೂಡ್
ಈ ಎಲ್ಲಾ ವಿಷಯಗಳಿಗೆ ಸೇರಿದಂತೆ ಒಟ್ಟು 190 / 200 / 2 ಗಂಟೆ 40 ನಿಮಿಷ ಇರುತ್ತದೆ.
ಬೇರೆ ಬೇರೆ ವಿಭಾಗದ ಟೆಸ್ಟ್, ಅದರದ್ದೆಯಾದ ಪರೀಕ್ಷೆ ಸಮಯವನ್ನು ಅಳವಡಿಸಿಕೊಂಡಿರುತ್ತದೆ. ಇದರಲ್ಲಿ ತಪ್ಪದ ಉತ್ತರಕ್ಕೆ ಅಭ್ಯಥಿಯಗಳಿಗೆ 1/4 ಅಂಕಗಳನ್ನು ಕಳೆಯಲಾಗುತ್ತದೆ. ನಂತರ ಬ್ಯಾಂಕ್ ಕನಿಷ್ಠ ಅರ್ಹತಾ ಅಂಕಗಳನ್ನು ನಿರ್ಧಾರ ಮಾಡುತ್ತದೆ.
ಪ್ರಮುಖ ದಿನಾಂಕಗಳು :
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವಂತಹ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳಿಗೆ ಪ್ರಮುಖ ದಿನಾಂಕಗಳನ್ನು ನಿಗದಿಪಡಿಸಲಾಗಿದೆ.
ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳಿಗೆ ಪ್ರಮುಖ ದಿನಾಂಕಗಳೆಂದರೆ,
- ಅಪ್ಲಿಕೇಶನ್ ಸ್ವೀಕಾರ ಪ್ರಾರಂಭದ ದಿನಾಂಕ : 07-12-2024
- ಅಪ್ಲಿಕೇಶನ್ ಸಲ್ಲಿಸಲು ಕೊನೆಯ ದಿನಾಂಕ : 27-12-2024
- ಪೂರ್ವಭಾವಿ ಪರೀಕ್ಷೆಯ ದಿನಾಂಕ : ಜನವರಿ 2025
- ಪೂರ್ವ ಪರೀಕ್ಷೆ ಸಂಭಾವ್ಯ ದಿನಾಂಕ : ಫೆಬ್ರವರಿ 2025
ಹೀಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವಂತಹ ಹುದ್ದೆಗಳು ಇದೆ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಈ ಕೂಡಲೇ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಇದರಿಂದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಾರ್ಯವೃತ್ತಿಯನ್ನು ನಡೆಸಬೇಕೆಂದು ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಇದು ಹೆಚ್ಚು ಸಹಾಯವಾಗಲಿದೆ.