ನಮಸ್ಕಾರ ಕನ್ನಡಿಗರೇ, ಸರ್ಕಾರಿ ಜಮೀನನ್ನು ಕಳೆದ ಅನೇಕ ವರ್ಷಗಳ ಹಿಂದೆ ಕೃಷಿ ಚಟುವಟಿಕೆಗಳಿಗೆ ಬಳಕೆ ಮಾಡಿಕೊಂಡು ಇದೀಗ ಆ ಜಮೀನನ್ನು ಸಕ್ರಮಗೊಳಿಸಲು ರಾಜ್ಯ ಸರ್ಕಾರದಿಂದ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಸಿಹಿ ಸುದ್ದಿಯನ್ನು ನೀಡಲಾಗಿದೆ. ಜಮೀನನ್ನು ಪಡೆದುಕೊಳ್ಳಲು ಬಯಸುತ್ತಿರುವಂತಹ ರೈತರು ಇದೀಗ ಸರ್ಕಾರದ ಈ ಒಂದು ಉಪಕ್ರಮವನ್ನು ಬಳಸಿಕೊಂಡು ಸರ್ಕಾರಿ ಜಮೀನನ್ನು ತಮ್ಮ ಜಮೀನನ್ನಾಗಿ ಮಾಡಿಕೊಳ್ಳಬಹುದಾಗಿದೆ. ಹಾಗಾದರೆ ಯಾವ ಒಂದು ಯೋಜನೆಯ ಮೂಲಕ ಸರ್ಕಾರಿ ಜಮೀನನ್ನು ಕೃಷಿ ಚಟುವಟಿಕೆಗೆ ಬಳಸಿಕೊಂಡ ರೈತರು ತಮ್ಮ ಜಮೀನನಾಗಿ ಮಾಡಿಕೊಳ್ಳಬಹುದು ಹಾಗೆ ಇದಕ್ಕೆ ಏನೆಲ್ಲಾ ದಾಖಲೆಗಳನ್ನು ಹೊಂದಿರಬೇಕು ಎಂಬುದರ ಮಾಹಿತಿಯನ್ನು ಈ ಕೆಳಗಿನಂತೆ ನೋಡ ಬಹುದು.
ಬಗರ್ ಹುಕುಂ ಯೋಜನೆ :
ಸರ್ಕಾರಿ ಜಮೀನನ್ನು ವಿವಿಧ ಯೋಜನೆಗಳ ಅಡಿಯಲ್ಲಿ ಪಡೆದುಕೊಂಡು ತಮ್ಮ ತಮ್ಮ ಹೆಸರಿಗೆ ಆ ಜಮೀನನ್ನು ಮಾಡಿಕೊಳ್ಳಲು ರಾಜ್ಯ ಸರ್ಕಾರ ಬಗರ್ ಹುಕುಂ ಯೋಜನೆಯನ್ನು ಜಾರಿಗೆ ತಂದಿತ್ತು. ಬಗರ್ ಹುಕುಂ ಯೋಜನೆಯ ಅಡಿಯಲ್ಲಿ ಸರ್ಕಾರಿ ಜಮೀನನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಲು ಅರ್ಜಿಯನ್ನು ನಿಯಮಾನಸಾರ ಸಲ್ಲಿಸಿ, ಅರ್ಹತೆ ಹೊಂದಿರುವಂತಹ ಅಭ್ಯರ್ಥಿಗಳ ಅರ್ಜಿಗಳು ತಿರಸ್ಕೃತಗೊಂಡಿದ್ದಲ್ಲಿ ಇದೀಗ ರಾಜ್ಯ ಸರ್ಕಾರ ಪುನಃ ಮರು ಪರಿಶೀಲನೆಗೆ ಅವಕಾಶ ಕಲ್ಪಿಸಿದೆ. ಬಗರ್ ಹುಕುಂ ಯೋಜನೆಯ ಅಡಿ ಅರ್ಜಿ ಸಲ್ಲಿಸಿ ನಿಯಮನ್ಸರ ಅರ್ಹತೆ ಹೊಂದಿರುವ ಅಭ್ಯರ್ಥಿಗಳ ಅರ್ಜಿಗಳು ತಿರಸ್ಕೃತಗೊಂಡಿದ್ದು ಅವುಗಳ ಮರುಪರಿಶೀಲನೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಕಂದಾಯ ಸಚಿವರಾದ ಕೃಷ್ಣಭೈರೇಗೌಡ ಅವರು ಬೆಳಗಾವಿಯ ಚಳಿಗಾಲದ ವಿಧಾನ ಮಂಡಲ ಅಧಿವೇಶನದಲ್ಲಿ ತಿಳಿಸಿದರು.
ಒಟ್ಟು 2.23 ಲಕ್ಷಕ್ಕೂ ಅಧಿಕ ಅರ್ಜಿಗಳು ತಿರಸ್ಕೃತ :
ಬಗರ್ ಹುಕುಂ ಯೋಜನೆಯ ಅಡಿಯಲ್ಲಿ ಸರ್ಕಾರಿ ಜಮೀನನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಲು ರಾಜ್ಯದ ರೈತರು ಬಗರ್ ಹುಕುಂ ಯೋಜನೆಯ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಿದರು. ಸದ್ಯ ಈಗ ತಾವು ಸಾಗುವಳಿ ಮಾಡುತ್ತಿರುವ ಜಮೀನಿಗೆ ಬಗರ್ ಹುಕುಂ ಯೋಜನೆಯ ಅಡಿ ಅರ್ಹ ಫಲಾನುಭವಿ ರೈತರು ಹಕ್ಕುಪತ್ರವನ್ನು ಪಡೆಯಲು ಅರ್ಜಿಯನ್ನು ಸಲ್ಲಿಸಲು ಈ ಹಿಂದೆ ಕಂದಾಯ ಇಲಾಖೆಯಿಂದ ಅವಕಾಶ ನೀಡಲಾಗಿತ್ತು ಇದೀಗ ಕಂದಾಯ ಇಲಾಖೆಯು ಮಾಡಿದಂತಹ ಒಟ್ಟು ಸಂಗ್ರಹಣೆ ಯಾದಂತಹ ಅರ್ಜಿಯಲ್ಲಿ ರಾಜ್ಯದ್ಯಂತ ಒಟ್ಟು 2.23 ಲಕ್ಷಕ್ಕೂ ಅಧಿಕ ಅರ್ಜಿಗಳನ್ನು ತಿರಸ್ಕೃತಗೊಳಿಸಲಾಗಿದ್ದು ಇದೀಗ ಕಂದಾಯ ಇಲಾಖೆ ಅಧಿಕಾರಿಗಳು ಮಾರ್ಗಸೂಚಿಯ ಪ್ರಕಾರ ಪರಿಶೀಲನೆ ಕೈಗೊಂಡು ಈ ಕ್ರಮವನ್ನು ಮಾಡಲಿದ್ದಾರೆ.
ಅಕ್ರಮ ಸಕ್ರಮ ನಮೂನೆ 57 ತಿರಸ್ಕೃತಗೊಂಡ ಅರ್ಜಿಗಳ ಪುನರ್ ಪರಿಶೀಲನೆ :
ಅಕ್ರಮ ಸಕ್ರಮ ನಮೂನೆ 50 53 ಹಾಗೂ 53ರಲ್ಲಿ ಬಗರು ಹುಕುಂ ಸಾಗುವಳಿ ಸಕ್ರಮಗೊಳಿಸಲು ಸಲ್ಲಿಕೆಯಾದಂತಹ ಅರ್ಜಿಗಳನ್ನು ರಾಜ್ಯ ಸರ್ಕಾರ ನಿಯಮಾನುಸಾರವಾಗಿ ವಿಲೇವಾರಿ ಮಾಡುತ್ತಿದೆ. ಒಟ್ಟು ಎರಡು ಪಾಯಿಂಟ್ 23 ಲಕ್ಷಕ್ಕೂ ಅಧಿಕ ಅರ್ಜಿಗಳನ್ನು ನಮೂನೆ 57ರ ಅಡಿಯಲ್ಲಿ ಸಲ್ಲಿಕೆಯಾಗಿದ್ದು ಇದೀಗ ಆ ಅರ್ಜಿಗಳನ್ನು ರಾಜ್ಯಾದ್ಯಂತ ತಿರಸ್ಕೃತಗೊಳಿಸಲಾಗಿದೆ. ಇದರಿಂದ ಏನಾದರೂ ಒಂದು ವೇಳೆ ರೈತರು ಭಾದಿತರಾಗಿದ್ದರೆ ಇದಕ್ಕೆ ಸಂಬಂಧಿಸಿದಂತೆ ಉಪ ವಿಭಾಗ ಅಧಿಕಾರಿಗಳಿಗೆ ಮೇಲ್ಮಣಿವೆಯನ್ನು ಸಲ್ಲಿಸಬಹುದಾಗಿದೆ. ಉಪವಿಭಾಗಾಧಿಕಾರಿಗಳು ಪ್ರಕರಣಗಳನ್ನು ಮರುಪರಿಶೀಲಿಸುವಂತೆ ಸೂಚಿಸಿದರೆ ಬಗರು ಹುಕುಂ ಸಮಿತಿಗಳಲ್ಲಿ ತಿರಸ್ಕೃತಗೊಂಡಂತಹ ನಮೂನೆ 57ರ ಅರ್ಜಿಗಳನ್ನು ಪುನಃ ಪರಿಶೀಲನೆಗೆ ಪರಿಗಣಿಸಲಾಗುತ್ತದೆ ಎಂದು ಬೆಳಗಾವಿಯ ಚಳಿಗಾಲದ ವಿಧಾನ ಮಂಡಲ ಅಧಿವೇಶನದಲ್ಲಿ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ :
ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ :
ಬಗರ್ ಹುಕುಂ ಯೋಜನೆಯ ಅಡಿಯಲ್ಲಿ ಮಾರ್ಗಸೂಚಿಯ ಪ್ರಕಾರ ಹಕ್ಕುಪತ್ರವನ್ನು ಪಡೆಯಲು ಅರ್ಹ ಇರುವಂತಹ ರೈತರ ಅರ್ಜಿಗಳ ಏನಾದರೂ ತಿರಸ್ಕೃತಗೊಂಡಿದ್ದರೆ ಅವರು ಒಂದು ಬಾರಿ ತಮ್ಮ ಉಪ ವಿಭಾಗ ಅಧಿಕಾರಿಗಳ ಕಚೇರಿಯನ್ನು ಪ್ರಸ್ತುತ ಸಾಗುವಳಿ ಮಾಡುತ್ತಿರುವ ಜಮೀನಿಗೆ ರೈತರು ಸಂಬಂಧಿಸಿದಂತೆ ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ನೇರವಾಗಿ ಕಚೇರಿಯ ಸಮಯದಲ್ಲಿ ಭೇಟಿ ನೀಡಿ ನಮೂನೆ 57ರ ಅರ್ಜಿ ಮರು ಪರಿಶೀಲನೆಗೆ ಮೇಲ್ಮನವಿಯನ್ನು ಸಲ್ಲಿಸಬಹುದೆಂದು ತಿಳಿಸಲಾಗಿದೆ. ನಮೂನೆ 57 ರ ಅರ್ಜಿಯನ್ನು ತಿರಸ್ಕೃತಗೊಳಿಸಲು ಕೆಲವೊಂದು ಪ್ರಮುಖ ಕಾರಣಗಳನ್ನು ಕೂಡ ರಾಜ್ಯ ಸರ್ಕಾರ ತಿಳಿಸಿದೆ ಆ ಕಾರಣಗಳನ್ನು ನೋಡುವುದಾದರೆ,
ಅರ್ಜಿ ತಿರಸ್ಕೃತಗೊಳಿಸಲು ಪ್ರಮುಖ ಕಾರಣಗಳು :
ಬಗರ್ ಹುಕುಂ ಯೋಜನೆಯ ಅಡಿಯಲ್ಲಿ ಸರ್ಕಾರಿ ಜಮೀನನ್ನು ಸಾಗುವಳಿ ಮಾಡುತ್ತಿರುವ ರೈತರು ತಮ್ಮ ಜಮೀನನಾಗಿ ಮಾಡಿಕೊಳ್ಳಲು ಅರ್ಜಿಯನ್ನು ಸಲ್ಲಿಸಿದಂತಹ ಕೆಲವೊಂದು ರೈತರ ಅರ್ಜಿಗಳು ತಿರಸ್ಕೃತಗೊಂಡಿದೆ. ಈ ರೀತಿಯಾಗಿ ತಿರಸ್ಕಾರಗೊಳ್ಳಲು ಕೆಲವೊಂದು ಪ್ರಮುಖ ಕಾರಣಗಳನ್ನು ರಾಜ್ಯ ಸರ್ಕಾರ ತಿಳಿಸಿದೆ ಆ ಪ್ರಮುಖ ಕಾರಣಗಳು ನೋಡುವುದಾದರೆ.
- ಬಗರ್ ಹುಕುಂ ಯೋಜನೆಯ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಿದವರ ಅರ್ಜಿಯನ್ನು ತಿರಸ್ಕಾರ ಮಾಡಲು 5 ಎಕರೆಗಿಂತ ಅಧಿಕ ಜಮೀನನ್ನು ಹೊಂದಿರುವ ಕಾರಣದಿಂದ.
- ಆ ಜಮೀನಿನಲ್ಲಿ ರೈತಾಪಿ ಕೆಲಸವನ್ನು ಮಾಡದೆ ಸಾಗುವಳಿಯನ್ನು ಮಾಡದೆ ಇರುವ ಅರ್ಜಿಯನ್ನು ಕೂಡ ತಿರಸ್ಕಾರ ಮಾಡಲಾಗಿದೆ
- ಬಗರ್ ಹುಕುಂ ಯೋಜನೆಯ ಅಡಿಯಲ್ಲಿ ಅರ್ಜಿದಾರರ ವಯಸ್ಸು 18 ವರ್ಷ ಭರ್ತಿಯಾಗದೆಯೇ ಸುಮಾರು ರೂ.7000 ಅರ್ಜಿಗಳನ್ನು ತಿರಸ್ಕಾರ ಮಾಡಲಾಗಿದೆ.
- ಗುಂಡು ತೋಪು ರಸ್ತೆ ಕೆರೆ ದೇವರ ಕಾಡು ಹಾಗೂ ಸಾರ್ವಜನಿಕ ಉದ್ದೇಶಕ್ಕಾಗಿ ಮೀಸಲಾದಂತಹ ಜಮೀನಿನಲ್ಲಿ ರೈತರು ಉಳುಮೆ ಮಾಡುತ್ತಿದ್ದು ಸುಮಾರು 27452 ಅರ್ಜಿಗಳನ್ನು ತಿರಸ್ಕಾರ ಮಾಡಲಾಗಿದೆ.
- ಸುಮಾರು 33,000 ಅರ್ಜಿಗಳು ನಗರ ಮತ್ತು ಪಟ್ಟಣಗಳ ಬಫರ್ ಝೋನ್ ಅಲ್ಲ್ಲಿ ಉಳಿಮೆ ಮಾಡುತ್ತಿರುವುದು ರಿಂದ ತಿರಸ್ಕಾರ ಮಾಡಲಾಗಿದೆ.
- ಅರಣ್ಯ ಜಮೀನಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು 12,000 ಅರ್ಜಿಗಳನ್ನು ತಿರಸ್ಕಾರ ಮಾಡಿದೆ.
ಈ ಕಾರಣಗಳಿಂದಾಗಿ ರಾಜ್ಯ ಸರ್ಕಾರವು ಅರ್ಜಿಯನ್ನು ತಿರಸ್ಕರಿಸಿದೆ. ನೀವು ನಿಮ್ಮ ಅರ್ಜಿಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ ಈಗಲೇ ನಿಮ್ಮ ಅರ್ಜಿ ಯನ್ನು ಆನ್ಲೈನ್ ಸೆಂಟರ್ ಗೆ ಭೇಟಿ ನೀಡಿ ನಿಮ್ಮ ಅರ್ಜಿಯ ಸ್ಟೇಟಸ್ ಚೆಕ್ ಮಾಡಿಕೊಳ್ಳಿ.
ಒಟ್ಟಾರೆ ರಾಜ್ಯ ಸರ್ಕಾರವು ಅಕ್ರಮ ಸಕ್ರಮ ನಮೂನೆ 57 ರಲ್ಲಿ ತಿರಸ್ಕೃತಗೊಂಡಂತಹ ಅರ್ಜಿಗಳ ಪುನರ್ ಪರಿಶೀಲನೆಗೆ ರೈತರಿಗೆ ಅವಕಾಶ ಕಲ್ಪಿಸಲಾಗಿದ್ದು ರಾಜ್ಯದ ರೈತರು ಭಗರು ಹುಕುಂ ಯೋಜನೆಗೆ ಸಂಬಂಧಿಸಿ ದಂತೆ ಅರ್ಹತೆಯನ್ನು ಹೊಂದಿದ್ದರೆ ಅದರ ಪ್ರಯೋಜನವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಒಂದು ವೇಳೆ ವಿರುದ್ಧವಾಗಿದ್ದರೆ ಇದರ ಪ್ರಯೋಜನವನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ.