Today Gold Rate : ಬಂಗಾರ ಖರೀದಿಗಾರರಿಗೆ ನಿರಾಸೆ : ಮತ್ತೆ ಗಗನಕ್ಕೇರಿದ ಚಿನ್ನದ ಬೆಲೆ…! ಇವತ್ತಿನ ಬೆಲೆ ಎಷ್ಟಿದೆ ತಿಳಿದುಕೊಳ್ಳಿ ಇಲ್ಲಿದೆ ಸಂಪೂರ್ಣ ಮಾಹಿತಿ


ನಮಸ್ಕಾರ ಕನ್ನಡಿಗರೇ, ಇವತ್ತಿನ ಲೇಖನದಲ್ಲಿ ಬಂಗಾರದ ಬೆಲೆ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. ಶುಭ ಸಮಾರಂಭ ಮಾತ್ರವಲ್ಲದೆ ಕಷ್ಟದ ಸಮಯದಲ್ಲಿಯೂ ಕೂಡ ಚಿನ್ನವು ಕೈಹಿಡಿಯುತ್ತದೆ ಎಂದು ಹೇಳಿದರೆ ತಪ್ಪಾಗಲಾರದು. ಅಂತಹ ಚಿನ್ನವನ್ನು ಖರೀದಿ ಮಾಡಲು ಇದೀಗ ಸಾಕಷ್ಟು ಯೋಚಿಸಬೇಕಾಗಿದೆ ಏಕೆಂದರೆ ದಿನದಿಂದ ದಿನಕ್ಕೆ ಚಿನ್ನದ ಬೆಲೆಯು ಏರಿಕೆಯಾಗುತ್ತಿದ್ದು ಜನಸಾಮಾನ್ಯರು ಕೊಂಡುಕೊಳ್ಳುವುದು ಕಷ್ಟವಾಗುತ್ತಿದೆ. ಚಿನ್ನವನ್ನು ಖರೀದಿ ಮಾಡುವುದರ ಮೂಲಕ ಆರ್ಥಿಕ ಸಂಕಷ್ಟದ ಸಂದರ್ಭದಲ್ಲಿ ಹೆಚ್ಚಿನ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.

Gold price skyrocketed again...!
Gold price skyrocketed again…!

ದೇಶಿಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಏರಿಕೆಯಾಗುತ್ತಿದ್ದು ಆಭರಣಪ್ರಿಯರಿಗೆ ಬೇಸರವನ್ನುಂಟು ಮಾಡುತ್ತಿದೆ. ಸದ್ಯ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ದೇಶದಾದ್ಯಂತ ಮತ್ತೆ ಏರಿಕೆಯಾಗಿದ್ದು ಇದರಿಂದ ಆಭರಣ ಖರೀದಿ ಮಾಡುವವರಿಗೆ ಬುಧವಾರವೂ ಕೂಡ ಕಹಿ ಸುದ್ದಿ ಎಂದು ಹೇಳಬಹುದು. ಭಾರಿ ಮಟ್ಟದಲ್ಲಿ ಬೆಳ್ಳಿಯ ಬೆಲೆ ಏರಿಕೆ ಕಂಡಿದ್ದು ಅದರ ಜೊತೆಗೆ ಚಿನ್ನದ ಹದಿನೈದು ರೂಪಾಯಿಯಷ್ಟು ಪ್ರತಿ ಗ್ರಾಮಕ್ಕೆ ಏರಿಕೆಯಾಗಿದೆ. ಬೆಳ್ಳಿ ಮತ್ತು ಚಿನ್ನದ ಬೆಲೆ ಸೇರಿದಂತೆ, ಎಷ್ಟು ಏರಿಕೆಯಾಗಿದೆ ಎಂಬುದರ ಮಾಹಿತಿಯನ್ನು ನೋಡುವುದಾದರೆ.

ಮುಖ್ಯಾಂಶಗಳು :

ಚಿನ್ನ ಮತ್ತು ಬೆಳ್ಳಿ ಗೆ ಸಂಬಂಧಿಸಿದಂತೆ ಕೆಲವೊಂದು ಮುಖ್ಯಾಂಶಗಳನ್ನು ತಿಳಿಸಲಾಗಿದ್ದು ಆ ಪ್ರಕಾರವಾಗಿ ಚಿನ್ನ ಮತ್ತು ಬೆಳ್ಳಿಗೆ ಸಂಬಂಧಿಸಿದಂತೆ ಏನೆಲ್ಲ ಮಾಹಿತಿಗಳನ್ನು ತಿಳಿದುಕೊಳ್ಳಬಹುದು ಎಂಬುದರ ಬಗ್ಗೆ ನೋಡಬಹುದಾಗಿದೆ.

  1. ಬುದುವಾರವೂ ಕೂಡ ದೇಶದಾದ್ಯಂತ ಚಿನ್ನ ಮತ್ತು ಬೆಳೆಯ ಬೆಲೆಯಲ್ಲಿ ಏರಿಕೆ
  2. 10 ಗ್ರಾಂ ಗೆ ದೇಶದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆಯು 45,550
  3. 10 ಗ್ರಾಂ ಗೆ 24 ಕ್ಯಾರೆಟ್ ನ ಅಪರಂಜಿ ಚಿನ್ನದ ಬೆಲೆಯು 49,690
  4. ಒಂದು ಕೆಜಿ ಬೆಳ್ಳಿಯ ಬೆಲೆಯು 660 ಏರಿಕೆಯೊಂದಿಗೆ 62,560 ರೂಪಾಯಿ
  5. ಚಿನ್ನದ ದರ ಪ್ರತಿ ಗ್ರಾಮ್ ಗೆ ಬೆಂಗಳೂರಿನಲ್ಲಿ 4,555

ಆಭರಣ ಪ್ರಿಯರಿಗೆ ಕಹಿ ಸುದ್ದಿ :

ಮದುವೆ ಶುಭ ಸಮಾರಂಭಗಳಂತಹ ಕಾರ್ಯಗಳು ಒಂದರ ಹಿಂದೆ ಒಂದು ಬರುತ್ತಲೇ ಇದೆ. ಈ ಸಂದರ್ಭದಲ್ಲಿ ಸಾಕಷ್ಟು ಜನರು ಆಭರಣ ಖರೀದಿಗೆ ಮುಂದಾಗುತ್ತಿದ್ದು ಸಾಮಾನ್ಯರು ಬಂಗಾರದ ಬೆಲೆ ಇಳಿಯಲಿದೆ ಎಂದು ಕಾತುರದಿಂದ ಕಾಯುತ್ತಿದ್ದಾರೆ ಆದರೆ ಅವರಿಗೆ ಇದೀಗ ಸದ್ಯಕ್ಕೆ ರಿಲೀಫ್ ಸಿಗುವ ಸೂಚನೆ ಯಾವುದು ಕಾಣಿಸುತ್ತಿಲ್ಲ. ಜಾಗತಿಕ ದರವು ಸ್ಥಿರವಾಗಿದ್ದರೂ ಕೂಡ ಕಳೆದ ಎರಡು ವಾರಗಳಿಂದ ಭಾರತದಲ್ಲಿ ಚಿನ್ನದ ಅಧಿಕವಾಗಿಯೇ ಇದೆ. ಸದ್ಯ ಇದೀಗ ಬುಧವಾರವೂ ಕೂಡ ಕಡಿಮೆಯಾಗಲಿದೆ ಎಂದು ಕಾಯುತ್ತಿದ್ದಂತಹ ಜನಸಾಮಾನ್ಯರಿಗೆ ನಿರಾಶೆ ಉಂಟಾಗಿದೆ.

ಬುಧವಾರದ ಚಿನ್ನದ ಬೆಲೆ :

ಬುಧವಾರ ಗೋಲ್ಡ್ ಫ್ಯೂಚರ್ ಪ್ರತಿ 10 ಗ್ರಾಂ ಗೆ ಎಂ ಸಿ ಎಕ್ಸ್ ನಲ್ಲಿ 48,415 ರೂಪಾಯಿಗೆ ಅಂದರೆ ಶೇಕಡ 0.03 ರಷ್ಟು ಕುಸಿತ ಕಂಡಿದ್ದರೆ 0.3ರಷ್ಟು ಬೆಳ್ಳಿಯ ದರ ಅಂದರೆ ಬೆಳ್ಳಿಯದರ ಪ್ರತಿ ಕೆಜಿಗೆ 62,559 ರೂಪಾಯಿಗಳಿಗೆ ಏರಿಕೆಯಾಗಿದೆ. ಆದರೆ ದೇಶದ ಕೆಲವು ಭಾಗಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ಯಥ ಸ್ಥಿತಿ ಕಾಯ್ದುಕೊಂಡಿದೆ. ಬೆಳಿಗ್ಗೆ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದ್ದರು ಕೂಡ ಬಂಗಾರದ ಬೆಲೆ ತದನಂತರ ಏರಿಕೆಯ ಹಾದಿ ಹಿಡಿದಿದೆ.

22 ಕ್ಯಾರೆಟ್ ನ ಪ್ರತಿ ಗ್ರಾಮನ ಚಿನ್ನದ ಬೆಲೆಯು ಒಟ್ಟಾರೆ ದೇಶಿಯ ಮಾರುಕಟ್ಟೆಯಲ್ಲಿ 15 ರೂಪಾಯಿ ಹೆಚ್ಚಳವಾಗಿದ್ದು ಒಂದು ಗ್ರಾಂಗೆ ಚಿನ್ನದ ಬೆಲೆ 4,555ಗಳಷ್ಟಿದೆ. 150 ರೂಪಾಯಿ ಹೆಚ್ಚಳ ದೊಂದಿಗೆ 10 ಗ್ರಾಂ ನ ಚಿನ್ನದ ದರವು 45,550 ಗಳಿಗೆ ತಲುಪಿದೆ. ಇನ್ನು 10 ಗ್ರಾಂ ಗೆ 24 ಕ್ಯಾರೆಟ್ ನ ಚಿನ್ನದ ಬೆಲೆಯು 160 ರೂಪಾಯಿ ಏರಿಕೆಯೊಂದಿಗೆ 4,969 ರೂಪಾಯಿಗಳಷ್ಟಾಗಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ :

22 ಕ್ಯಾರೆಟ್ ನ ಚಿನ್ನದ ದರವು ಬೆಂಗಳೂರಿನಲ್ಲಿಯೂ ಕೂಡ ಬುಧವಾರ ರೂ.5 ಏರಿಕೆಯಾಗಿದ್ದು ಇದರಿಂದ ಪ್ರತಿ ಗ್ರಾಮಗೆ ಚಿನ್ನದ ಬೆಲೆಯು 4,555 ಗಳಾಗಿದೆ. ಪ್ರತಿಗ್ರಾಮಿಗೆ ಅಪರಂಜಿ ಚಿನ್ನದ ಬೆಲೆಯು 16 ರೂಪಾಯಿಯೊಂದಿಗೆ 4,969 ರೂಪಾಯಿಗಳಿಗೆ ತಲುಪಿದೆ. ಅಂದರೆ ಹತ್ತು ಗ್ರಾಂ ಗೆ 24 ಕ್ಯಾರೆಟ್ ನ ಚಿನ್ನದ ಬೆಲೆಯು ೪೯೬೯೦ ರೂಪಾಯಿಗಳು.

ಬೆಳ್ಳಿಯ ದರದಲ್ಲಿ ಏರಿಕೆ :

ಬುಧವಾರವೂ ಕೂಡ ದೇಶದಲ್ಲಿ ಬೆಳ್ಳಿಯ ಬೆಲೆ ಏರಿಕೆ ಕಂಡಿದೆ. 6,60ಗಳಷ್ಟು ಪ್ರತಿ ಕೆಜಿ ಬೆಳೆಯ ದರ ಹೆಚ್ಚಳವಾಗಿದೆ ಪ್ರಸ್ತುತ ಒಂದು ಕೆಜಿ ಬೆಳ್ಳಿಯ ಬೆಲೆ 62560ಗಳಷ್ಟಿದ್ದು, ಬೆಳ್ಳಿಯು ಬೆಂಗಳೂರಿನಲ್ಲಿ ಭಾರಿ ದುಬಾರಿಯಾಗಿದೆ ಎಂದು ಹೇಳಬಹುದು. 1,700 ರೂಪಾಯಿಗಳಷ್ಟು ಕೆಜಿ ಬೆಳ್ಳಿಯ ದರ ಇದ್ದು ಒಂದು ಕೆಜಿಗೆ 66,800 ಅಷ್ಟು ಬೆಲೆ ಇದೆ. 660ಗಳಷ್ಟು ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಹೆಚ್ಚಳವಾಗಿದ್ದು ಪ್ರತಿ ಕೆಜಿಗೆ ರಾಜಧಾನಿ ದೆಹಲಿಯಲ್ಲಿ 62,560 ರೂಪಾಯಿಗಳ ಅಷ್ಟಿದೆ. ಬೆಂಗಳೂರಿನಂತಿಯೇ ಬೆಳ್ಳಿಯ ಬೆಲೆಯೂ ಚೆನ್ನೈ ಮತ್ತು ಹೈದರಾಬಾದ್ಗಳಲ್ಲಿಯೂ ಕೂಡ ಏರಿಕೆ ಕಂಡಿದೆ.

ದೇಶದ ವಿವಿಧ ಪ್ರದೇಶಗಳಲ್ಲಿ ಚಿನ್ನದ ದರ :

ಭಾರತದ ವಿವಿಧ ದೇಶಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂಬುದರ ಮಾಹಿತಿಯನ್ನು ನೋಡುವುದಾದರೆ.

22 ಕ್ಯಾರೆಟ್ ನ ಚಿನ್ನದ ಬೆಲೆ :

  1. ಬೆಂಗಳೂರು : 45,550
  2. ಚೆನ್ನೈ : 45,780
  3. ದೆಹಲಿ : 45,410
  4. ಹೈದರಾಬಾದ್ : 45,550
  5. ಕೊಲ್ಕತ್ತಾ : 45,550
  6. ಮಂಗಳೂರು : 45,550
  7. ಮುಂಬೈ : 45,550
  8. ಮೈಸೂರು : 45,550

24 ಕ್ಯಾರೆಟ್ ನ ಚಿನ್ನದ ಬೆಲೆ :

  1. ಬೆಂಗಳೂರು : ರೂ. 49,690
  2. ಚೆನ್ನೈ : 49,950
  3. ದೆಹಲಿ : ರೂ. 49,540
  4. ಹೈದರಾಬಾದ್ : 49,690
  5. ಕೊಲ್ಕತ್ತಾ : 49,540
  6. ಮಂಗಳೂರು : 49,690
  7. ಮುಂಬೈ : 49,690
  8. ಮೈಸೂರು : 49,690

ಹೀಗೆ ದಿನ ದಿನಕ್ಕೆ ಚಿನ್ನ ಮತ್ತು ಬೆಳಿಯ ಬೆಲೆಯಲ್ಲಿ ಏರಿಕೆಯಾಗುತ್ತಿದ್ದು ಆಭರಣ ಪ್ರಿಯರಿಗೆ ಸಾಕಷ್ಟು ತೊಂದರೆ ಉಂಟಾಗುತ್ತಿದೆ ಎಂದು ಹೇಳಬಹುದು. ಒಟ್ಟರೆ ಜನಸಾಮಾನ್ಯರು ಯಾವಾಗ ಚಿನ್ನ ಮತ್ತು ಬೆಳ್ಳಿಯ ಬೆಲೆ ಕಡಿಮೆಯಾಗಲಿದೆ ಎಂದು ಕಾದು ಕುಳಿತಿದ್ದಾರೆ. ಮುಂದಿನ ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಕಡಿಮೆಯಾಗದೆಯೇ ಇಲ್ಲವೇ ಎಂಬುದನ್ನು ನೋಡಬೇಕಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಕಡಿಮೆಯಾಗುವುದು ಸಂಶಯವಾಗಿದೆ.

ಚಿನ್ನ ಮತ್ತು ಬೆಳ್ಳಿಯ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದರಿಂದ ಆಭರಣ ಖರೀದಿ ಮಾಡಲು ಜನಸಾಮಾನ್ಯರಿಗೆ ಕಷ್ಟವಾಗುತ್ತಿದೆ. ಆದರೆ ಚಿನ್ನ ಮತ್ತು ಬೆಳ್ಳಿಯನ್ನು ಖರೀದಿ ಮಾಡಿದರೆ ಕಷ್ಟದ ಸಂದರ್ಭದಲ್ಲಿ ಇದು ಹೆಚ್ಚು ಸಹಕಾರಿಯಾಗಲಿದೆ ಎಂಬುದು ಎಲ್ಲರ ಅಭಿಪ್ರಾಯವಾಗಿದೆ ಅಲ್ಲದೆ ಅಂತೆಯೇ ಇದು ಕಷ್ಟದ ಸಂದರ್ಭದಲ್ಲಿ ಉಪಯೋಗವಾಗುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಕೂಡ ಚಿನ್ನ ಮತ್ತು ಬೆಳ್ಳಿಯನ್ನು ಖರೀದಿ ಮಾಡಲು ಯೋಚಿಸುತ್ತಿರುತ್ತಾರೆ.

ಆದರೆ ಇಂದಿನ ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿಯನ್ನು ಖರೀದಿ ಮಾಡುವುದು ಕಷ್ಟಕರವಾಗಿದೆ. ಮುಂದಿನ ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಕಡಿಮೆಯಾಗುತ್ತದೆ ಇಲ್ಲವೇ, ಇನ್ನು ಏರಿಕೆಯಾಗುತ್ತಾ ಹೋಗುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ. ಇವತ್ತಿನ ಲೇಖನದಲ್ಲಿ ಬುಧವಾರ ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟಿದೆ ಎಂಬುದರ ಮಾಹಿತಿಯನ್ನು ತಿಳಿಸಲಾಗಿದ್ದು ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ತಿಳಿಸಿ ಇದರಿಂದ ಅವರೇನಾದರೂ ಚಿನ್ನ ಮತ್ತು ಬೆಳ್ಳಿಯನ್ನು ಖರೀದಿ ಮಾಡಲು ಯೋಚಿಸುತ್ತಿದ್ದರೆ ಇದು ಸಹಕಾರಿಯಾಗಲಿದೆ.

ಇತರೆ ಪ್ರಮುಖ ವಿಷಯಗಳು :

Free Sewing Machine : ಸರ್ಕಾರದಿಂದ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ : ಅರ್ಜಿ ಸಲ್ಲಿಸಿ ಇಲ್ಲಿದೆ ಡೈರೆಕ್ಟ್ ಲಿಂಕ್ Airtel : ಏರ್ಟೆಲ್ ಇಂದ ಬಂತು ಬಂಪರ್ ಆಫರ್ : ಕೇವಲ 99ರೂ ಗೆ ಡೇಟಾ ರಿಚಾರ್ಜ್ ಪ್ಲಾನ್ ಲಾಂಚ್…!


Leave a Comment