ನಮಸ್ಕಾರ ಸ್ನೇಹಿತರೆ ಪಡಿತರ ಚೀಟಿಯನ್ನು ಆಧಾರ್ ಕಾರ್ಡ್ ನೊಂದಿಗೆ ಹೇಗೆ ಲಿಂಕ್ ಮಾಡಬೇಕು ಎಂಬುದರ ಮಾಹಿತಿಯನ್ನು ಇವತ್ತಿನ ಲೇಖನದಲ್ಲಿ ತಿಳಿಸಲಾಗುತ್ತಿದ್ದು ಆಧಾರ್ ಕಾರ್ಡ್ ಮೂಲಕ ಏನೆಲ್ಲ ಪ್ರಯೋಜನಗಳು ಲಭ್ಯವಿವೆ ಹಾಗೂ ರೇಷನ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡದಿದ್ದರೆ ಏನೆಲ್ಲಾ ಆಗಲಿದೆ ಎಂಬುದರ ಬಗ್ಗೆಯೂ ಕೂಡ ತಿಳಿದುಕೊಳ್ಳಬಹುದು.
ಸದ್ಯದೀಗ ಸರ್ಕಾರ ಆಧಾರ್ ಕಾರ್ಡ್ ಹಾಗೂ ರೇಷನ್ ಕಾರ್ಡ್ ಲಿಂಕ್ ಮಾಡುವುದು, ಕಡ್ಡಾಯಗೊಳಿಸಲಾಗಿದ್ದು ಈಗಾಗಲೇ ನಿಮ್ಮ ಆಧಾರ್ ಕಾರ್ಡ್ ರೇಷನ್ ಕಾರ್ಡ್ ನೊಂದಿಗೆ ಲಿಂಕ್ ಆಗಿದೆಯೇ ಇಲ್ಲವೇ, ಲಿಂಕ್ ಆಗಿರುವುದರ ಸ್ಟೇಟಸ್ ಅನ್ನು ಹೇಗೆ ಚೆಕ್ ಮಾಡಬಹುದು ಆಧಾರ್ ಕಾರ್ಡ್ ರೇಷನ್ ಕಾರ್ಡ್ ಲಿಂಕ್ ಮಾಡಿಸುವುದು ಹೇಗೆ ಎಂಬುದರ ಪೂರ್ಣ ಮಾಹಿತಿಯನ್ನು ಇವತ್ತಿನ ಲೇಖನದಲ್ಲಿ ತಿಳಿಸಲಾಗುತ್ತಿದೆ. ಆಧಾರ್ ಕಾರ್ಡ್ ನೊಂದಿಗೆ ರೇಷನ್ ಕಾರ್ಡ್ ಅನ್ನು ಏಕೆ ಲಿಂಕ್ ಮಾಡಿಸಬೇಕು ಎಂಬುದರ ಬಗ್ಗೆಯೂ ಕೂಡ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ.
ರೇಷನ್ ಕಾರ್ಡ್ ನೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸುವುದು ಏಕೆ ಮುಖ್ಯವಾಗಿದೆ ಹಾಗೂ ಯಾವ ರೀತಿಯ ಆಫ್ಲೈನ್ ಮತ್ತು ಆನ್ಲೈನ್ ಮೂಲಕ ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿಸಬೇಕು ಎಂಬುದರ ಬಗ್ಗೆಯೂ ಕೂಡ ಸ್ಪಷ್ಟವಾಗಿ ಮಾಹಿತಿಯನ್ನು ತಿಳಿಸಲಾಗಿದೆ.
ರೇಷನ್ ಕಾರ್ಡ್ ನೊಂದಿಗೆ ಆಧಾರ್ ಕಾರ್ಡ್ ಲಿಂಕ್ :
ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ನಮ್ಮ ಭಾರತ ದೇಶದ ಅತ್ಯುನ್ನತ ದಾಖಲೆಗಳಾಗಿದ್ದು ಕೇವಲ ವಿಳಾಸ ಪುರಾವೆ ಆಗಿರದೆ ದೈನಂದಿನ ಚಟುವಟಿಕೆಗಳಲ್ಲಿಯೂ ಮಹತ್ವದ ಪಾತ್ರವನ್ನು ವಹಿಸುತ್ತಿವೆ ಎಂದು ಹೇಳಬಹುದು. ಆಧಾರ್ ಕಾರ್ಡ್ ಮೂಲಕ ತಮ್ಮ ವಿಳಾಸ ಪುರಾವೆಯನ್ನು ನಿರೂಪಿಸಬಹುದು ರೇಷನ್ ಕಾರ್ಡ್ ಮೂಲಕ ತಮ್ಮ ದೈನಂದಿನ ಆಹಾರ ಧಾನ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಬಹುದು.
ಪಡಿತರ ಚೀಟಿ ವಿಚಾರದಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಕಟ್ಟುನಿಟ್ಟಿನ ಕ್ರಮಗಳನ್ನು ಹಾಗೂ ನಿಯಮಗಳನ್ನು ಜಾರಿಗೊಳಿಸಿದೆ. ಉಚಿತ ಅಂತ್ಯೋದಯ ಅನ್ನ ಯೋಜನೆಯನ್ನು ಪಡೆಯಲು ಪಡಿತರ ಚೀಟಿಯನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಿಸುವುದು ಕಡ್ಡಾಯಗೊಳಿಸಲಾಗಿದೆ. ಜೂನ್ 30 ಆಧಾರ್ ಕಾರ್ಡ್ ನೊಂದಿಗೆ ಪಡಿತರ ಚೀಟಿಯನ್ನು ಲಿಂಕ್ ಮಾಡಿಸುವ ಪ್ರಕ್ರಿಯೆ ಪೂರ್ಣಗೊಳಿಸಲು ಕೊನೆಯ ದಿನಾಂಕವಾಗಿದ್ದು ಇದೀಗ ಸೆಪ್ಟೆಂಬರ್ 30ರವರೆಗೆ ಈ ಒಂದು ಗಡುವನ್ನು ವಿಸ್ತರಿಸಲಾಗಿದೆ.
ವ್ಯಕ್ತಿಗಳು ಬಹು ಪಡಿತರ ಚೀಟಿಗಳನ್ನು ಪಡೆಯುವ ನಿರ್ದರ್ಶನಗಳಿಗಾಗಿ ಆಧಾರ್ ಕಾರ್ಡ್ ಅನ್ನು ಪಡಿತರ ಚೀಟಿಗೆ ಲಿಂಕ್ ಮಾಡುವ ಮೂಲಕ ಸರ್ಕಾರವು ಇದಕ್ಕೆ ಕಡಿವಾಣ ಹಾಕಲು ಮುಂದಾಗಿದೆ. ಪಡಿತರ ಮಿತಿಗಿಂತ ಅವರ ಆದಾಯವು ಹೆಚ್ಚಿರುವುದರಿಂದ ಪಡಿತರಕ್ಕೆ ಅಂತಹ ವ್ಯಕ್ತಿಗಳು ಅನರ್ಹರಾಗಿರುವ ಕಾರಣದಿಂದ ಅಂತಹ ವ್ಯಕ್ತಿಗಳನ್ನು ಪಡಿತರ ಚೀಟಿಯನ್ನು ಪಡೆದುಕೊಳ್ಳಲು ತಡೆಯಲು ಸರ್ಕಾರಕ್ಕೆ ಸಾಧ್ಯವಾಗುತ್ತದೆ ಎಂದು ಹೇಳಬಹುದು.
ಪಡಿತರ ಚೀಟಿಯನ್ನು ಆಧಾರ್ ಕಾರ್ಡಿಗೆ ಏಕೆ ಲಿಂಕ್ ಮಾಡಿಸಬೇಕು :
ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸುತ್ತಿವೆ. ಸದ್ಯ ಇದೀಗ ಕರ್ನಾಟಕ ಸರ್ಕಾರ ಜಾರಿಗೆ ತಂದಿರುವಂತಹ ಅನ್ನಭಾಗ್ಯ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಲು ಅಭ್ಯರ್ಥಿಗಳಿಗೆ ಆಧಾರ್ ಕಾರ್ಡ್ ನೊಂದಿಗೆ ಪಡಿತರ ಚೀಟಿಯನ್ನು ಲಿಂಕ್ ಮಾಡಿಸಬೇಕೆಂಬುದು ಕಡ್ಡಾಯಗೊಳಿಸಲಾಗಿದೆ.
ಆಧಾರ್ ಕಾರ್ಡ್ ನೊಂದಿಗೆ ರೇಷನ್ ಕಾರ್ಡ್ ಅನ್ನು ಲಿಂಕ್ ಮಾಡಿಸುವ ಪ್ರಕ್ರಿಯೆ ಜೂನ್ 30 ಕೊನೆಯ ದಿನಾಂಕವಾಗಿತ್ತು ಆದರೆ ಇದೀಗ ಈ ದಿನಾಂಕವನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಲಾಗಿದೆ. ಅನರ್ಹ ವ್ಯಕ್ತಿಗಳು ಪಡಿತರ ಚೀಟಿಯನ್ನು ಪಡೆದುಕೊಂಡಿರುವುದು ಸರ್ಕಾರದ ಗಮನಕ್ಕೆ ಬಂದಿರುವ ಕಾರಣದಿಂದಾಗಿ ಅಂತಹ ವ್ಯಕ್ತಿಗಳನ್ನು ತಡೆಗಟ್ಟುವ ಉದ್ದೇಶದಿಂದ ಆಧಾರ್ ಕಾರ್ಡ್ ಅನ್ನು ಪಡಿತರ ಚೀಟಿಯೊಂದಿಗೆ ಲಿಂಕ್ ಮಾಡಿಸುವ ಕಾರ್ಯವನ್ನು ಕೈಗೊಂಡಿದೆ. ಇದರ ಮೂಲಕ ಅಕ್ರಮವಾಗಿ ಪಡಿತರ ಚೀಟಿಯನ್ನು ಪಡೆದುಕೊಳ್ಳುತ್ತಿರುವವರಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ.
ಆನ್ಲೈನ್ ಮೂಲಕ ಲಿಂಕ್ ಮಾಡುವ ವಿಧಾನ :
ಆಧಾರ್ ಕಾರ್ಡ್ ನೊಂದಿಗೆ ರೇಷನ್ ಕಾರ್ಡ್ ಅನ್ನು ಆನ್ಲೈನ್ ಮೂಲಕ ಲಿಂಕ್ ಮಾಡಿಸಲು ಸರ್ಕಾರ ಅವಕಾಶ ಕಲ್ಪಿಸಲಾಗಿದೆ ಹಾಗೂ ಸೆಪ್ಟೆಂಬರ್ 30ರವರೆಗೆ ಕೊನೆಯ ದಿನಾಂಕವನ್ನು ನಿಗದಿಪಡಿಸಲಾಗಿದೆ. ಆನ್ಲೈನ್ ಮೂಲಕ ಆಧಾರ್ ಕಾರ್ಡ್ ನೊಂದಿಗೆ ರೇಷನ್ ಕಾರ್ಡ್ ಅನ್ನು ಲಿಂಕ್ ಮಾಡಿಸಲು ಕೆಲವೊಂದು ಕ್ರಮಗಳನ್ನು ಕೈಗೊಳ್ಳಬೇಕು.
- ಆಧಾರ್ ಕಾರ್ಡ್ ನೊಂದಿಗೆ ರೇಷನ್ ಕಾರ್ಡನ್ನು ಲಿಂಕ್ ಮಾಡಿಸಲು ಮೊದಲು ಅಭ್ಯರ್ಥಿಗಳು ಆಹಾರ ಸರಬರಾಜು ಇಲಾಖೆ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು.
- ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿದ ನಂತರ ಅದರಲ್ಲಿ ಈ ಸೇವೆಗಳು ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ ಈ ಪಡಿತರ ಚೀಟಿಯಲ್ಲಿ ಯುಐಡಿ ಲಿಂಕ್ ಮಾಡಿ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಬೇಕು.
- ತದನಂತರ ಅಭ್ಯರ್ಥಿಗಳು ತಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡು ಯುಐಡಿ ಲಿಂಕಿಂಗ್ ಫಾರ್ ಆರ್ ಸಿ ಮೆಂಬರ್ಸ್ ಎಂಬುದರ ಮೇಲೆ ಕ್ಲಿಕ್ ಮಾಡಬೇಕು.
- ನಂತರ ಅಭ್ಯರ್ಥಿಗಳು ತಮ್ಮ ಆಧಾರ್ ಕಾರ್ಡ್ ನಂಬರ್ ಅನ್ನು ನಮೂದಿಸಿ ಕೋ ಎಂಬುದರ ಆಯ್ಕೆಯ ಮೇಲೆ ಒತ್ತಬೇಕು.
- ಮುಂದುವರೆದು ನೊಂದಾಯಿಸಿದಂತಹ ಮೊಬೈಲ್ ನಂಬರ್ ಗೆ ಓಟಿಪಿಯನ್ನು ಕಳುಹಿಸಿಕೊಳ್ಳಬೇಕು ನಂತರ ಗೋ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು.
- ರೇಷನ್ ಕಾರ್ಡ್ ಅನ್ನು ನಮೂದಿಸಿದ ನಂತರ ಸಬ್ಮಿಟ್ ಎಂಬುದರ ಮೇಲೆ ಕ್ಲಿಕ್ ಮಾಡಬೇಕು.
- ಹೀಗೆ ಈ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ನಿಮಗೆ ಕೊನೆಯದಾಗಿ ಲಿಂಕ್ ಆಗಿರುವಂತಹ ನೋಟಿಫಿಕೇಶನ್ ಬರುತ್ತದೆ.
ಈ ರೀತಿ ಸುಲಭವಾಗಿ ಆನ್ಲೈನ್ ಮೂಲಕ ಆಧಾರ್ ಕಾರ್ಡ್ ನೊಂದಿಗೆ ರೇಷನ್ ಕಾರ್ಡ್ ಅನ್ನು ಲಿಂಕ್ ಮಾಡಿಸಬಹುದಾಗಿದೆ. ಅಧಿಕೃತ ಜಾಲತಾಣ
ಆಫ್ ಲೈನ್ ಮೂಲಕ ಲಿಂಕ್ ಮಾಡುವ ವಿಧಾನ :
ಆಫ್ ಲೈನ್ ಮೂಲಕ ಆಧಾರ್ ಕಾರ್ಡ್ ಅನ್ನು ರೇಷನ್ ಕಾರ್ಡ್ ನೊಂದಿಗೆ ಲಿಂಕ್ ಮಾಡಿಸಲು ಕೂಡ ಸರ್ಕಾರ ಅವಕಾಶ ಕಲ್ಪಿಸಲಾಗಿದೆ. ಅಭ್ಯರ್ಥಿಗಳು ಆಫ್ಲೈನ್ ಮೂಲಕ ಲಿಂಕ್ ಮಾಡಲು ಆಧಾರ್ ಕಾರ್ಡ್ ಮತ್ತು ಕುಟುಂಬದ ಸದಸ್ಯರ ಪಡಿತರ ಚೀಟಿಯ ಜೆರಾಕ್ಸ್ ಪ್ರತಿಯನ್ನು ತೆಗೆದುಕೊಳ್ಳಬೇಕು
ಪ್ರತಿಯನ್ನು ತೆಗೆದುಕೊಂಡ ನಂತರ ಆಧಾರ್ ಕಾರ್ಡ್ ಲಿಂಕ್ ಆಗಿರುವಂತಹ ಬ್ಯಾಂಕ್ ಖಾತೆಗೆ ಬ್ಯಾಂಕ್ ಖಾತೆಯ ಪಾಸ್ ಬುಕ್ ನ ಜೆರಾಕ್ಸ್ ಅನ್ನು ಕೂಡ ಪಡೆದುಕೊಳ್ಳಬೇಕು. ಇದರ ಜೊತೆಗೆ ಪಾಸ್ಪೋರ್ಟ್ ಸೈಜ್ ಫೋಟೋ ಅನ್ನು ಆಹಾರ ಸರಬರಾಜು ಇಲಾಖೆಗೆ ನೀಡಬೇಕು.
ಎಲ್ಲ ಪ್ರಕ್ರಿಯೆಗಳು ಮುಗಿದ ನಂತರ ಆಹಾರ ಸರಬರಾಜು ಇಲಾಖೆಯಲ್ಲಿ ಆಧಾರ್ ಕಾರ್ಡ್ ಆಧಾರದ ಮೇಲೆ ತಮ್ಮ ಬೆರಳಚ್ಚುಗಳನ್ನು ನೀಡಬೇಕಾಗುತ್ತದೆ. ಎಲ್ಲ ದಾಖಲೆಗಳನ್ನು ಇಲಾಖೆಯಲ್ಲಿ ತಲುಪಿದ್ದಲ್ಲಿ ಇಮೇಲ್ ಅಥವಾ ಎಸ್ಎಂಎಸ್ ನಲ್ಲಿ ನಿಮ್ಮ ಮೊಬೈಲ್ ನಂಬರ್ ಗೆ ಸಂದೇಶ ಬರುತ್ತದೆ. ಹೀಗೆ ಆಫ್ಲೈನ್ ಮೂಲಕ ರೇಷನ್ ಕಾರ್ಡ್ ನೊಂದಿಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿಸಲು ಸರ್ಕಾರ ಅವಕಾಶ ಕಲ್ಪಿಸಿದೆ.
ಒಟ್ಟಾರೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತರುತ್ತಿರುವ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳಬೇಕಾದರೆ ಅಭ್ಯರ್ಥಿಗಳು ರೇಷನ್ ಕಾರ್ಡ್ ನೊಂದಿಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿಸಬೇಕು ಆಗ ಮಾತ್ರ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.
ಹಾಗಾಗಿ ನಿಮಗೆ ತಿಳಿದಿರುವ ಪ್ರತಿಯೊಬ್ಬರಿಗೂ ಕೂಡ ಆಧಾರ್ ಕಾರ್ಡ್ ನೊಂದಿಗೆ ರೇಷನ್ ಕಾರ್ಡ್ ಅನ್ನು ಲಿಂಕ್ ಮಾಡಿಸಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿಸುವುದರ ಮೂಲಕ ಸರ್ಕಾರದಿಂದ ಜಾರಿಯಾಗುವ ಎಲ್ಲ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳಬಹುದೆಂದು ತಿಳಿಸಿ. ಪ್ರಮುಖ ಲಿಂಕ್ ಕ್ಲಿಕ್ ಮಾಡಿ : https://ahara.kar.nic.in/Home/Eservices
ಇತರೆ ಪ್ರಮುಖ ವಿಷಯಗಳು :
- ಗೃಹಲಕ್ಷ್ಮಿ ಯೋಜನೆಯ 15ನೇ ಕಂತಿನ ಹಣ ಬಿಡುಗಡೆ : ನಿಮಗೂ ಬಂದಿದ್ಯ…!ಇಲ್ಲಿದೆ ಸಂಪೂರ್ಣ ಮಾಹಿತಿ ತಕ್ಷಣ ತಿಳಿದುಕೊಳ್ಳಿ
- ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ 19ನೇ ಕಂತಿನ ಹಣ ಬಿಡುಗಡೆ : ನಿಮಗೂ ಬಂದಿದ್ಯ ಚೆಕ್ ಮಾಡಿ ಇಲ್ಲಿದೆ ಸಂಪೂರ್ಣ ಮಾಹಿತಿ