ನಮಸ್ಕಾರ ಕನ್ನಡಿಗರೇ, ರಾಜ್ಯ ಸರ್ಕಾರವು ತನ್ನ ರಾಜ್ಯದ ಜನತೆಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಸದ್ಯ ಈಗ ಗ್ರಾಮೀಣ ಭಾಗದ ಜನರ ಆರೋಗ್ಯ ಭದ್ರತೆಯನ್ನು ದುಡಪಡಿಸುವ ಯಶಸ್ವಿನಿ ಆರೋಗ್ಯ ಯೋಜನೆಗೆ ಕರ್ನಾಟಕ ಸರ್ಕಾರವು ಕೊನೆಯ ದಿನಾಂಕವನ್ನು ನಿಗದಿಪಡಿಸಿದೆ. ಆ ದಿನಾಂಕದ ಒಳಗಾಗಿ ಅಭ್ಯರ್ಥಿಗಳು ಯಶಸ್ವಿನಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು.ಹಾಗಾದರೆ ಯಶಸ್ವಿನಿ ಯೋಜನೆಗೆ ಯಾರೆಲ್ಲಾ ಅರ್ಹತೆಯನ್ನು ಹೊಂದಿದ್ದಾರೆ , ನೋಂದಣಿಯ ಅರ್ಹತೆಯನ್ನು ಪರಿಗಣಿಸುವ ಸಂದರ್ಭದಲ್ಲಿ ಯಾವೆಲ್ಲ ಅಂಶಗಳನ್ನು ಸಹಕಾರ ಇಲಾಖೆ ವಿವರಿಸಿದೆ ಹಾಗೂ ಈ ಒಂದು ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದರ ಮಾಹಿತಿಯನ್ನು ನೋಡುವುದಾದರೆ.
ಯಶಸ್ವಿನಿ ಯೋಜನೆ :
ಕರ್ನಾಟಕ ಸರ್ಕಾರವು ಕರ್ನಾಟಕ ರಾಜ್ಯದ ಗ್ರಾಮೀಣ ಭಾಗದ ಜನರ ಆರೋಗ್ಯ ಭದ್ರತೆಯನ್ನು ದೃಡಿಪಡಿಸುವ ಯೋಜನೆ ಎಂದರೆ ಅದು ಯಶಸ್ವಿನಿ ಯೋಜನೆಯಾಗಿದೆ. ಈ ಒಂದು ಯೋಜನೆಗೆ ನೊಂದಣಿ ಪ್ರಕ್ರಿಯೆಯು ಡಿಸೆಂಬರ್ 31 2024ರ ಒಳಗಾಗಿ ತಿಳಿಸಿದ್ದು ಸಹಕಾರ ಇಲಾಖೆಯ ಈ ಒಂದು ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕೆಂದು ಪ್ರಕಟಿಸಿದೆ. ಅರ್ಹ ಸಹಕಾರ ಸಂಘದ ಸದಸ್ಯರು ಮಾತ್ರ 2025 ಮತ್ತು 26 ನೇ ಸಾಲಿಗೆ ಈ ಒಂದು ಯೋಜನೆಗಾಗಿ ನೋಂದಾಯಿಸಿಕೊಳ್ಳಲು ಅವಕಾಶವನ್ನು ಹೊಂದಿದ್ದಾರೆ.
ಯಶಸ್ವಿನಿ ಯೋಜನೆಗೆ ಅರ್ಹತೆಗಳು :
ಕರ್ನಾಟಕ ಸರ್ಕಾರ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಕೆಲವೊಂದು ಅರ್ಹತೆಗಳನ್ನು ಅಭ್ಯರ್ಥಿಗಳು ಹೊಂದಿರಬೇಕು ಆಗ ಮಾತ್ರ ಯೋಜನೆಯ ಸೌಲಭ್ಯ ದೊರೆಯಲಿದೆ. ಅವುಗಳೆಂದರೆ.
- ನಿರ್ವಣೆಯಲ್ಲಿರುವಂತಹ ಸಾಕಾರ ಸಂಘಗಳ ಸದಸ್ಯರು ಯಶಸ್ವಿನಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
- ಒಂದು ವೇಳೆ ಸಮರ್ಪಿಯಾದ ಅಥವಾ ನಿಷ್ಕ್ರಿಯ ಸ್ಥಿತಿಯಲ್ಲಿರುವಂತಹ ಸಹಕಾರ ಸಂಘಗಳ ಸದಸ್ಯರು ಹಾಗೂ ನೌಕರ ಸಹಕಾರ ಸಂಘಗಳ ಸದಸ್ಯರು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುವುದಿಲ್ಲ.
- ಕುಟುಂಬದ ಯಾವುದೇ ಸದಸ್ಯ ಸರ್ಕಾರಿ ನೌಕರರಾಗಿದ್ದಾರೆ ಅವರಿಗೆ ಯಶಸ್ವಿನಿ ಯೋಜನೆಯ ಪ್ರಯೋಜನ ಸಿಗುವುದಿಲ್ಲ.
- ಈಗಾಗಲೇ ಅಭ್ಯರ್ಥಿಗಳು ಬೇರೆ ಒಂದು ಆರೋಗ್ಯ ಯೋಜನೆಯ ಅಡಿಯಲ್ಲಿ ಸೌಲಭ್ಯವನ್ನು ಪಡೆಯುತ್ತಿದ್ದರೆ ಅವರು ಯಶಸ್ವಿನಿ ಯೋಜನೆಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಸಾಧ್ಯವಿಲ್ಲ.
ಹೀಗೆ ಕೆಲವೊಂದು ಅರ್ಹತೆಗಳನ್ನು ಅಭ್ಯರ್ಥಿಗಳಿಗೆ ನಿಗದಿಪಡಿಸಲಾಗಿದೆ.
ಶುಲ್ಕದ ವಿವರಗಳು :
ಕರ್ನಾಟಕ ಸರ್ಕಾರದ ಯಶಸ್ವಿನಿ ಯೋಜನೆಯ ಅರ್ಜಿಯನ್ನು ಸಲ್ಲಿಸುವ ಸಂದರ್ಭದಲ್ಲಿ ಅಭ್ಯರ್ಥಿಗಳಿಗೆ ನೊಂದಣಿ ಶುಲ್ಕವನ್ನು ನಿಗದಿಪಡಿಸಲಾಗಿದೆ. ನೀನೊಂದನೇ ಶುಲ್ಕವನ್ನು ಗ್ರಾಮೀಣ ಮತ್ತು ನಗರ ಪ್ರದೇಶದ ಕುಟುಂಬಗಳಿಗೆ ವಿಭಿನ್ನ ರೀತಿಯಲ್ಲಿ ನಿಗದಿಪಡಿಸಲಾಗಿದ್ದು ಸದಸ್ಯತ್ವವನ್ನು ಯಶಸ್ವಿನಿ ಯೋಜನೆಗೆ ಪಡೆಯಲು ಸಲ್ಲಿಸಬೇಕು.
ಗ್ರಾಮೀಣ ಪ್ರದೇಶದಲ್ಲಿ :
- 500 ರೂಪಾಯಿ : ನಾಲ್ಕು ಸದಸ್ಯರಿರುವ ಕುಟುಂಬ
- ತಲಾ 100 ರೂಪಾಯಿ ಹೆಚ್ಚುವರಿ ಶುಲ್ಕ : 4 ಕಿಂತ ಹೆಚ್ಚು ಸದಸ್ಯರು
ಗ್ರಾಮೀಣ ಪ್ರದೇಶದಲ್ಲಿ : - 1000 ರೂಪಾಯಿ : 4 ಸದಸ್ಯರಿರುವ ಕುಟುಂಬ
- ತಲ 200 ರೂಪಾಯಿ ಹೆಚ್ಚುವರಿ ಶುಲ್ಕ : ಕುಟುಂಬ
ಉಚಿತವಾಗಿ ಸದಸ್ಯತ್ವವನ್ನು ಪಡೆಯುವ ಅವಕಾಶವನ್ನು ಸಹಕಾರ ಇಲಾಖೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ ನೀಡಿದೆ.
ಯಶಸ್ವಿನಿ ಯೋಜನೆಯ ಪ್ರಯೋಜನಗಳು :
ಕರ್ನಾಟಕ ಸರ್ಕಾರ ಜಾರಿಗೆ ತಂದಂತಹ ಯಶಸ್ವಿನಿ ಯೋಜನೆಯ ಕೆಲವೊಂದು ಪ್ರಯೋಜನಗಳನ್ನು ನೀಡಲಾಗುತ್ತಿದ್ದು ಗ್ರಾಮೀಣ ಹಾಗೂ ಆರ್ಥಿಕವಾಗಿ ಹಿಂದೆ ಬಿದ್ದಂತಹ ಕುಟುಂಬಗಳಿಗೆ ಯಶಸ್ವಿನಿ ಯೋಜನೆಯ ಮೂಲಕ 2028 ವಿವಿಧ ಚಿಕಿತ್ಸೆಗಳ ನಗದು ರಹಿತ ಸೌಲಭ್ಯವನ್ನು ಸರ್ಕಾರ ಒದಗಿಸುತ್ತದೆ.
- 1650 ಪ್ರೀತಿಯ ಸಾಮಾನ್ಯ ಚಿಕಿತ್ಸೆಗಳು
- 478 ಐಸಿಯು ಚಿಕಿತ್ಸೆಗಳು
ಹೀಗೆ ಈ ಸೌಲಭ್ಯಗಳ ಮೂಲಕ ರಾಜ್ಯ ಸರ್ಕಾರ ಆರೋಗ್ಯ ಸಂಬಂಧಿತ ಆರ್ಥಿಕ ಭಾರವನ್ನು ಕಡಿಮೆ ಮಾಡುವ ಉದ್ದೇಶವನ್ನು ಯಶಸ್ವಿನಿ ಯೋಜನೆ ಹೊಂದಿದೆ ಎಂದು ಹೇಳಬಹುದು.
ಯಶಸ್ವಿನಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ :
ಕರ್ನಾಟಕ ಸರ್ಕಾರದ ಯಶಸ್ವಿನಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳು ತಮ್ಮ ಹತ್ತಿರದ ಸಹಕಾರ ಸಂಘದ ಮೂಲಕ ಡಿಸೆಂಬರ್ 31ರ ಒಳಗಾಗಿ ಅರ್ಹ ಸದಸ್ಯರು ನೋಂದಾಯಿಸಿಕೊಳ್ಳಬಹುದಾಗಿದೆ. ಅಭ್ಯರ್ಥಿಗಳು ಅಗತ್ಯ ದಾಖಲಾತಿಗಳನ್ನು ಮತ್ತು ವಿವರಗಳನ್ನು ಸಂಘದ ಮೂಲಕ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ :
ಯೋಜನೆಯ ಮಹತ್ವ :
ರಾಜ್ಯ ಸರ್ಕಾರ ಯಶಸ್ವಿನ್ ಯೋಜನೆಯನ್ನು ಜಾರಿಗೆ ತರಲು ಕೆಲವೊಂದು ಉದ್ದೇಶಗಳನ್ನು ಇಟ್ಟುಕೊಂಡು ಜಾರಿಗೆ ತಂದಿದೆ. ರಾಜ್ಯದಲ್ಲಿರುವ ಗ್ರಾಮೀಣ ಪ್ರದೇಶದ ಹೆಚ್ಚಿನ ಜನರು ಆರೋಗ್ಯ ಸೇವೆಗೆ ಹೊಂದಿರುವ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಈ ಒಂದು ಯಶಸ್ವಿನಿ ಯೋಜನೆಯನ್ನು ರಾಜ್ಯ ಸರ್ಕಾರ ನಿರ್ಮಿಸಿದೆ.
- ಗ್ರಾಮೀಣ ಜನರ ಚಿಕಿತ್ಸೆ ವೆಚ್ಚವನ್ನು ಈ ಒಂದು ಯೋಜನೆಯು ಕಡಿಮೆ ಮಾಡುತ್ತದೆ
- ಗುಣಮಟ್ಟದ ಆರೋಗ್ಯ ಸೇವೆಯನ್ನು ಕಡಿಮೆ ಮೊತ್ತದಲ್ಲಿ ಒದಗಿಸುತ್ತದೆ
- ಹಣಕಾಸು ತೊಂದರೆಯಿಂದ ಅಥವಾ ಆರ್ಥಿಕ ಪರಿಸ್ಥಿತಿಯಿಂದ ಚಿಕಿತ್ಸೆ ತಪ್ಪಿಸಿಕೊಳ್ಳುವ ಸಮಸ್ಯೆಗೆ ಇದೊಂದು ಯೋಜನೆ ಪರಿಹಾರವಾಗಲಿದೆ
ಹೀಗೆ ರಾಜ್ಯ ಸರ್ಕಾರ ಜಾರಿಗೆ ತಂದಂತಹ ಯಶಸ್ವಿನಿ ಯೋಜನೆ ಗ್ರಾಮೀಣ ಭಾಗದ ಜನರ ಆರೋಗ್ಯ ಸುಧಾರಣೆಗೆ ಮುಖ್ಯ ಸಾಧನವಾಗಿದೆ ಎಂದು ಹೇಳಬಹುದು.
ಈ ಒಂದು ಯೋಜನೆಯ ಪ್ರಯೋಜನವನ್ನು ಸಹಕಾರ ಸಂಘದ ಸದಸ್ಯರು ಸದ್ಬಳಕೆ ಮಾಡಿಕೊಳ್ಳಬಹುದು ಹಾಗಾಗಿ ಡಿಸೆಂಬರ್ 31ರ ಒಳಗಾಗಿ ರಾಜ್ಯ ಸರ್ಕಾರದ ಯಶಸ್ವಿನಿ ಯೋಜನೆಯ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ನಗದು ರಹಿತ ಚಿಕಿತ್ಸೆ ಮತ್ತು ಶುಭವಿಲ್ಲದ ಆರೋಗ್ಯ ಸೇವೆ ಪ್ರಯೋಜನವನ್ನು ಪಡೆದುಕೊಂಡು ಕುಟುಂಬದ ಆರೋಗ್ಯವನ್ನು ಸುರಕ್ಷಿತವಾಗಿಸಿಕೊಳ್ಳಬಹುದಾಗಿದೆ.