ನಮಸ್ಕಾರ ಕನ್ನಡಿಗರೇ, ಇವತ್ತಿನ ಲೇಖನದಲ್ಲಿ ಜಿಯೋ ಕಂಪನಿಯು ಡಿಸ್ಕೌಂಟ್ ಪ್ಲಾನ್ ನೀಡಿರುವುದರ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. ಭಾರತದಲ್ಲಿ ಪ್ರಮುಖ ಟೆಲಿಕಾಂ ಸಂಸ್ಥೆ ಆದಂತಹ ರಿಲಯನ್ಸ್ ಜಿಯೋ ಕಂಪನಿಯು ತನ್ನ ಗ್ರಾಹಕರಿಗೆ ಹೊಸ ವರ್ಷದ ಉಡುಗೊರೆಯ ರೂಪದಲ್ಲಿ 999 ರೂಪಾಯಿಯ ಪ್ರಿಪೇರ್ ಪ್ಲಾನ್ ನಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದೆ ಎಂದು ಹೇಳಬಹುದು. ಹಾಗಾದರೆ ರಿಲಯನ್ಸ್ ಜಿಯೋ ಕಂಪನಿಯು ತನ್ನ ಗ್ರಾಹಕರಿಗೆ ಯಾವ ರೀತಿಯಾದಂತಹ ಡಿಸ್ಕೌಂಟ್ ಪ್ಲಾನ್ ನೀಡಿದೆ ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.
ಹೊಸ ವರ್ಷಕ್ಕೆ ಜಿಯೋ ಬಂಪರ್ ಆಫರ್ :
ಭಾರತದ ಪ್ರಮುಖ ಟೆಲಿಕಾಂ ಸಂಸ್ಥೆಯಾದಂತಹ ರಿಲಯನ್ಸ್ ಜಿಯೋ ಕಂಪನಿಯು ತನ್ನ ಗ್ರಾಹಕರಿಗೆ ಹೊಸ ವರ್ಷದ ಉಡುಗೊರೆಯಾಗಿ ಪ್ರಿಪೇಡ್ ಪ್ಲಾನಲ್ಲಿ ಬದಲಾವಣೆ ಮಾಡಿದೆ. ವ್ಯಾಲಿಡಿಟಿ ಅವಧಿಯ ವಿಸ್ತರಣೆ ಹೆಚ್ಚುವರಿ ಡೇಟಾ ಹಾಗೂ ಟ್ಯಾರಿಫ್ ಬೆಲೆಯಲ್ಲಿ ಇಳಿಕೆ ಹೀಗೆ ಪ್ರಮುಖ ಬದಲಾವಣೆಗಳನ್ನು ಜೀಯೋ ಕಂಪೆನಿಯು ಮಾಡಿದೆ. ಈ ರೀತಿಯಾದಂತಹ ಬದಲಾವಣೆ ಮಾಡಲು ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಸೆಳೆಯಲು ಮತ್ತು ಪೋರ್ಟಿನ್ ಮೂಲಕ ಹೊರ ಹೋಗುವವರನ್ನು ತಡೆಯಲು ಜಿಯೋ ಸಂಸ್ಥೆಯು ಇಟ್ಟಂತಹ ದಿಟ್ಟ ಹೆಜ್ಜೆಯಾಗಿದೆ ಎಂದು ಹೇಳಬಹುದು.
999 ರೂಪಾಯಿಯ ಹೊಸ ಪ್ಲಾನ್ :
ಭಾರತದ ಪ್ರಮುಖ ಟೆಲಿಕಾಂ ಸಂಸ್ಥೆಯಾದಂತಹ ರಿಲಯನ್ಸ್ ಜಿಯೋ ಕಂಪನಿಯು ತನ್ನ ಗ್ರಾಹಕರಿಗೆ 999 ಪ್ರಿಪೇಡ್ ಪ್ಲಾನ್ ನಲ್ಲಿ ಹೊಸ ಬದಲಾವಣೆಗಳನ್ನು ಮಾಡಿದೆ. ಹಾಗಾದರೆ ಏನೆಲ್ಲ ವಿಶೇಷತೆಗಳನ್ನು ಹೊಂದಿದೆ ಹಾಗೂ ಪ್ರಮುಖ ಬದಲಾವಣೆಗಳು ಏನೆಂದು ನೋಡುವುದಾದರೆ.
- ವ್ಯಾಲಿಡಿಟಿ : ಜಿಯೋ ಮೊದಲು 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿದಂತಹ ಈ ಪ್ಲಾನ್ ನಲ್ಲಿ ಇದೀಗ 98 ದಿನಗಳವರೆಗೆ ವಿಸ್ತರಿಸಲಾಗಿದೆ. ಇದರಿಂದಾಗಿ ಹೆಚ್ಚುವರಿ 14 ದಿನಗಳ ಸೇವೆಯನ್ನು ಗ್ರಾಹಕರಿಗೆ ಕಂಪನಿಯು ಉಚಿತವಾಗಿ ನೀಡುತ್ತದೆ
- ಡೇಟಾ ಬಂಡಲ್ : ಜಿಯೋ ಕಂಪನಿಯು ತನ್ನ ಗ್ರಾಹಕರಿಗೆ ಈ ಪ್ಲಾನ್ ನಲ್ಲಿ ಎರಡು ಜಿಬಿ ಡೇಟಾದ ವ್ಯವಸ್ಥೆಯನ್ನು ಪ್ರತಿದಿನ ನೀಡಿತ್ತು ಆದರೆ ಈಗ ಅದನ್ನು 3ಜಿಬಿ ಡೇಟಾ ಆಗಿ ಹೆಚ್ಚಿಸಲಾಗಿದ್ದು ಸಂಪೂರ್ಣವಾಗಿ ಗ್ರಾಹಕರು 294 ಜಿ ಬಿ ಡೇಟಾವನ್ನು ಪಡೆಯಲಿದ್ದಾರೆ
- ಅನ್ಲಿಮಿಟೆಡ್ ಕರೆಯುವಿಕೆ : ಭಾರತದ ಅತ್ಯಂತ ಅನ್ಲಿಮಿಟೆಡ್ ವಾಯ್ಸ್ ಕಾಲಿಂಗ್ ಹಾಗೂ ಪ್ರತಿದಿನ 100 ಎಸ್ಎಂಎಸ್ ಗಳ ಯೋಜನೆಯು ಹಾಗೆಯೇ ಇದೆ
- ಉಚಿತ ಆನ್ಲೈನ್ ಸೇವೆಗಳು : ಜಿಯೋ ಕಂಪನಿಯು ತನ್ನ ಗ್ರಾಹಕರಿಗೆ ಉಚಿತವಾಗಿ ಜಿಯೋ ಟಿವಿ ಹಾಗೂ ಜಿಯೋ ಸಿನಿಮಾವನ್ನು ನೀಡುತ್ತಿದ್ದು ಇದರ ಜೊತೆಗೆ ಮಲ್ಟಿಮೀಡಿಯ ತಾಣಗಳ ಸವಿಯನ್ನು ಹೆಚ್ಚಿಸುತ್ತದೆ ಎಂದು ಹೇಳಬಹುದು
ಎಷ್ಟು ರೂಪಾಯಿ ಗ್ರಾಹಕರಿಗೆ ಉಳಿತಾಯವಾಗಲಿದೆ :
ಜಿಯೋ ಕಂಪನಿಯ ಗ್ರಾಹಕರು ಈ ಹೊಸ ಆಫರ್ ಗಳನ್ನು ಬಳಸಿದರೆ ಸುಮಾರು 200 ರೂಪಾಯಿಗಳಷ್ಟು ಉಳಿತಾಯ ಮಾಡಬಹುದಾಗಿದೆ. ಹೆಚ್ಚುವರಿ ಡೇಟಾ ಮತ್ತು ದಿನಗಳ ಪರಿಣಾಮವಾಗಿ ಬಳಕೆದಾರರು ಈ ಒಂದು ಯೋಜನೆಯ ಮೂಲಕ ಹೆಚ್ಚು ಪ್ರಯೋಜನವನ್ನು ಪಡೆಯಬಹುದಾಗಿದೆ. ಜಿಯೋನ ಈ ಕ್ರಮವು ೇರೆ ಕಂಪನಿಗಳಿಗೆ ಎಂಎನ್‌ಪಿ ಮೂಲಕ ಗ್ರಾಹಕರ ಸಂಖ್ಯೆ ಹೆಚ್ಚುತ್ತಿರುವುದನ್ನು ತಡೆಯುವ ಉದ್ದೇಶದಿಂದ ಮಾಡಲಾಗಿದ್ದು ಆರ್ಥಿಕ ಉದ್ದೇಶ ಮತ್ತು ಮಾರುಕಟ್ಟೆ ತಂತ್ರಜ್ಞಾನವನ್ನು ಹೊಂದಿದೆ. ಇತ್ತೀಚಿಗೆ ಏರ್ಟೆಲ್ ಜಿಒ ಮತ್ತು ವೊಡಾಫೋನ್ ಐಡಿಯಾ ಕಂಪನಿಗಳು ಪ್ಯಾರಿಸ್ ಬೆಲೆಗಳನ್ನು ಏರಿಸಿರುವುದರ ಪರಿಣಾಮವಾಗಿ ಬಿಎಸ್ಎಲ್ ನತ್ತ ಆಕರ್ಷಿತರಾಗುತ್ತಿದ್ದಾರೆ. ತನ್ನ ಸ್ಪರ್ಧಾತ್ಮಕ ಬೆಲೆಯುಳ್ಳ ಯೋಜನೆಗಳ ಮೂಲಕ ಬಿಎಸ್ಎನ್ಎಲ್ ಕಂಪನಿಯು ಅಡ್ಡ ದಾಳಿ ನಡೆಸುತ್ತಿರುವುದರಿಂದ ಜಿಯೋ ಗ್ರಾಹಕರನ್ನು ತಡೆಹಿಡಿಯಲು ತನ್ನ ಪ್ಲಾನ್ ಗಳಲ್ಲಿ ಬದಲಾವಣೆ ಮಾಡಲು ಪ್ರೇರೇಪಿತವಾಗಿದೆ.
ಜಿಯೋ ಪ್ಲಾನಿನ ಪ್ರಭಾವ :
ಜಿಯೋ ಕಂಪನಿಯು ಮಾಡಿರುವಂತಹ ಯೋಜನೆಗಳ ಬದಲಾವಣೆಗಳ ಮೂಲಕ ಏನೆಲ್ಲ ಪ್ರಭಾವವನ್ನು ಬೀರಿದೆ ಎಂದು ನೋಡುವುದಾದರೆ,
- ನೀಡುವ ಸ್ಪರ್ಧಾತ್ಮಕ ಅಂಚು : ಜಿಯೋ ಕಂಪನಿಯು ನೀಡಿರುವಂತಹ ಹೆಚ್ಚುವರಿ ಡೇಟಾ ಮತ್ತು ವ್ಯಾಲಿಡಿಟಿ ಅರ್ಥಾತ್ಮಕ ಮತ್ತು ಆಕರ್ಷಕವಾಗಿದೆ ಹಾಗೂ ವಿಶೇಷವಾಗಿ ಹೈಡೇಟಾ ಬಳಕೆದಾರರಿಗೆ ಇದು ಹೆಚ್ಚು ಅನುಕೂಲವಾಗಿದೆ.
- ಗ್ರಾಹಕರ ಬಾಂಧವ್ಯ ವೃದ್ಧಿ : ಜೀವ ಕಂಪನಿಯು ತನ್ನ ಗ್ರಾಹಕರಿಗೆ ಜಿಯೋ ಟಿವಿ ಮತ್ತು ಸಿನಿಮಾ ಸೇವೆ ಉಚಿತ ಲಭ್ಯವಿರುವುದರಿಂದ ಬಂಡಲ್ ಆಫರ್ ಗಳು ಗ್ರಾಹಕರ ಹೊಲವನ್ನು ಗಳಿಸಬಹುದೆಂದು ಹೇಳಬಹುದು.
- ಮಾರುಕಟ್ಟೆ ಶಕ್ತಿ ಸ್ಥಿರಪಡಿಸುವುದು : ಜಿಯೋ ಕಂಪನಿಯ ಈ ಒಂದು ಪ್ರಯತ್ನವು ಗ್ರಾಹಕರ ನಿಷ್ಠೆಯನ್ನು ಪುನಃ ಸ್ಥಾಪಿಸಲು ಸಹಾಯ ಮಾಡುತ್ತದೆ ಎಂದು ಹೇಳಬಹುದು.
ಒಟ್ಟಾರೆ 999 ರಿಲಯನ್ಸ್ ಜಿಯೋಗ್ರಾಹಕರಿಗೊಂದು ದೀರ್ಘಕಾಲಿಕ ಲಾಭದಾಯಕ ಯೋಜನೆ ಎಂದು ಹೇಳಬಹುದು. ಇಂತಹ ಬಂಪರ್ ಆಫರ್ಗಳು ಉತ್ತಮ ಸೇವೆಯನ್ನು ಸಮತೋಲನಕ್ಕೆ ಗ್ರಾಹಕರಿಗೆ ತರುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಹೊಸ ಡೇಟಾ ಪ್ರಿಯತೀರಿಗಾಗಿ ಈ ಒಂದು ಯೋಜನೆಯು ಆಕರ್ಷಕ ಆಯ್ಕೆಯಾಗಿದೆ ಎಂದು ಹೇಳಬಹುದು. ಹಾಗಾಗಿ ನಿಮಗೆ ತಿಳಿದಿರುವಂತಹ ಸ್ನೇಹಿತರಿಗೆ ಜಿಯೋ ಕಂಪನಿಯ ಈ ಒಂದು ಹೊಸ ನವೀಕರಣದ ಬಗ್ಗೆ ತಿಳಿಸಿ.
1 thought on “Jio : ಜಿಯೋ ಕಂಪನಿಯಿಂದ ಹೊಸ ವರ್ಷಕ್ಕೆ ಬಂಪರ್ ಡಿಸ್ಕೌಂಟ್ ಕೇವಲ 200 ರೂ ಗೆ ಇಳಿಕೆ ! ಇದರ ಜೊತೆಗೆ ಪ್ರತಿದಿನ 3ಜಿಬಿ ಡೇಟಾ ಫ್ರೀ”