ನಮಸ್ಕಾರ ಕನ್ನಡಿಗರೇ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ರಾಜ್ಯದ ರೈತರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಸರ್ಕಾರ ಕೆಲವೊಂದು ಬೆಳೆಗಳ ಬೆಳೆವಿಮೆ ಪರಿಹಾರದ ಹಣವನ್ನು ರೈತರ ಬ್ಯಾಂಕ್ ಖಾತೆಗೆ ಜವ ಮಾಡಲಾಗುತ್ತದೆ ಎಂಬ ಮಾಹಿತಿಯು ಕೇಳಿ ಬರುತ್ತಿದೆ. ಅಡಿಕೆಯ ಜೊತೆಗೆ ಇತರೆ ತೋಟಗಾರಿಕೆ ಬೆಳೆಗಳ ಬೆಳೆ ವಿಮೆ ಪರಿಹಾರದ ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಸರ್ಕಾರ ರೈತರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿದೆ.
2023-2024 ನೇ ಸಾಲಿನಲ್ಲಿ ಬೆಳೆ ಬೆಳೆಯುವವರು ಬೆಳೆ ವಿಮೆ ಮಾಡಿಸಿದ್ದ ಎಲ್ಲ ರೈತರಿಗೂ ಹಣ ಸಿಗಲಿದೆ. ಹೇಗೆ ಬೆಳೆ ವಿಮೆಯ ಹಣವನ್ನು ಪಡೆದಿರುವುದರ ಬಗ್ಗೆ ಚೆಕ್ ಮಾಡಬಹುದು ಹಾಗೂ ಯಾವೆಲ್ಲ ರೈತರು ಈ ಯೋಜನೆಯ ಪ್ರಯೋಜನವನ್ನು ಪಡೆದಿದ್ದಾರೆ ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಬಹುದು.
ರೈತರ ಖಾತೆಗೆ ಬೆಳೆ ವಿಮೆ ಹಣ ಜಮಾ :
ಅಡಿಕೆ ಮತ್ತು ಮಾವು ಶುಂಠಿ ಮೆಣಸು ಬೆಳೆಗಳಿಗೆ ಕಳೆದ ವಾರ ಶಿವಮೊಗ್ಗ ಜಿಲ್ಲೆಯಲ್ಲಿ ಬೆಳೆ ವಿಮೆಗೆ ಕಳೆದ ವರ್ಷ ಅರ್ಜಿ ಸಲ್ಲಿಸಿದ್ದ ರೈತರಿಗೆ ಸುಮಾರು 71,000 ರೈತರ ಬ್ಯಾಂಕ್ ಖಾತೆಗೆ ನೇರವಾಗಿ 156.14 ಲಕ್ಷ ಬೆಳೆ ವಿಮೆ ಪರಿಹಾರದ ಹಣವನ್ನು ಸರ್ಕಾರ ಜಮಾ ಮಾಡಲಾಗಿತ್ತು. ಇದೀಗ ಇತರ ಜಿಲ್ಲೆಗಳಲ್ಲಿ ಅರ್ಜಿ ಸಲ್ಲಿಸಿದ ರೈತರಿಗೂ ಕೂಡ ಇದೇ ಮಾದರಿಯಲ್ಲಿ ಬೆಳೆ ವಿಮೆಯ ಹಣವನ್ನು ಸರ್ಕಾರ ಜಮಾ ಮಾಡುತ್ತಿದೆ.
ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ :
ಕೇಂದ್ರ ಸರ್ಕಾರವು ರೈತರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಪ್ರಧಾನಮಂತ್ರಿ ಫಸಲು ಭೀಮಾ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆಯ ಪ್ರಯೋಜನವನ್ನು ದೇಶದಾದ್ಯಂತ ಎಲ್ಲ ರೈತರು ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಬಹುದು. ಈ ಒಂದು ಯೋಜನೆಯು ರೈತರಿಗೆ ತಮ್ಮ ಬೆಳೆಗಳ ಏನಾದರೂ ನಷ್ಟವಾದರೆ ಅದಕ್ಕೆ ಪರಿಹಾರವನ್ನು ಕಂಡುಕೊಳ್ಳಲು ಸಹಕಾರಿಯಾಗಿದೆ ಎಂದು ಹೇಳಬಹುದು. ಹಾಗಾಗಿ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಅಡಿಯಲ್ಲಿ 2023 ಮತ್ತು 24 ನೆ ಸಾಲಿನಲ್ಲಿ ಬೆಳೆ ವಿಮೆ ಮಾಡಿಸಿದಂತಹ ರೈತರಿಗೆ ಕೇಂದ್ರ ಸರ್ಕಾರ ಬೆಳೆ ವಿಮೆ ಹಣವನ್ನು ತಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡಿದೆ ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ಹಾಗಾಗಿ ಯಾವ ರೀತಿ ರೈತರು ತಮ್ಮ ಬೆಳೆ ವಿಮೆಯ ಹಣ ತಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗಿದೆ ಇಲ್ಲವೇ ಎಂಬುದರ ಬಗ್ಗೆ ಯೋಚಿಸುತ್ತಿದ್ದಾರೆ.
ಈ ಲೇಖನದಲ್ಲಿ ಉತ್ತರವನ್ನು ಕಂಡುಕೊಳ್ಳಬಹುದು. ಕೇಂದ್ರ ಸರ್ಕಾರದ ಈ ಒಂದು ಯೋಜನೆಯು ರೈತರಿಗೆ ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಲು ಸಹಾಯ ಮಾಡುತ್ತಿದೆ ಎಂದು ಹೇಳಬಹುದು. ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಅಡಿಯಲ್ಲಿ ಕಳೆದ ವಾರ ಕೇಂದ್ರ ಸರ್ಕಾರ ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು 71,000 ರೈತರ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾವಣೆ ಮಾಡಿದ್ದು. ಇದೀಗ ಅದೇ ಮಾದರಿಯಲ್ಲಿ ವಿವಿಧ ಜಿಲ್ಲೆಗಳಲ್ಲಿ ಹಣ ವರ್ಗಾವಣೆ ಮಾಡಲು ಸರ್ಕಾರ ನಿರ್ಧರಿಸಿದೆ. ಸದ್ಯ ಈಗ ಮಾವು ಶುಂಠಿ ಮೆಣಸು ಮತ್ತು ಅಡಿಕೆ ಬೆಳೆಗಳಿಗೆ ಬೆಳೆ ವಿಮೆಯ ಹಣವನ್ನು ಸರ್ಕಾರ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಅಡಿಯಲ್ಲಿ ರೈತರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುತ್ತಿದ್ದು ರೈತರು ಈ ಯೋಜನೆಯ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಸದ್ಯ ತೋಟಗಾರಿಕೆ ಬೆಳೆಗಳಿಗೆ ಕಳೆದ ಮುಂಗಾರು ಹಂಗಾಮಿನಲ್ಲಿ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯ ಅಡಿ ಬೆಳೆ ವಿಮೆ ಗೆ ಅರ್ಜಿ ಸಲ್ಲಿಸಿದವರು ಬೆಳೆ ವಿಮೆ ಹಣ ಜಮಾ ಆಗಿರುವುದರ ವಿವರವನ್ನು ಮತ್ತು ಅಭ್ಯಾಸ ಸ್ಥಿತಿಯನ್ನು ರಾಜ್ಯ ಸರ್ಕಾರದ ಅಧಿಕೃತ ಪೋರ್ಟಲ್ ಗೆ ಭೇಟಿ ನೀಡಿ ಚೆಕ್ ಮಾಡಿಕೊಳ್ಳಬಹುದು. ಸರ್ಕಾರದ ಅಧಿಕೃತ ವೆಬ್ಸೈಟ್:https://pmfby.gov.in/
ಮೊಬೈಲ್ ನಲ್ಲಿ ಚೆಕ್ ಮಾಡುವ ವಿಧಾನ :
ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಅಡಿಯಲ್ಲಿ ಬೆಳೆ ವಿಮೆಗೆ ಅರ್ಜಿಯನ್ನು ಸಲ್ಲಿಸಿದ್ದ ರೈತರು ತಮ್ಮ ಬೆಳೆ ವಿಮೆ ಜಮಾ ಅವರ ಮತ್ತು ಅರ್ಜಿಯ ಸ್ಥಿತಿಯನ್ನು ತಿಳಿದುಕೊಳ್ಳಬೇಕಾದರೆ ಮೊಬೈಲ್ ನಲ್ಲಿಯೇ ಸುಲಭವಾಗಿ ಚೆಕ್ ಮಾಡಬಹುದಾಗಿದೆ. ಈ ಕೆಳಗಿನ ವಿವರಗಳನ್ನು ಅನುಸರಿಸುವುದರ ಮೂಲಕ ಮೊಬೈಲ್ ನಲ್ಲಿಯೇ ಬೆಳೆ ವಿಮೆ ಹಣ ಜಮಾದ ವಿವರ ಹಾಗೂ ಅರ್ಜಿಯ ಸ್ಥಿತಿಯನ್ನು ನೋಡಬಹುದು. ರೈತರಿಗೆ ಬೆಳೆ ವಿಮೆ ಅರ್ಜಿ ವಿಲೇವಾರಿಯಲ್ಲಿ ಮತ್ತು ಪರಿಹಾರದ ಹಣ ಜಮಾ ಮಾಡುವ ಪದ್ಧತಿಯಲ್ಲಿ ರಾಜ್ಯ ಸರ್ಕಾರದಿಂದ ಪಾರದರ್ಶಕತೆಯನ್ನು ಒದಗಿಸಲು ಸರ್ಕಾರ ಸಂರಕ್ಷಣಾ ವೆಬ್ಸೈಟ್ ಅಥವಾ https://www.samrakshane.karnataka.gov.in/ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದ್ದು ಎಲ್ಲಾ ವಿಮಾ ಅರ್ಜಿಗಳನ್ನು ಈ ತಂತ್ರಾಂಶದ ಮೂಲಕವೇ ಸರ್ಕಾರ ವಿಲೇವಾರಿ ಮಾಡುತ್ತದೆ. ಇದೀಗ ಮೊಬೈಲ್ನಲ್ಲಿ ನೋಡುವುದಾದರೆ.
- ಮೊದಲು ಅಭ್ಯರ್ಥಿಗಳು crop insurance application status check ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ ಸರ್ಕಾರದ ಅಧಿಕೃತ ಸಂರಕ್ಷಣೆ ವೆಬ್ ಸೈಟನ್ನು ಪ್ರವೇಶಿಸಬೇಕು.
- ಸಂರಕ್ಷಣಾ ವೆಬ್ ಸೈಟ್ ಗೆ ಭೇಟಿ ಮಾಡಿದ ನಂತರ ಅದರಲ್ಲಿ ವರ್ಷವನ್ನು ಆಯ್ಕೆ ಮಾಡಿಕೊಳ್ಳಬೇಕು.
- 2023 ಮತ್ತು 24 ಎಂದು ಆಯ್ಕೆ ಮಾಡಿಕೊಂಡ ನಂತರ ಹಂಗಾಮು ಅಥವಾ ಖಾರಿಫ್ ಎಂಬ ಆಯ್ಕೆ ಮೇಲೆ ಸೆಲೆಕ್ಟ್ ಮಾಡಿಕೊಂಡು ಗೋ ಎಂಬ ಬಟನ್ ಮೇಲೆ ಕ್ಲಿಕ್ ಮಾಡಬೇಕು.
- ಮೇಲೆ ತಿಳಿಸಿದಂತಹ ಹಂತವನ್ನು ಪೂರ್ಣಗೊಳಿಸಿದ ನಂತರ ಈ ಪೇಜ್ ನಲ್ಲಿ ನಿಮಗೆ ಕೆಳಗೆ ಕಾಣುವಂತಹ ಫಾರ್ಮರ್ಸ್ ಕಾಲಂ ನಲ್ಲಿ crop insurance details on survey number ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.
- ನಂತರ ತಮ್ಮ ಜಿಲ್ಲೆ ತಾಲೂಕು ಹೋಬಳಿ ಗ್ರಾಮ ಮತ್ತು ಸರ್ವೆ ನಂಬರನ್ನು ಹಾಕಿ ಸರ್ಚ್ ಎಂಬ ಬಟನ್ ಮೇಲೆ ಒತ್ತಬೇಕು.
- ಸಚಿನ್ ಬಟನನ್ನು ಕ್ಲಿಕ್ ಮಾಡಿದ ನಂತರ ಅದರಲ್ಲಿ ಸರ್ವೆ ನಂಬರ್ ಇರುವಂತಹ ಎಲ್ಲಾ ರೈತರ ಹೆಸರುಗಳು ತೋರಿಸುತ್ತದೆ ಅದರಲ್ಲಿ ನಿಮ್ಮ ಹೆಸರು ತೋರಿಸುವಂತಹ ಸರ್ವೇ ನಂಬರ್ ಮೇಲೆ ಕ್ಲಿಕ್ ಮಾಡಿ ಪೇಜ್ ನ ಕೊನೆಯಲ್ಲಿ ಕಾಣುವಂತಹ ಬೆಳೆ ವಿಮೆ ಅರ್ಜಿಯ ಸಂಖ್ಯೆಯನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಅಥವಾ ಬರೆದುಕೊಳ್ಳಬೇಕು.
- ನಂತರ ಎಡಭಾಗದಲ್ಲಿ ಕಾಣುವಂತಹ ಹೋಂ ಬಟನ್ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ ಮತ್ತೆ ಫಾರ್ಮರ್ಸ್ ಕಾಲಂ ನಲ್ಲಿ ಚೆಕ್ ಸ್ಟೇಟಸ್ ಎಂಬ ಬಟನ್ ಮೇಲೆ ಕ್ಲಿಕ್ ಮಾಡಬೇಕು.
- ನಂತರ ಬೆಳೆ ವಿಮೆ ಅರ್ಜಿಯ ಸಂಖ್ಯೆಯನ್ನು ನಮೂದಿಸಿ ಕೆಳಗೆ ತಿಳಿಸಲಾದಂತಹ ಕ್ಯಾಪ್ಚ ಕೋಡ್ ಅನ್ನು ಹಾಕಿ ಸರ್ಚ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.
- ನಿಮಗೇನಾದರೂ ಬೆಳೆವಿಮೆ ಜಮಾ ಆಗಿದ್ದರೆ ಕೆಳಗೆ ಚಿತ್ರದಲ್ಲಿ ತೋರಿಸುವ ಕಾಲಂನಲ್ಲಿ ಬೆಳೆ ವಿಮೆ ಪರಿಹಾರ ಜಮಾ ಆಗಿರುವಂತಹ ಬ್ಯಾಂಕ್ ಖಾತೆಯ ಕೊನೆಯ ನಾಲ್ಕು ಸಂಖ್ಯೆಗಳನ್ನು ಹಾಗೂ ಯುಟಿಆರ್ ನಂಬರ್ ಒಟ್ಟು ಎಷ್ಟು ಹಣ ಜಮಾ ಆಗಿದೆ ಹಾಗೂ ಜಮಾ ಆಗಿರುವ ದಿನಾಂಕದ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ.
ಹೀಗೆ ಈ ಮೇಲಿನ ಎಲ್ಲ ವಿಧಾನಗಳನ್ನು ಅನುಸರಿಸುವುದರ ಮೂಲಕ ನಿಮಗೆ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಅಡಿಯಲ್ಲಿ ಅಡಿಕೆ ಸೇರಿದಂತೆ ತೋಟಗಾರಿಕೆ ಬೆಳೆಗಳ ವಿಮೆಯ ಹಣ ಜಮಾ ಆಗಿರುವುದರ ಬಗ್ಗೆ ತಿಳಿದುಕೊಳ್ಳಬಹುದಾಗಿದೆ.
ಕೇಂದ್ರ ಸರ್ಕಾರದ ಈ ಒಂದು ಯೋಜನೆಯ ಮೂಲಕ ಸಾಕಷ್ಟು ರೈತರು ತಮ್ಮ ಕೃಷಿ ಚಟುವಟಿಕೆಗಳಿಗೆ ಬೇಕಾದಂತಹ ಆರ್ಥಿಕ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ಸಹಾಯ ಮಾಡುತ್ತಿದೆ ಎಂದು ಹೇಳಬಹುದು. ಹಾಗಾಗಿ ನಿಮಗೆ ತಿಳಿದಿರುವ ರೈತರಿಗೆ ಅಡಿಕೆ ಸೇರಿದಂತೆ ಇತರೆ ತೋಟಗಾರಿಕಾ ಬೆಳೆಗಳಿಗೆ ಪ್ರಧಾನಮಂತ್ರಿ ಫಸಲು ಭೀಮಾ ಯೋಜನೆಯಡಿಯಲ್ಲಿ 2023 24 ನೇ ಸಾಲಿನಲ್ಲಿ ಬೆಳೆ ವಿಮೆ ಮಾಡಿಸಿದಂತಹ ಬೆಳೆಗಳಿಗೆ ಬೆಳೆವಿಮೆ ಹಣ ಜಮಾ ಆಗಿದೆ ಎಂದು ತಿಳಿಸಿ. ಮುಂದಿನ ದಿನಗಳಲ್ಲಿ ಯಾವೆಲ್ಲ ರೈತರು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಗೆ ಇದುವರೆಗೂ ಕೂಡ ಅರ್ಜಿಯನ್ನು ಸಲ್ಲಿಸಿಲ್ಲ ಅಂತವರು ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ಹಾಗಾಗಿ ಅರ್ಹ ರೈತರು ಈ ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ.