Agriculture Machinery Subsidy : ಸರ್ಕಾರದಿಂದ ಕೃಷಿ ಯಂತ್ರೋಪಕರಣಗಳಿಗೆ 50% ರಿಂದ 90% ಸಬ್ಸಿಡಿ : ಈ ಕೂಡಲೇ ಅರ್ಜಿ ಸಲ್ಲಿಸಿ ಇಲ್ಲಿದೆ ಸಂಪೂರ್ಣ ಮಾಹಿತಿ


ನಮಸ್ಕಾರ ಕನ್ನಡಿಗರೇ, ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ರೈತರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಸದ್ಯ ಈಗ ಕೇಂದ್ರ ಸರ್ಕಾರವು ಜಾರಿಗೆ ತಂದಂತಹ ಯೋಜನೆಯ ಮೂಲಕ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಯ ವರ್ಗದ ರೈತರು ಕೃಷಿ ಚಟುವಟಿಕೆಗಳಿಗೆ ಸಹಾಯವಾಗುವಂತಹ ಯಂತ್ರೋಪಕರಣಗಳನ್ನು ಸಬ್ಸಿಡಿಯ ಮೂಲಕ ಖರೀದಿ ಮಾಡಬಹುದಾಗಿದೆ.

50% to 90% subsidy on farm machinery from Govt
50% to 90% subsidy on farm machinery from Govt

ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ 2024 ಮತ್ತು 25ರ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಹನಿ ನೀರಾವರಿ ಕಾರ್ಯಕ್ರಮದ ಅಡಿಯಲ್ಲಿ ಶೇಕಡ 90ರಷ್ಟು ಸಹಾಯಧನ ಹಾಗೂ ಇತರೆ ವರ್ಗದ ರೈತರಿಗೆ ಶೇಕಡ 55 ರಷ್ಟು ಸಹಾಯಧನವನ್ನು ನೀಡಲು ಮುಂದಾಗಿದೆ.

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ :

2024 ಮತ್ತು 25ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಇತರೆ ವರ್ಗದ ರೈತರಿಗೆ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಅಡಿ ಹನಿ ನೀರಾವರಿ ಕಾರ್ಯಕ್ರಮದಲ್ಲಿ ಶೇಕಡ 90ರಷ್ಟು ಹಾಗೂ ಶೇಕಡ 55 ರಷ್ಟು ಸಹಾಯಧನವನ್ನು ನೀಡಲು ನಿರ್ಧರಿಸಿದೆ. ಈ ಕೆಳಗಿನ ಯಂತ್ರೋಪಕರಣವನ್ನು ಖರೀದಿ ಮಾಡಲು ಸರ್ಕಾರ ರೈತರಿಗೆ ಸಹಾಯಧನವನ್ನು ನೀಡುತ್ತದೆ.

  1. ತೋಟಗಾರಿಕೆಯಲ್ಲಿ ಯಾಂತ್ರೀಕರಣ ಕೊಳೆ ಕೊಚ್ಚುವ ಯಂತ್ರ
  2. ಮರ ಕತ್ತರಿಸುವ ಯಂತ್ರ
  3. ಅಲ್ಯುಮಿನಿಯಂ ಏಣಿ
  4. ತಳ್ಳುವ ಗಾಡಿ
  5. ಅಡಿಕೆದೋಟಿ
  6. ಪವರ್ ವೀಡರ್
  7. ಕಾಳು ಮೆಣಸು ಬಿಡಿಸುವ ಯಂತ್ರ
  8. ಅಡಿಕೆ ಬಿಡಿಸುವ ಯಂತ್ರ
    ಹೀಗೆ ಈ ಮೇಲಿನ ಯಂತ್ರಗಳನ್ನು ಖರೀದಿ ಮಾಡಲು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಮಹಿಳಾ ರೈತರಿಗೆ ಶೇಕಡ 50ರಷ್ಟು ಸಹಾಯಧನದ ಜೊತೆಗೆ ಇತರೆ ವರ್ಗದ ರೈತರಿಗೆ ಶೇಕಡ 40ರಷ್ಟು ಸಹಾಯಧನವನ್ನು ಕೇಂದ್ರ ಸರ್ಕಾರ ನೀಡುತ್ತದೆ. ಹಿರಿಯ ಸಹಾಯಕ ನಿರ್ದೇಶಕರ ಮಾಹಿತಿ :

ಸೋಮವಾರಪೇಟೆ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರು ಯಾವೆಲ್ಲ ರೀತಿಯ ಸಹಾಯ ಧನ ಲಭ್ಯವಿದೆ ಎಂಬುದರ ಮಾಹಿತಿಯನ್ನು ತಿಳಿಸಿದ್ದಾರೆ.

  1. ಎಣ್ಣೆ ತಾಳೆಹಾಗೂ ಎಣ್ಣೆಕಾಳು ರಾಷ್ಟ್ರೀಯ ಅಭಿಯಾನ ಯೋಜನೆ.
  2. ತಾಳೆಬೇಳೆ ಪ್ರದೇಶ ವಿಸ್ತರಣೆಗೆ ಸಹಾಯಧನ
    3.ಕೂಡಿಗೆ ತೋಟಗಾರಿಕೆ ಕ್ಷೇತ್ರದಲ್ಲಿ ಅಡಿಕೆ ಗಿಡಗಳು
    ಹೀಗೆ ಕೆಲವೊಂದು ಯೋಜನೆಗಳ ಮಾಹಿತಿಯನ್ನು ಸೋಮವಾರಪೇಟೆ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು ರೈತರಿಗೆ ತಿಳಿಸಿದ್ದಾರೆ. ಅಲ್ಲದೆ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಆಯಾಸ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಯನ್ನು ಸಂಪರ್ಕಿಸಲು ತಿಳಿಸಲಾಗಿದೆ.
    ಅಧಿಕೃತ ಜಾಲತಾಣ:

ಅರ್ಜಿ ಸಲ್ಲಿಸುವ ವಿಧಾನ :

ಅಡಿಕೆ ಸಿಪ್ಪೆ ಬಿಡಿಸುವ ಯಂತ್ರ ಕಾಳು ಮೆಣಸು ಬಿಡಿಸುವ ಯಂತ್ರ ಸೇರಿದಂತೆ ಇತರೆ ಕೃಷಿ ಯಂತ್ರೋಪಕರಣಗಳಿಗೆ ಸಹಾಯಧನವನ್ನು ನೀಡಲಾಗುತ್ತಿದ್ದು ಇದಕ್ಕೆ ಅಜ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬೇಕು. ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಸರ್ಕಾರದ ಅಧಿಕೃತ ವೆಬ್ಸೈಟ್ : https://mofpi.nic.in/pmfme/ಈ ವೆಬ್ ಸೈಟಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಅಲ್ಲದೆ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಜಿಲ್ಲಾಮಟ್ಟದಲ್ಲಿ ನೇಮಿಸಲ್ಪಟ್ಟಂತಹ ಸಂಪನ್ಮೂಲ ವ್ಯಕ್ತಿಗಳು ಹಾಗೂ ಯೋಜನೆ ವರದಿಯನ್ನು ಪರಿಶೀಲಿಸಿ ಜಿಲ್ಲಾ ಮಟ್ಟದ ಸಮಿತಿಯನ್ನು ಸಂಪರ್ಕಿಸಬಹುದು.

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ :

15 ಲಕ್ಷಕ್ಕೂ ಹೆಚ್ಚು ಸಹಾಯ ಧನ :

ಕೇಂದ್ರ ಸರ್ಕಾರ ಜಾರಿಗೆ ತಂದಂತಹ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಅಡಿಯಲ್ಲಿ ಸಹಾಯಧನವನ್ನು ನೀಡಲಾಗುತ್ತಿದ್ದು ಅಭ್ಯರ್ಥಿಗಳು ಸಾಲ ಮಂಜೂರಾತಿಗಾಗಿ ಬ್ಯಾಂಕಗಳಿಗೆ ಭೇಟಿ ನೀಡಬೇಕು. ಸಂಸ್ಥೆಗಳ ಗುಂಪು ಅರ್ಜಿಗಳು ಆಗಿದ್ದಲ್ಲಿ ಜಿಲ್ಲಾ ಸಮಿತಿಯು ಏಜೆನ್ಸಿಗೆ ವರ್ಗಾಯಿಸುತ್ತದೆ ಎಲ್ಲ ಮಾಹಿತಿಯನ್ನು ತಿಳಿದುಕೊಂಡ ನಂತರ ಜಿಲ್ಲಾ ಮಟ್ಟದ ಸಮಿತಿ ವರದಿಯನ್ನು ನೀಡುತ್ತದೆ. ಇದರ ಮೂಲಕ ಕೇಂದ್ರ ಸರ್ಕಾರವು 15 ಲಕ್ಷಕ್ಕೂ ಹೆಚ್ಚು ಸಹಾಯಧನವನ್ನು ಕೃಷಿ ಯಂತ್ರೋಪಕರಣಗಳನ್ನು ಖರೀದಿ ಮಾಡಲು ನೀಡುತ್ತದೆ.

ಈ ಉದ್ಯಮಗಳಿಗೆ ಯಂತ್ರೋಪಕರಣಗಳ ಸಹಾಯ :

ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಅಡಿಯಲ್ಲಿ ಕೆಲವೊಂದು ಉದ್ಯಮಗಳಿಗೆ ಯಂತ್ರೋಪಕರಣಗಳನ್ನು ಖರೀದಿ ಮಾಡಲು ಸಹಾಯಧನವನ್ನು ನೀಡುತ್ತದೆ.

  1. ಎಣ್ಣೆ ಗಾಣ
  2. ರೊಟ್ಟಿ ಮಾಡುವ ಯಂತ್ರ
  3. ಬೆಲ್ಲದ ಗಾಣ
  4. ಖಾರದಪುಡಿ ಘಟಕ
  5. ಶಾವಿಗೆ
  6. ಹಪ್ಪಳ ಸಂಡಿಗೆ
  7. ಬೇಕರಿ ಉತ್ಪನ್ನ
  8. ಹಾಲಿನ ಉತ್ಪನ್ನ
  9. ಹಿಟ್ಟಿನ ಗಿರಣಿ
  10. ಉಪ್ಪಿನಕಾಯಿ

ಹೀಗೆ ಈ ಮೇಲಿನ ಯಂತ್ರೋಪಕರಣಗಳನ್ನು ಸೇರಿದಂತೆ ಕಿರು ಆಹಾರ ಸಂಸ್ಕರಣೆ ಯಂತ್ರೋಪಕರಣಗಳನ್ನು ಖರೀದಿ ಮಾಡಲು ಸಹಾಯಧನವನ್ನು ಒದಗಿಸುತ್ತದೆ.

ಪ್ರಮುಖ ದಾಖಲೆಗಳು :

ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಸಿಂಚಾಯಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕೆಲವೊಂದು ಪ್ರಮುಖ ದಾಖಲೆಗಳನ್ನು ಹೊಂದಿರಬೇಕು ಆ ದಾಖಲೆಗಳೆಂದರೆ.

  1. ಪಾನ್ ಕಾರ್ಡ್
  2. ಆಧಾರ್ ಕಾರ್ಡ್
  3. ಬ್ಯಾಂಕ್ ಪಾಸ್ ಬುಕ್

ಹೀಗೆ ಪ್ರಮುಖ ದಾಖಲೆಗಳನ್ನು ಹೊಂದುವುದರ ಮೂಲಕ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಹೀಗೆ ಕೇಂದ್ರ ಸರ್ಕಾರವು ಜಾರಿಗೆ ತಂದಂತಹ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಮೂಲಕ ಯಂತ್ರೋಪಕರಣಗಳನ್ನು ಖರೀದಿ ಮಾಡಲು ರೈತರಿಗೆ ಸಹಾಯಧನವನ್ನು ನೀಡುತ್ತಿದ್ದು ಇದರ ಪ್ರಯೋಜನವನ್ನು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಇತರೆ ವರ್ಗದ ರೈತರು ಪಡೆದುಕೊಳ್ಳಬಹುದಾಗಿದೆ. ಹಾಗಾಗಿ ನಿಮಗೆ ತಿಳಿದಿರುವ ರೈತರಿಗೆ ಯಂತ್ರೋಪಕರಣಗಳನ್ನು ಖರೀದಿ ಮಾಡಲು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಮೂಲಕ ಸಹಾಯಧನವನ್ನು ಪಡೆದು ಖರೀದಿ ಮಾಡಲು ತಿಳಿಸಿ.

ಇತರೆ ಪ್ರಮುಖ ವಿಷಯಗಳು :

ಸ್ವಂತ ಉದ್ಯೋಗ ಮಾಡುವವರಿಗೆ ಗುಡ್ ನ್ಯೂಸ್ :ಸರ್ಕಾರದಿಂದ 57,000 ರೂ ವರೆಗೆ ಸಹಾಯಧನ ! ತಕ್ಷಣ ಅರ್ಜಿ ಸಲ್ಲಿಸಿ ಇಲ್ಲಿದೆ ಡೈರೆಕ್ಟ್ ಲಿಂಕ್

Today Market Price : ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ ನ ಮಾರ್ಕೆಟ್ ಬೆಲೆ ತಿಳಿದುಕೊಳ್ಳಿ : ಇಲ್ಲಿದೆ ಸಂಪೂರ್ಣ ಮಾಹಿತಿ


Leave a Comment