ರೈತರಿಗೆ ಉಚಿತ ಬೋರ್ವೆಲ್ ಯೋಜನೆ : ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನ ಇಲ್ಲಿದೆ ತಕ್ಷಣ ನೋಡಿ


ನಮಸ್ಕಾರ ಕನ್ನಡಿಗರೇ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ಹಲವಾರು ಯೋಜನೆಗಳನ್ನು ದಿನದಿಂದ ದಿನಕ್ಕೆ ವಿಸ್ತರಿಸುತ್ತಿವೆ ಹಾಗೂ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿವೆ. ಅದರಂತೆ ಕರ್ನಾಟಕ ಸರ್ಕಾರವು ತನ್ನ ರಾಜ್ಯದ ರೈತರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಒಂದು ಹೊಸ ಯೋಜನೆಯನ್ನು ಜಾರಿಗೆ ತಂದಿದ್ದು ಇದರ ಪ್ರಯೋಜನವನ್ನು ರಾಜ್ಯದಲ್ಲಿರುವ ಎಲ್ಲ ರೈತರು ಪಡೆದುಕೊಳ್ಳುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

Free borewell scheme for farmers
Free borewell scheme for farmers

ಇವತ್ತಿನ ಲೇಖನದಲ್ಲಿ ರಾಜ್ಯ ಸರ್ಕಾರವು ರಾಜ್ಯದಲ್ಲಿರುವ ಇಂತಹ ರೈತರಿಗೆ ಸರ್ಕಾರದ ಒಂದು ಯೋಜನೆಯ ಮೂಲಕ ಉಚಿತವಾಗಿ ಬೋರ್ವೆಲ್ ಕೊರೆಸಲು ಅರ್ಜಿಯನ್ನು ಆಹ್ವಾನ ಮಾಡಿದೆ. ಅದರಂತೆ ಯಾವೆಲ್ಲ ರೈತರು ರಾಜ್ಯ ಸರ್ಕಾರ ಜಾರಿಗೆ ತಂದಿರುವಂತಹ ಗಂಗಾ ಕಲ್ಯಾಣ ಯೋಜನೆಯ ಮೂಲಕ ಬೋರ್ವೆಲ್ ಕೊರಿಸಲು ಅರ್ಜಿಯನ್ನು ಸಲ್ಲಿಸಬಹುದು , ಅರ್ಹತೆಗಳು ಏನನ್ನು ಹೊಂದಿರಬೇಕು, ಪ್ರಮುಖ ದಾಖಲೆಗಳು ಯಾವುವು ಎಂಬುದರ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳಬಹುದು.

ಹಾಗಾದರೆ ನಿಮಗೂ ಕೂಡ ಉಚಿತ ಬೋರ್ವೆಲ್ ಬೇಕಾ?
ಈ ಉಚಿತ ಬೋರ್ವೆಲ್ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು?
ಯಾವೆಲ್ಲ ರೈತರು ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದು ಎಂಬುದರ ಮಾಹಿತಿಯನ್ನು ತಿಳಿದುಕೊಳ್ಳಲು ಈ ಲೇಖನವನ್ನು ಪೂರ್ಣವಾಗಿ ಓದಿ.

ಸರ್ಕಾರದಿಂದ ರಾಜ್ಯದ ರೈತರಿಗೆ ಉಚಿತ ಬೋರ್ವೆಲ್ ಯೋಜನೆ :

ಉಚಿತವಾಗಿ ಸರ್ಕಾರವು ರಾಜ್ಯದಲ್ಲಿರುವ ಈ ರೈತರಿಗೆ ಬೋರ್ವೆಲ್ ಕೊರೆಸಲು ಸಹಾಯ ಮಾಡುತ್ತಿದೆ. ಈ ಒಂದು ಸಹಾಯವನ್ನು ಸರ್ಕಾರ ಗಂಗಾ ಕಲ್ಯಾಣ ಯೋಜನೆಯ ಅಡಿಯಲ್ಲಿ ಮಾಡುತ್ತಿದೆ. ಈಗಲೇ ಅರ್ಹ ರೈತರು ಗಂಗಾ ಕಲ್ಯಾಣ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ತಮ್ಮ ಜಮೀನಿಗೆ ನೀರಾವರಿ ಸೌಲಭ್ಯವನ್ನು ಪಡೆದುಕೊಳ್ಳಬಹುದು.

ಗಂಗಾ ಕಲ್ಯಾಣ ಯೋಜನೆ :

ನೀರಾವರಿಯ ಸಮಸ್ಯೆ ಭಾರತದಲ್ಲಿ ಸಾಕಷ್ಟು ತೊಂದರೆಗಳನ್ನು ರೈತರಿಗೆ ತರುತ್ತಿದೆ. ಇದನ್ನು ಎದುರಿಸಲು ಮತ್ತು ಆರ್ಥಿಕ ಸ್ವಾವಲಂಬನೆ ಒದಗಿಸಲು ರೈತರಿಗೆ ಸಮಾಜ ಕಲ್ಯಾಣ ಇಲಾಖೆಯ ಮೂಲಕ ಕರ್ನಾಟಕ ಸರ್ಕಾರವು ಗಂಗಾ ಕಲ್ಯಾಣ ಯೋಜನೆಯ ಅಡಿಯಲ್ಲಿ ಸಹಾಯಧನವನ್ನು ಉಚಿತ ಬೋರ್ವೆಲ್ ಕೊರೆಸಲು ನೀಡುತ್ತಿದೆ. ವಿಶೇಷವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಲು ವಿನ್ಯಾಸಗೊಳಿಸಲಾಗಿದೆ.

ಗಂಗಾ ಕಲ್ಯಾಣ ಯೋಜನೆಯ ಉದ್ದೇಶ :

ಕರ್ನಾಟಕ ಸರ್ಕಾರವು ಸಮಾಜ ಕಲ್ಯಾಣ ಇಲಾಖೆಯಿಂದ ಜಾರಿಗೊಳಿಸಿರುವಂತಹ ಗಂಗಾ ಕಲ್ಯಾಣ ಯೋಜನೆಯ ಪ್ರಮುಖ ಉದ್ದೇಶ ಏನೆಂದರೆ ನೀರಾವರಿ ಸೌಲಭ್ಯವನ್ನು ರೈತರಿಗೆ ಒದಗಿಸಿ ಅವರು ಉತ್ತಮ ಬೆಳೆ ಬೆಳೆಯಲು ಪ್ರೇರಣೆಯಾಗುವುದು.

ವಿಶೇಷವಾಗಿ ಈ ಒಂದು ಯೋಜನೆಯ ಸಣ್ಣ ಮತ್ತು ಅತಿ ಸಣ್ಣ ಜಮೀನು ಹಿಡುವಳಿದಾರರಿಗಾಗಿ ರೂಪಿಸಲಾಗಿದ್ದು ಪಂಪ್ಸೆಟ್ ಅಳವಡಿಸಲು ಮತ್ತು ಬೋರ್ವೆಲ್ ಅನ್ನು ಕೊರೆಸಲು ಬೆಂಬಲವನ್ನು ಸರ್ಕಾರದಿಂದ ಪಡೆಯಬಹುದು. ಸರ್ಕಾರ ಈ ಬೆಂಬಲದ ಮೂಲಕ ರಾಜ್ಯದಲ್ಲಿರುವ ರೈತರು ತಮ್ಮ ಜಮೀನಿನಗಳಲ್ಲಿ ಉತ್ತಮ ಬೆಳೆಗಳನ್ನು ಬೆಳೆದು ತಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳಬಹುದಾಗಿದೆ.

ಒಟ್ಟಾರೆ ಸಮಾಜ ಕಲ್ಯಾಣ ಇಲಾಖೆಯಿಂದ ಕರ್ನಾಟಕ ಸರ್ಕಾರ ಗಂಗಾ ಕಲ್ಯಾಣ ಯೋಜನೆಯನ್ನು ಜಾರಿಗೆ ತಂದಿದ್ದು ಇದರ ಮೂಲಕ ತಮ್ಮ ಜಮೀನಿ ಗಳಿಗೆ ಸಂಬಂಧಿಸಿದಂತೆ ನೀರಾವರಿ ಸೌಲಭ್ಯವನ್ನು ಪಡೆದುಕೊಳ್ಳ ಬಹುದಾಗಿದೆ.

ಸಹಾಯಧನದ ಮಾಹಿತಿ :

  1. 1.5 ಲಕ್ಷದಿಂದ 3.50 ಲಕ್ಷದವರೆಗೆ ಸಹಾಯಧನವನ್ನು ಅರ್ಹ ರೈತರಿಗೆ ರಾಜ್ಯ ಸರ್ಕಾರ ಒದಗಿಸುತ್ತದೆ.
  2. ರೈತರು ಬೋರ್ವೆಲ್ ಕೊರೆಸುವ ಜೊತೆಗೆ ಪಂಪ್ಸೆಟ್ ಅಳವಡಿಸಲು ಮತ್ತು ಅದರ ಶಸ್ತ್ರತೆಯನ್ನು ನಿಭಾಯಿಸಲು ಈ ಮೊತ್ತದಲ್ಲಿ ಸಹಾಯವನ್ನು ನೀಡಲಾಗುತ್ತದೆ.

ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆಗಳು :

ಕರ್ನಾಟಕ ಸರ್ಕಾರವು ಜಾರಿಗೆ ತಂದಿರುವಂತಹ ಗಂಗಾ ಕಲ್ಯಾಣ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಕೆಲವೊಂದು ಅರ್ಹತೆಗಳನ್ನು ರಾಜ್ಯದ ರೈತರು ಹೊಂದಿರಬೇಕು. ಅವುಗಳೆಂದರೆ,

  1. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರು ಯೋಜನೆಗೆ ಅರ್ಜಿ ಸಲ್ಲಿಸಬಹುದು.
  2. ವಾರ್ಷಿಕ ಆದಾಯ 1.5 ಲಕ್ಷಕ್ಕಿಂತ ಹೆಚ್ಚು ಗ್ರಾಮೀಣ ಪ್ರದೇಶದಲ್ಲಿ ಇರಬಾರದು.
  3. ವಾರ್ಷಿಕ ಆದಾಯ 2 ಲಕ್ಷಕ್ಕಿಂತ ಹೆಚ್ಚು ನಗರ ಪ್ರದೇಶದಲ್ಲಿ ಇರಬಾರದು.
  4. ಕನಿಷ್ಟ 21 ವರ್ಷ ವಯಸ್ಸಿನವರಾಗಿರಬೇಕು.
  5. 1.20 ಎಕರೆಯಿಂದ 5 ಎಕರೆ ಒಳಗೆ ಜಮೀನನ್ನು ಹೊಂದಿರಬೇಕು.
    ರಾಜ್ಯ ಸರ್ಕಾರ ಜಾರಿಗೆ ತಂದಿರುವಂತಹ ಗಂಗಾ ಕಲ್ಯಾಣ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬೇಕಾದರೆ ಈ ಮೇಲಿನ ಅರ್ಹತೆಯನ್ನು ಹೊಂದಿರಬೇಕು.

ಗಂಗಾ ಕಲ್ಯಾಣ ಯೋಜನೆಗೆ ಅಗತ್ಯ ದಾಖಲಾತಿಗಳು :

ರಾಜ್ಯದ ರೈತರು ಗಂಗಾ ಕಲ್ಯಾಣ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಕೆಲವೊಂದು ಪ್ರಮುಖ ದಾಖಲೆಗಳನ್ನು ಹೊಂದಿರಬೇಕು.

  1. Income certificate
  2. Caste certificate
  3. Bank passbook
  4. Aadhar card
  5. Ration card
  6. ಇತ್ತೀಚಿನ ಪಹಣಿ ಪತ್ರ
  7. ಸಣ್ಣ ಹಿಡುವಳಿದಾರರ ಪ್ರಮಾಣ ಪತ್ರ

ಹೀಗೆ ಗಂಗಾ ಕಲ್ಯಾಣ ಯೋಜನೆಯ ಪ್ರಯೋಜನವನ್ನು ಪಡೆಯಲು ಬಯಸುವ ರೈತರು ಈ ಮೇಲಿನ ದಾಖಲಾತಿಗಳನ್ನು ಹೊಂದಿರಬೇಕು. ಈ ದಾಖಲಾತಿಗಳನ್ನು ಹೊಂದಿದಂತಹ ಪ್ರತಿಯೊಬ್ಬ ರೈತರು ಕೂಡ ರಾಜ್ಯ ಸರ್ಕಾರದ ಗಂಗಾ ಕಲ್ಯಾಣ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ಪಂಪ್ಸೆಟ್ ಹಾಗೂ ಬೋರ್ವೆಲ್ ಗಳನ್ನು ಕೊರೆಸಲು ಸರ್ಕಾರದಿಂದ ಸಹಾಯಧನವನ್ನು ಪಡೆಯಬಹುದಾಗಿದೆ.

ಅರ್ಜಿ ಸಲ್ಲಿಸುವ ಪ್ರಕ್ರಿಯೆ :

ಅರ್ಹ ರೈತರು ಗಂಗಾ ಕಲ್ಯಾಣ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಬಯಸುತ್ತಿದ್ದರೆ ತಮ್ಮ ಅಗತ್ಯ ದಾಖಲಾತಿಗಳೊಂದಿಗೆ ಸ್ಥಳೀಯ ಸಮಾಜ ಕಲ್ಯಾಣ ಇಲಾಖೆಯ ಕಚೇರಿಗೆ ಭೇಟಿ ನೀಡಿ ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಆಫ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುವ ಸಂದರ್ಭ ದಲ್ಲಿ ಅಭ್ಯರ್ಥಿಗಳು ಅಗತ್ಯ ದಾಖಲಾತಿಗಳನ್ನು ಸರಿಯಾಗಿ ಹೊಂದಿರಬೇಕು ಆಗ ಮಾತ್ರ ಯೋಜನೆಯ ಯಶಸ್ವಿಯಾಗಿ ಸಲ್ಲಿಕೆಯಾಗುತ್ತದೆ.

ಅರ್ಹ ರೈತರು ಗಂಗಾ ಕಲ್ಯಾಣ ಯೋಜನೆಯ ಪ್ರಯೋಜನವನ್ನು ಪಡೆದು ತಮ್ಮ ಜಮೀನಿನಲ್ಲಿ ಉತ್ತಮ ಬೆಳೆಗಳನ್ನು ಬೆಳೆಯಬಹುದಾಗಿದೆ. ಗಂಗಾ ಕಲ್ಯಾಣ ಯೋಜನೆಗೆ ಸಂಬಂಧಿಸಿ ದಂತೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲು ಕಲ್ಯಾಣ ಮಿತ್ರ 24*7 ಸಹಾಯವಾಣಿ 9482300400 ಈ ಸಂಖ್ಯೆಗೆ ಕರೆ ಮಾಡಬಹುದು.

ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

ಗಂಗಾ ಕಲ್ಯಾಣ ಯೋಜನೆ ಪ್ರಯೋಜನಗಳು :

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗಂಗಾ ಕಲ್ಯಾಣ ಯೋಜನೆಯು ಹಲವಾರು ಪ್ರಯೋಜನವನ್ನು ಹೊಂದಿದೆ. ಆ ಪ್ರಯೋಜನವನ್ನು ಪಡೆದುಕೊಳ್ಳಬೇಕಾದರೆ ರಾಜ್ಯದಲ್ಲಿರುವ ರೈತರು ಗಂಗಾ ಕಲ್ಯಾಣ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕು. ಅದರಂತೆ ಗಂಗಾ ಕಲ್ಯಾಣ ಯೋಜನೆಯ ಮೂಲಕ ರೈತರು ಏನೆಲ್ಲಾ ಸೌಲಭ್ಯವನ್ನು ಪಡೆಯಬಹುದು ಎಂದು ಈ ಕೆಳಗಿನಂತೆ ನೋಡುವುದಾದರೆ,

  1. ಶಾಶ್ವತ ನೀರಾವರಿ ಮೂಲವನ್ನು ರೈತರಿಗೆ ಕಲ್ಪಿಸಿ ಕೊಡುತ್ತದೆ ಇದರಿಂದ ರೈತರ ನೀರಾವರಿ ಸಮಸ್ಯೆ ಪರಿಹಾರವಾಗುತ್ತದೆ.
  2. ರೈತರು ಈ ಯೋಜನೆಯ ಮೂಲಕ ಉತ್ತಮ ನೀರಾವರಿ ಸೌಲಭ್ಯವನ್ನು ಪಡೆದು ತಮ್ಮ ಬೆಳೆ ವೈವಿಧ್ಯತೆ ಮತ್ತು ಉತ್ಪಾದನೆಯನ್ನು ಹೆಚ್ಚು ಮಾಡಿಕೊಳ್ಳಬಹುದು.
  3. ರೈತರ ಆರ್ಥಿಕ ಸ್ಥಿರತೆಯನ್ನು ಸಾಧಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಮೀಡಿಯಾ ಸಂಪರ್ಕ :

ಗಂಗಾ ಕಲ್ಯಾಣ ಯೋಜನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬೇಕಾದರೆ ರೈತರು ಮೀಡಿಯಾ ಸಂಪರ್ಕ ಪಡೆದುಕೊಳ್ಳಬಹುದು.
ಮಾಧ್ಯಮ x ಖಾತೆ @ SWDGok ಗೆ ಸಂಪರ್ಕಿಸಬಹುದು. ಗಂಗಾ ಕಲ್ಯಾಣ ಯೋಜನೆಯ ಬಗ್ಗೆ ವೆಬ್ಸೈಟ್ ಮಾತ್ರವಲ್ಲದೆ ಮೀಡಿಯಾ ಸಂಪರ್ಕವನ್ನು ಪಡೆದುಕೊಂಡು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲು ರೈತರಿಗೆ ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದೆ.

ಅಧಿಕೃತ ಜಾಲತಾಣ : ಕ್ಲಿಕ್ ಮಾಡಿ

ಕರ್ನಾಟಕ ಸರ್ಕಾರ ರಾಜ್ಯದ ರೈತರು ಅನುಭವಿಸುತ್ತಿರುವಂತಹ ನೀರಾವರಿ ಕೊರತೆಯನ್ನು ನೀಗಿಸಲು ಮತ್ತು ಅವರ ಆರ್ಥಿಕ ಜೀವನ ಮಟ್ಟವನ್ನು ಸುಧಾರಿಸಲು ಗಂಗಾ ಕಲ್ಯಾಣ ಯೋಜನೆಯು ಒಂದು ಮಹತ್ವದ ಹೆಜ್ಜೆಯಾಗಿದೆ. ಇಂತಹ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಂಡರೆ ಗ್ರಾಮೀಣ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದು ಹೇಳಬಹುದು. ರಾಜ್ಯ ಸರ್ಕಾರದ ಈ ಒಂದು ಯೋಜನೆಯ ಬಗ್ಗೆ ರಾಜ್ಯದಲ್ಲಿರುವ ಎಲ್ಲ ರೈತರು ತಿಳಿದುಕೊಂಡು ತಮ್ಮ ಜಮೀನುಗಳಲ್ಲಿ ಬೋರ್ವೆಲ್ ಗಳನ್ನು ಉಚಿತವಾಗಿ ಕೊರೆಸಬಹುದಾಗಿದೆ. ಈ ಯೋಜನೆಯ ಮಾಹಿತಿಯನ್ನು ರಾಜ್ಯದಲ್ಲಿರುವ ಎಲ್ಲ ರೈತರಿಗೂ ತಿಳಿಸಿ ಧನ್ಯವಾದಗಳು.

ಇತರೆ ಪ್ರಮುಖ ವಿಷಯಗಳು :


1 thought on “ರೈತರಿಗೆ ಉಚಿತ ಬೋರ್ವೆಲ್ ಯೋಜನೆ : ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನ ಇಲ್ಲಿದೆ ತಕ್ಷಣ ನೋಡಿ”

Leave a Comment