ನಮಸ್ಕಾರ ಕನ್ನಡಿಗರೇ, ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷಿ ಕಾರ್ಯಕ್ರಮ ಅನ್ನಭಾಗ್ಯ ಯೋಜನೆಯಾಗಿದ್ದು ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಹೊಂದಿರುವಂತಹ ಬಡ ಕುಟುಂಬಗಳಿಗೆ ಆಹಾರ ಭದ್ರತೆಯನ್ನು ನೀಡುವ ಉದ್ದೇಶದಿಂದ ಈ ಒಂದು ಯೋಜನೆಯನ್ನು ಜಾರಿಗೆ ತರಲಾಗಿದೆ. ತಿಂಗಳಿಗೆ 5 ಕೆಜಿ ಉಚಿತ ಅಕ್ಕಿಯನ್ನು ನೀಡುವುದರ ಜೊತೆಗೆ ಹಿಂದುಳಿದ 5 ಕೆಜಿ ಅಕ್ಕಿಯ ಬದಲು ಡೈರೆಕ್ಟ ಬೆನಿಫಿಟ್ ಟ್ರಾನ್ಸ್ಫರ್ ಮೂಲಕ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣವನ್ನು ನೆರವಾಗಿ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಜಮಾ ಮಾಡಲಾಗುತ್ತದೆ.
ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತರಲು ಮುಖ್ಯ ಉದ್ದೇಶ ಏನೆಂದರೆ, ಬಡ ಕುಟುಂಬಗಳಿಗೆ ಅಕ್ಕಿ ಹಾಗೂ ಹಣದ ರೂಪದಲ್ಲಿ ಆಹಾರದ ಭದ್ರತೆಯನ್ನು ಒದಗಿಸುವುದಾಗಿದೆ ಇದರಿಂದ ರಾಜ್ಯದಲ್ಲಿರುವ ಬಡತನದ ವಿರುದ್ಧ ಹೋರಾಡುವುದು ಮತ್ತು ಕುಟುಂಬದ ದಿನನಿತ್ಯದ ಖರ್ಚುಗಳನ್ನು ಸುಗಮಗೊಳಿಸುವುದು ರಾಜ್ಯ ಸರ್ಕಾರದ ಮುಖ್ಯ ಉದ್ದೇಶವಾಗಿದೆ. ಈ ಅನ್ನ ಭಾಗ್ಯ ಯೋಜನೆಯಿಂದ ತುಂಬ ಬಡ ಕುಂಟುಬಗಳಿಗೆ ಆರ್ಥಿಕವಾಗಿ ಸಹಾಯವಾಗುತ್ತಿದೆ, ರಾಜ್ಯ ಸರ್ಕಾರದಿಂದ ಬಂದ ಈ ಯೋಜನೆಯ ಕುರಿತು ಪ್ರತಿಯೊಬ್ಬರಲ್ಲಿ ಸಂತಸವನ್ನುಂಟು ಮಾಡಿದೆ.
ರಾಜ್ಯದ ಎಲ್ಲ ಜನರು ಸಿದ್ದರಾಮಯ್ಯ ಅವರಿಗೆ ಕೃತಜ್ಞತೆ ಸಲ್ಲಿಸುತ್ತಿದರೆ ಅವರ ಈ ಯೋಜನೆ ಇಂದಾಗಿ ಪ್ರತಿ ಮನೆಯ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗುತ್ತಿದೆ, ಈ ಯೋಜನೆಯ ಹಣ ಬಿಡುಗಡೆ ಆಗಿದ್ದು ರಾಜ್ಯ ಸಾಕಷ್ಟು ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿದೆ ಈ ಹಣ ನಿಮ್ಮ ಖಾತೆಗೂ ಬಂದಿದಿಯ ಎಂಬುದನ್ನು ತಿಳಿದುಕೊಳ್ಳು ಹಾಗೆ ಈ ವಿಷಯವನ್ನು ನಿಮ್ಮ ಹೆಲ್ಲ ಸ್ನೇಹಿತರಿಗೂ ತಿಳಿಸಿ ಇದರ ಯೋಜನೆಯನ್ನೂ ಪಡೆದುಕೊಳ್ಳಿ.
ಅನ್ನಭಾಗ್ಯ ಯೋಜನೆಯ ಪ್ರಮುಖ ಲಕ್ಷಣಗಳು :
ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತರಲು ಕೆಲವೊಂದು ಉದ್ದೇಶಗಳನ್ನು ತಿಳಿಸಲಾಗಿದೆ ಅದರಂತೆ ಅನ್ನಭಾಗ್ಯ ಯೋಜನೆಯ ಏನೆಲ್ಲ ಪ್ರಮುಖ ಲಕ್ಷಣಗಳನ್ನು ಹೊಂದಿದೆ ಎಂಬುದರ ಮಾಹಿತಿಯನ್ನು ನೋಡುವುದಾದರೆ.
- ಪ್ರತಿ ತಿಂಗಳು 5 ಕೆಜಿ ಉಚಿತ ಅಕ್ಕಿ.
- 5 ಕೆಜಿ ಅಕ್ಕಿಯ ಬದಲು 170 ನಗದು ಸಹಾಯಧನ.
- 34 ರೂಪಾಯಿಗಳ ಲೆಕ್ಕಚಾರದಲ್ಲಿ ಪ್ರತಿ ಕೆಜಿ ಅಕ್ಕಿಗೆ ಹಣ ವರ್ಗಾವಣೆ.
- ಬಿಪಿಎಲ್ ಮತ್ತು ಅಂಚೋದಯ ಕಾರ್ಡ್ ಹೊಂದಿರುವ ಕುಟುಂಬಗಳು ಯೋಜನೆಯ ಪ್ರಯೋಜನ ಪಡೆಯಬಹುದು.
- ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಹೆಚ್ಚಿನ ಆದ್ಯತೆ.
- ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣವನ್ನು ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ.
- ಮಧ್ಯವರ್ತಿ ಮತ್ತು ಅವ್ಯವಹಾರ ತಡೆಗಟ್ಟಲು ಇದರಿಂದ ಸಾಧ್ಯ.
- ಫಲಾನುಭವಿಗಳಿಗೆ ಅವಶ್ಯಕವಾಗಿ ಇರುವಂತಹ ಸಹಾಯವನ್ನು ಪ್ರತಿ ತಿಂಗಳು ಒದಗಿಸಲಾಗುತ್ತದೆ.
- ಈ ಒಂದು ಯೋಜನೆಯು ಆರ್ಥಿಕ ಬಲವರ್ಧನೆಗೆ ಕಾರಣವಾಗಿದ.
ಅನ್ನಭಾಗ್ಯ ಯೋಜನೆಯ ಹಣ ಚೆಕ್ ಮಾಡುವ ವಿಧಾನ :
ರಾಜ್ಯ ಸರ್ಕಾರವು ಅನ್ನಭಾಗ್ಯ ಯೋಜನೆಯ ಹಣವನ್ನು ಪ್ರತಿ ತಿಂಗಳು ಮಹಿಳೆಯರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುತ್ತಿದೆ ಅದರಂತೆ ಡಿವಿಟಿ ಕರ್ನಾಟಕ ಅಪ್ಲಿಕೇಶನ್ ಅನ್ನು ಬಳಸಿಕೊಂಡು ಹಣ ಚೆಕ್ ಮಾಡುವ ವಿಧಾನವನ್ನು ನೋಡುವುದಾದರೆ.
- ಡಿಪಿ ಡಿ ಕರ್ನಾಟಕ ಅಪ್ಲಿಕೇಶನ್ ಅನ್ನು ಮೊದಲು ಪ್ಲೇ ಸ್ಟೋರ್ ನಿಂದ ಡೌನ್ಲೋಡ್ ಮಾಡಿಕೊಳ್ಳಬೇಕು.
- ಡೌನ್ಲೋಡ್ ಮಾಡಕೊಂಡ ನಂತರ ಆಧಾರ್ ಸಂಖ್ಯೆಯನ್ನು ಅಪ್ಲಿಕೇಶನ್ ನಲ್ಲಿ ನಮೂದಿಸಬೇಕು
- ನಂತರ ಆಧಾರ್ ಲಿಂಕ್ ಆಗಿರುವ ಮೊಬೈಲ್ ನಂಬರ್ ಗೆ ಬಂದಂತಹ ಓಟಿಪಿಯನ್ನು ನಮೂದಿಸಿ ಎಂ ಪಿನ್ ಸೆಟ್ ಮಾಡಬೇಕು
- ನಾಲ್ಕು ಅಂಕಿಯ ಪಾಸ್ವರ್ಡ್ ಅನ್ನು ರಚಿಸಿದ ನಂತರ ಲಾಗಿನ್ ಪ್ರಕ್ರಿಯೆ ಮುಗಿಯುತ್ತದೆ
- ಎಲ್ಲ ಪ್ರಕ್ರಿಯೆಗಳನ್ನು ಮುಗಿದ ನಂತರ ಅಂದರೆ ಲಾಗಿನ್ ಆದ ನಂತರ ಅನ್ನಭಾಗ್ಯ ಯೋಜನೆ ಡಿಬಿಟಿ ಸ್ಥಿತಿ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು
- ಅದರಲ್ಲಿ ತಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಿರುವ ಹಣದ ವಿವರಗಳನ್ನು ಹಾಗೂ ಹಣ ಯಾವಾಗ ಜಮಾ ಆಗಿದೆ ಎಂಬುದರ ಮಾಹಿತಿಯನ್ನು ಕೂಡ ಪರಿಶೀಲಿಸಬಹುದು.
ಅನ್ನಭಾಗ್ಯ ಯೋಜನೆಯ ಸವಾಲುಗಳು :
ಕರ್ನಾಟಕ ರಾಜ್ಯ ಸರ್ಕಾರವು ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತರುವ ಸಂದರ್ಭದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದೆ ಹಾಗೂ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ ಎಂದು ಹೇಳಬಹುದು. ಸದ್ಯ ಈಗ ಅನ್ನಭಾಗ್ಯ ಯೋಜನೆಯನ್ನು ಜಾರಿಗೊಳಿಸುವಲ್ಲಿ ಏನೆಲ್ಲಾ ಸವಾಲುಗಳಿಗೆ ಎಂದು ನೋಡುವುದಾದರೆ.
- ಆಧಾರ್ ಕಾರ್ಡ್ ಅನ್ನು ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡುವ ಪ್ರಕ್ರಿಯೆಯಲ್ಲಿ ದೋಷಗಳು ಸಾಧ್ಯತೆ
- ಗ್ರಾಮೀಣ ಪ್ರದೇಶಗಳಲ್ಲಿ ಡಿ ಬಿ ಟಿ ಆಪ್ಲಿಕೇಶನ್ ಬಳಕೆ ಹೆಚ್ಚು ಸವಾಲಾಗಿದೆ
- ಅನ್ನಭಾಗ್ಯ ಯೋಜನೆಯ ವಿವರಗಳನ್ನು ಜನರಿಗೆ ತಲುಪಿಸಲು ಸಾಕಷ್ಟು ಪ್ರಚಾರದ ಅಗತ್ಯವಿದೆ
- ಯೋಜನೆಗೆ ಸಂಬಂಧಿಸಿ ದಂತೆ ಅರ್ಹ ಪಟ್ಟಿಯಲ್ಲಿ ತಪ್ಪುಗಳನ್ನು ಗುರುತಿಸುವುದು
ಹೀಗೆ ಅನೇಕ ರೀತಿಯ ಸವಾಲುಗಳನ್ನು ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿ ದಂತೆ ನೋಡಬಹುದಾಗಿದೆ.
ಒಟ್ಟಾರೆ ಕರ್ನಾಟಕ ಸರ್ಕಾರವು ಜಾರಿಗೆ ತಂದಂತಹ ಅನ್ನ ಭಾಗ್ಯ ಯೋಜನೆಯು ಸಾಕಷ್ಟು ಯಶಸ್ವಿಯಾಗಿದ್ದು ಕರ್ನಾಟಕ ಸರ್ಕಾರ ಬಡತನ ನಿರ್ಮೂಲನೆ ಇತ್ತ ಇಟ್ಟಂತಹ ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಬಹುದು. ಆರ್ಥಿಕ ನೆರವನ್ನು ಹಾಗೂ ಆಹಾರ ಭದ್ರತೆಯನ್ನು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಒದಗಿಸುವ ಮೂಲಕ ಸಾಮಾಜಿಕ ಅಭಿವೃದ್ಧಿಗೆ ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯ ಕಾರಣವಾಗಿದೆ. ಸರ್ಕಾರ ಡಿ ಬಿ ಟಿ ತಂತ್ರಜ್ಞಾನವನ್ನು ಬಳಸಿಕೊಂಡು ಮಹಿಳೆಯರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆಯನ್ನು ಸರಳಗೊಳಿಸುವ ಮತ್ತು ಪಡಿತರ ವ್ಯವಸ್ಥೆಯಲ್ಲಿ ಉತ್ತಮತೆಯನ್ನು ತರಲು ಅನ್ನಭಾಗ್ಯ ಯೋಜನೆಯ ಸಾಕಷ್ಟು ಯಶಸ್ವಿಯಾಗಿದೆ ಎಂದು ಹೇಳಬಹುದು. ಒಟ್ಟಾರೆ ಕರ್ನಾಟಕ ಸರ್ಕಾರದ ಅನ್ನಭಾಗ್ಯ ಯೋಜನೆಯು ಹೆಚ್ಚು ಯಶಸ್ವಿಯಾಗಿದೆ ಎಂದು ಹೇಳಿದರೆ ತಪ್ಪಾಗಲಾರದು. ಧನ್ಯವಾದ.