ನಮಸ್ಕಾರ ಕನ್ನಡಿಗರೇ, ಇವತ್ತಿನ ಲೇಖನದಲ್ಲಿ ರಾಜ್ಯ ಸರ್ಕಾರದಿಂದ ರೈತರಿಗೆ ಸಿಹಿ ಸುದ್ದಿಯನ್ನು ತಿಳಿಸುತ್ತಿರುವುದರ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. ಸದ್ಯ ರಾಜ್ಯ ಸರ್ಕಾರದಿಂದ ಸರ್ಕಾರಿ ಜಮೀನನ್ನು ಮಂಜೂರಾತಿ ಪಡೆದು ಸಾಗುವಳಿ ಮಾಡುತ್ತಿರುವ ರೈತರಿಗೆ ಸಿಹಿ ಸುದ್ದಿ ಎಂದು ಹೇಳಬಹುದು. ಇದೀಗ ಗುಂಡ್ಲುಪೇಟೆ ತಾಲೂಕು ತೆರಕಣಾಂಬಿ ಹೋಬಳಿಯ ಬೊಮ್ಮನಹಳ್ಳಿ ಗ್ರಾಮದಲ್ಲಿ ಬಗರ್ ಹುಕುಂ ಡಿಜಿಟಲ್ ಸಾಗುವಳಿ ಚೀಟಿ ವಿತರಣೆಗೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ.
ರಾಜ್ಯ ಸರ್ಕಾರದ ವಿವಿಧ ಯೋಜನೆಯ ಅಡಿಯಲ್ಲಿ ಅನೇಕ ವರ್ಷಗಳಿಂದ ದೊಡ್ಡ ಸಂಖ್ಯೆಯ ರೈತರು ಜಮೀನನ್ನು ಸಾಗುವಳಿ ಮಾಡಲು ಮಂಜೂರಾತಿ ಪಡೆದಿದ್ದರೂ ಕೂಡ ಅಧಿಕೃತವಾದ ದಾಖಲೆಗಳನ್ನು ತಮ್ಮ ಜಮೀನಿಗೆ ಸಂಬಂಧಪಟ್ಟಂತೆ ಪಡೆದುಕೊಳ್ಳಲು ಸಾಧ್ಯವಾಗದೆ ರೈತರು ಸರ್ಕಾರಿ ಕಚೇರಿ ಅಲೆದಾಡುವ ಪರಿಸ್ಥಿತಿಗೆ ಇದೀಗ ಬ್ರೇಕ್ ಬೀಳಲಿದ್ದು ತಮ್ಮ ಜಮೀನಿನ ಹಕ್ಕು ಪತ್ರ ವಿತರಣೆಗೆ ಕಂದಾಯ ಇಲಾಖೆಯಿಂದ ರೈತರಿಗೆ ನೂತನ ವ್ಯವಸ್ಥೆ ಜಾರಿಗೆ ಮಾಡಲಾಗಿದೆ. ಹಾಗಾದರೆ ಬಗರು ಹುಕುಂ ಯೋಜನೆ ಎಂದರೇನು? ಸರ್ಕಾರದಿಂದ ಬಗರ್ ಹುಕುಂ ಡಿಜಿಟಲ್ ಸಾಗುವಳಿ ಚೀಟಿ ವಿತರಣೆ ಪ್ರಕ್ರಿಯೆ ಹೇಗಿರುತ್ತದೆ ಎಂಬುದರ ಕುರಿತಂತೆ ಇನ್ನು ಅನೇಕ ವಿಷಯಗಳ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳಬಹುದಾಗಿದೆ.
ಬಗರ್ ಹುಕುಂ ಯೋಜನೆ :
ಒಬ್ಬ ರೈತ ಕೃಷಿ ಬಳಕೆಗಾಗಿ ಸರ್ಕಾರಿ ಜಮೀನನ್ನು ಅನಧಿಕೃತವಾಗಿ ಬಳಕೆ ಮಾಡಿಕೊಂಡು ಆ ಜಮೀನನ್ನು ನಂತರ ಸಕ್ರಮಗೊಳಿಸಲು 108c (1) ಅಡಿಯಲ್ಲಿ ತಮ್ಮ ಜಮೀನಿಗೆ ಕರ್ನಾಟಕ ಭೂಕಂದಾಯ ನಿಯಮಗಳ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಿ ಹಕ್ಕು ಪತ್ರವನ್ನು ಪಡೆಯುವುದಕ್ಕೆ ಬಗರ್ ಹುಕುಂ ಭೂಮಿ ಎಂದು ಕರೆಯಲಾಗುತ್ತದೆ. ಸದ್ಯ ಈಗ ಬಗರು ಹುಕುಂ ಯೋಜನೆಗೆ ಸಂಬಂಧಿಸಿ ದಂತೆ ಕಂದಾಯ ಸಚಿವರಾದ ಕೃಷ್ಣಭೈರೇಗೌಡ ಅವರು ಹಂಚಿಕೊಂಡಿರುವಂತಹ ಪ್ರಕಟಣೆಯ ಬಗ್ಗೆ ನೋಡುವುದಾದರೆ,
ಕಂದಾಯ ಸಚಿವರಿಂದ ಮಾಹಿತಿ :
ಡಿಜಿಟಲ್ ಸಾಗುವಳಿ ಚೀಟಿಯನ್ನು ಬಗರ್ ಹುಕು ಮಂಜೂರಾತಿ ಪಡೆದ ರೈತರಿಗೆ ನೀಡುವ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಪ್ರಾರಂಭಿಸಿದೆ ಇದರಿಂದ ದಾಖಲೆಗಳನ್ನು ಕಳೆದುಕೊಳ್ಳುವ ಮತ್ತು ಕಚೇರಿಗೆ ಅಲೆದಾಡುವಂತಹ ಪರಿಸ್ಥಿತಿ ತಪ್ಪಲಿದೆ ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ರಾಜ್ಯದ ರೈತರಿಗೆ ತಿಳಿಸಿದ್ದಾರೆ. ಹಾಗಾದರೆ ಬಗರ ಹುಕುಂ ಡಿಜಿಟಲ್ ಸಾಗುವಳಿ ಚೀಟಿ ವಿತರಣೆ ಪ್ರಾರಂಭ ಯಾವಾಗ ಆಗಲಿದೆ ಎಂಬುದರ ಮಾಹಿತಿಯನ್ನು ಈ ಕೆಳಗಿನಂತೆ ನೋಡುವುದಾದರೆ,
ಬಗರ್ ಹುಕುಂ ಡಿಜಿಟಲ್ ಸಾಗುವಳಿ ಚೀಟಿ ವಿತರಣೆ ಪ್ರಾರಂಭ :
ರೈತರು ತಮ್ಮ ಜಮೀನಿಗೆ ಬಗರ್ ಹುಕುಂ ಯೋಜನೆಯ ಅಡಿಯಲ್ಲಿ ಹಕ್ಕು ಪತ್ರವನ್ನು ಪಡೆಯಲು ಅರ್ಜಿ ಸಲ್ಲಿಸಿದ ನಂತರ ಅರ್ಜಿಗಳನ್ನು ಬಗರ್ ಹುಕುಂ ಸಮಿತಿಯು ಶಾಸಕರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು ಅಲ್ಲಿ ಮಂಡನೆ ಮಾಡಲಾಗುತ್ತದೆ. ಹಕ್ಕು ಪತ್ರವನ್ನು ಪಡೆಯಲು ಅರ್ಹರಿರುವ ರೈತರ ಅರ್ಜಿಯನ್ನು ಮಾರ್ಗಸೂಚಿಯ ಪ್ರಕಾರ ಈ ಸಮಿತಿ ಸಭೆಯಲ್ಲಿ ಅನುಮೋದನೆ ಮಾಡಿ ತಹಶೀಲ್ದಾರರು ಅಧಿಕೃತ ಡಿಜಿಟಲ್ ಸಾಗುವಳಿ ಚೀಟಿಯನ್ನು ರಾಜ್ಯ ಸರ್ಕಾರದ ಪರವಾಗಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ನೊಂದಾಯಿಸಿ ಫಲಾನುಭವಿ ರೈತರಿಗೆ ಹಸ್ತಾಂತರಿಸುತ್ತಾರೆ.
ಬಗರ್ ಹುಕುಂ ಯೋಜನೆಯ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಿ ರಾಜ್ಯದಲ್ಲಿ ಮೊದಲ ಡಿಜಿಟಲ್ ಸಾಗುವಳಿ ಚೀಟಿ ಪಡೆದ ಗಳಿಗೆ ಗುಂಡ್ಲುಪೇಟೆ ತಾಲೂಕು ತೆರಕಣಂಬಿ ಹೋಬಳಿಯ ಬೊಮ್ಮನಹಳ್ಳಿ ಗ್ರಾಮದ ಶ್ರೀ ನಂಜುಂಡಯ್ಯ ಬಿನ್ ಹುಚ್ಚಯ್ಯ ಎಂಬುವವರು ಪಾತ್ರರಾಗಿದ್ದಾರೆ. ರಾಜ್ಯದಲ್ಲೇ ಮೊದಲ ನೋಂದಣಿ ಬಗರ್ ಹುಕುಂ ಯೋಜನೆಯ ಅಡಿಯಲ್ಲಿ ಮಾಡಿಸಿದ ಡಿಜಿಟಲ್ ಸಾಗುವಳಿ ಚೀಟಿ ಪಡೆದ ಫಲಾನುಭವಿ ಎಂಬ ಶ್ರೇಯಕ್ಕೆ ಶ್ರೀ ನಂಜುಂಡಯ್ಯ ಬಿನ್ ಹುಚ್ಚಯ್ಯನವರು ಪಾತ್ರರಾಗಿದ್ದಾರೆ.
1.26 ಲಕ್ಷ ಅರ್ಹ ರೈತರಿಗೆ ಚೀಟಿ ವಿತರಣೆ :
1.26 ಲಕ್ಷ ಅರ್ಹ ರೈತರಿಗೆ ಮುಂದಿನ ಆರು ತಿಂಗಳಲ್ಲಿ ಡಿಜಿಟಲ್ ಸಾಗುವಳಿ ಚೀಟಿ ವಿತರಣೆ ಮಾಡಲಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ. ಬಗರ್ ಹುಕುಂ ಡಿಜಿಟಲ್ ಯೋಜನೆಯಡಿಯಲ್ಲಿ ಇಲ್ಲಿಯವರೆಗೆ ಒಟ್ಟು ಸಲ್ಲಿಕೆಯಾಗಿರುವ ಅರ್ಜಿಗಳ ಸಂಖ್ಯೆ ಹಾಗು ಬಗರ್ ಹುಕುಂ ಡಿಜಿಟಲ್ ಸ್ಸಾಗುವಳಿ ಯೋಜನೆಯಡಿ ವಿತರಣೆ ಆಗಿರುವ ಚೀಟಿಗಳ ಒಟ್ಟು ಸಂಖ್ಯೆ ಲಕ್ಷ ಅರ್ಜಿ ದಾರರು ಇತರ ಲಾಭವನ್ನು ಪಡೆಯಲು ಅರ್ಹರು ಎಂದು ಪರಿಗಣಿಸಲಾಗಿದೆ.
ಇದರ ಹಣವನ್ನು ಡಿಸೆಂಬರ್ ಮೊದಲ ವಾರದಲ್ಲಿ ಎಲ್ಲ ರೈತರಿಗೆ ವಿತರಿಸಲಾಗುವುದು ಎಂದು ಸರ್ಕಾರ ತಿಳಿಸಿದೆ ಅರ್ಜಿ ಸಲ್ಲಿಸಿರುವ ಪ್ರತಿಯೊಬ್ಬರು ತಮ್ಮ ತಮ್ಮ ಫಾರ್ಮ್ ಅನ್ನು ಮಟ್ತಹೊಮ್ಮೆ ಸೈಬರ್ ನಲ್ಲಿ ಚೆಕ್ ಮಾಡಿಸಿಕೊಳ್ಳಿ ಹಾಗು ಇದರ ಲಾಭ ವನ್ನು ಪಡೆದುಕೊಳ್ಳಿ, 5000 ಜನರಿಗೆ ಡಿಜಿಟಲ್ ಸಾಗೋಳಿ ಚೀಟಿಯನ್ನು ನೀಡಬೇಕೆಂಬ ಗುರಿಯನ್ನು ಕಂದಾಯ ಇಲಾಖೆಯಿಂದ ಹಾಕಿಕೊಳ್ಳಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ:
ಈ ಸಂಖ್ಯೆಯನ್ನು ಜನವರಿ ತಿಂಗಳ ವೇಳೆಗೆ 15 ರಿಂದ 20 ಸಾವಿರಕ್ಕೆ ಏರಿಸಲಾಗುವುದು ಎಂಬುದರ ಮಾಹಿತಿಯನ್ನು ಕೂಡ ಕಂದಾಯ ಸಚಿವರು ರೈತರ ಬಳಿ ಹಂಚಿಕೊಂಡಿದ್ದಾರೆ. ಇದಷ್ಟೇ ಅಲ್ಲದೆ ಎಲ್ಲಾ ಅರ್ಹ ಫಲಾನುಭವಿ ರೈತರಿಗೆ ಮುಂದಿನ ಆರು ತಿಂಗಳ ಒಳಗಾಗಿ ಸಾಗುವಳಿ ಚೀಟಿಯನ್ನು ವಿತರಣೆ ಮಾಡುವ ಯೋಜನೆಯನ್ನು ರೂಪಿಸಲಾಗಿದೆ ಹಾಗೂ ಎಲ್ಲರಿಗೂ ಕೂಡ ಹಕ್ಕು ಪತ್ರಗಳನ್ನು ಗುಂಡ್ಲುಪೇಟೆ ಮಾದರಿಯಲ್ಲೇ ರಿಜಿಸ್ಟರ್ ಕಚೇರಿಯಲ್ಲಿ ನೋಂದಾಯಿಸಿಗೆ ನೀಡಲಾಗುವುದು. ಈ ಮೂಲಕ ಸರ್ಕಾರದ ಅಧಿಕೃತ ಮುದ್ರೆಯನ್ನು ರೈತರ ಮಾಲೀಕತ್ವಕ್ಕೆ ಒತ್ತಲಾಗುವುದು ಎಂದು ಹೇಳಲು ಸಂತಸವಾಗುತ್ತಿದೆ ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ.
ಒಟ್ಟರೆ ರಾಜ್ಯ ಸರ್ಕಾರವು ಬಗರ್ ಹುಕುಂ ಯೋಜನೆ ಅಡಿಯಲ್ಲಿ ತಮ್ಮ ಜಮೀನಿನ ಹಕ್ಕು ಪತ್ರವನ್ನು ಪಡೆದುಕೊಳ್ಳಲು ಅರ್ಜಿಯನ್ನು ಸಲ್ಲಿಸಿದ ರೈತರಿಗೆ ಸಿಹಿ ಸುದ್ದಿಯನ್ನು ನೀಡಲಿ ಎಂದು ಹೇಳಬಹುದು. ಹಾಗಾಗಿ ನಿಮಗೆ ತಿಳಿದಿರುವ ರೈತರಿಗೆ ರಾಜ್ಯ ಸರ್ಕಾರ ಮುಂದಿನ ಆರು ತಿಂಗಳ ಒಳಗಾಗಿ ಬಗರ್ ಹುಕುಂ ಯೋಜನೆ ಅಡಿಯಲ್ಲಿ ಹಕ್ಕು ಪತ್ರಗಳನ್ನು ರೈತರಿಗೆ ನೀಡಲಾಗುತ್ತದೆ ಎಂಬುದರ ಮಾಹಿತಿಯನ್ನು ತಿಳಿಸಿ.
ಇತರೆ ಪ್ರಮುಖ ವಿಷಯಗಳು:
Anna Bhagya Scheme : ಅನ್ನಭಾಗ್ಯ ಯೋಜನೆಯ ಹಣ ಬಿಡುಗಡೆ : ನಿಮಗೂ ಬಂದಿದ್ಯಾ ಚೆಕ್ ಮಾಡಿ ಇಲ್ಲಿದೆ ಡೈರೆಕ್ಟ್ ಲಿಂಕ್