ರೇಷನ್ ಕಾರ್ಡ್ ರದ್ದಾಗಿರುವವರಿಗೆ ಸಿಹಿ ಸುದ್ದಿ: ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ


ನಮಸ್ಕಾರ ಕನ್ನಡಿಗರೇ, ರಾಜ್ಯ ಸರ್ಕಾರ ರಾಜ್ಯದಾದ್ಯಂತ ಬಂದಂತಹ ವ್ಯಾಪಕ ಟೀಕೆಗಳ ಪ್ರಯುಕ್ತ ಅನರ್ಹ ಬಿಪಿಎಲ್ ರೇಷನ್ ಕಾರ್ಡ್ ರದ್ದು ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಅಷ್ಟೇ ಅಲ್ಲದೆ ಈಗಾಗಲೇ ರದ್ದಾಗಿರುವಂತಹ ಅರ್ಹರ ರೇಷನ್ ಕಾರ್ಡ್ಗಳನ್ನು ಕೂಡ ಯಥಾಸ್ಥಿತಿಯಲ್ಲಿ ವಾಪಸು ಒದಗಿಸಲು ಸರ್ಕಾರ ಮುಂದಾಗಿದೆ. ರೇಷನ್ ಕಾರ್ಡ್ ಗೆ ಸಂಬಂಧಿಸಿದಂತಹ ಕೆಲವೊಂದು ಪ್ರಮುಖ ವಿಷಯಗಳ ಬಗ್ಗೆ ಸಂಪೂರ್ಣವಾಗಿ ಈ ಲೇಖನದಲ್ಲಿ ನೋಡುವುದಾದರೆ.

Opportunity to apply for new ration card
Opportunity to apply for new ration card

ನವೆಂಬರ್ 21ರಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ :

ವಿಧಾನಸೌಧದಲ್ಲಿ ನವೆಂಬರ್ 21ರಂದು ನಡೆದಂತಹ ಸುದ್ದಿಗೋಷ್ಠಿಯಲ್ಲಿ ರೇಷನ್ ಕಾರ್ಡ್ ಗೆ ಸಂಬಂಧಿಸಿದಂತಹ ಮಾಹಿತಿ ಬಗ್ಗೆ ಆಹಾರ ಸಚಿವರು ಕೆಎಚ್ ಮುನಿಯಪ್ಪ ರವರು ನೀಡಿರುವಂತಹ ಮಾಹಿತಿಯ ಪ್ರಕಾರ ರೇಷನ್ ಕಾರ್ಡ್ಗಳ ಪರಿಷ್ಕರಣೆಯನ್ನು ಸದ್ಯಕ್ಕೆ ಕೈ ಬಿಡಲಾಗಿದೆ. ಆದಾಯ ತೆರಿಗೆ ಪಾವತಿದಾರರನ್ನು ಮತ್ತು ಸರ್ಕಾರಿ ನೌಕರರನ್ನು ಹೊರತುಪಡಿಸಿದರೆ ಯಥಾ ಸ್ಥಿತಿಯಲ್ಲಿ ಉಳಿದಂತಹ ಕಾರ್ಡುಗಳು ಮುಂದುವರೆಯಲಿವೆ. ಸೂಕ್ತ ತೀರ್ಮಾನವನ್ನು ಈ ಬಗ್ಗೆ ಕೈಗೊಳ್ಳುವವರೆಗೂ ಯಾವುದೇ ರೀತಿಯ ಬದಲಾವಣೆ ಇರುವುದಿಲ್ಲ ಎಂದು ಆಹಾರ ಸಚಿವರು ಸ್ಪಷ್ಟಪಡಿಸಿದ್ದಾರೆ.

ರೇಷನ್ ಕಾರ್ಡ್ ಗೆ ಸಂಬಂಧಿಸಿದ ಮಾಹಿತಿಯ ಬಗ್ಗೆ ವಿಧಾನಸೌಧದಲ್ಲಿ ನವೆಂಬರ್ 21ರಂದು ನಡೆದ ಸುದ್ದಿಗೋಷ್ಠಿಯಲ್ಲಿ ರಾಜ್ಯದ ಜನತೆಗೆ ಸ್ಪಷ್ಟ ಮಾಹಿತಿಯನ್ನು ತಿಳಿಸಿದ್ದು ರೇಷನ್ ಕಾರ್ಡ್ಗಳ ಪರಿಷ್ಕರಣೆಯನ್ನು ಕೆಲವೊಂದು ಅಡೆತಡೆಗಳಿಂದಾಗಿ ಕೈಬಿಡಲಾಗಿದೆ ಆದರೆ ಮುಂದಿನ ದಿನಗಳಲ್ಲಿ ರೇಷನ್ ಕಾರ್ಡ್ ಗಳ ಪರಿಷ್ಕರಣೆ ನಡೆಸಿ ಅರ್ಹರಿಗೆ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ನೀಡಲಾಗುತ್ತದೆ ಎಂದು ಹೇಳಿದ್ದಾರೆ. ಪರಿಷ್ಕರಣೆಯಾದಂತಹ ರೇಷನ್ ಕಾರ್ಡ್ ಗಳನ್ನು ಹೊರೆತುಪಡಿಸಿ ಉಳಿದಂತಹ ಎಲ್ಲಾ ಕಾರ್ಡ್ ಗಳು ಯಥಾ ಸ್ಥಿತಿಯಲ್ಲಿ ಮುಂದುವರೆಯುತ್ತವೆ ಅಂದರೆ ಬಿಪಿಎಲ್ ರೇಷನ್ ಕಾರ್ಡ್ ನಿಂದ ದೊರೆಯುವಂತಹ ಎಲ್ಲಾ ಯೋಜನೆಗಳ ಲಾಭವನ್ನು ಅರ್ಹ ಬಿಪಿಎಲ್ ರೇಷನ್ ಕಾರ್ಡ್ದಾರರು ಪಡೆದುಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.

ಒಟ್ಟಾರೆ ಆಹಾರ ಸಚಿವರಾದ ಕೆಎಚ್ ಮುನಿಯಪ್ಪ ರವರು ರೇಷನ್ ಕಾರ್ಡ್ ಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಬದಲಾವಣೆಯನ್ನು ರಾಜ್ಯ ಸರ್ಕಾರ ಸೂಕ್ತ ತೀರ್ಮಾನವನ್ನು ಕೈಗೊಳ್ಳುವವರೆಗೆ ಇರುವುದಿಲ್ಲ ಎಂದು ಸ್ಪಷ್ಟನೆಯನ್ನು ನೀಡಿದ್ದಾರೆ.

ಅರ್ಹರಿಗೆ ರೇಷನ್ ಕಾರ್ಡ್ ವಾಪಸ್ ಸಿಗಲಿದೆ :

ಅನರ್ಹರ ಬಿಪಿಎಲ್ ಕಾರ್ಡ್ ರದ್ದತಿ ಕಾರ್ಯಾಚರಣೆಯ ಸಂದರ್ಭದಲ್ಲಿ ಕೆಲವೊಂದು ಅರ್ಹರೇಶನ್ ಕಾರ್ಡುಗಳು ಕೂಡ ರದ್ದಾಗಿವೆ. ಹೀಗೆ ಪರಿಷ್ಕರಣೆಗೆ ಒಳಪಟ್ಟು ಅಮಾನತು ಗೊಂಡಿರುವಂತಹ ಕಾಡುಗಳನ್ನು ಒಂದು ವಾರದೊಳಗೆ ತಾತ್ಕಾಲಿಕವಾಗಿ ಲಾಗಿನ್ ಗೆ ಒಳಪಡಿಸಿ ಅಕ್ಕಿಯನ್ನು ಮುಂದಿನ ವಾರದಿಂದ ಪಡೆದುಕೊಳ್ಳಲು ಸರ್ಕಾರ ಅವಕಾಶ ಕಲ್ಪಿಸುತ್ತದೆ ಎಂದು ಸಚಿವರು ರಾಜ್ಯದ ಜನತೆಗೆ ತಿಳಿಸಿದ್ದಾರೆ.


ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಮಾನದಂಡಗಳ ಅನುಸಾರವಾಗಿಯೇ ಕಳೆದ ಎರಡು ತಿಂಗಳಿನಿಂದ ಬಿಪಿಎಲ್ ರೇಷನ್ ಕಾರ್ಡ್ ಗಳ ಪರಿಶೀಲನೆಯನ್ನು ಪ್ರಾರಂಭಿಸಿತ್ತು. ಅದರಂತೆ ಈ ಪ್ರಕ್ರಿಯೆಯಲ್ಲಿ ಎಷ್ಟು ಕಾರ್ಡ್ ಗಳು ಪರಿಷ್ಕರಣೆಯಾಗಿವೆ ಇದರಲ್ಲಿ ಎಷ್ಟು ಕಾರ್ಡ್ ಗಳು ಸರ್ಕಾರಿ ನೌಕರರದ್ದು ಹಾಗೂ ಆದಾಯ ತೆರಿಗೆ ಪಾವತಿದಾರರದ್ದು ಎಷ್ಟು ರೇಷನ್ ಕಾರ್ಡ್ ಗಳು ಇವೆ ಎಂಬುದರ ವಿವರವನ್ನು ಸಚಿವರು ನೀಡಿದ ಮಾಹಿತಿಯ ಪ್ರಕಾರ ಈ ಕೆಳಗಿನಂತೆ ತಿಳಿದುಕೊಳ್ಳಬಹುದು.

ಆಹಾರ ಸಚಿವರಾದ ಕೆಎಚ್ ಮುನಿಯಪ್ಪ ರವರು ವಿಧಾನಸೌಧದಲ್ಲಿ ನಡೆದಂತಹ ಸುದ್ದಿಗೋಷ್ಠಿಯಲ್ಲಿ ಇದರ ಬಗ್ಗೆ ತಿಳಿಸಿದ್ದು ಸರಿಯಾದ ಮಾಹಿತಿಗಳನ್ನುಕಳೆದ ಎರಡು ತಿಂಗಳಿನಿಂದ ಕೇಂದ್ರ ಸರ್ಕಾರದ ಮಾನದಂಡಗಳ ಅನುಸಾರವೇ ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್ಗಳನ್ನು ಪರಿಶೀಲನೆ ಮಾಡಲು ಪ್ರಾರಂಭಿಸಿತ್ತು ಈ ಪ್ರಕ್ರಿಯೆಯಲ್ಲಿ ಸಚಿವರು ನೀಡಿದ ಮಾಹಿತಿಯ ಪ್ರಕಾರ ಪರಿಷ್ಕರಣೆಯಾದ ಕಾರ್ಡುಗಳು ಎಷ್ಟು ಸರ್ಕಾರಿ ನೌಕರರು ಇದರಲ್ಲಿ ಎಷ್ಟಿದ್ದಾರೆ ಹಾಗೂ ಆದಾಯ ತೆರಿಗೆ ಪಾವತಿದಾರರು ಎಷ್ಟಿದ್ದಾರೆ ಎಂಬ ವಿವರವನ್ನು ಈ ಕೆಳಗಿನಂತೆ ನೋಡುವುದಾದರೆ.

  1. ಪರಿಷ್ಕರಣಿಯಾದಂತಹ ಒಟ್ಟು ಕಾರ್ಡುಗಳ ಸಂಖ್ಯೆ : 3.81 ಲಕ್ಷ
  2. ಆದಾಯ ತೆರಿಗೆ ಪಾವತಿ ಮಾಡುವವರು : 98, 483
  3. ಸರ್ಕಾರಿ ನೌಕರರು : 4,036
    ಹೀಗೆ ರಾಜ್ಯ ಸರ್ಕಾರ ಪರಿಷ್ಕರಣೆಯಾದಂತಹ ಒಟ್ಟು ಕಾರ್ಡುಗಳ ಮಾಹಿತಿಯನ್ನು ತಿಳಿಸಿದ್ದು ಆದಾಯ ತೆರಿಗೆ ಪಾವತಿದಾರರು ಮತ್ತು ಸರ್ಕಾರಿ ನೌಕರರು ಅಕ್ರಮವಾಗಿ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಪಡೆದು ರಾಜ್ಯದಲ್ಲಿ ಇರುವಂತಹ ಬಡವರಿಗೆ ಸಿಗಬೇಕಾದ ಅವಕಾಶಗಳನ್ನು ಅರ್ಹರು ಪಡೆಯುತ್ತಿದ್ದಾರೆ ಇದರಿಂದ ಬಡವರು ವಂಚಿತರಾಗುತ್ತಿದ್ದಾರೆ ಎಂದು ಹೇಳಬಹುದು. ಆದರೆ ರಾಜ್ಯ ಸರ್ಕಾರದ ಈ ಒಂದು ಪ್ರಕ್ರಿಯೆಯ ಮೂಲಕ ಅರ್ಹ ರೇಷನ್ ಕಾರ್ಡ್ ದಾರರಿಗೆ ಸೌಲಭ್ಯವನ್ನು ಒದಗಿಸುವುದು ರಾಜ್ಯ ಸರ್ಕಾರದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಬಹುದು.

ರಾಜ್ಯದಲ್ಲಿರುವ ಪಡಿತರ ಕಾರ್ಡುಗಳ ಮಾಹಿತಿ :

ಕರ್ನಾಟಕ ರಾಜ್ಯದಲ್ಲಿ ಪಡಿತರ ಕಾರ್ಡುಗಳು ಎಷ್ಟಿವೆ ಎಂಬುದರ ಮಾಹಿತಿಯನ್ನು ಕೆಎಚ್ ಮುನಿಯಪ್ಪರವರು ನವೆಂಬರ್ 21ರಂದು ವಿಧಾನಸೌಧದಲ್ಲಿ ನಡೆದಂತಹ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಆ ಪ್ರಕಾರವಾಗಿ ಪಡಿತರ ಕಾರ್ಡ್ ಗಳ ವಿವರವನ್ನು ಒಟ್ಟಾರೆಯಾಗಿ ರಾಜ್ಯದಲ್ಲಿ ನೋಡಬಹುದು.

  1. ಒಟ್ಟಾರೆ ಒಂದು ಕೋಟಿ 50 ಲಕ್ಷದ 59,431 ರೇಷನ್ ಕಾರ್ಡ್ ಗಳು ರಾಜ್ಯದಲ್ಲಿ ಇವೆ.
  2. ರಾಜ್ಯ ಸರ್ಕಾರ ಇದರಲ್ಲಿ 1,03,510 ಕಾರ್ಡ್ಗಳನ್ನೂ ಪರಿಷ್ಕರಣೆ ಮಾಡಲಾಗಿದೆ.
  3. ಉಳಿದಂತೆ ಯಥಾ ಸ್ಥಿತಿಯಲ್ಲಿ ಎಲ್ಲಾ ರೇಷನ್ ಕಾರ್ಡ್ ಗಳು ಮುಂದುವರೆಯಲಿದೆ.
  4. ಬಿಪಿಎಂನಿಂದ ಎಪಿಎಲ್ ಆಗಿ 59,379 ಕಾರ್ಡುಗಳನ್ನು ಈಚೆಗೆ ಪರಿವರ್ತಿಸಲಾಗಿದೆ.
  5. ಬಿಪಿಎಲ್ ಆಗಿಯೇ ಮತ್ತೆ 16806 ಕಾರ್ಡುಗಳನ್ನು ಇದರಲ್ಲಿ ಮುಂದುವರಿಸಲಾಗಿದೆ.
  6. ಬಿಪಿಎಲ್ ಕಾರ್ಡ್ಗಳ ಪರಿಷ್ಕರಣೆಯನ್ನು ಕೇಂದ್ರ ಸರ್ಕಾರವೂ ಕೂಡ ಮಾಡಿದ್ದು 5.08 ಕೋಟಿ ಕಾರ್ಡ್ ಗಳನ್ನು ರದ್ದು ಮಾಡಲಾಗಿದೆ.
  7. ಇದರಲ್ಲಿ 200647 ಕಾರ್ಡುಗಳನ್ನು ರಾಜ್ಯದಲ್ಲಿ ಅಮಾನತುಗೊಳಿಸಲಾಗಿದೆ ಎಂದು ಆಹಾರ ಸಚಿವರು ಮಾಹಿತಿಯನ್ನು ನೀಡಿದ್ದಾರೆ

ಹೊಸ ರೇಷನ್ ಕಾರ್ಡ್ ಗಳಿಗೆ ಅವಕಾಶ :

ಬಿಪಿಎಲ್ ಕಾರ್ಡ್ ಪ್ರಮಾಣ ದೇಶದ ಯಾವ ರಾಜ್ಯಗಳಲ್ಲಿಯೂ ಕೂಡ ಶೇಕಡ 50ರಷ್ಟು ದಾಟಿಲ್ಲ ಆದರೆ ನಮ್ಮ ರಾಜ್ಯದಲ್ಲಿ ಶೇಕಡ 80ಕ್ಕೆ ಈ ಬಿಪಿಎಲ್ ರೇಷನ್ ಕಾರ್ಡ್ ಗಳ ಪ್ರಮಾಣ ತಲುಪಿದೆ ಇದೇ ಕಾರಣಕ್ಕಾಗಿ ರಾಜ್ಯ ಸರ್ಕಾರ ಕಳೆದ ಎರಡು ತಿಂಗಳಿಗಳಿಂದ ಬಿಪಿಎಲ್ ರೇಷನ್ ಕಾರ್ಡ್ಗಳ ಪರಿಷ್ಕರಣೆಯನ್ನು ನಡೆಸಲಾಗಿದೆ.

ಹೊಸ ಬಿಪಿಎಲ್ ಕಾರ್ಡ್ ಅರ್ಜಿಗಳು ಕಳೆದ ಎರಡು ವರ್ಷಗಳಿಂದ ಬಾಕಿ ಉಳಿದಿವೆ ಇಷ್ಟರಲ್ಲೇ ಸರ್ಕಾರ ಲಾಗಿನ್ ಪ್ರಕ್ರಿಯೆಯನ್ನು ಸರಿಪಡಿಸಿ ಹೊಸದಾಗಿ ಅರ್ಹರಿಗೆ ಬಿಪಿಎಲ್ ರೇಷನ್ ಕಾರ್ಡ್ ಅನ್ನು ಹಂಚಿಕೆ ಮಾಡಲಾಗುತ್ತದೆ. ಸದ್ಯಕ್ಕೆ ಸರ್ಕಾರ ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವಂತಹ ಪರಿಷ್ಕರಣೆ ಕಾರ್ಯವನ್ನು ಮುಂದುವರಿಸಿ ಎಲ್ಲವನ್ನು ಸರಿಪಡಿಸಿದ ನಂತರ ಹೊಸ ರೇಷನ್ ಕಾರ್ಡ್ ಗಳ ಪರಿಶೀಲನೆಯನ್ನು ಕೈಗೆತ್ತಿಕೊಳ್ಳುವುದಾಗಿ ಆಹಾರ ಸಚಿವರಾದ ಮುನಿಯಪ್ಪ ರವರು ತಿಳಿಸಿದ್ದಾರೆ.

ಈ ಲಿಂಕ್ ಮೇಲೆ ಕ್ಲಿಕ್ ಮಾಡಿ:

ರಾಜ್ಯದಲ್ಲಿ ಹೊಸದಾಗಿ ಮತ್ತೆ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಬಿಡುಗಡೆ ಮಾಡುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ. ಈ ಪ್ರಕ್ರಿಯೆಯು ಮುಂದುವರಿಯಬೇಕಾದರೆ ಪರಿಷ್ಕರಣೆ ಕಾರ್ಡುಗಳ ಹಂತವು ಪೂರ್ಣಗೊಂಡ ನಂತರವೇ ಹೊಸದಾಗಿ ಸರ್ಕಾರ ಬಿಡುಗಡೆ ಮಾಡಲು ನಿರ್ಧರಿಸಿದೆ.

ಒಟ್ಟಾರೆ ರಾಜ್ಯ ಸರ್ಕಾರವು ಅನರ್ಹರು ಪಡೆದುಕೊಂಡಿರುವಂತಹ ರೇಷನ್ ಕಾರ್ಡ್ ಗಳನ್ನು ರದ್ದುಗೊಳಿಸಿದ್ದು ಇದರಿಂದ ಅರ್ಹರಿಗೆ ಸರಿಯಾದ ರೀತಿಯಲ್ಲಿ ಸರ್ಕಾರದಿಂದ ಸೌಲಭ್ಯವನ್ನು ಒದಗಿಸುವುದು ರಾಜ್ಯ ಸರ್ಕಾರದ ಮುಖ್ಯ ಉದ್ದೇಶವಾಗಿದೆ.

ಹಾಗಾಗಿ ಈ ಪ್ರಕ್ರಿಯೆಯು ತಾತ್ಕಾಲಿಕವಾಗಿ ಸ್ಥಗಿತವಾಗಿರಬಹುದು ಆದರೆ ಮುಂದಿನ ದಿನಗಳಲ್ಲಿ ಎಲ್ಲಾ ಸಮಸ್ಯೆಗಳು ಬಗೆಹರಿಸಿ ಅರ್ಹರಿಗೆ ಬಿಪಿಎಲ್ ರೇಷನ್ ಕಾರ್ಡ್ ನ ಪ್ರಯೋಜನ ಲಭಿಸುವಂತೆ ಮಾಡುವುದು ರಾಜ್ಯ ಸರ್ಕಾರದ ಮುಖ್ಯ ಉದ್ದೇಶವಾಗಿದೆ. ರಾಜ್ಯ ಸರ್ಕಾರದ ಈ ಒಂದು ಉದ್ದೇಶವು ಸರಿಯಾದ ರೀತಿಯಲ್ಲಿ ನಡೆದುಕೊಳ್ಳಬೇಕಾದರೆ ಅನರ್ಹರ ಪಡಿತರ ಕಾರ್ಡ್ ಗಳನ್ನು ರದ್ದುಗೊಳಿಸುವುದೇ ಇದಕ್ಕೆ ಉತ್ತಮ ಪರಿಹಾರವಾಗಿದೆ ಎಂದು ಹೇಳಬಹುದು.

ಹಾಗಾಗಿ ಇನ್ನೇನು ಸದ್ಯದಲ್ಲಿಯೇ ರಾಜ್ಯ ಸರ್ಕಾರ ತಾತ್ಕಾಲಿಕವಾಗಿ ರಾಜ್ಯದಲ್ಲಿ ಸ್ಥೈರಗೊಂಡಿರುವಂತಹ ರೇಷನ್ ಕಾರ್ಡ್ ಗಳ ಪರೀಕ್ಷೆ ಕಾರ್ಯವನ್ನು ಮುಂದುವರಿಸಿ ಎಲ್ಲವನ್ನು ಸರಿಪಡಿಸಿದ ನಂತರವೇ ಹೊಸ ರೇಷನ್ ಕಾರ್ಡ್ಗಳ ಪರಿಶೀಲನೆ ಮಾಡಿ ಅವುಗಳನ್ನು ಬಿಡುಗಡೆ ಮಾಡುವಂತಹ ಕಾರ್ಯವನ್ನು ಸರ್ಕಾರ ಮಾಡುತ್ತದೆ ಎಂದು ಆಹಾರ ಸಚಿವರಾದ ಮುನಿಯಪ್ಪ ರವರು ರಾಜ್ಯದ ಜನತೆಗೆ ತಿಳಿಸಿದ್ದಾರೆ.

ಇತರೆ ವಿಷಯಗಳು :


Leave a Comment