Disabled Pension Scheme:ವಿಕಲಚೇತನರಿಗಾಗಿ ಕರ್ನಾಟಕ ಸರ್ಕಾರದಿಂದ ಹೊಸ ಯೋಜನೆ: ಪ್ರತಿ ತಿಂಗಳು ₹1,000 ಪ್ರೋತ್ಸಾಹಧನ! ಅರ್ಜಿ ಸಲ್ಲಿಸಿ ಇಲ್ಲಿದೆ ಸಂಪೂರ್ಣ ಮಾಹಿತಿ


ನಮಸ್ಕಾರ ಕನ್ನಡಿಗರೇ, ರಾಜ್ಯ ಸರ್ಕಾರದಿಂದ ವಿಶ್ವ ವಿಕಲಚೇತನರ ದಿನಾಚರಣೆ 2024ರ ಅಂಗವಾಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ (Disabled Pension Scheme) ನೂತನ ಯೋಜನೆಗಳನ್ನು ಘೋಷಿಸಿದೆ. ವಿಕಲಚೇತನ ವ್ಯಕ್ತಿಗಳ ಸಮಗ್ರ ಮತ್ತು ಸುಸ್ಥಿರ ಭವಿಷ್ಯಕ್ಕೆ ಉತ್ತೇಜನ ನೀಡಲು, “ನಾಯಕತ್ವಕ್ಕೆ ಉತ್ತೇಜನ” ಘೋಷವಾಕ್ಯದಡಿ ಈ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಈ ಯೋಜನೆಗಳ ಘೋಷಣೆ, ವಿಕಲಚೇತನರ ಹಕ್ಕುಗಳನ್ನು ಬಲಪಡಿಸಲು ಹಾಗೂ ಅವರ ಆರೈಕೆದಾರರಿಗೆ ಆರ್ಥಿಕ ಸಹಾಯ ನೀಡಲು ಮಹತ್ವದ ಹೆಜ್ಜೆ ಎನಿಸಿದೆ.

Government Disability Pension Scheme Incentive up to ₹ 1,000 per month
Government Disability Pension Scheme Incentive up to ₹ 1,000 per month

ಈ ಲೇಖನದಲ್ಲಿ, ರಾಜ್ಯ ಸರ್ಕಾರದ ನವೀನ ಯೋಜನೆಗಳ ವಿವರ, ಅದರ ಪ್ರಯೋಜನಗಳು ಮತ್ತು ಅರ್ಜಿ ಪ್ರಕ್ರಿಯೆ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗಿದೆ. ಈ ಯೋಜನೆಯ ಪ್ರಯೋಜನವನ್ನು ಪ್ರತಿ ಅಂಗವಿಕಲರಿಗೆ ತಿಳಿಸಿ ಅವರ ಹಕ್ಕು ಹಾಗು ಅವರನ್ನು ಬಲಪಡಿಸಲು ನಿಮ್ಮಿಂದ ಹಾಗುವ ಈ ಚಿಕ್ಕ ಸಹಾಯವನ್ನು ಮಾಡಿ ಹೆಲ್ಲರಿಗೂ ಈ ವಿಷಯವನ್ನು ತಿಳಿಸಿ.

ವಿಕಲಚೇತನರ ಆರೈಕೆದಾರರಿಗೆ ಪ್ರತಿ ತಿಂಗಳಿಗೆ ₹1,000 ಪ್ರೋತ್ಸಾಹ ಧನ

ರಾಜ್ಯ ಸರ್ಕಾರ 2024-25ರಿಂದ ಮೆದುಳು ಪಾರ್ಶ್ವವಾಯು (Cerebral Palsy), ಮಸ್ಕುಲರ್ ಡಿಸ್ಟ್ರೋಫಿ (Muscular Dystrophy), ಪಾರ್ಕಿನ್ಸನ್ಸ್ ಖಾಯಿಲೆ (Parkinson’s Disease) ಮತ್ತು ಮಲ್ಟಿಪಲ್ ಸ್ಕ್ಲೆರೋಸಿಸ್ (Multiple Sclerosis) ಖಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗಳ ಆರೈಕೆ ಮಾಡುತ್ತಿರುವವರಿಗೆ ಪ್ರತಿ ತಿಂಗಳು ₹1,000 ಪ್ರೋತ್ಸಾಹ ಧನವನ್ನಾಗಿ ನೀಡುವುದಾಗಿ ಘೋಷಿಸಿದೆ. ಈ ಯೋಜನೆಯು ವಿಕಲಚೇತನ ವ್ಯಕ್ತಿಗಳ ಆರೈಕೆದಾರರ ಆರ್ಥಿಕ ಭಾರವನ್ನು ತಗ್ಗಿಸಲು ಮಹತ್ವದ ಸಾಧನೆಯಾಗಲಿದೆ. ಪ್ರತಿಯೊಬ್ಬರು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಿ.

ವಿಕಲಚೇತನರಿಗಾಗಿ ಹಮ್ಮಿಕೊಂಡಿರುವ ಪ್ರಮುಖ ಯೋಜನೆಗಳು

ವಿಕಲಚೇತನರಿಗೆ ವಿವಿಧ ಆರೋಗ್ಯ, ಶಿಕ್ಷಣ, ಪಿಂಚಣಿ ಮತ್ತು ಪುನರ್ವಸತಿ ಯೋಜನೆಗಳನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದ್ದು, ಈ ಯೋಜನೆಗಳು ಎಲ್ಲ ರೀತಿಯ ವಿಕಲಚೇತನರಿಗೆ ಜೀವನಮಟ್ಟ ಸುಧಾರಿಸಲು ಸಹಾಯವಾಗಲಿದೆ.

ಇದನ್ನೂ ಓದಿ :Honey Bee Keeping Training : ಸರ್ಕಾರದಿಂದ ನಿರುದ್ಯೋಗಿಗಳಿಗೆ ಹೊಸ ಯೋಜನೆ ಪ್ರಾರಂಭ : ಉಚಿತ ಜೇನು ಸಾಕಾಣಿಕೆ ತರಬೇತಿಗೆ ಅವಕಾಶ! ತಕ್ಷಣ ಅರ್ಜಿ ಸಲ್ಲಿಸಿ ಇಲ್ಲಿದೆ ಡೈರೆಕ್ಟ್ ಲಿಂಕ್

ದೃಷ್ಟಿದೋಷ ಹೊಂದಿರುವ ವ್ಯಕ್ತಿಗಳಿಗೆ ವಿಶೇಷ ಯೋಜನೆಗಳು

  1. ಟಾಕಿಂಗ್ ಲ್ಯಾಪ್‌ಟಾಪ್ ಯೋಜನೆ: ದೃಷ್ಟಿದೋಷ ಹೊಂದಿರುವ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್‌ಟಾಪ್ ಸೌಲಭ್ಯ.
  2. ಬ್ರೆಲ್ ಕಿಟ್ ಯೋಜನೆ: ದೃಷ್ಟಿಯಿಲ್ಲದವರಿಗೆ ಬ್ರೆಲ್ ಲಿಪಿಯಲ್ಲಿ ಕಲಿಕೆ ಸಲಕರಣೆ.
  3. ಶಿಶುಪಾಲನಾ ಭತ್ಯೆ ಯೋಜನೆ: ದೃಷ್ಟಿದೋಷವಿರುವ ಮಕ್ಕಳಿಗೆ ಶಿಶುಪಾಲನಾ ಸಹಾಯಧನ.
  4. ಡಿಜಿಟಲ್ ಬುಕ್ ಬ್ಯಾಂಕ್ ಯೋಜನೆ: ದೃಷ್ಟಿದೋಷಿಗಳಿಗೆ ಆಡಿಯೋ ಹಾಗೂ ಡಿಜಿಟಲ್ ಪುಸ್ತಕಗಳ ಬಂಕ್.
  5. ಯಂತ್ರಚಾಲಿತ ದ್ವಿಚಕ್ರವಾಹನ ಯೋಜನೆ: ದೈಹಿಕ ವಿಕಲಚೇತನರಿಗೆ ರೆಟ್ರೋಫಿಟೆಂಟ್ ದ್ವಿಚಕ್ರವಾಹನ.

ಬೌದ್ಧಿಕ ವಿಕಲಚೇತನರಿಗೆ ವಿಶೇಷ ಯೋಜನೆಗಳು

  1. ಪೋಷಕರ ಜೀವ ವಿಮಾ ಯೋಜನೆ: ವಿಕಲಚೇತನರ ಪೋಷಕರಿಗೆ ಜೀವ ವಿಮೆ.
  2. ನಿರಾಮಯ ವೈದ್ಯಕೀಯ ವಿಮಾ ಯೋಜನೆ: ವೈದ್ಯಕೀಯ ವೆಚ್ಚ ತಗ್ಗಿಸಲು ವಿಮಾ ಸೌಲಭ್ಯ.

ಎಲ್ಲಾ ವಿಧದ ವಿಕಲಚೇತನರಿಗೆ ತಲುಪುವ ಯೋಜನೆಗಳು

ಸಮಗ್ರ ಸುಧಾರಣೆಯ ದೃಷ್ಟಿಯಿಂದ, ರಾಜ್ಯ ಸರ್ಕಾರ ವಿಕಲಚೇತನರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ.

  1. ವಿದ್ಯಾರ್ಥಿವೇತನ ಯೋಜನೆ: ವಿಕಲಚೇತನ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯಧನ.
  2. ಪ್ರೋತ್ಸಾಹಧನ ಯೋಜನೆ: ವಿಕಲಚೇತನರ ಸಾಧನೆಗೆ ಪ್ರೋತ್ಸಾಹ.
  3. ಶುಲ್ಕ ಮರುಪಾವತಿ ಯೋಜನೆ: ಶಿಕ್ಷಣದಲ್ಲಿ ಖರ್ಚಾದ ಶುಲ್ಕ ಮರುಪಾವತಿ.
  4. ಸಾಧನ ಸಲಕರಣೆ ಯೋಜನೆ: ವಿಕಲಚೇತನರಿಗೆ ಅಗತ್ಯವಾದ ಸಾಧನಗಳ ವಿತರಣೆ.
  5. ಬ್ಯಾಟರಿ ಚಾಲಿತ ಗಾಲಿ ಕುರ್ಚಿಗಳು: ಚಲನೆಗೆ ಸಹಾಯ ಮಾಡುವ ಸಾಧನ.
  6. ವೈದ್ಯಕೀಯ ಪರಿಹಾರ ನಿಧಿ ಯೋಜನೆ: ತುರ್ತು ವೈದ್ಯಕೀಯ ವೆಚ್ಚವನ್ನು ಮರುವ್ಯಯ ಮಾಡುವುದು.
  7. ಆಧಾರ ಸಾಲ ಯೋಜನೆ: ಸ್ವಯಂ ಉದ್ಯೋಗ ಆರಂಭಿಸಲು ಸಾಲ ಸಹಾಯ.
  8. ನಿರುದ್ಯೋಗ ಭತ್ಯೆ ಯೋಜನೆ: ಉದ್ಯೋಗವಿಲ್ಲದ ವಿಕಲಚೇತನರಿಗೆ ಭತ್ಯೆ.
  9. ವಿವಾಹ ಪ್ರೋತ್ಸಾಹಧನ ಯೋಜನೆ: ವಿಕಲಚೇತನರ ವಿವಾಹಕ್ಕೆ ಆರ್ಥಿಕ ನೆರವು.
  10. ಗ್ರಾಮೀಣ/ನಗರ ಪುನರ್ವಸತಿ ಯೋಜನೆ: ವಿಕಲಚೇತನರನ್ನು ಪುನರ್ವಸತಿ ಮಾಡಲು ಮಾರ್ಗಸೂಚಿ.
  11. ಮರಣ ಪರಿಹಾರ ಧನ ಯೋಜನೆ: ಕುಟುಂಬಕ್ಕೆ ಆರ್ಥಿಕ ಪರಿಹಾರ.

ಇದನ್ನೂ ಓದಿ :Sukanya Samruddi Yojana : ಸುಕನ್ಯಾ ಸಮೃದ್ಧಿ ಯೋಜನೆ ಅಕೌಂಟ್ ತೆರೆಯುವ ಸರಳ ಕ್ರಮ ಮತ್ತು ಅಗತ್ಯವಿರುವ ದಾಖಲೆಗಳ ಸಂಪೂರ್ಣ ವಿವರ ಇಲ್ಲಿದೆ

ವಿಕಲಚೇತನ ಪಿಂಚಣಿ ಯೋಜನೆ: ಅಂಕಿ-ಸಂಖ್ಯೆ

2021ರ ಜನಗಣತಿ ಪ್ರಕಾರ, ಕರ್ನಾಟಕದಲ್ಲಿ ಒಟ್ಟು 13,24,205 ವಿಕಲಚೇತನರಿದ್ದಾರೆ.

  • 9,73,388 ವಿಕಲಚೇತನರಿಗೆ ಪ್ರತಿ ತಿಂಗಳು ಸಾಮಾಜಿಕ ಭದ್ರತೆ ಪಿಂಚಣಿ ಸೌಲಭ್ಯ.
  • 8,04,074 ಜನರಿಗೆ ವಿಶಿಷ್ಟ ಗುರುತಿನ ಚೀಟಿ (UDID) ವಿತರಿಸಲಾಗಿದೆ.

ಅರ್ಜಿ ಸಲ್ಲಿಸುವ ವಿಧಾನ

ನೂತನ ಯೋಜನೆಗಳಿಗಾಗಿ ಅರ್ಜಿಯನ್ನು ಆನ್ಲೈನ್ ಮತ್ತು ಆಫ್‌ಲೈನ್ ಮೂಲಕ ಸಲ್ಲಿಸಬಹುದು:

ಅರ್ಜಿ ಸಲ್ಲಿಸಲು ಈ ಕೆಳಗಿನ ದಾಖಲೆಗಳು ಅಗತ್ಯ:

  • ವಿಶಿಷ್ಟ ಗುರುತಿನ ಚೀಟಿ (UDID).
  • ಆರೋಗ್ಯ ಪ್ರಮಾಣ ಪತ್ರ.
  • ಆಧಾರ್ ಕಾರ್ಡ್.
  • ಬ್ಯಾಂಕ್ ಖಾತೆಯ ವಿವರಗಳು.
  • ಪಾಸ್ಪೋರ್ಟ್ ಅಳತೆಯ ಫೋಟೋ.

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ :

ಸಹಾಯವಾಣಿ ಹಾಗೂ ವೆಬ್‌ಸೈಟ್ ಮಾಹಿತಿ

ವಿಕಲಚೇತನರಿಗೆ ಮತ್ತು ಅವರ ಆರೈಕೆದಾರರಿಗೆ ಸಹಾಯ ಮಾಡಲು ರಾಜ್ಯ ಸರ್ಕಾರವು ಸಹಾಯವಾಣಿ ಮತ್ತು ವೆಬ್‌ಸೈಟ್ ವ್ಯವಸ್ಥೆಯನ್ನು ಕಲ್ಪಿಸಿದೆ:

ದೀರ್ಘಕಾಲಿಕ ಉದ್ದೇಶ

ಈ ಯೋಜನೆಗಳು ವಿಕಲಚೇತನರ ಸ್ವಾಯತ್ತತೆಯನ್ನು ಉತ್ತೇಜಿಸಲು ಮತ್ತು ಅವರ ಜೀವನಮಟ್ಟ ಸುಧಾರಿಸಲು ಪ್ರಮುಖ ಯತ್ನಗಳಾಗಿವೆ. 2024-25ರಲ್ಲಿ ಜಾರಿಗೆ ಬರುವ ಯೋಜನೆಗಳು ವಿಕಲಚೇತನ ವ್ಯಕ್ತಿಗಳಿಗೆ ಮಾತ್ರವಲ್ಲ, ಅವರ ಕುಟುಂಬಗಳಿಗೆ ಹೊಸ ಭರವಸೆ ನೀಡುತ್ತವೆ.

ಈಗ, ಎಲ್ಲಾ ಅರ್ಹ ಅರ್ಜಿದಾರರು ಸೇವಾ ಸಿಂಧು ಪೋರ್ಟಲ್ ಮೂಲಕ ಅಥವಾ ಸ್ಥಳೀಯ ಕಚೇರಿಗಳನ್ನು ಸಂಪರ್ಕಿಸಿ ತಮ್ಮ ಹಕ್ಕುಗಳನ್ನು ಪಡೆಯಲು ಮುಂದಾಗಬಹುದು. ಈ ಯೋಜನೆಗಳು ವಿಕಲಚೇತನರಿಗೆ ಹಾಗೂ ಅವರ ಆರೈಕೆದಾರರಿಗೆ ಹೊಸ ಭವಿಷ್ಯ ರೂಪಿಸಲು ಸಹಾಯ ಮಾಡುತ್ತವೆ.

ಇತರೆ ಪ್ರಮುಖ ವಿಷಯಗಳು :


1 thought on “Disabled Pension Scheme:ವಿಕಲಚೇತನರಿಗಾಗಿ ಕರ್ನಾಟಕ ಸರ್ಕಾರದಿಂದ ಹೊಸ ಯೋಜನೆ: ಪ್ರತಿ ತಿಂಗಳು ₹1,000 ಪ್ರೋತ್ಸಾಹಧನ! ಅರ್ಜಿ ಸಲ್ಲಿಸಿ ಇಲ್ಲಿದೆ ಸಂಪೂರ್ಣ ಮಾಹಿತಿ”

Leave a Comment